2022 ಆರಂಭದಲ್ಲಿ ಸ್ಟಾರ್ ಸಿನಿಮಾಗಳ ಕೊರತೆ! ಬಿಡುಗಡೆಯ ಲೆಕ್ಕಾಚಾರ ಹೀಗಿದೆ
Team Udayavani, Apr 30, 2021, 1:17 PM IST
ಕನ್ನಡ ಚಿತ್ರರಂಗ ಸ್ತಬ್ಧವಾಗಿದೆ. ಚಿತ್ರೀಕರಣಕ್ಕೆ ಅಣಿಯಾಗಿದ್ದ ಸಿನಿಮಾಗಳೆಲ್ಲವೂ ನಿಂತು ಹೋಗಿವೆ. ಮುಹೂರ್ತ ಆಚರಿಸಲು ಸಿದ್ಧವಾಗಿದ್ದ ಸ್ಟಾರ್‌ಗಳ ಸಿನಿಮಾಗಳು ಮುಂದಕ್ಕೆ ಹೋಗಿವೆ. ಬಿಗ್ ಬಜೆಟ್‌ನಲ್ಲಿ ಸಿನಿಮಾ ಮಾಡಲು ಉತ್ಸಾಹ ತೋರಿದ್ದ ನಿರ್ಮಾಪಕರು, ಈಗ ಪರಿಸ್ಥಿತಿ ನೋಡಿಕೊಂಡು ಮುಂದು ವರೆಯುವ ನಿರ್ಧಾರಕ್ಕೆ ಬಂದಿದ್ದಾರೆ. ಇವತ್ತಿನ ಈ ಪರಿಸ್ಥಿತಿ 2022ರಲ್ಲಿ ಕನ್ನ ಡ ಚಿತ್ರ ರಂಗದ ಮೇಲೆ ಮೇಲೆ ಪರಿಣಾಮ ಬೀರಲಿದೆ. ಅದರಲ್ಲೂ 2022ರ ಆರಂಭದ ನಾಲ್ಕೈದು ತಿಂಗಳು ಕನ್ನಡ ಚಿತ್ರ ರಂಗ ತುಂಬಾ ನೀರಸವಾಗಿ ಸಾಗುವ ಸಾಧ್ಯತೆ ಇದೆ.
ಅದು ಹೇಗೆ ಎಂದರೆ, ಅದಕ್ಕೆ ಉತ್ತರ ಸ್ಟಾರ್ ಸಿನಿಮಾಗಳ ಬಿಡುಗಡೆ ಇರುವುದಿಲ್ಲ! ಆಶ್ಚರ್ಯವಾಗಬಹುದು, ಆದರೂ ಸತ್ಯ. 2022ರ ಮೊದಲ ನಾಲ್ಕೈದು ತಿಂಗಳಲ್ಲಿ ಸ್ಟಾರ್ ಸಿನಿಮಾಗಳ ಕೊರತೆ ಎದ್ದು ಕಾಣುವ ಸಾಧ್ಯತೆ ಇದೆ. ಈ ಲೆಕ್ಕಾಚಾರ ಹೇಗೆ ಎಂದು ನೀವು ಕೇಳಬಹುದು. ಸುಮ್ಮನೆ ಒಂದು ಬಾರಿ ಸ್ಟಾರ್‌ಗಳ ಸಿನಿಮಾಗಳ ಕಡೆಗೆ ಗಮನಹರಿಸಿ. ಏಕೆಂದರೆ ಸದ್ಯ ಸ್ಟಾರ್‌ಗಳ ಕೈಯಲ್ಲಿರುವ ಸಿನಿಮಾಗಳೆಲ್ಲವೂ ಈ ವರ್ಷದ ಕೊನೆಯೊಳಗೆ ಬಿಡುಗಡೆಯಾಗಲಿವೆ. ಉಳಿದಂತೆ ಯಾವುದೇ ಸ್ಟಾರ್ ಗಳ ಹೊಸ ಸಿನಿಮಾಗಳು ಸೆಟ್ಟೇರಿಲ್ಲ.
ಸದ್ಯದ ಕೊರೊನಾ ಭೀಕರತೆಯನ್ನು ನೋಡಿದಾಗ ಚಿತ್ರೀಕರಣ ಆರಂಭವಾಗೋದು ಏನಿದ್ದರೂ ಜುಲೈ ಮೇಲೆಯೇ ಎಂಬ ಮಾತು ಸ್ಯಾಂಡಲ್‌ವುಡ್‌ನಲ್ಲಿ ಕೇಳಿ ಬರುತ್ತಿದೆ. ನಿಮಗೆ ಗೊತ್ತಿರುವಂತೆ ಸ್ಟಾರ್‌ಗಳ ಸಿನಿಮಾ ಆರಂಭವಾಗಿ ಅದು ಬಿಡುಗಡೆಗೆ ಬರಲು ಕನಿಷ್ಠ ಒಂದೂವರೆ ವರ್ಷವಂತೂ ಬೇಕೇ ಬೇಕು. (ಇದು ಎಲ್ಲಾಸ್ಟಾರ್‌ಗಳಿಗೆ ಅನ್ವಯಿಸುತ್ತದೆ ಎನ್ನುವಂತಿಲ್ಲ. ಕೆಲವು ಸ್ಟಾರ್ ನಟರ ಸಿನಿಮಾ ಎರಡೂವರೆ, ಮೂರು ವರ್ಷಕ್ಕೊಂದು ಬಂದ ಉದಾಹರಣೆಯೂ ಇದೆ) ಜುಲೈ ನಿಂದ ಒಂದೂವರೆ ವರ್ಷ ವೆಂದರೆ ಎಷ್ಟು ಸಮಯ ಹಿಡಿಯುತ್ತದೆ ಮತ್ತು ಯಾವಾಗ ಸಿನಿಮಾ ಬಿಡುಗಡೆಯಾಗಬಹುದು ಎಂದು ಲೆಕ್ಕ ಹಾಕುವುದು ಕಷ್ಟದ ಕೆಲಸವೇನಲ್ಲ. ಇದೇ ಕಾರಣದಿಂದ 2022ರ ಆರಂಭದ ನಾಲ್ಕೈ ದು ತಿಂಗಳು ಅಥವಾ ಅದಕ್ಕೂ ಹೆಚ್ಚು ಸಮಯ ಸ್ಟಾರ್ ಸಿನಿಮಾಗಳ ಕೊರತೆ ಕಾಣಿಸಲಿದೆ.
ಇದನ್ನೂ ಓದಿ:ಅನುಷ್ಕಾ ಶರ್ಮಾ ಮೊದಲ ಆಡಿಷನ್ ಹೇಗಿತ್ತು ಗೊತ್ತಾ : ಲೀಕ್ ಆಯ್ತು ವಿಡಿಯೋ..!
2021ರ ಆರಂಭವೇನೋ ಚೆನ್ನಾಗಿತ್ತು. ಸ್ಟಾರ್ ಗಳ ಸಿನಿಮಾಗಳು ಬಿಡುಗಡೆಯಾದವು. ಅದಕ್ಕೆ ಕಾರಣ 2020ರಲ್ಲಿ ಕಾಣಿಸಿಕೊಂಡ ಕೊರೊನಾ. 2020ರಲ್ಲಿ ಬಿಡುಗಡೆಗೆ ಸಿದ್ಧವಾಗಿದ್ದ ಚಿತ್ರಗಳು ಈ ವರ್ಷ ಬಿಡುಗಡೆಯಾದವು. ಆದರೆ, ಮುಂದಿನ ವರ್ಷಕ್ಕೆ ಬಿಡುಗಡೆಯಾಗಲು ಸ್ಟಾರ್ ಗಳ ಹೊಸ ಸಿನಿಮಾಗಳು ಸೆಟ್ಟೇರಿಯೇ ಇಲ್ಲ. ಸದ್ಯ ಕೈಯಲ್ಲಿರುವ ಸಿನಿಮಾಗಳು ಚಿತ್ರೀಕರಣ ಪೂರ್ಣಗೊಳಿಸಿದ್ದು, ಈ ವರ್ಷಾಂತ್ಯದಲ್ಲಿ ಬಂದು ಬಿಡಲಿವೆ.
ಯಾವುದೇ ಸ್ಟಾರ್ ಗಳ ಹೊಸ ಸಿನಿಮಾಗಳು ಇನ್ನೂ ಸೆಟ್ಟೇರಿಲ್ಲ. ಸೆಟ್ಟೇರಬೇಕಿದ್ದ ಸಿನಿಮಾಗಳು ಕೊರೊನಾದಿಂದಾಗಿ ಮುಂದಕ್ಕೆ ಹೋಗಿವೆ. ಸ್ಟಾರ್ ಗಳ ಸಿನಿಮಾ ಆರಂಭವಾಗಿ ಅದು ಬಿಡುಗಡೆಗೆ ಬರಲು ಕನಿಷ್ಠ ಒಂದೂವರೆ ವರ್ಷವಂತೂ ಬೇಕೇ ಬೇಕು. ಜುಲೈನಿಂದ ಆರಂಭವಾದರೂ, ಒಂದೂವರೆ ವರ್ಷವೆಂದರೆ ಎಷ್ಟು ಸಮಯ ಹಿಡಿಯುತ್ತದೆ ಮತ್ತು ಯಾವಾಗ ಸಿನಿಮಾ ಬಿಡುಗಡೆಯಾಗಬಹುದು ಎಂದು ಲೆಕ್ಕ ಹಾಕುವುದು ಕಷ್ಟದ ಕೆಲಸವೇನಲ್ಲ. ಇದೇ ಕಾರಣದಿಂದ 2022ರ ಆರಂಭದ ನಾಲ್ಕೈದು ತಿಂಗಳು ಅಥವಾ ಅದಕ್ಕೂ ಹೆಚ್ಚು ಸಮಯ ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ಸಿನಿಮಾಗ ಳ ಕೊರತೆ ಕಾಣಿಸಲಿದೆ.
ಕೊರೊನಾ ಪರಿಸ್ಥಿತಿ ಮೇಲೆ ನಿರ್ಧಾರ: ಸ್ಟಾರ್ ಸಿನಿಮಾಗಳ ಬಿಡುಗಡೆಯ ವಿಚಾರವಾಗಿ ಕನ್ನಡ ಚಿತ್ರರಂಗ ಏನೇ ಲೆಕ್ಕಾಚಾರ ಹಾಕಿದರೂ ಅಂತಿಮವಾಗಿ ಕೊರೊನಾ ಲೆಕ್ಕಾಚಾ ರದ ಮೇಲೆಯೇ ಎಲ್ಲವೂ ನಿಂತಿರುತ್ತದೆ. ಕೊರೊನಾ ಕಡಿಮೆಯಾಗಿ, ಚಿತ್ರ ಮಂದಿರಗಳಲ್ಲಿ ಹೌಸ್ ಫುಲ್ ಪ್ರದರ್ಶನಕ್ಕೆ ಅನುಮತಿ ಸಿಕ್ಕರೆ ಓಕೆ, ಒಂದು ವೇಳೆ ಕೊರೊನಾ ಕಾಟ ಕಡಿಮೆಯಾಗದೇ ಚಿತ್ರ ಮಂದಿರಗಳು ತೆರೆಯದೇ ಅಥವಾ ಶೇ 50 ಸೀಟು ಭರ್ತಿಯಲ್ಲಿ ತೆರೆದರೆ ಎಲ್ಲಾ ಲೆಕ್ಕಾಚಾರಗಳು ಉಲ್ಟಾ ಆಗಲಿವೆ. ಹಾಗೇನಾದರೂ ಆದರೆ, ಈಗ ಬಿಡುಗಡೆಗೆ ಸಿದ್ಧವಿರುವ, ಈ ವರ್ಷವೇ ಬರಬೇಕೆಂದು ಕೊಂಡಿದ್ದ ಸ್ಟಾರ್ ಸಿನಿಮಾಗಳೆಲ್ಲವೂ 2022ರ ಆರಂಭ ದಲ್ಲಿ ಬಿಡುಗಡೆಯಾದರೂ ಅಚ್ಚರಿಯಿಲ್ಲ.
ದರ್ಶನ್: ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ “ರಾಬರ್ಟ್’ ಬಿಡುಗಡೆ ಯಾಗಿದ್ದು ಬಿಟ್ಟರೆ, ದರ್ಶನ್ ಅವರ ಹೊಸ ಸಿನಿಮಾ ಇನ್ನೂ ಸೆಟ್ಟೇರಿಲ್ಲ. ಇನ್ನೇನಿದ್ದರೂ ಕೊರೊನಾ ಅಬ್ಬರ ಕಡಿಮೆಯಾದ ನಂತರವೇ ಶುರು.
ಸುದೀಪ್: ಕಿಚ್ಚ ಸುದೀಪ್ ಅವರ “ಕೋಟಿಗೊಬ್ಬ-3′, “ವಿಕ್ರಾಂತ್ ರೋಣ ‘ ಎರಡೂ ಚಿತ್ರಗಳು ಚಿತ್ರೀಕರಣ ಮುಗಿಸಿ, ಬಿಡುಗಡೆಗೆ ಸಿದ್ಧವಾಗಿವೆ. ಈ ಎರಡೂ ಚಿತ್ರಗಳು ಈ ವರ್ಷವೇ ತೆರೆಗೆ ಬರಲಿವೆ. ಸುದೀಪ್ ಅವರ ಹೊಸ ಸಿನಿಮಾ ಇನ್ನಷ್ಟೇ ಆರಂಭವಾಗಬೇಕಿದೆ.
ಪುನೀತ್: ಪುನೀತ್ ನಟನೆಯ “ಜೇಮ್ಸ್’ ಚಿತ್ರ ಬಹುತೇಕ ಚಿತ್ರೀಕರಣ ಮುಗಿದಿದ್ದು, ಈ ವರ್ಷಾಂತ್ಯದಲ್ಲಿ ತೆರೆಗೆ ಬರಲಿದೆ. ಉಳಿದಂತೆ ಪುನೀತ್ ಹೊಸ ಸಿನಿಮಾಕ್ಕೆ ಇನ್ನಷ್ಟೇ ಮುಹೂರ್ತವಾಗಬೇಕಿದೆ.
ಯಶ್: ನಟ ಯಶ್ ಅವರ “ಕೆಜಿಎಫ್-2′ ಈ ವರ್ಷ ಬಿಡುಗಡೆಯಾಗಲಿರೋದು ನಿಮಗೆ ಗೊತ್ತಿದೆ. ಅದರಾಚೆ ಯಶ್ ಅವರ ಮುಂದಿನ ಸಿನಿಮಾದ ಚರ್ಚೆ ನಡೆಯುತ್ತಲೇ ಇದೆ. ಯಾರ ಜೊತೆ ಯಶ್ ಸಿನಿಮಾ ಮಾಡುತ್ತಾರೆ ಮತ್ತು ಯಾವಾಗ ಆರಂಭ ಎಂಬುದು ಇನ್ನೂ ಗೌಪ್ಯ.
ಶಿವರಾಜ್ ಕುಮಾರ್: ಶಿವರಾಜ್ ಕುಮಾರ್ ಅವರ “ಭಜರಂಗಿ-2′ ಚಿತ್ರೀಕರಣ ಮುಗಿದು ಬಿಡುಗಡೆಗೆ ಸಿದ್ಧವಿದೆ. ಇದಲ್ಲದೇ ಅವರ “ಶಿವಪ್ಪ ‘ ಕೂಡಾ ಕೊನೆಯ ಹಂತದ ಚಿತ್ರೀಕರಣದಲ್ಲಿದೆ. ಈ ಎರಡೂ ಚಿತ್ರಗಳು ಈ ವರ್ಷವೇ ಬರಲಿವೆ. ಶಿವಣ್ಣ ಅವರ 124 ಸಿನಿಮಾ ಇನ್ನಷ್ಟೇ ಆರಂಭವಾಗಬೇಕಿದೆ.
ಧ್ರುವ ಸರ್ಜಾ: ನಟ ಧ್ರುವ ಸರ್ಜಾ ಅವರ “ದುಬಾರಿ’ ಚಿತ್ರ ಮುಹೂರ್ತ ಕಂಡಿದ್ದರೂ, ಅದು ಯಾವಾಗ ಆರಂಭವಾಗುತ್ತದೆ ಎಂಬ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ.
ಉಪೇಂದ್ರ: ಉಪೇಂದ್ರ ನಟನೆಯ “ಕಬ್ಜ’ ಶೇ 80ರಷ್ಟು ಚಿತ್ರೀಕರಣ ಪೂರೈಸಿದ್ದು, ಈ ವರ್ಷಾಂತ್ಯಕ್ಕೆ ತೆರೆಗೆ ತರಲು ನಿರ್ದೇ ಶಕ ಚಂದ್ರು ಪ್ರಯತ್ನಿಸುತ್ತಿದ್ದಾರೆ. ಅದರಾಚೆ ಅವರ ಹೊಸ ಚಿತ್ರ “ಲಗಾಮ್’ ಕೊರೊನಾ ಮಧ್ಯೆಯೇ ಮುಹೂರ್ತವನ್ನಷ್ಟೇ ಆಚರಿಸಿಕೊಂಡಿದೆ. ಚಿತ್ರೀಕರಣ ಆರಂಭವಾಗಬೇಕಿದೆ.
ವಿಜಯ್: ದುನಿಯಾ ವಿಜಯ್ “ಸಲಗ’ ಈ ವರ್ಷವೇ ಬಿಡುಗಡೆಯಾಗಲಿದೆ. ಅದು ಬಿಟ್ಟರೆ ವಿಜಯ್ ಹೊಸ ಸಿನಿಮಾ ಅನೌನ್ಸ್ ಆಗಿಲ್ಲ.
ಗಣೇಶ್: ನಟ ಗಣೇಶ್ ಅವರ “ಸಖತ್’, “ತ್ರಿಬಲ್ ರೈಡಿಂಗ್’ ಹಾಗೂ “ಗಾಳಿಪಟ-2′ ಚಿತ್ರಗಳು ಕೊನೆಯ ಹಂತದ ಚಿತ್ರೀಕರಣ ತಲುಪಿವೆ. ಇದರಲ್ಲಿ ಎರಡೂ ಚಿತ್ರಗಳಂತೂ ಈ ವರ್ಷವೇ ಬರಲಿವೆ. ಹೊಸ ಸಿನಿಮಾ ಇನ್ನಷ್ಟೇ ಆರಂಭವಾಗಬೇಕು.
ಶ್ರೀಮುರಳಿ: ಶ್ರೀಮುರಳಿ ನಟನೆಯ “ಮದಗಜ’ ಈ ವರ್ಷವೇ ಬರಲಿದೆ. ಹೊಸ ಸಿನಿಮಾ ಇನ್ನೂ ಸೆಟ್ಟೇರಿಲ್ಲ.
ರಕ್ಷಿತ್ ಶೆಟ್ಟಿ: ರಕ್ಷಿತ್ ಶೆಟ್ಟಿ ನಟನೆಯ”777 ಚಾರ್ಲಿ’ ಈಗಾಗಲೇ ಚಿತ್ರೀಕರಣ ಮುಗಿಸಿ, ಬಿಡುಗಡೆಗೆ ಅಣಿಯಾದರೆ “ಸಪ್ತ ಸಾಗರದಾಚೆ ಎಲ್ಲೋ’ ಕೂಡಾ ಮೊದಲ ಹಂತ ಮುಗಿಸಿದೆ. ಈ ಎರಡೂ ಚಿತ್ರಗಳನ್ನು ಈ ವರ್ಷವೇ ತೆರೆಗೆ ತರೋದು ಚಿತ್ರ ತಂಡ ಪ್ಲಾನ್. ಉಳಿದಂತೆ ಹೊಸ ಸಿನಿಮಾ ಆರಂಭವಾಗಿಲ್ಲ.
ರವಿ ಪ್ರಕಾಶ್ ರೈ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
Nodidavaru Enanthare Movie: ನವೀನ್ ಶಂಕರ್ ಚಿತ್ರದ ಟೀಸರ್ ಬಂತು
BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ
Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್
Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Tollywood: ‘ಗೇಮ್ ಚೇಂಜರ್ʼಗೆ ರಾಮ್‌ಚರಣ್ ರಾಷ್ಟ್ರ ಪ್ರಶಸ್ತಿ ಪಡೆಯುತ್ತಾರೆ – ಸುಕುಮಾರ್
Mudigere: ಹೊರನಾಡು ದೇವರ ದರ್ಶನಕ್ಕೆ ಬರುತ್ತಿದ್ದವರ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ
Trasi: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ
Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು
Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.