ತಿಂಗಳಲ್ಲೇ 15099 ಕೇಸ್‌- 122 ಸಾವು


Team Udayavani, May 1, 2021, 1:05 PM IST

ಲಕಜದ್ತಗದಸ್ಗ

ಕಲಬುರಗಿ: ಜಿಲ್ಲೆಯಲ್ಲಿ ಕೊರೊನಾ ಸೋಂಕಿನ ಎರಡನೆ ಅಲೆ ಭೀಕರವಾಗಿ ಪರಿಣಿಸುತ್ತಿದ್ದು, ಕಳೆದ ಒಂದೇ ತಿಂಗಳಲ್ಲಿ 15 ಸಾವಿರಕ್ಕೂ ಅಧಿಕ ಪ್ರಕರಣಗಳು ಪತ್ತೆಯಾಗಿವೆ.

ಅದರಲ್ಲೂ ಕೊರೊನಾ ಕಾಲದ 13 ತಿಂಗಳಲ್ಲಿ ಶುಕ್ರವಾರ ಅತ್ಯಧಿಕ ದಾಖಲೆಯ 1,256 ಹೊಸ ಪ್ರಕರಣಗಳು ಕಾಣಿಸಿಕೊಂಡಿವೆ. ಕಳೆದ 2020ರ ಮಾರ್ಚ್‌ ತಿಂಗಳಲ್ಲಿ ಕೊರೊನಾ ಸೋಂಕಿನಿಂದ 76 ವರ್ಷದ ವೃದ್ಧ ಮೃತಪಟ್ಟಿದ್ದ. ಈ ಮೂಲಕವೇ ಜಿಲ್ಲೆಗೆ ಮಹಾಮಾರಿ ರೋಗಿ ವಕ್ಕರಿಸಿತ್ತು. ಮೇಲಾಗಿ ಈ ಸಾವು ಕೊರೊನಾಗೆ ದೇಶದಲ್ಲೇ ದಾಖಲಾದ ಸಾವಾಗಿತ್ತು. ಆದರೂ, ದೇಶದ ಬೇರೆ ಭಾಗಗಳು, ರಾಜ್ಯದ ಬೇರೆ ಜಿಲ್ಲೆಗಳಿಗೆ ಹೊಲಿಕೆ ಮಾಡಿದರೆ ಜಿಲ್ಲೆಯಲ್ಲಿ ಕೊಂಚ ನೆಮ್ಮದಿ ಎನ್ನುವಂತೆ ಇತ್ತು. ಈಗ ಎರಡನೆ ಅಲೆ ಇಡೀ ಜಿಲ್ಲೆಯನ್ನು ತಲ್ಲಣಿಸುವಂತೆ ಮಾಡುತ್ತಿದೆ. ಸರಿಯಾಗಿ ಒಂದು ವರ್ಷದ ಬಳಿಕ ಅಂದರೆ 2021ರ ಮಾರ್ಚ್‌ದಲ್ಲೇ ಎರಡನೇ ಅಲೆ ಶುರುವಾಗಿದ್ದು, ದಿನದಿಂದ ದಿನಕ್ಕೆ ತನ್ನ ಕಬಂಧಬಾಹುವನ್ನು ವಿಸ್ತರಿಸುತ್ತಲೇ ಇದೆ.

ಇದೇ ಏಪ್ರಿಲ್‌ ಒಂದೇ ತಿಂಗಳಲ್ಲಿ ಬರೋಬ್ಬರಿ 15,099 ಕೊರೊನಾ ಪಾಸಿಟಿವ್‌ ದೃಢಪಟ್ಟಿವೆ. ಅಷ್ಟು ಮಾತ್ರವಲ್ಲ, 122 ಮಂದಿ ಸೋಂಕಿತರು ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. ಏ.1ರಂದು ಕೇವಲ 103 ಹೊಸ ಪಾಸಿಟಿವ್‌ ಪ್ರಕರಣಗಳು ಮಾತ್ರವೇ ಪತ್ತೆಯಾಗಿದ್ದವು. ಆದರೆ, ಒಂದು ತಿಂಗಳ ಅಂತರದಲ್ಲಿ ಅಂದರೆ ಏ.30ಕ್ಕೆ ಇವುಗಳ ಸಂಖ್ಯೆ 1,256ಕ್ಕೆ ತಲುಪಿದೆ. ಅದೂ ಜಿಲ್ಲೆಯಲ್ಲಿ ಒಂದೇ ದಿನದಲ್ಲಿ ಕೊರೊನಾ ಪ್ರಕರಣಗಳು ಸಾವಿರ ಗಡಿದಾಟಿದ್ದು ಇದೇ ಮೊದಲು. ಹಾಗೆ ಏ.1ರಂದು ಒಟ್ಟು ಸೋಂಕಿತರ ಸಂಖ್ಯೆ 24,113 ಇತ್ತು. ಏ.30ಕ್ಕೆ ಇವುಗಳ ಸಂಖ್ಯೆ ಒಟ್ಟಾರೆ 39,212ಕ್ಕೆ ಏರಿಕೆಯಾಗಿದೆ. ಅದೇ ರೀತಿ ಜಿಲ್ಲಾದ್ಯಂತ ಕೊರೊನೆಗೆ ಬಲಿಯಾದವರ ಸಂಖ್ಯೆ ಅಂದು 344 ಇತ್ತು. ಈಗ ಏ.30ರಂದು ದೃಢಪಟ್ಟ ಆರು ಸಾವಿನ ಪ್ರಕರಣಗಳೊಂದಿಗೆ ಇವುಗಳ ಸಂಖ್ಯೆ 466ಕ್ಕೆ ಹೆಚ್ಚಳವಾಗಿದೆ.

ಆಗ 1,244 ಜನ ಸಕ್ರಿಯ ರೋಗಿಗಳು ಇದ್ದರು. ಈವಾಗ 8,394 ಮಂದಿ ಸಕ್ರಿಯ ಕೊರೊನಾ ರೋಗಿಗಳು ಜಿಲ್ಲೆ  ಯಲ್ಲಿ ಇದ್ದಾರೆ. ಇನ್ನು, ಏ.1ರಂದು ಆಸ್ಪತ್ರೆಯಲ್ಲಿ 195 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದರು. ಏ.30ರ ಪ್ರಕಾರ 1,513 ಜನ ಕೊರೊನಾ ಪೀಡಿತರು ಆಸ್ಪತ್ರೆಗಳಲ್ಲಿ ಇದ್ದಾರೆ. ಶುಕ್ರವಾರ ಆರು ಬಲಿ: ಶುಕ್ರವಾರ ಪತ್ತೆಯಾದ 1,256 ಹೊಸ ಪ್ರಕರಣಗಳಲ್ಲಿ ಆರು ಜನ ಸೋಂಕಿತರು ಮೃತಪಟ್ಟಿರುವುದು ಖಚಿತವಾಗಿದೆ. ಅಫಜಲಪುರ ತಾಲೂಕಿನ ಕುಲಾಲಿ ಗ್ರಾಮದ 51 ವರ್ಷದ ವ್ಯಕ್ತಿ, ಕಲಬುರಗಿಯ ವಿಠuಲ ನಗರದ 50 ವರ್ಷದ ವ್ಯಕ್ತಿ, ಆಳಂದ ಪಟ್ಟಣದ 39 ವರ್ಷದ ವ್ಯಕ್ತಿ, ಕಲಬುರಗಿಯ ಒಕ್ಕಲಗೇರಾ ಬಸವೇಶ್ವರ ದೇವಸ್ಥಾನ ಬಳಿಯ 33 ವರ್ಷದ ಯುವಕ, ಕಲಬುರಗಿ ತಾಲೂಕಿನ ಕುಮಸಿ ಗ್ರಾಮದ 65 ವರ್ಷದ ವೃದ್ಧೆ, ಕಲಬುರಗಿಯ ಎಂ.ಬಿ. ನಗರದ ನಿವಾಸಿ 84 ವರ್ಷದ ವೃದ್ಧೆ ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ.

ಟಾಪ್ ನ್ಯೂಸ್

1-aaccc

PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ

Ashok-1

Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್‌.ಅಶೋಕ್‌

HDK (4)

50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ

1-kangu

‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ

Ajit Pawar

BJP;’ಬಟೆಂಗೆ ತೊ ಕಟೆಂಗೆ’ ಹೇಳಿಕೆಗೆ ಬೆಂಬಲವಿಲ್ಲ ಎಂದ ಅಜಿತ್ ಪವಾರ್

01

Catacombs: ಇದು ಎಲುಬುಗಳೇ ತುಂಬಿಕೊಂಡ ಸುರಂಗ; ಸುಂದರ ದೇಶದ ಕರಾಳ ಇತಿಹಾಸ

DVG-Rail

Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್‌!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Maharashtra Election; BJP has nothing but 370: Mallikarjuna Kharge

Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ

Kalaburagi: Govt order to investigate KKRDB grant illegality: Complaint to election commission

Kalaburagi: ಕೆಕೆಆರ್‌ಡಿಬಿ ಅನುದಾನ ಅಕ್ರಮ ತನಿಖೆಗೆ ಸರ್ಕಾರದ ಆದೇಶ: ಚು.ಆಯೋಗಕ್ಕೆ ದೂರು

ಮೂರೂ ವರ್ಷಗಳಿಂದ ಈ ಶಾಲೆಯಲ್ಲಿ ಗಣಿತ ಶಿಕ್ಷಕರೇ ಇಲ್ಲ… ವಿದ್ಯಾರ್ಥಿಗಳಿಂದ ಪ್ರತಿಭಟನೆ

ಮೂರೂ ವರ್ಷಗಳಿಂದ ಈ ಶಾಲೆಯಲ್ಲಿ ಗಣಿತ ಶಿಕ್ಷಕರೇ ಇಲ್ಲ… ವಿದ್ಯಾರ್ಥಿಗಳಿಂದ ಪ್ರತಿಭಟನೆ

Kalaburagi: ರೌಡಿ ಶೀಟರ್ ಬರ್ಬರ ಹತ್ಯೆ… ರೈಲು ಹಳಿ ಬಳಿ ಶವ ಎಸೆದು ಹೋದ ದುಷ್ಕರ್ಮಿಗಳು

Kalaburagi: ರೌಡಿ ಶೀಟರ್ ಬರ್ಬರ ಹ*ತ್ಯೆ… ರೈಲು ಹಳಿ ಬಳಿ ಶವ ಎಸೆದು ಹೋದ ದುಷ್ಕರ್ಮಿಗಳು

4

Hunasagi: ನಕಲಿ ಕ್ಲಿನಿಕ್ ಮೇಲೆ ತಾಲೂಕು ವೈದ್ಯಾಧಿಕಾರಿಗಳಿಂದ ದಾಳಿ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

1-aaccc

PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ

Ashok-1

Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್‌.ಅಶೋಕ್‌

HDK (4)

50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ

1-kangu

‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ

4

Udupi: ಮೀನುಗಾರಿಕೆ ಕಾರ್ಮಿಕ ಸಾವು; ಪ್ರಕರಣ ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.