ಹೆಚ್ಚಿದ ಕೊರೊನಾಘಾತಕ್ಕೆ ಹಾಸನ ಜಿಲ್ಲೆ ತಲ್ಲಣ
Team Udayavani, Apr 30, 2021, 3:42 PM IST
ಹಾಸನ: ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆದಿನೇ ದಿನೆ ಏರುತ್ತಿದೆ. ದಿನಕ್ಕೆ 1000ಕ್ಕೂ ಹೆಚ್ಚುಜನರಿಗೆ ಸೋಂಕು ದೃಢಪಡುತ್ತಿದೆ. ಸದ್ಯಕ್ಕೆ ಹಾಸಿಗೆಗಳಕೊರತೆ ಇಲ್ಲದಿದ್ದರೂ ಸೋಂಕು ನಿಯಂತ್ರಣಕ್ಕೆಬರದಿದ್ದರೆ ಮುಂದಿನ ದಿನಗಳಲ್ಲಿ ಜಿಲ್ಲಾ ಕೇಂದ್ರದಆಸ್ಪತ್ರೆಗಳಲ್ಲಿ ಹಾಸಿಗೆಗಳ ಕೊರತೆಯಾಗಬಹುದೆಂಬಆತಂಕ ಸೃಷ್ಟಿಯಾಗಿದೆ.
ಹಾಸನದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಹಿಮ್ಸ್) ಆಸ್ಪತ್ರೆ ಮುಖ್ಯ ಕಟ್ಟಡವನ್ನು ಕೊರೊನಾಆಸ್ಪತ್ರೆಯಾಗಿ ಘೋಷಣೆ ಮಾಡಿ 400 ಹಾಸಿಗೆಗಳನ್ನುಕೊರೊನಾ ಸೋಂಕಿತರಿಗೆ ವ್ಯವಸ್ಥೆ ಮಾಡಲಾಗಿದೆ. 7ತಾಲೂಕು ಕೇಂದ್ರಗಳ ಆಸ್ಪತ್ರೆಗಳಲ್ಲಿ 235 ಹಾಸಿಗೆಹಾಗೂ 6 ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ220 ಹಾಸಿಗೆ ವ್ಯವಸ್ಥೆ ಮಾಡಲಾಗಿದೆ.
ಜಿಲ್ಲೆಯ 11 ಖಾಸಗಿ ಆಸ್ಪತ್ರೆಗಳಲ್ಲಿ 504 ಹಾಸಿಗೆಸೇರಿದಂತೆ ಒಟ್ಟು 1359 ಹಾಸಿಗೆ ಮೀಸಲಿರಿಸಲಾಗಿದೆ.ಜತೆಗೆ 100 ಹಾಸಿಗೆಗಳ ಕೊರೊನಾ ಕೇಂದ್ರವನ್ನೂತೆರೆಯಲಾಗಿದೆ. ಆದರೆ ಹಿಮ್ಸ್‌ನಲ್ಲಿ 321 ಮಂದಿ,ತಾಲೂಕು ಆಸ್ಪತ್ರೆಗಳಲ್ಲಿ 154 ಮಂದಿ ಚಿಕಿತ್ಸೆಪಡೆಯುತ್ತಿರುವುದು ಬಿಟ್ಟರೆ ಸಮುದಾಯಆರೋಗ್ಯ ಕೇಂದ್ರಗಳಿಗೆ ಕೊರೊನಾ ಸೋಂಕಿತರುಚಿಕಿತ್ಸೆಗೆ ದಾಖಲಾಗುತ್ತಿಲ್ಲ.
ಬಹುತೇಕ ಮಂದಿಹಾಸನದ ಹಿಮ್ಸ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆಪಡೆಯುತ್ತಿದ್ದಾರೆ.ಜಿಲ್ಲೆಯಲ್ಲಿ ಈಗ 5832 ಸಕ್ರಿಯ ಪ್ರಕರಣಗಳಿದ್ದು,4000ಕ್ಕೂ ಹೆಚ್ಚು ಮಂದಿ ಮನೆಯಲ್ಲಿಯೇ ಚಿಕಿತ್ಸೆಪಡೆಯುತ್ತಿದ್ದರೆ, ಹಿಮ್ಸ್ ಆಸ್ಪತ್ರೆಯಲ್ಲಿ 321 ಮಂದಿ,154 ಮಂದಿ ತಾಲೂಕು ಕೇಂದ್ರದ ಆಸ್ಪತ್ರೆ ಹಾಗೂ226 ಮಂದಿ ಖಾಸಗಿ ಆಸ್ಪತ್ರೆಗೆ ಸೇರಿ 701 ಮಂದಿಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಪೈಕಿ 72 ಮಂದಿಗೆ ತೀವ್ರ ನಿಗಾ ಘಟಕ (ಐಸಿಯು)ದಲ್ಲಿಚಿಕಿತ್ಸೆ ನೀಡಲಾಗುತ್ತಿದೆ.
ಹಿಮ್ಸ್‌ನಲ್ಲಿ 110 ಐಸಿಯು, ಖಾಸಗಿ ಆಸ್ಪತ್ರೆಗಳಲ್ಲಿ43 ಐಸಿಯು ವ್ಯವಸ್ಥೆ ಹಾಸಿಗೆ ವ್ಯವಸ್ಥೆಗಳಿದ್ದು, 72ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. 45 ವೆಂಟಿಲೇಟರ್‌ಹಾಸಿಗೆ ಸೌಲಭ್ಯವಿದ್ದು 23 ಮಂದಿಯನ್ನುವೆಂಟಿಲೇಟರ್‌ನಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಇತರೆ ರೋಗಿಗಳಿಗೆ ವ್ಯವಸ್ಥೆ: ಹಾಸನ ಹಿಮ್ಸ್‌ನಲ್ಲಿಕೊರೊನಾ ಸೋಂಕಿತರ ಹೊರತಾಗಿ ಪ್ರತ್ಯೇಕಕಟ್ಟಡದಲ್ಲಿ 350 ಹಾಸಿಗೆಗಳ ಕೊರೊನೇತರರೋಗಿಗಳ ಚಿಕಿತ್ಸೆಗಾಗಿ ಮತ್ತು ಹೊರ ರೋಗಿಗಳಿಗೆಹಳೆ ಕೋರ್ಟ್ ಕಟ್ಟಡದಲ್ಲಿ ಚಿಕಿತ್ಸೆಗೆ ವ್ಯವಸ್ಥೆಮಾಡಲಾಗಿದೆ. 7 ತಾಲೂಕು ಕೇಂದ್ರದಆಸ್ಪತ್ರೆಗಳಲ್ಲೂ ತಲಾ 70 ಹಾಸಿಗೆ ಚಿಕಿತ್ಸೆಗೆ ಲಭ್ಯವಿವೆ.ಹೀಗಾಗಿ ಕೊರೊನೇತರ ರೋಗಿಗಳ ಚಿಕಿತ್ಸೆಗೆಹಾಸಿಗೆಗಳ ಕೊರತೆಯಿಲ್ಲ.
ಜಿಲ್ಲೆಯ ಸರ್ಕಾರಿ ಆಸ್ಪತ್ರೆಗೆ ತಜ್ಞ ವೈದ್ಯರು ಮತ್ತುಎಂಬಿಬಿಎಸ್ ವೈದ್ಯರು ಸೇರಿ ಒಟ್ಟು 286 ವೈದ್ಯಹುದ್ದೆಗೆ ಬದಲಾಗಿ 216 ವೈದ್ಯ ಹುದ್ದೆಭರ್ತಿಯಾಗಿದ್ದು, 70 ಹುದ್ದೆ ಖಾಲಿಯಿವೆ.
ಆಕ್ಸಿಜನ್ ವ್ಯವಸ್ಥೆ: ಹಿಮ್ಸ್‌ನಲ್ಲಿ 13,000 ಕಿಲೋಲೀಟರ್ ಸಾಮರ್ಥಯದ ಆಕ್ಸಿಜನ್‌ಘಟಕವಿರುವುದರಿಂದ ಆಕ್ಸಿಜನ್‌ನ ಸಮಸ್ಯೆಯಿಲ್ಲ.ಮೀಸಲಿರಿಸಿರುವ 400 ಹಾಸಿಗೆಗಳಿಗೂ ಆಕ್ಸಿಜನ್‌ಹರಿವಿನ ವ್ಯವಸ್ಥೆಯಿದೆ. ತಾಲೂಕು ಕೇಂದ್ರದಆಸ್ಪತ್ರೆಗಳಲ್ಲೂ ಆಕ್ಸಿಜನ್ ಪೈಪ್‌ಲೈನ್ ಅಳವಡಿಸಿದ್ದುತಲಾ 24 ಜಂಬೋ ಸಿಲಿಂಡರ್ ಪ್ರತಿ ತಾಲೂಕುಆಸ್ಪತ್ರೆಗಳಿಗೂ ಸರಬರಾಜು ಮಾಡಲಾಗಿದೆ.ಇನ್ನುಳಿದಂತೆ ಸಮುದಾಯ ಆರೋಗ್ಯ ಕೇಂದ್ರಕ್ಕೆಆಕ್ಸಿಜನ್ ವ್ಯವಸ್ಥೆಗಾಗಿ ತಲಾ 18 ಜಂಬೋ ಸಿಲಿಂಡರ್‌ಗಳಂತೆ ಒಟ್ಟು 270 ಅಗತ್ಯವಿದೆ.
ರೆಮ್‌ಡಿಸಿವಿರ್ ಕೊರತೆ: ಸರ್ಕಾರಿ ಆಸ್ಪತ್ರೆಕೊರೊನಾ ಸೋಂಕಿತರಿಗೆ ರೆಮ್‌ಡಿಸಿವಿರ್‌ಚುಚ್ಚುಮದ್ದುಗಳ ಕೊರತೆ ಎದುರಾಗಿಲ್ಲ. ಆದರೆಖಾಸಗಿ ಆಸ್ಪತ್ರೆಗೆ ಅಗತ್ಯದಷ್ಟು ರೆಮ್‌ಡಿಸಿವಿರ್‌ಚುಚ್ಚುಮದ್ದು ಪೂರೈಕೆಯಾಗುತ್ತಿಲ್ಲ. ಪ್ರತಿದಿನ 1000ಪಾಟಿಟಿವ್ ಪ್ರಕರಣ ವರದಿಯಾಗುತ್ತಿದ್ದು, ಅಂದಾ ಜುಪ್ರತಿದಿನ 320 ಜನರಿಗೆ ರೆಮ್‌ಡಿಸಿವಿರ್ ಚುಚ್ಚುಮದ್ದುಅಗತ್ಯವಿದೆ. ಮುಂದಿನ 15 ದಿನಕೆ R 5000 ವಯಲ್‌ರೆಮ್‌ಡಿಸಿವಿರ್ ಚುಚ್ಚುಮದ್ದು ಅಗತ್ಯವಿದೆ ಎಂದುಜಿಲ್ಲಾಡಳಿತ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.
ಎನ್.ನಂಜುಂಡೇಗೌಡ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Cardamom: ಜಾಗತಿಕ ಉತ್ಪಾದನೆ ಕುಸಿತ : ಏಲಕ್ಕಿಗೂ ಶುಕ್ರದೆಸೆ: ಕೆ.ಜಿ.ಗೆ 3,000 ರೂ.!
Hassan: ಗರ್ಭಿಣಿ ಪತ್ನಿಯ ಹತ್ಯೆಗೈದು ಆತ್ಮಹ*ತ್ಯೆಗೆ ಯತ್ನಿಸಿದ ಪತಿ
Halebeedu; ನ. 29-ಡಿ. 4: ಜೈನರ ಗುತ್ತಿ ಕ್ಷೇತ್ರದಲ್ಲಿ ಪಂಚಕಲ್ಯಾಣ ಮಹೋತ್ಸವ
Belur: ಶಾಲೆ ಆವರಣದಲ್ಲಿ ಕಾಡಾನೆ ಪ್ರತ್ಯಕ್ಷ, ವಿದ್ಯಾರ್ಥಿಗಳ ಆತಂಕ
Hasana: ಹೊಳೆನರಸೀಪುರ ಸರಕಾರಿ ನರ್ಸಿಂಗ್ ಕಾಲೇಜಿನಲ್ಲಿ ಗಡ್ಡ ವಿವಾದ ಸುಖಾಂತ್ಯ!
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.