ಬಿಗ್ ಬಾಸ್ಕೆಟ್ ಟಾಟಾ ಸ್ವಾಧೀನಕ್ಕೆ ..! ಸಿಸಿಐ ಅನುಮೋದನೆ..?
Team Udayavani, Apr 30, 2021, 5:14 PM IST
ನವ ದೆಹಲಿ : ಟಾಟಾ ಡಿಜಿಟಲ್ ಗೆ ಆನ್ ಲೈನ್ ಪ್ಲಾಟ್ ಫಾರ್ಮ್ ಬಿಗ್ ಬಾಸ್ಕೆಟ್ ನನ್ನು ಸ್ವಾಧೀನಪಡಿಸಿಕೊಳ್ಳಲು ಸಿಸಿಐ ಅನುಮೋದನೆ ಕೊಟ್ಟಿದೆ. ಈ ಮೂಲಕ ಬಿಗ್ ಬಾಸ್ಕೆಟ್ ನಲ್ಲಿ ಟಾಟಾ ಡಿಜಿಟಲ್ ಲಿಮಿಟೆಡ್ ಶೇಕಡಾ 64.3ರಷ್ಟು ಪಾಲನ್ನು ಪಡೆದುಕೊಳ್ಳಲಿದೆ.
ವ್ಯಾವಹಾರಿಕ ಕ್ಷೇತ್ರದಲ್ಲಿ ತನ್ನದೇ ಆದ ಹೆಚ್ಚುಗಾರಿಕೆಯನ್ನು ತೋರ್ಪಡಿಸಿಕೊಂಡಿದ್ದಲ್ಲದೇ, ಬಹುತೇಕ ಎಲ್ಲಾ ವಲಯಗಳ ಉದ್ಯಮಗಳಲ್ಲಿ ತೊಡಗಿಸಿಕೊಂಡಿರುವ ಟಾಟಾ ಗ್ರೂಪ್, ವೇಗವಾಗಿ ಬೆಳವಣಿಗೆ ಕಾಣುತ್ತಿರುವ ಇ-ಕಾಮರ್ಸ್ ಬಿಗ್ ಬಾಸ್ಕೆಟ್ ನಲ್ಲಿ ಗರಿಷ್ಠ ಪಾಲುದಾರಿಕೆ ಪಡೆಯಲಿದೆ.
ಟಾಟಾ ಡಿಜಿಟಲ್ ಬೆಂಗಳೂರು ಮೂಲದ ಸ್ಟಾರ್ಟ್ ಅಪ್ ಸಂಸ್ಥೆ ಬಿಗ್ ಬಾಸ್ಕೆಟ್ ನೊಂದಿಗೆ ಈ ಒಪ್ಪಂದಕ್ಕೆ ಸಹಿ ಹಾಕಿದ್ದು, ಸುಮಾರು 1.2 ಬಿಲಿಯನ್ ಡಾಲರ್ ಹೂಡಿಕೆ ಮಾಡಿದೆ ಎಂದು ವರದಿ ತಿಳಿಸಿದೆ.
ಓದಿ : ಬಿಜೆಪಿ ಸರ್ಕಾರದ ವಿರುದ್ಧ ಪ್ರಜ್ಞಾವಂತ ಮತದಾರರು ಎದ್ದು ನಿಂತಿದ್ದಾರೆ: ಸಲೀಂ ಅಹಮದ್
ಇನ್ನು, ಟಾಟಾ ಗ್ರೂಪ್ ಹಾಗೂ ಬಿಗ್ ಬಾಸ್ಕೆಟ್ ಸಂಸ‍್ಥೆಗಳ ನಡುವಿನ ಈ ಒಪ್ಪಂದದಿಂದಾಗಿ ಜಾಕ್ ಮಾ ಒಡೆತನದ ಅಲಿಬಾಬಾ ಮತ್ತು ಅಬ್ರಾಜ್ ಗ್ರೂಪ್ ಬಿಗ್ ಬಾಸ್ಕೆಟ್ ನಿಂದ ಹೂಡಿಕೆಯನ್ನು ಹಿಂಪಡೆಯಬೇಕಿದೆ.
ಆನ್ ಲೈನ್ ದಿನಸಿ ವಸ್ತುಗಳ ಪೂರೈಸುವ ಬಿಗ್ ಬಾಸ್ಕೆಟ್ ಸುಮಾರು 13,500 ಕೋಟಿ ರೂ. ಅಂದರೆ ಸುಮಾರು 1.85 ಬಿಲಿಯನ್ ಡಾಲರ್ ಮೌಲ್ಯವಿದೆ. ಹರಿ ಮೆನನ್ ನೇತೃತ್ವದ ಬೆಂಗಳೂರು ಕಂಪನಿಯು ಯುನಿಕಾರ್ನ್ ಕ್ಲಬ್ ಗೆ ಪ್ರವೇಶಿಸಿದ ಸುಮಾರು 20 ತಿಂಗಳ ನಂತರ ಈ ಒಪ್ಪಂದಕ್ಕೆ ಬರಲಾಗಿದೆ.
ಇನ್ನು, ಈ ಬಗ್ಗೆ ಪ್ರತಿಕ್ರಿಯೆ ನೀಡಲು ಉಭಯ ಸಂಸ್ಥೆಗಳು ನಿರಾಕರಿಸಿವೆ. ಬಿಗ್ ಬಾಸ್ಕೆಟ್ ಪ್ರತ್ಯೇಕ ಘಟಕವಾಗಿ ಮುಂದುವರಿಯಲಿದೆ ಮತ್ತು ಸಹ ಸಂಸ್ಥಾಪಕ ಮತ್ತು ಸಿಇಒ ಹರಿ ಮೆನನ್ ನೇತೃತ್ವದಲ್ಲಿಯೇ ಅದರ ಪ್ರಸ್ತುತ ನಿರ್ವಹಣೆ ಮುಂದುವರಿಯಲಿದೆ ಎಂದು ಮನಿ ಕಂಟ್ರೋಲ್ ವರದಿ ಮಾಡಿದೆ.
ಓದಿ : ಲಾಕ್ ಡೌನ್ ಲೆಕ್ಕಿಸದೆ ಸಂತೆ ಮಾಡಲು ಬಂದ ವ್ಯಾಪಾರಿಗಳು : ಪೊಲೀಸರಿಂದ ತೆರವು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Vyasanagar: ಮಣ್ಣಿನ ಒಳ ರಸ್ತೆಗಳಿಗೆ ಬೇಕು ಬೀದಿದೀಪ
Mangalore: ಅಡ್ಯಾರ್ ಕಣ್ಣೂರಿನಲ್ಲಿ ತ್ಯಾಜ್ಯ ಸುಡುವಿಕೆಯಿಂದ ಪರಿಸರ ಮಾಲಿನ್ಯ
Dandeli ನಗರ ಠಾಣೆಯ ತನಿಖಾ ವಿಭಾಗದ ಪಿಎಸ್ಐಯಾಗಿ ಕಿರಣ್ ಪಾಟೀಲ್ ಅಧಿಕಾರ ಸ್ಬೀಕಾರ
Thirthahalli: ತುಂಗಾ ನದಿಯಲ್ಲಿ ಅಪರಿಚಿತ ಮೃತದೇಹ ಪತ್ತೆ
Waqf issue: ಅಲ್ಲಾನ ಹೆಸರಲ್ಲಿ ಅಲ್ಲಾನಿಗೆ ದೋಖಾ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.