ಕೊರೊನಾ ಕರ್ಫ್ಯೂ ತಂದಿಟ್ಟ ಸಂಕಷ್ಟ

Team Udayavani, May 1, 2021, 2:59 PM IST

,ಮನಬವಚಷಞಷ

ವಿಜಯಪುರ: ಕೋವಿಡ್‌ ಎರಡನೇ ಅಲೆಯ ಕೊಂಡಿ ಕಳಚುವ ಉದ್ದೇಶದಿಂದ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಕರ್ಫ್ಯೂ ನಿರ್ಭಂಧ ರೈತರ ಮೇಲಾಗುತ್ತಿದೆ. ಬೇಸಿಗೆಯ ಈ ಹಂತದಲ್ಲಿ ವಿವಿಧ ಹಣ್ಣುಗಳ ಸುಗ್ಗಿಯ ಕಾಲವೂ ಆರಂಭಗೊಂಡಿದೆ. ಕೊಯ್ಲಿಗೆ ಬಂದಿರುವ ಹಣ್ಣು, ದಾಸ್ತಾನು ಅಸಾಧ್ಯವಾದ ತರಕಾರಿ ಉತ್ಪಾದಕ ರೈತರು ಮಾರುಕಟ್ಟೆ ಕಂಡುಕೊಳ್ಳಲಾಗದೇ ಕಂಗಾಲಾಗಿದ್ದಾರೆ.

ರಾಜ್ಯದಲ್ಲೇ ವಿಜಯಪುರ ಜಿಲ್ಲೆಯಲ್ಲಿ ದ್ರಾಕ್ಷಿ, ಲಿಂಬೆ ಅತ್ಯಧಿಕ ಪ್ರದೇಶದಲ್ಲಿ ಬೆಳೆಯುವ ಕಾರಣಕ್ಕೆ ತೋಟಗಾರಿಕೆ ಬೆಳೆಗಳ ತವರು ಎನಿಸಿಕೊಳ್ಳುತ್ತಿದೆ. ಇದಲ್ಲದೇ ಈಚೆಗೆ ಕೆರೆಗಳಿಗೆ ಕೃಷ್ಣಾ ನದಿಯಿಂದ ನೀರು ತುಂಬುವ ಯೋಜನೆ ಅನುಷ್ಠಾನಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಬೇಸಿಗೆ ಹಂಗಾಮಿನಲ್ಲಿ ಕೈ ಹಿಡಿಸಯುವ ಕಲ್ಲಂಗಡಿ, ಕರಬೂಜ ಬೆಳೆಯೂ ಇದೀಗ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗುತ್ತಿದೆ.

ಲಿಂಬೆ, ಮಾವು ಮಾರುಕಟ್ಟೆಗೆ ಲಗ್ಗೆ ಇಡುವ ಈ ಹಂತದಲ್ಲಿ ಕರ್ಫ್ಯೂ ಜಾರಿಗೆ ಬಂದಿರುವುದ ರೈತರನ್ನು ಕಂಗೆಡಿಸಿದೆ. ಕರ್ಫ್ಯೂ ಸಂದರ್ಭದಲ್ಲಿ ನಿತ್ಯವೂ ಬೆಳಗ್ಗೆ 6ರಿಂದ 10ರವರೆಗೆ ಅಗತ್ಯ ವಸ್ತುಗಳ ಖರೀದಿಗೆ ಸಡಿಲಿಕೆ ಇದ್ದರೂ ಹಳ್ಳಿಗಳಿಂದ ಮಾರುಕಟ್ಟೆ ಇರುವ ನಗರ-ಪಟ್ಟಣ ಪ್ರದೇಶಗಳಿಗೆ ತೋಟಗಾರಿಕೆ ಉತ್ಪನ್ನ ಸಾಗಿಸುವುದಕ್ಕೇ ಒಂದೆರಡು ಗಂಟೆ ಬೇಕು. ಕರ್ಫ್ಯೂ ಸಡಿಲಿಕೆಯ 4 ಗಂಟೆಯ ಸಮಯ ಸಾಕಾಗುವುದಿಲ್ಲ. ಅಲ್ಲದೇ ಕರ್ಫ್ಯೂ ಸಂದರ್ಭದಲ್ಲಿ ವಾಹನಗಳ ಓಡಾಟಕ್ಕೆ ನಿರ್ಬಂಧವಿದೆ. ಆಟೋಗಳಲ್ಲಿ ಸರಕು ಸಾಗಿಸಿದರೆ ಪೊಲೀಸರು ತಕರಾರು ಮಾಡುತ್ತಾರೆ, ಸಣ್ಣ ಪ್ರಮಾಣದಲ್ಲಿ ತರಕಾರಿ-ಹಣ್ಣು ಬೆಳೆದ ರೈತರಿಗೆ ಸರಕು ವಾಹನಗಳಲ್ಲಿ ಸಾಗಿಸಲು ಹೆಚ್ಚಿನ ಬಾಡಿಗೆ ಕೇಳುತ್ತಾರೆ.

ಹೀಗೆ ಏನೆಲ್ಲ ಸಂಕಷ್ಟಗಳನ್ನು ಎದುರಿಸಿ ಮಾರುಕಟ್ಟೆಗೆ ತಂದರೆ ಮಾರುಕಟ್ಟೆ ಅವಧಿ ಮೀರಿರುತ್ತದೆ. ಹೀಗಾಗಿ ರೈತರು ಮಾರುಕಟ್ಟೆಗೆ ಹೆಚ್ಚು ಸಮಯ ದಾಸ್ತಾನು ಅಸಾಧ್ಯವಾದ ಹಣ್ಣ-ತರಕಾರಿ ಸಾಗಿಸಲಾಗದೇ ಪರದಾಡುತ್ತಿದ್ದಾರೆ. ಇದರ ಮಧ್ಯೆಯೂ ಕೆಲವರು ರೈತರು ಅದಾಗಲೇ ಮಾರುಕಟ್ಟೆ ಪ್ರದೇಶದಲ್ಲಿ ನಿರಂತರ ವಹಿವಾಟಿನ ಸಂಪರ್ಕ ಹೊಂದಿರುವ ಸಗಟು ವ್ಯಾಪಾರಿಗಳನ್ನು ಸಂಪರ್ಕಿಸಿ, ಅವರ ಅಗತ್ಯಕ್ಕೆ ತಕ್ಕಂತೆ ಉತ್ಪನ್ನ ಸರಬರಾಜು ಮಾಡುತ್ತಿದ್ದಾರೆ. ಆದರೆ ಇಂತ ರೈತರ ಸಂಖ್ಯೆ ತೀರಾ ವಿರಳವಾಗಿದ್ದು, ಅನಕ್ಷರಸ್ತ ಹೆಚ್ಚಿನ ಸಂಖ್ಯೆಯ ರೈತರಿಗೆ ಕರ್ಫ್ಯೂ ಕರಾಳವಾಗಿ ಪರಿಣಮಿಸಿದೆ ಎನ್ನುತ್ತಾರೆ ರೈತರು.

ಇದರ ಹೊರತಾಗಿ ವಿಜಯಪುರ ತರಕಾರ-ಹಣ್ಣು ಮಾರುಕಟ್ಟೆಗೆ ಕರ್ಫ್ಯೂ ಆರಂಭದ ಎರಡು ದಿನಗಳಲ್ಲಿ ಆವಕದಲ್ಲಿ ಯಾವ ಬದಲಾವಣೆ ಆಗಿಲ್ಲ ಎಂದು ಎಪಿಎಂಸಿ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಆದರೆ ಕಿರುಕುಳ ವ್ಯಾಪಾರಿಗಳು ಸಂತೆ, ಬೀದಿ ಬದಿ ಮಾರಾಟದ ವ್ಯಾಪಾರ ವಹಿವಾಟಿಗೆ ಹೊಡೆತ ಬಿದ್ದಿದೆ. ಎರಡು ದಿನಗಳ ಹಿಂದೆ ಖರೀದಿಸಿರುವ ಹಣ್ಣು ಕೊಳ್ಳಲು ಕಿರುಕುಳ ವ್ಯಾಪಾರಿಗಳೇ ಮಾರುಕಟ್ಟೆಗೆ ಬರುತ್ತಿಲ್ಲ. ಈ ಹಿನ್ನೆಲೆಯಲ್ಲಿ ವ್ಯಾಪಾರ ನೆಲಕಚ್ಚಿದೆ ಎಂಬುದು ವಹಿವಾಟುದಾರ ಅನಿಸಿಕೆ. ಮಾರುಕಟ್ಟೆಯಿಂದ ಸಂತೆಗಳಿಗೆ ಹಣ್ಣು-ತರಕಾರಿ ತಂದು ಮಾರಾಟಕ್ಕೆ ಅಣಿಯಾಗುತ್ತಲೇ ಪೊಲೀಸರು ಬೆತ್ತದ ಏಟು ನೀಡುವ ಜೊತೆಗೆ ಕಾಲಿನಿಂದ ನಮ್ಮ ವಸ್ತುಗಳನ್ನು ಒದೆಯುವ, ನೆಲಕ್ಕೆ ಚಲ್ಲಿ ಹಾಳು ಮಾಡುತ್ತಾರೆ.

ದಂಡದ ಹೆಸರಿನಲ್ಲಿ ಹಣ ವಸೂಲಿಗೂ ನಿಲ್ಲುತ್ತಾರೆ. ಇದರಿಂದ ದಿನದ ಗಂಜಿಯನ್ನು ಮಾತ್ರ ನಂಬಿರುವ ನಮಗೆ ಈ ಪರಿಯ ಸಂಕಷ್ಟ ಹಾಗೂ ಆರ್ಥಿಕ ನಷ್ಟವಾದಲ್ಲಿ ಸಹಿಸಿಕೊಳ್ಳುವ ಶಕ್ತಿ ಇಲ್ಲ. ಹೀಗಾಗಿ ಈ ಸಹವಾಸವೇ ಬೇಡ ಎಂದು ಬಹುತೇಕ ಹಣ್ಣು-ತರಕಾರಿ ವ್ಯಾಪಾರಿಗಳು ಮನೆಗಳಲ್ಲೇ ಉಳಿದಿದ್ದೇವೆ ಎನ್ನುತ್ತಾರೆ ಹೆಸರು ಹೇಳಲು ಇಚ್ಛಿಸದ ಬೀದಿಬದಿ ವ್ಯಾಪಾರಿ ಮಹಿಳೆ. ಇದರ ಮಧ್ಯೆ ಕೋವಿಡ್‌ ಲಾಕ್‌ಡೌನ್‌ ಸಂದರ್ಭದಲ್ಲಿ ರೈತರ ನೆರವಿಗೆ ನಿಂತಿದ್ದ ತೋಟಗಾರಿಕೆ ಬೆಳೆಗಾರರ ಹಿತರಕ್ಷಣೆಗಾಗಿ ಜನ್ಮ ತಳೆದಿರುವ ಹಾಪ್‌ಕಾಮ್ಸ್‌ ಈ ಬಾರಿ ಮುಂದಡಿ ಇಟ್ಟಿಲ್ಲ. ಈಗಾಗಲೇ ತಾನು ಹಣ್ಣು-ತರಕಾರಿ ಪೂರೈಸುವ ಹಾಸ್ಟೆಲ್‌, ಜೈಲ್‌, ಸೈನಿಕ ಶಾಲೆಗೆ ಅಗತ್ಯದಷ್ಟು ವಸ್ತುಗಳನ್ನು ಮಾತ್ರ ಖರೀದಿಸುತ್ತಿದೆ. ಇತರೆ ವ್ಯಾಪಾರಿಗಳಂತೆ ಹಾಪ್‌ಕಾಮ್ಸ್‌ ಮಳಿಗೆಗೂ ಕರ್ಫ್ಯೂ ಸಡಿಲಿಕೆ ಅನ್ವಯ ಎಂಬ ಕಾರಣಕ್ಕೆ ಹೆಚ್ಚುವರಿ ಖರೀದಿಗೆ ಮುಂದಾಗುತ್ತಿಲ್ಲ.

ಇನ್ನು ಜಿಲ್ಲೆಯ ತರಕಾರಿ-ಹಣ್ಣು ಬೆಳೆಯುವ ರೈತರು ಅನುಭವಿಸುತ್ತಿರುವ ಸಂಕಷ್ಟವನ್ನು ಅರಿತಿರುವ ಜಿಲ್ಲಾಡಳಿತ ತೋಟಗಾರಿಕೆ, ಎಪಿಎಂಸಿ, ಹಾಪ್‌ಕಾಮ್ಸ್‌ ಅಧಿಕಾರಿಗಳ ಸಮನ್ವಯದೊಂದಿಗೆ ಸಹಾಯವಾಣಿ ತೆರೆದಿದೆ. ಆದರೆ ವಾಸ್ತವದಲ್ಲಿ ಸಹಾಯವಾಣಿ ಕೇಂದ್ರದ ಸ್ಥಾಪನೆಯಿಂದ ರೈತರಿಗೆ ಇನ್ನೂ ನಿರೀಕ್ಷಿತ ಸಹಕಾರಿ ಆಗಿಲ್ಲ. ಸ್ಥಗಿತಗೊಂಡಿರುವ ದೂರವಾಣಿ ಸಂಖ್ಯೆ ನೀಡಿರುವ, ಕರೆ ಮಾಡಿದ ಸಂದರ್ಭದಲ್ಲಿ ಕೇವಲ ಉತ್ಪನ್ನ ಸಾಗಿಸಲು ಪರವಾನಿಗೆ ಕೊಡಿಸುವುದಷ್ಟೇ ನಮ್ಮ ಕೆಲಸ ಎಂದು ಜಾರಿಕೊಳ್ಳುವ ಅ ಧಿಕಾರಿಗಳ ವರ್ತನೆ ಇದಕ್ಕೆ ಸಾಕ್ಷಿ. ಈಗಾಗಲೇ ಜಿಲ್ಲಾಡಳಿತ ಕೋವಿಡ್‌ ಪರಿಸ್ಥಿತಿ ನಿರ್ವಹಣೆಯ ಸವಾಲು ಎದುರಿಸುತ್ತಿದೆ.

ಇದೀಗ ಗ್ರಾಮೀಣ ಪರಿಸರದಲ್ಲಿನ ತೋಟಗಾರಿಕೆ ಬೆಳೆಗಾರರು ಅನುಭವಿಸುತ್ತಿರುವ ಸಂಕಷ್ಟ, ಅಗತ್ಯ ಪ್ರಮಾಣದಷ್ಟು ಹಣ್ಣು-ತರಕಾರಿಗಳು ಸಿಗದೇ ಸಾರ್ವಜನಿಕರು ಎದುರಿಸುತ್ತಿರುವ ಸಮಸ್ಯೆ ಬಗ್ಗೆ ತಲೆ ಕೆಡಿಸಿಕೊಳ್ಳುವ ಸ್ಥಿತಿ ಬಂದಿದೆ.

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ

Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ

Mangaluru; ಹಳೆ ನಾಣ್ಯ ಖರೀದಿ ಹೆಸರಲ್ಲಿ 58 ಲಕ್ಷ ರೂ. ವಂಚನೆ!

Mangaluru; ಹಳೆ ನಾಣ್ಯ ಖರೀದಿ ಹೆಸರಲ್ಲಿ 58 ಲಕ್ಷ ರೂ. ವಂಚನೆ!

Mangaluru: ಮುಡಾ ಕಚೇರಿಯಲ್ಲಿ ಮಧ್ಯವರ್ತಿಯಿಂದ ಕಡತ ತಿದ್ದುಪಡಿ?

Mangaluru: ಮುಡಾ ಕಚೇರಿಯಲ್ಲಿ ಮಧ್ಯವರ್ತಿಯಿಂದ ಕಡತ ತಿದ್ದುಪಡಿ?

Ullala ಮಡ್ಯಾರು: ಕಾರ್ಮಿಕರಿಗೆ ಹಲ್ಲೆ; ಬಂಧನ

Ullala ಮಡ್ಯಾರು: ಕಾರ್ಮಿಕರಿಗೆ ಹಲ್ಲೆ; ಬಂಧನ

Gangolli: 6 ದಿನ ಕಳೆದರೂ ಕಡಲಿಗೆ ಬಿದ್ದ ಮೀನುಗಾರನ ಸುಳಿವು ಇಲ್ಲ

Gangolli: 6 ದಿನ ಕಳೆದರೂ ಕಡಲಿಗೆ ಬಿದ್ದ ಮೀನುಗಾರನ ಸುಳಿವು ಇಲ್ಲ

Srinivasa Hospital: 90 ವರ್ಷದ ಮಹಿಳೆಗೆ ತೆರೆದ ಹೃದಯ ಶಸ್ತ್ರಚಿಕಿತ್ಸೆ

Srinivasa Hospital: 90 ವರ್ಷದ ಮಹಿಳೆಗೆ ತೆರೆದ ಹೃದಯ ಶಸ್ತ್ರಚಿಕಿತ್ಸೆ

Mangaluru: ಬ್ಯಾರಿ ಅಭಿವೃದ್ಧಿ ನಿಗಮದ ಸಾಧಕ-ಬಾಧಕ ಚರ್ಚೆ ಅಗತ್ಯ: ಸ್ಪೀಕರ್‌ ಖಾದರ್‌

Mangaluru: ಬ್ಯಾರಿ ಅಭಿವೃದ್ಧಿ ನಿಗಮದ ಸಾಧಕ-ಬಾಧಕ ಚರ್ಚೆ ಅಗತ್ಯ: ಸ್ಪೀಕರ್‌ ಖಾದರ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vijayapura: ಮಹಿಳಾ ವಿವಿಯಿಂದ ನಟಿ ತಾರಾ, ಮೀನಾಕ್ಷಿ ಬಾಳಿ, ವೇದಾರಾಣಿಗೆ ಗೌರವ ಡಾಕ್ಟರೇಟ್

Vijayapura: ಮಹಿಳಾ ವಿವಿಯಿಂದ ನಟಿ ತಾರಾ, ಮೀನಾಕ್ಷಿ ಬಾಳಿ, ವೇದಾರಾಣಿಗೆ ಗೌರವ ಡಾಕ್ಟರೇಟ್

Vijayapura: ಮಕ್ಕಳ ಕೊಲೆ ಮಾಡಿ ಆತ್ಮಹತ್ಯೆಗೆ ಯತ್ನಿಸಿದ್ದ ತಾಯಿಗೆ ಜೀವಾವಧಿ ಶಿಕ್ಷೆ

Vijayapura: ಮಕ್ಕಳ ಕೊಲೆ ಮಾಡಿ ಆತ್ಮಹತ್ಯೆಗೆ ಯತ್ನಿಸಿದ್ದ ತಾಯಿಗೆ ಜೀವಾವಧಿ ಶಿಕ್ಷೆ

Leopard spotted in Vijayapura city: CCTV footage captured

Leopard: ವಿಜಯಪುರ ನಗರದಲ್ಲಿ ಕಾಣಿಸಿಕೊಂಡ ಚಿರತೆ: ಸಿಸಿಟಿವಿಯಲ್ಲಿ ದೃಶ್ಯ ಸೆರೆ

Yathanaa

BJP Inner Politics: ಬಿ.ವೈ.ವಿಜಯೇಂದ್ರ ಬಿಜೆಪಿ ಹಂಗಾಮಿ ರಾಜ್ಯಾಧ್ಯಕ್ಷ: ಬಸನಗೌಡ ಯತ್ನಾಳ್‌

arrested

Vijayapura; ವಿದ್ಯಾರ್ಥಿನಿಯರಿಗೆ ಲೈಂಗಿ*ಕ ಕಿರುಕುಳ: ಸರಕಾರಿ ಕಾಲೇಜು ಪ್ರಾಂಶುಪಾಲ ಸೆರೆ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ

Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ

Mangaluru; ಹಳೆ ನಾಣ್ಯ ಖರೀದಿ ಹೆಸರಲ್ಲಿ 58 ಲಕ್ಷ ರೂ. ವಂಚನೆ!

Mangaluru; ಹಳೆ ನಾಣ್ಯ ಖರೀದಿ ಹೆಸರಲ್ಲಿ 58 ಲಕ್ಷ ರೂ. ವಂಚನೆ!

Mangaluru: ಮುಡಾ ಕಚೇರಿಯಲ್ಲಿ ಮಧ್ಯವರ್ತಿಯಿಂದ ಕಡತ ತಿದ್ದುಪಡಿ?

Mangaluru: ಮುಡಾ ಕಚೇರಿಯಲ್ಲಿ ಮಧ್ಯವರ್ತಿಯಿಂದ ಕಡತ ತಿದ್ದುಪಡಿ?

Ullala ಮಡ್ಯಾರು: ಕಾರ್ಮಿಕರಿಗೆ ಹಲ್ಲೆ; ಬಂಧನ

Ullala ಮಡ್ಯಾರು: ಕಾರ್ಮಿಕರಿಗೆ ಹಲ್ಲೆ; ಬಂಧನ

Gangolli: 6 ದಿನ ಕಳೆದರೂ ಕಡಲಿಗೆ ಬಿದ್ದ ಮೀನುಗಾರನ ಸುಳಿವು ಇಲ್ಲ

Gangolli: 6 ದಿನ ಕಳೆದರೂ ಕಡಲಿಗೆ ಬಿದ್ದ ಮೀನುಗಾರನ ಸುಳಿವು ಇಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.