ಇಂದಿನ ಗ್ರಹಬಲ: ಆರ್ಥಿಕವಾಗಿ ಏರುಪೇರು ಒಮ್ಮೊಮ್ಮೆ ಆತಂಕ ಪರಿಸ್ಥಿತಿಯನ್ನು ತಂದೊಡ್ಡಲಿದೆ!
Team Udayavani, May 1, 2021, 7:21 AM IST
01-05-2021
ಮೇಷ: ಸಾಂಸಾರಿಕವಾಗಿ ದುಃಖ, ಮನಸ್ತಾಪ, ಮಾನಸಿಕ ವ್ಯಥೆ ಎಲ್ಲವೂ ಒಂದೊಂದಾಗಿ ನಿವಾರಣೆಯಾಗಲಿದೆ. ನಿಮ್ಮ ಖಚಿತ ನಿರ್ಧಾರಗಳು ಕಾರ್ಯಾನುಕೂಲಕ್ಕೆ ಪೂರಕವಾಗಲಿದೆ. ವ್ಯಾಪಾರ, ವ್ಯವಹಾರದಲ್ಲಿ ಏರುಪೇರು ಕಾಣಬಹುದು.
ವೃಷಭ: ಆರ್ಥಿಕವಾಗಿ ಸ್ವಲ್ಪ ಕಡಿಮೆ ವ್ಯವಹಾರಗಳು ಕಂಡುಬರುವುದು. ಆದರೂ ಅಧೈರ್ಯ ಪಡುವುದು ಬೇಡ. ನಿಮ್ಮ ಭರವಸೆ, ವಿಶ್ವಾಸಗಳು ನಿಮ್ಮನ್ನು ಕಾಪಾಡಲಿದೆ. ಅಧೈರ್ಯದ ಹೆಜ್ಜೆ ಬೇಡ. ಮುನ್ನಡೆಯುವುದು.
ಮಿಥುನ: ನಿರುದ್ಯೋಗಿಗಳಿಗೆ ತಪ್ಪಿದ ಅವಕಾಶಗಳು ಪುನಃ ಲಭಿಸಲಿದೆ. ದಾಂಪತ್ಯದಲ್ಲಿ ಸಿಹಿಯು ಹೆಚ್ಚಲಿದೆ. ಅಧಿಕ ತಿರುಗಾಟವು ಕಂಡುಬರುವುದು. ದೇಹಾಯಾಸವು ಕಂಡು ಬರುವುದು. ಕಾರ್ಯರಂಗದಲ್ಲಿ ಮುನ್ನಡೆ.
ಕರ್ಕ: ವಿದ್ಯಾಭ್ಯಾಸಿಗಳು ಹೆಚ್ಚಿನ ಪ್ರಗತಿ ಸಾಧಿಸಲಿದ್ದೀರಿ. ಅಧಿಕ ಪರಿಶ್ರಮವು ಬೇಕಾಗುವುದು. ನಿಮ್ಮ ಸಮಸ್ಯೆಗಳು ಒಂದೊಂದಾಗಿ ಪರಿಹಾರ ಕಾಣಲಿದೆ. ಪುತ್ರನ ಪ್ರಗತಿ ಕಂಡು ಸಂತಸವಾಗಲಿದೆ. ಶುಭಕಾರ್ಯಕ್ಕೆ ನಾಂದಿ ಹಾಡಿರಿ.
ಸಿಂಹ: ದೂರ ಸಂಚಾರದ ಕೆಲಸ ಕಾರ್ಯಗಳು ಸ್ವಲ್ಪ ಹಿನ್ನಡೆ ಕಂಡಾವು. ಭೂಸಂಬಂಧಿ ವ್ಯವಹಾರಗಳು ಲಾಭಕರವಾದಾವು. ವಿದ್ಯಾರ್ಥಿಗಳು ಉತ್ತಮ ಅಂಕ ಪಡೆದು ಕೃತಾರ್ಥರಾದಾರು. ಅದರೊಂದಿಗೆ ಉದ್ಯೋಗದ ಸಿಹಿ ವಾರ್ತೆ ಇದೆ.
ಕನ್ಯಾ: ವೃತ್ತಿರಂಗದಲ್ಲಿ ವ್ಯಕ್ತಿ ವಿಕಾಸ, ಸ್ವಜನ, ಬಂಧುವರ್ಗದವರ ಸಹಕಾರ ನಿಮ್ಮ ಮುನ್ನಡೆಗೆ ಕಾರಣವಾಗಲಿದೆ. ಹಿರಿಯರಿಂದ ಬಳುವಳಿಯಾಗಿ ಸ್ವಲ್ಪ ಹಣವೂ ಕೈ ಸೇರಲಿದೆ. ಮನೆಯಲ್ಲಿ ಪತ್ನಿ, ಮಕ್ಕಳಿಂದ ಸಂತಸವಿದೆ.
ತುಲಾ: ನ್ಯಾಯಾಲಯದ ಕೆಲಸ ಕಾರ್ಯಗಳಲ್ಲಿ ಹಾಗೂ ಇನ್ನಿತರ ಕಾರ್ಯಗಳಲ್ಲೂ ಸಹ ಅಧಿಕ ರೀತಿಯಲ್ಲಿ ಧನವ್ಯಯ ಉಂಟಾಗಲಿದೆ. ತುಲನೆ ಮಾಡಿ ಜೀವನ ನಡೆಸುವ ಅಗತ್ಯವಿದೆ. ಅದರಿಂದ ಸಮತೋಲನ ಸಾಧಿಸುವಿರಿ. ಶುಭವಿದೆ.
ವೃಶ್ಚಿಕ: ಆರ್ಥಿಕವಾಗಿ ಏರುಪೇರು ಒಮ್ಮೊಮ್ಮೆ ಆತಂಕ ಪರಿಸ್ಥಿತಿಯನ್ನು ತಂದೊಡ್ಡಲಿದೆ. ಬಂಧುಜನರಿಂದ ಕಿರುಕುಳ ಅನುಭವಿಸಿ ಬೇಸರವಾದೀತು. ಮೌನಕ್ಕಿಂತ ಮಾತು ಲೇಸು ಎಂಬಂತೆ ವರ್ತಿಸಿರಿ. ಒಳ್ಳೆಯದಾದೀತು.
ಧನು: ಕಾರ್ಯ ಒತ್ತಡದಿಂದ ಮನಸ್ಸಿಗೆ ಸಮಾಧಾನವಿರದು. ಮಿತ್ರರು ವಿಮುಖರಾದಾರು. ವಿದ್ಯಾರ್ಥಿಗಳು ಅಭ್ಯಾಸದಲ್ಲಿ ಅಡಚಣೆ ಕಂಡಾರು. ಮಿತ್ರರೊಂದಿಗೆ ಕಲಹ, ಮನಸ್ತಾಪಗಳು ಉಂಟಾಗಲಿದೆ. ಮುಂದುವರಿಯಿರಿ.
ಮಕರ: ವಾಹನ, ಸ್ಥಿರಾಸ್ತಿ ವ್ಯವಹಾರ ಮುಂತಾದವುಗಳಲ್ಲಿ ಪ್ರಗತಿ ಕಾಣುವಿರಿ. ಹಾಗೂ ಮುನ್ನಡೆಯಲು ಅವಕಾಶವನ್ನು ಗಳಿಸುವಿರಿ. ನೀವು ಚಿಂತಿಸಿದ ಕೆಲಸ ಕಾರ್ಯಗಳಲ್ಲಿ ಅಡೆತಡೆಗಳನ್ನು ಎದುರಿಸಬೇಕಾದೀತು.
ಕುಂಭ: ಮನೋವಿಕಾರತೆ, ಅಸ್ಥಿರತೆ, ಉದ್ವೇಗಕ್ಕೆ ಕಾರಣವಾಗಬಹುದು. ಚಿಂತಿತ ಕೆಲಸ ಕಾರ್ಯಗಳು ಅಡೆತಡೆಗಳಿಂದಲೇ ವಿಳಂಬಗತಿಯಲ್ಲಿ ನಡೆದೀತು. ದೈವಾನುಗ್ರಹದಿಂದ ವೃತ್ತಿರಂಗದಲ್ಲಿ ಮುಂಭಡ್ತಿ ಇದೆ.
ಮೀನ: ವೃತ್ತಿರಂಗದಲ್ಲಿ ಹಂತ ಹಂತವಾಗಿ ಅಭಿವೃದ್ಧಿ ಕಂಡುಬರುವುದು. ನೀವು ಉತ್ತಮ ಕೆಲಸ ಮಾಡಿದರೂ ನಿಮಗೆ ಅಪಮಾನ, ಅವಮಾನಗಳು ಎದುರಾಗಲಿದೆ. ನಿರೀಕ್ಷಿತ ಕಾರ್ಯಸಾಧನೆಯಿಂದ ಸಂತೃಪ್ತಿ ಕಾಣುವಿರಿ.
ಎನ್.ಎಸ್. ಭಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Horoscope: ಉದ್ಯೋಗ,ವ್ಯವಹಾರ ಎರಡರಲ್ಲೂ ಯಶಸ್ಸು,ಅನಾದರದ ಮಾತುಗಳಿಗೆ ಪ್ರತಿಕ್ರಿಯೆ ತೋರದಿರಿ
Daily Horoscope: ಹಳೆಯ ಯೋಜನೆಗಳ ಶೀಘ್ರ ಅನುಷ್ಠಾನ, ಉದ್ಯೋಗಸ್ಥರ ಅತಂತ್ರ ಸ್ಥಿತಿ ನಿವಾರಣೆ
2025 ರ ವರ್ಷ ಫಲ: ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ
Daily Horoscope; ಉದ್ಯೋಗದಲ್ಲಿ ಪ್ರತಿಭೆಗೆ ತಕ್ಕ ಗೌರವ. ಅಕಸ್ಮಾತ್ ಧನಾಗಮ
Horoscope: ಈ ರಾಶಿಯವರಿಗೆ ಅನಿರೀಕ್ಷಿತ ಧನಲಾಭ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.