ಬಿಎಂಸಿ ಹೊಸ ಮಾರ್ಗಸೂಚಿ: ಕಡಿಮೆಯಾಗುತ್ತಿದೆ ಐಸಿಯು ಹಾಸಿಗೆಗಳ ಬೇಡಿಕೆ

| ಐದು ಸಾವಿರಕ್ಕೂ ಹೆಚ್ಚು ಕರೆಗಳು | ಆ್ಯಂಬುಲೆನ್ಸ್‌ ತಂಡಗಳ ನೇಮಕ

Team Udayavani, May 1, 2021, 9:54 AM IST

ಬಿಎಂಸಿ ಹೊಸ ಮಾರ್ಗಸೂಚಿ: ಕಡಿಮೆಯಾಗುತ್ತಿದೆ ಐಸಿಯು ಹಾಸಿಗೆಗಳ ಬೇಡಿಕೆ

ಮುಂಬಯಿ: ಕೋವಿಡ್‌ ರೋಗಿಗಳಿಗೆ ಸಮರ್ಪಕವಾಗಿ ಹಾಸಿಗೆ ಗಳನ್ನು ಹಂಚಿಕೆ ಮಾಡಲು ಹೊಸ ಮಾರ್ಗಸೂಚಿ ಹೊರಡಿಸಿದ ನಾಲ್ಕು ದಿನಗಳ ಬಳಿಕ ಐಸಿಯು ಹಾಸಿಗೆಗಳ ಬೇಡಿಕೆ ಕ್ರಮೇಣ ಕಡಿಮೆಯಾಗುತ್ತಿದೆ ಎಂದು ಬಿಎಂಸಿ ಅಧಿಕಾರಿಗಳು ಹೇಳಿದ್ದಾರೆ.

ಹಾಸಿಗೆಗಳನ್ನು ಹಂಚುವ ಮೊದಲು ರೋಗಲಕ್ಷಣವಿರುವ ಕೋವಿಡ್‌ ರೋಗಿ ಗಳ ವೈದ್ಯಕೀಯ ತಪಾಸಣೆಯ ಮಾನ ದಂಡಗಳು ಹಾಸಿಗೆಗಳನ್ನು ವ್ಯವಸ್ಥಿತವಾಗಿ ಹಂಚಿಕೆ ಮಾಡಲು ಕಾರಣವಾಗಿದ್ದು, ಐಸಿಯು, ಆಮ್ಲಜನಕ ಮತ್ತು ವೆಂಟಿಲೇಟರ್‌ ಹಾಸಿಗೆಗಳನ್ನು ನಿರ್ಣಾಯಕ ರೋಗಿಗಳಿಗೆ ಮಾತ್ರ ಉಳಿಸಲಾಗುತ್ತಿದೆ ಎಂದು ಮುಂಬಯಿ ಮಹಾನಗರ ಪಾಲಿಕೆಯ ಹಿರಿಯ ಅಧಿಕಾರಿಗಳು ಹೇಳಿದ್ದಾರೆ.

ಐದು ಸಾವಿರಕ್ಕೂ ಹೆಚ್ಚು ಕರೆಗಳು :

ಕಳೆದ ಮೂರು ತಿಂಗಳಲ್ಲಿ ಕೋವಿಡ್‌ ರೋಗಿಗಳ ಸಂಖ್ಯೆ ಹೆಚ್ಚಾಗಿದ್ದು, ರೋಗಿಗಳು ಹಾಸಿಗೆ ಪಡೆಯಲು ತೊಂದರೆ ಅನುಭವಿಸುತ್ತಿದ್ದಾರೆ ಎಂಬ ವರದಿಗಳು ಮತ್ತು ದೂರುಗಳಿವೆ. ಬಿಎಂಸಿ ಸಹಾಯವಾಣಿ ಸಂಖ್ಯೆ 1916ಗೆ ಈ ಮೊದಲು ಪ್ರತೀದಿನ 2,500 ಕರೆಗಳು ಬರುತ್ತಿದ್ದವು.  ಪ್ರಸ್ತುತ ಕರೆಗಳ ಸಂಖ್ಯೆ ದಿನಕ್ಕೆ 5,000ಕ್ಕೂ ಹೆಚ್ಚಿದೆ. ಇದರ ಪರಿಣಾಮ ಹಾಸಿಗೆ ಹಂಚಿಕೆಗೆ ಈ ಹಂತವು ಸಹಾಯ ಮಾಡುತ್ತದೆ ಎಂದು ಬಿಎಂಸಿ ತಿಳಿಸಿದೆ.

ಎಲ್ಲ ವಾರ್ಡ್‌ಗಳಲ್ಲಿ 10 ತಂಡ :

ಎಲ್ಲ  24 ವಾರ್ಡ್‌ಗಳಿಗೆ ಸ್ಟ್ಯಾಂಡ್‌ಬೈನಲ್ಲಿ  ಪ್ರತೀ ವಾರ್ಡ್‌ಗೆ 10 ಆ್ಯಂಬುಲೆನ್ಸ್‌ಗಳಿರುವ 10 ತಂಡಗಳನ್ನು ಹೊಂದಲು ನಿರ್ದೇಶಿಸಲಾಗಿದೆ. ಇವರಲ್ಲಿ ವೈದ್ಯರು ಸಹಿತ ಸಿಬಂದಿಯು ರೋಗಿಗಳಿರುವ ಮನೆಗಳಿಗೆ ಭೇಟಿ ನೀಡುತ್ತಾರೆ. ಈ ರೋಗಿಗಳಿಗೆ ಅವರ ಅಗತ್ಯತೆ ಮತ್ತು ವೈದ್ಯಕೀಯ ಸ್ಥಿತಿಗೆ ಅನುಗುಣವಾಗಿ ಅವರ ವೈದ್ಯಕೀಯ ಸ್ಥಿತಿಯ ವಿವರಣೆಗಳೊಂದಿಗೆ ಹಾಸಿಗೆಗಳನ್ನು ನೀಡಲಾಗುತ್ತದೆ.

ರೋಗ ಲಕ್ಷಣ ಇರುವವರಿಗೆ ಮಾತ್ರ ಪರೀಕ್ಷೆ :

ನಾವು ಹಾಸಿಗೆಗಳ ಸಂಪೂರ್ಣ ವ್ಯವಸ್ಥೆ ಯನ್ನು ಜಾರಿಗೆ ತರಲು ಬಯಸಿದ್ದೇವೆ. ಹಾಸಿಗೆಗಳ ಪ್ರಕಾರಗಳನ್ನು ಸೂಕ್ಷ್ಮವಾಗಿ ಗಮನಿಸು ತ್ತಿದ್ದೇವೆ. ರೋಗಿಗಳು ಮತ್ತು ಅವರ ಸಂಬಂಧಿಕರು ತಮ್ಮ ರೋಗಲಕ್ಷಣಗಳನ್ನು ಉಲ್ಲೇಖೀಸಿ ಹಾಸಿಗೆಗಳನ್ನು ಕೋರುವ ಮೊದಲು ಪಾಸಿಟಿವ್‌ ಪರೀಕ್ಷೆಗೆ ಒಳಗಾದ ರೋಗಿ ಗಳಿಗೆ ಪ್ರತ್ಯೇಕ ಹಾಸಿಗೆಗಳನ್ನು ವ್ಯವಸ್ಥೆ ಮಾಡ ಲಾಗಿದೆ. ರೋಗಲಕ್ಷಣ ಇರುವ ರೋಗಿಗಳ ವೈದ್ಯಕೀಯ ತಪಾಸಣೆ ನಡೆಸುವುದು ಪರಿ ಹಾರ ಎಂದು ನಾವು ಭಾವಿಸಿದ್ದೇವೆ ಎಂದು ಬಿಎಂಸಿ ಆರೋಗ್ಯ ವಿಭಾಗದ ಹೆಚ್ಚುವರಿ ಆಯುಕ್ತ ಸುರೇಶ್‌ ಕಾಕಾನಿ ಹೇಳಿದ್ದಾರೆ.

ಹೊಸ ಮಾರ್ಗಸೂಚಿ :

ಪರಿಣಾಮಕಾರಿ ಹಾಸಿಗೆ ನಿರ್ವಹಣೆಯನ್ನು ಖಚಿತಪಡಿಸಿಕೊಳ್ಳಲು ರೋಗಿಗಳನ್ನು ಅವರ ಮನೆಯಲ್ಲಿಯೇ ವೈದ್ಯಕೀಯ ಸಿಬಂದಿ ಪರೀಕ್ಷಿಸಿದ ಬಳಿಕವೇ ರೋಗಲಕ್ಷಣವಿರುವ ಕೋವಿಡ್‌ ರೋಗಿಗಳಿಗೆ ಹಾಸಿಗೆಯನ್ನು ಒದಗಿಸಲು ಮುಂಬಯಿ ಮಹಾನಗರ ಪಾಲಿಕೆ ಕಳೆದ ಶುಕ್ರವಾರ ನಿರ್ಧರಿಸಿದೆ. ಇದಕ್ಕಾಗಿ ಎ. 25ರಿಂದ ಜಾರಿಗೆ ಬರುವಂತೆ ಆಸ್ಪತ್ರೆಗಳಲ್ಲಿ ಕೋವಿಡ್‌ ರೋಗಿಗಳನ್ನು ದಾಖಲಿಸಲು ಬಿಎಂಸಿ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿತ್ತು.

ಪ್ರತೀ ವಾರ್ಡ್‌ಗಳಿಗೆ ಒಟ್ಟು ಹತ್ತು ತಂಡಗಳು  ಅಂದರೆ 240 ವೈದ್ಯಕೀಯ ಸಿಬಂದಿಯನ್ನು ನಿಯೋಜಿಸಲಾಗಿದೆ. ಹಾಸಿಗೆಗಳನ್ನು ಹಂಚುವ ಮೊದಲು ರೋಗಲಕ್ಷಣವಿರುವ ಪ್ರತಿ ರೋಗಿಯ ವೈದ್ಯಕೀಯ ತಪಾಸಣೆಗಾಗಿ ಮನೆಗೆ ಭೇಟಿ ನೀಡಲಾಗುತ್ತಿದೆ. ಅಂದರೆ ದಿನಕ್ಕೆ ಸುಮಾರು 1,000 ಅಥವಾ ಹೆಚ್ಚಿನ ರೋಗಿಗಳು ಪತ್ತೆಯಾಗುತ್ತಿದ್ದಾರೆ. ಆ ಸಂದರ್ಭ ರೋಗಿ ತುರ್ತು ಸ್ಥಿತಿಯಲ್ಲಿದ್ದರೆ ತಂಡವು ಅವರನ್ನು ಪರೀಕ್ಷಿಸುವಾಗ ನಿರ್ಣಾಯಕ ಸಮಯವನ್ನು ಕಳೆದುಕೊಳ್ಳಬೇಕಾಗುತ್ತದೆ. ತುರ್ತು ಅಗತ್ಯವಿರುವವರಿಗೆ ಬಿಎಂಸಿ ತುರ್ತು ಸಂದರ್ಭದಲ್ಲಿ ವಿನಾಯಿತಿಗಳನ್ನು ನೀಡಬೇಕಾಗುತ್ತದೆ.ಡಾ| ಯು. ಎ. ಮೆಹ್ತಾ, ನಗರದ ವೈದ್ಯ

ಹಾಸಿಗೆ ಹಂಚಿಕೆಗಾಗಿ ಹೊಸ ಮಾರ್ಗಸೂಚಿ ಜಾರಿಗೆ ತಂದ ಕೆಲವೇ ದಿನಗಳಲ್ಲಿ ವೈದ್ಯಕೀಯ ತಪಾಸಣೆ ಬಳಿಕ ಹಾಸಿಗೆಗಳನ್ನು ಹಂಚಿಕೆ  ಮಾಡಲಾಗಿದೆ. ಇದರಿಂದ ಐಸಿಯು ಹಾಸಿಗೆಗಳ ಬೇಡಿಕೆಯು ಕ್ರಮೇಣ ಕ್ಷೀಣಿಸುತ್ತಿದೆ. ರೋಗಿಗಳು ಮತ್ತು ಅವರ ಸಂಬಂಧಿಕರು ಐಸಿಯು ಹಾಸಿಗೆಗಳಿಗೆ ಆದ್ಯತೆ ನೀಡಿದರೂ ಅವರನ್ನು ಕೂಲಂಕುಷವಾಗಿ ಪರೀಕ್ಷಿಸಿದ ಬಳಿಕ ಹಾಸಿಗೆಗಳನ್ನು ನಿರ್ಧರಿಸಲಾಗುತ್ತಿದೆ. ಎಲ್ಲಿ ಸಮಸ್ಯೆಗಳಿವೆ ಎಂಬುದನ್ನು ಗಮನಿಸಿ ಅದನ್ನು ಸರಿಪಡಿಸಲಾಗುತ್ತಿದೆ. ರೋಗಿಗಳಿಗೆ ಅವರ ಹಾಸಿಗೆ ಲಭ್ಯವಾಗುವಂತೆ ಮಾಡಲು ನಾವು ಎಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದೇವೆ.ಸುರೇಶ್‌ ಕಾಕಾನಿ, ಹೆಚ್ಚುವರಿ ಆಯುಕ್ತರು, ಮುಂಬಯಿ ಮಹಾನಗರ ಪಾಲಿಕೆ

ಟಾಪ್ ನ್ಯೂಸ್

Khameni

warrant: ಇಸ್ರೇಲಿ ನಾಯಕರಿಗೆ ವಾರಂಟ್‌ ಬೇಡ, ಗಲ್ಲು ವಿಧಿಸಿ: ಇರಾನ್‌

GOLD2

Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.

Ajith-Pawar

Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್‌

AAP–BJP

Scheme: ದಿಲ್ಲಿಯಲ್ಲಿ ಆಮ್‌ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!

Raj-Thackrey

Election: ರಾಜ್‌ ಠಾಕ್ರೆ ಎಂಎನ್‌ಎಸ್‌ ಶೂನ್ಯ ಸಾಧನೆ: ಚಿಹ್ನೆ, ಮಾನ್ಯತೆ ನಷ್ಟದ ಭೀತಿ!

Delhi-School

Air Quality: ದಿಲ್ಲಿಯಲ್ಲಿ ಭೌತಿಕ ತರಗತಿ ಪುನಾರಂಭದ ಬಗ್ಗೆ ಗಮನ ಹರಿಸಿ: ಸುಪ್ರೀಂ ಕೋರ್ಟ್‌

President-Murmu

Indian Constitution: ಸಂವಿಧಾನ ಅಂಗೀಕರಿಸಿ 75 ವರ್ಷ: ಸದನದಲ್ಲಿಂದು ರಾಷ್ಟ್ರಪತಿ ಭಾಷಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Desi Swara: ಲಕ್ಸಂಬರ್ಗ್‌ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ

Desi Swara: ಲಕ್ಸಂಬರ್ಗ್‌ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ

ಇಂಗ್ಲೆಂಡ್‌ನ‌ ರಾದರಮ್‌ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ

ಇಂಗ್ಲೆಂಡ್‌ನ‌ ರಾದರಮ್‌ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’

Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’

Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್‌

Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್‌

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Shiva-sene-Shinde

Election: ಶಿಂಧೆ ವಿರುದ್ಧ ಸೋತಿದ್ದ ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿ ಶಿವಸೇನೆಗೆ

Khameni

warrant: ಇಸ್ರೇಲಿ ನಾಯಕರಿಗೆ ವಾರಂಟ್‌ ಬೇಡ, ಗಲ್ಲು ವಿಧಿಸಿ: ಇರಾನ್‌

GOLD2

Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.

Ajith-Pawar

Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್‌

AAP–BJP

Scheme: ದಿಲ್ಲಿಯಲ್ಲಿ ಆಮ್‌ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.