ಎಣ್ಣೆ ಒಳಗಡೆ ಹೋದ್ರೆ ಕೋವಿಡ್ ಹೊರಗಡೆ ಹೋಗುತ್ತೆ :ಮದ್ಯದ ಅಂಗಡಿ ತೆರೆಯಿರಿ ಎಂದ ಡಾಲಿ ಆಂಟಿ
Team Udayavani, Apr 30, 2021, 1:18 PM IST
ದೆಹಲಿ : ಕೋವಿಡ್ ಸೋಂಕು ದೇಶದೆಲ್ಲೆಡೆ ಜನರನ್ನು ಇನ್ನಿಲ್ಲದಂತೆ ಸಾಯಿಸುತ್ತಿದೆ. ಆದ್ರೆ ಕೆಲವೊಬ್ಬರು ಮಾತ್ರ ಮದ್ಯ ಕುಡಿಯಲು ಹವಣಿಸುತ್ತಿದ್ದಾರೆ. ಲಾಕ್ ಡೌನ್ ಆಗಿರುವ ಪ್ರದೇಶದಲ್ಲಂತೂ ಮದ್ಯ ಪ್ರೇಮಿಗಳ ಸಂಕಟ ಹೇಳತೀರದಾಗಿದೆ. ಇದೇ ಹಿನ್ನೆಲೆಯಲ್ಲಿ ದೆಹಲಿ ಡಾಲಿ ಆಂಟಿಯ ವಿಡಿಯೋ ಇದೀಗ ತುಂಬಾ ವೈರಲ್ ಆಗುತ್ತಿದೆ.
ಕಳೆದ ಕೆಲವು ದಿನಗಳ ಹಿಂದೆ ಡಾಲಿ ಎಂಬ ಹೆಸರಿನ ಮಹಿಳೆಯ ವಿಡಿಯೋ ವೈರಲ್ ಆಗಿತ್ತು. ಔಷಧಕ್ಕಿಂತ ಹೆಚ್ಚಾಗಿ ಮದ್ಯವನ್ನು ಸೇವಿಸಿ ಎಂದು ಸಲಹೆ ನೀಡಿದ್ದು ಸಖತ್ ವೈರಲ್ ಆಗಿತ್ತು. ಇದೀಗ ಅದೇ ಮಹಿಳೆ ದೆಹಲಿ ಸರ್ಕಾರಕ್ಕೆ ಬೇಡಿಕೆಯೊಂದನ್ನು ಇಟ್ಟಿದ್ದಾರೆ.
ಈ ಹಿಂದೆ ಡಾಲಿ ಮಹಿಳೆಯು ಹೇಳಿದ್ದು, ಯಾವ ಔಷದ ಕೂಡ ಮದ್ಯಕ್ಕೆ ಸರಿ ಹೊಂದುವುದಿಲ್ಲ. ಎಣ್ಣೆ ಕುಡಿದರೆ ಎಲ್ಲಾ ಕಾಯಿಲೆಗಳು ವಾಸಿಯಾಗುತ್ತವೆ. ನಾನು ಕಳೆದ 35 ವರ್ಷಗಳಿಂದ ಕುಡಿಯುತ್ತಿದ್ದೇನೆ. ಆದ್ರಿಂದ ನನಗೆ ಯಾವುದೇ ಔಷಧ ಬೇಡ ಎಂದು ಹೇಳುವ ಮೂಲಕ ಟ್ರೋಲ್ ಆಗಿದ್ದರು.
Delhi wali Dolly aunty is back ? pic.twitter.com/GsHNXNDaaf
— varun goyal (@varunmaddy) April 25, 2021
ಇದೀಗ ಮತ್ತೆ ಸುದ್ದಿಯಾಗಿರುವ ಡಾಲಿ ಆಂಟಿ, ಮದ್ಯದ ಅಂಗಡಿಗಳನ್ನು ತೆರೆಯುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಮದ್ಯದ ಅಂಗಡಿಗಳು ತೆರೆದರೆ ಆಸ್ಪತ್ರೆಯ ಬೆಡ್ ಗಳು ಖಾಲಿ ಆಗುತ್ತವೆ. ನಂತರ ಸರ್ಕಾರಕ್ಕೆ ಯಾವುದೇ ತೊಂದರೆ ಇರುವುದಿಲ್ಲ ಎಂದಿದ್ದಾರೆ.
ಮತ್ತೊಂದು ಮಾತನ್ನು ಹೇಳಿರುವ ಮಹಿಳೆ, ಜನರ ಹೊಟ್ಟೆ ಒಳಗಡೆ ಮದ್ಯ ಹೋದ್ರೆ.. ಕೋವಿಡ್ ದೇಹದಿಂದ ಹೊರಗಡೆ ಓಡುತ್ತದೆ ಎಂದಿದ್ದಾರೆ. ನೀವು ಲಾಕ್ ಡೌನ್ ವೇಳೆ ಎಣ್ಣೆ ಕುಡಿಯುತ್ತಿದ್ದೀರಾ ಎಂದು ಆಕೆಯನ್ನು ಕೇಳಿದಾಗ ನನ್ನ ಬಳಿ ಸದ್ಯ ಮದ್ಯದ ಸಂಗ್ರಹ ಇಲ್ಲ ಎಂದು ಹೇಳಿದ್ದಾಳೆ.
ಸದ್ಯ ದೆಹಲಿಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಲಾಕ್ ಡೌನ್ ಘೋಷಣೆಯಾಗಿದೆ. ಇದರಿಂದ ಮದ್ಯದ ಅಂಗಡಿಗಳನ್ನು ಬಂದ್ ಮಾಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hotel Room: ಹೋಟೆಲ್ ಕೊಠಡಿಯಲ್ಲೇ ವೈದ್ಯನ ನಿಗೂಢ ಸಾ*ವು… ಸ್ಥಳದಲ್ಲಿ ಡೆತ್ ನೋಟ್ ಪತ್ತೆ
Aligarh ಮುಸ್ಲಿಮ್ ವಿವಿ ಅಲ್ಪಸಂಖ್ಯಾತ ಸ್ಥಾನಮಾನ ವಿಚಾರ ಹೊಸ ಪೀಠ ನಿರ್ಧರಿಸಲಿದೆ:ಸುಪ್ರೀಂ
Jammu – Kashmir: ಮತ್ತೆ ಅಟ್ಟಹಾಸ ಮೆರೆದ ಉಗ್ರರು… ಇಬ್ಬರನ್ನು ಅಪಹರಿಸಿ ಹ*ತ್ಯೆ
Maharashtra: ಮತ ನೀಡಿದರೆ ಮದುವೆ ಮಾಡಿಸುವೆ: ಶರದ್ ಬಣದ ನಾಯಕ
India-Afghanistan: ಆಫ್ಘನ್ ಜೊತೆಗೆ ಬಾಂಧವ್ಯ ಪುನಃಸ್ಥಾಪನೆಗೆ ಭಾರತ ಸಜ್ಜು?
MUST WATCH
ಹೊಸ ಸೇರ್ಪಡೆ
Karkala: ಡಾ. ಟಿ.ಎಂ.ಎ. ಪೈ ರೋಟರಿ ಆಸ್ಪತ್ರೆಯಲ್ಲಿ 24*7 ಸಿಟಿ ಸ್ಕ್ಯಾನ್ ಸೌಲಭ್ಯ ಉದ್ಘಾಟನೆ
Manipal: ಡಿಸಿ ಕಚೇರಿ ಆವರಣದಲ್ಲೂ ಬೀದಿನಾಯಿ ಉಪಟಳ
Malpe: ಕೋಡಿಬೆಂಗ್ರೆ-ಹಂಗಾರಕಟ್ಟೆ ಸಂಪರ್ಕ ಇನ್ನು ದೂರ
Hotel Room: ಹೋಟೆಲ್ ಕೊಠಡಿಯಲ್ಲೇ ವೈದ್ಯನ ನಿಗೂಢ ಸಾ*ವು… ಸ್ಥಳದಲ್ಲಿ ಡೆತ್ ನೋಟ್ ಪತ್ತೆ
Bengaluru: ಬೆಂಗಳೂರಲ್ಲಿ ಶೀಘ್ರ ಪ್ರತಿ ಕೆಜಿ ಈರುಳ್ಳಿ ಬೆಲೆ 100?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.