ಎಲ್ಲೆಡೆ ಕಟ್ಟುನಿಟ್ಟು; ರಸ್ತೆಗಿಳಿದರೆ ಬಸ್ಕಿ ಪೆಟ್ಟು
ಕೊರೊನಾ ಕರ್ಫ್ಯೂ 2ನೇ ದಿನವೂ ಬಿಗಿ! ಕೆಲಸವಿಲ್ಲದೇ ರಸ್ತೆಗಿಳಿದವರಿಗೆ ಲಾಠಿ ರುಚಿ
Team Udayavani, Apr 30, 2021, 6:56 PM IST
ಬಾಗಲಕೋಟೆ: ಕೊರೊನಾ ಕರ್ಫ್ಯೂ ಜಾರಿಯಲ್ಲಿದ್ದು, ಜಿಲ್ಲೆಯ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಕಠೀಣವಾಗಿ ಅನುಷ್ಠಾನಗೊಳಿಸಲಾಗುತ್ತಿದೆ. ಕಳೆದ ಎರಡು ದಿನಗಳಲ್ಲಿ ಅನಗತ್ಯವಾಗಿ ರಸ್ತೆಗಿಳಿದ ವಾಹನ ಸೀಜ್ ಮಾಡುವ ಜತೆಗೆ ಹಲವು ಯುವಕರಿಗೆ ಬಸ್ಕಿ ಹೊಡೆಸುವ ಶಿಕ್ಷೆ ಕೂಡ ನೀಡಲಾಗಿದೆ.
2ನೇ ಅಲೆ ದಿನೇ ದಿನ ಹೆಚ್ಚುತ್ತಿದ್ದು, ಗುರುವಾರವೂ ನವನಗರದ ಓರ್ವ ವ್ಯಕ್ತಿ ಸೋಂಕಿಗೆ ಬಲಿಯಾಗಿದ್ದಾರೆ. 2ನೇ ಅಲೆಗೆ ಈ ವರೆಗೆ ಒಟ್ಟು 9 ಜನ ಮೃತಪಟ್ಟಿದ್ದು, ಜನರು ತಮ್ಮ ಆರೋಗ್ಯಕ್ಕೆ ಮನೆಯಲ್ಲೇ ಇದ್ದು ಜಾಗೃತಿ ವಹಿಸಲು ಜಿಲ್ಲಾಡಳಿತ ಮನವಿ ಮಾಡಿದೆ.
ಕೊರೊನಾ ಕರ್ಫ್ಯೂ ಮಧ್ಯೆಯೂ ಗ್ರಾಮೀಣ ಭಾಗವೂ ಸೇರಿದಂತೆ ವಿವಿಧೆಡೆ ಮದುವೆ ನಡೆಯುತ್ತಿದ್ದು, ಬಾಗಲಕೋಟೆ ಉಪವಿಭಾಗ ವ್ಯಾಪ್ತಿಯಲ್ಲಿ 13 ಕಡೆ ನಿಯಮ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿದೆ. ಅಲ್ಲದೇ ಮದುವೆಗೆ ಪರವಾನಗಿ ಪಡೆಯದೇ ವಿವಿಧ ದೇವಸ್ಥಾನಗಳಲ್ಲಿ ನಡೆಯುವ ಮದುವೆಗಳ ಮೇಲೂ ಜಿಲ್ಲಾಡಳಿತ ಕಣ್ಣಿಟ್ಟಿದೆ. ಗುರುವಾರ ಮಧ್ಯಾಹ್ನ ನಗರದ ಬಸವೇಶ್ವರ ವೃತ್ತದ ಬಳಿಕ ಯಾವುದೇ ಕೆಲಸವಿಲ್ಲದೇ ರಸ್ತೆಗಿಳಿದ ಯುವಕರಿಗೆ ಬಸ್ತಿ ಹೊಡೆಸುವ ಮೂಲಕ ಪೊಲೀಸರು ಬಿಸಿ ಮುಟ್ಟಿಸಿದರು.
ಕೊರೊನಾ ಅಲೆ ಎದುರಿಸಲು ಸಿದ್ಧರಾಗಿ:
ಬೀಳಗಿ ವರದಿ: ಜಿಲ್ಲೆಯಲ್ಲಿ ಕೊರೊನಾ 2ನೇ ಅಲೆ ಹೆಚ್ಚುತ್ತಿದ್ದು, ತಾಲೂಕಿನಲ್ಲಿ ಈ ಸೋಂಕು ನಿಯಂತ್ರಣಕ್ಕಾಗಿ ಅಧಿಕಾರಿಗಳು ಎಲ್ಲ ರೀತಿಯಿಂದಲೂ ಸಿದ್ಧರಾಗಿರಬೇಕು. ಜನರೂ ಸಹಕಾರ ನೀಡಬೇಕು ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ ನಿರಾಣಿ ತಿಳಿಸಿದರು.
ಬೀಳಗಿ ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ತಾಲೂಕಿನಲ್ಲಿ ಕೊರೊನಾ ಪ್ರಕರಣಗಳ ಕಡಿಮೆ ಇವೆ ಎಂದು ನಿರ್ಲಕ್ಷé ಮಾಡಬಾರದು. ತಾಲೂಕಾಸ್ಪತ್ರೆಯಲ್ಲಿ ಈಗಾಗಲೇ 24 ಕೋವಿಡ್ ಬೆಡ್ ನಿರ್ಮಿಸಲಾಗಿದೆ. ಅಲ್ಲದೆ ಮೊರಾರ್ಜಿ ವಸತಿ ನಿಲಯದಲ್ಲಿ 90 ಬೆಡ್ ಸಿದ್ಧವಾಗಿವೆ. ಪ್ರಕರಣಗಳು ಹೆಚ್ಚಾದರು ಸದ್ಯ ನಿಭಾಯಿಸಲು ತಾಲೂಕು ಆಡಳಿತ ಸಿದ್ಧವಾಗಿದ್ದು, ಆಕ್ಸಿಜನ್ ಕೊರತೆ ನಿಗಿಸಲು ಕೂಡಲೇ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದರು.
ತಾಲೂಕಿನಲ್ಲಿ 126 ಪ್ರಕರಣಗಳು ಇದ್ದು ಹೋಮ ಕ್ವಾರಂಟೈನ್‌ನಲ್ಲಿದ್ದಾರೆ. ಅವರ ಮೇಲೆ ನಿರಂತರ ನಿಗಾ ವಹಿಸಲಾಗಿದೆ. ಸಾರ್ವಜನಿಕರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೈಗೊಂಡ ನಿಯಮ ಪಾಲಿಸಿ ಸಹಕರಿಸಬೇಕು. ಉತ್ತಮ ಆರೋಗ್ಯಕ್ಕಾಗಿ ಎಲ್ಲರ ಸಹಕಾರ ಮುಖ್ಯವಾಗಿದೆ. ಜನರು ಕೊರೊನಾ ಕರ್ಪೂé ಕಡ್ಡಾಯ ಪಾಲನೆ ಮಾಡಿ, ಕೋವಿಡ್ ಲಸಿಕೆ ಪಡೆಯಲು ಮುಂದಾಗಿ ರೋಗ ಹರಡದಂತೆ ನಿಗಾ ವಹಿಸಿ ಎಂದರು. ಸಿಪಿಐ ಸಂಜೀವ ಬಳಿಗಾರ ಮಾತನಾಡಿ, ಕೊರೊನಾ ಬೆಳಗ್ಗೆ 6ರಿಂದ 10 ಗಂಟೆಯವರಿಗೆ ಜನರು ಮಾರುಕಟ್ಟೆಯಲ್ಲಿ ಅಗತ್ಯ ವಸ್ತು ಪಡೆದುಕೊಳ್ಳುವುದು ಮತ್ತು ಮಾಸ್ಕ್, ಅಂತರ ಕಾಯ್ದುಕೊಳ್ಳುವುದು ಕಡ್ಡಾಯ ಮಾಡಿದ್ದೇವೆ. ತರಕಾರಿ ಮಾರುಕಟ್ಟೆ ಎಪಿಎಂಸಿ ಆವರಣಕ್ಕೆ ಸ್ಥಳಾಂತರ ಮಾಡಲಾಗಿದ್ದು ಎಲ್ಲರು 10 ಗಂಟೆಯೊಳಗೆ ಖರೀದಿಗೆ ಸೂಚಿಸಲಾಗಿದೆ. ಮದುವೆ ಸಮಾರಂಭಕ್ಕೆ 50 ಜನ ಮತ್ತು ಅಂತ್ಯಕ್ರಿಯೆಗೆ 5 ಜನರು ಮಾತ್ರ ಭಾಗಿಯಾಗಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ವಿಧಾನಪರಿಷತ್ ಸದಸ್ಯ ಹನಮಂತ ನಿರಾಣಿ, ತಹಶೀಲ್ದಾರ್ ಶಂಕರ ಗೌಡಿ, ತಾಪಂ ಇಒ ಎಂ.ಕೆ. ತೋದಲಬಾಗಿ, ಬಿಇಒ ಮಿರ್ಜಿ, ವೈದ್ಯಾಧಿಕಾರಿ ಡಾ|ವಿಕಾಸ, ಮುಖ್ಯಾಧಿಕಾರಿ ಐ.ಕೆ. ಗುಡದಾರಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi Session: ವಕ್ಫ್ ಅಧಿಸೂಚನೆ ಹಿಂಪಡೆಯಲ್ಲ, ಪರಿಹಾರಕ್ಕೆ ಸಮಿತಿ: ಸಿಎಂ ಭರವಸೆ
Over Remarks: ʼಸಿದ್ದರಾಮೋತ್ಸವʼ ಮಾಡಿಸುವ ನೀವು ‘ಅಂಬೇಡ್ಕರ್ ಉತ್ಸವ’ ಮಾಡಲ್ಲ: ಬಿಜೆಪಿ
Internal Dissent: ಪ್ರಧಾನಿ ಮೋದಿ ಭೇಟಿಯಾದ ವಿಜಯೇಂದ್ರ ದೂರದಿದ್ದರೂ ‘ಸಂದೇಶ’ ರವಾನೆ
Bill Amendment: ರಾಜ್ಯಪಾಲರ ಕುಲಾಧಿಪತಿ ಅಧಿಕಾರಕ್ಕೆ ಕತ್ತರಿ: ಮೇಲ್ಮನೆಯಲ್ಲೂ ಅಂಗೀಕಾರ
Winter Session: ಬಾಣಂತಿ ಸಾವು: ನ್ಯಾಯಾಂಗ ತನಿಖೆಗೆ ಬಿಜೆಪಿ ಪಟ್ಟು
MUST WATCH
ಹೊಸ ಸೇರ್ಪಡೆ
K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
Shiva Rajkumar: ಚಿಕಿತ್ಸೆಗಾಗಿ ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ
Alert…! ವಿಮಾನಕ್ಕೆ ಬೆದರಿಕೆ ಹಾಕಿದ್ರೆ 1 ಕೋಟಿವರೆಗೆ ದಂಡ ತೆರಲು ಸಿದ್ಧರಾಗಿ!
Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್ ಎಚ್ಚರಿಕೆ
Earthquake…! ರೋಡ್ ರೋಲರ್ ಶಬ್ದವನ್ನು ಭೂಕಂಪ ಎಂದು ಗ್ರಹಿಸಿ ಕಿಟಕಿಯಿಂದ ಜಿಗಿದರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.