ಜಿಂದಾಲ್‌ಗೆ ಭೂಮಿ: ಹಗಲು ದರೋಡೆ
Team Udayavani, Apr 30, 2021, 4:06 PM IST
ಮೈಸೂರು: ಕೋವಿಡ್ ಸಂಕಷ್ಟದ ಪರಿಸ್ಥಿತಿಯಲ್ಲಿರಾಜ್ಯ ಸರ್ಕಾರ ಖಾಸಗಿ ಕಂಪನಿಯೊಂದಕ್ಕೆ 3667ಎಕರೆ ಭೂಮಿಯನ್ನುಪರಭಾರೆ ಮಾಡುತ್ತಿರುವಕ್ರಮ ಖಂಡನೀಯವಾಗಿದ್ದು, ಮುಂದಿನಸಂಪುಟ ಸಭೆಯಲ್ಲಿ ಭೂಮಿಪರಭಾರೆ ಆದೇಶವನ್ನುರದ್ದುಗೊಳಿಸಬೇಕು ಎಂದುವಿಧಾನ ಪರಿಷತ್ ಸದಸ್ಯಎಚ್. ವಿಶ್ವನಾಥ್ ಆಗ್ರಹಿಸಿದರು.
ನಗರದ ಜಿಲ್ಲಾಪರ್ತಕರ್ತರ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಳ್ಳಾರಿ ಜಿಲ್ಲೆಯಸಂಡೂರಿನಲ್ಲಿರುವ ಸರ್ಕಾರಒಡೆತನದಲ್ಲಿರುವ ಭೂಮಿಯನ್ನು ಈ ಹಿಂದಿನಸರ್ಕಾರ ಮಾರಾಟ ಮಾಡಲು ಮುಂದಾದಾಗ,ವಿಧಾನ ಸಭೆಯಲ್ಲಿ ಹಾಸಿಗೆ ಹಾಕಿ ಅಹೋ ರಾತ್ರಿಧರಣಿ ನಡೆಸಿದ ಬಿ.ಎಸ್.ಯಡಿಯೂರಪ್ಪ ಮತ್ತುತಂಡ ಈಗ್ಯಾಕೆ ಜಿಂದಾಲ್ ಕಂಪನಿಗೆ ಭೂಮಿಮಾರಾಟ ಮಾಡಿದ್ದಾರೆ? ಇದರ ಇಂದಿನ ಕಥೆ ಏನುಎಂಬುದನ್ನು ಬಹಿರಂಗ ಪಡಿಸಿ ಎಂದು ಒತ್ತಾಯಿಸಿದರು.
ಒಂದು ಎಕರೆಗೆ 80 ಲಕ್ಷ ರೂ. ಮೌಲ್ಯವಿರುವಾಗ3667.31 ಎಕರೆ ಭೂಮಿಯನ್ನು ಪ್ರತಿ ಎಕರೆಗೆ1.20 ಲಕ್ಷ ರೂ.ನಂತೆ ಕನಿಷ್ಠ ಬೆಲೆಯನ್ನು ನಿಗದಿಪಡಿಸಿ ಕಡಿಮೆ ಬೆಲೆಗೆ ಮಾರಾಟ ಮಾಡಿರುವಹುನ್ನಾರವೇನು? ಕಳೆದ 20 ವರ್ಷಗಳಲ್ಲಿನಗರಾಭಿವೃದ್ಧಿ ಪ್ರಾಧಿಕಾರಗಳು ಬಡವರಿಗೆಒಂದು ನಿವೇಶನ ನೀಡಲು ಸಾಧ್ಯವಾಗಿಲ್ಲ.
ಆದರೆಒಬ್ಬ ಸಬ್ ರಿಜಿಸ್ಟರ್ ವರದಿ ಆಧಾರವಾಗಿಟ್ಟುಕೊಂಡು ಎಕರೆಗೆ 1 ಲಕ್ಷದ 20 ಸಾವಿರದಂತೆ 3667ಎಕರೆ ಭೂಮಿಯನ್ನು ಪರಭಾರೆ ಮಾಡಲಾಗುತ್ತಿದೆ. ಇದು ಹಗಲು ದರೋಡೆ ಅಲ್ಲದೇ ಮತ್ತೇನುಎಂದು ಪ್ರಶ್ನಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
Belthangady: ನ. 21- ಮೇ 23: ಧರ್ಮಸ್ಥಳ ಮೇಳದಿಂದ ಯಕ್ಷ ಗಾನ ಸೇವೆ
Chikkamagaluru: ನಾವು ನಡೆದಿದ್ದೇ ದಾರಿ, ನಡಿ ಮಗಾ….ಮರಿ ಆನೆಗೆ ನಡೆಯಲು ಕಲಿಸಿದ ತಾಯಿ ಆನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.