ಅಭ್ಯರ್ಥಿ-ಏಜೆಂಟರಿಗೆ ಕೋವಿಡ್ ಪರೀಕ್ಷೆ
Team Udayavani, May 1, 2021, 3:22 PM IST
ಮಸ್ಕಿ: ಮೇ 2ರಂದು ರಾಯಚೂರಿನಲ್ಲಿ ನಡೆಯುವ ಮಸ್ಕಿ ವಿಧಾನಸಭೆ ಕ್ಷೇತ್ರದ ಉಪಚುನಾವಣೆ ಮತ ಎಣಿಕೆ ಕೇಂದ್ರಕ್ಕೆ ತೆರಳುವ ಅಭ್ಯರ್ಥಿಗಳಿಗೆ ಮತ್ತು ಏಜೆಂಟರಿಗೆ ಕೋವಿಡ್-19 ಪರೀಕ್ಷೆ ಶುಕ್ರವಾರ ನಡೆಸಲಾಯಿತು.
ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮತ ಎಣಿಕೆಗೆ ಹೊರಡುವ ಸಿಬ್ಬಂದಿ, ಏಜೆಂಟರ್ ಮತ್ತು ಚುನಾವಣೆಗೆ ಸ್ಪರ್ಧೆ ಮಾಡಿದ ಅಭ್ಯರ್ಥಿಗಳಿಗಾಗಿ ಕೊರೊನಾ ಪರೀಕ್ಷೆ ನಡೆಸಲಾಗುತ್ತಿದೆ. ಎರಡು ದಿನಗಳ ಹಿಂದೆಯಷ್ಟೇ ಈ ಎಲ್ಲರಿಗೂ ಕೊರೊನಾ ಪರೀಕ್ಷೆ ಮಾಡಿಸಲಾಗಿತ್ತು. ಆದರೆ, 48 ಗಂಟೆ ಪೂರ್ವ ಮತ್ತೂಮ್ಮೆ ಕೋವಿಡ್-19 ಟೆಸ್ಟ್ ಮಾಡಿಸಬೇಕು ಎನ್ನುವ ಜಿಲ್ಲಾಧಿ ಕಾರಿ ಆದೇಶ ಹಿನ್ನೆಲೆಯಲ್ಲಿ ಮತ್ತೂಮ್ಮೆ ಪರೀಕ್ಷೆ ನಡೆಸಲಾಯಿತು. 20 ಜನರಿಗೆ ಅವಕಾಶ: ಉಪಚುನಾವಣೆಯ ಮತ ಎಣಿಕೆ 14 ಸುತ್ತು, 14 ಟೇಬಲ್ ಗಳನ್ನು ಹಾಕಿರುವುದರಿಂದ ಅಭ್ಯರ್ಥಿ ಜತೆಗೆ ಪ್ರತಿ ಟೇಬಲ್‌ಗೆ ಒಬ್ಬರಂತೆ 14 ಜನ ಮತ್ತು ಹೆಚ್ಚುವಾರಿಯಾಗಿ ಒಬ್ಬರಿಗೆ ಅವಕಾಶ ನೀಡಲು ಒಟ್ಟು 15 ಜನರಿಗೆ ಎಣಿಕೆ ಕೇಂದ್ರಕ್ಕೆ ಏಜೆಂಟರಾಗಿ ತೆರಳಲು ಅವಕಾಶ ನೀಡಲಾಗಿದೆ.
ಹೀಗಾಗಿ ತಲಾ ಅಭ್ಯರ್ಥಿಯ ಪರವಾಗಿ 20 ಜನರಂತೆ ಏಜೆಂಟರಿಗೆ ಕೋವಿಡ್ ಪರೀಕ್ಷೆ ಮಾಡಲಾಯಿತು. ಇದರಲ್ಲಿ ಯಾರಿಗಾದರೂ ಪಾಸಿಟಿವ್ ಬಂದರೆ, ಬೇರೊಬ್ಬರ ನೇಮಕ ಮಾಡಬಹುದು ಎನ್ನುವ ಉದ್ದೇಶದಿಂದ 5 ಜನರಿಗೆ ಹೆಚ್ಚುವರಿಯಾಗಿ ಪರೀಕ್ಷೆ ಮಾಡಿಸಲಾಯಿತು. ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ್ ಸೇರಿ ಇತರೆ 20 ಜನ ಬಿಜೆಪಿ ಕಾರ್ಯಕರ್ತರು ಪರೀಕ್ಷೆಗೆ ಒಳಗಾದರು. ಇನ್ನು ಕಾಂಗ್ರೆಸ್‌ನಲ್ಲೂ ಅಭ್ಯರ್ಥಿ ಆರ್.ಬಸನಗೌಡ ತುರುವಿಹಾಳ ಸೇರಿ ಇತರೆ 20 ಜನ ಪರೀಕ್ಷೆಗೆ ಒಳಪಟ್ಟರು. ಮೇ 1ರಂದು ವರದಿ ಬರಲಿದ್ದು, ಈ ವರದಿ ಆಧಾರದ ಮೇಲೆ ಎಣಿಕೆ ಪ್ರಕ್ರಿಯೆಗೆ ಅವಕಾಶ ನೀಡಲು ತಾಲೂಕು ಆಡಳಿತ ನಿರ್ಧರಿಸಿತು.
ಸಿಬ್ಬಂದಿಗೂ ಟೆಸ್ಟ್: ಇನ್ನು ಮತ ಎಣಿಕೆ ಕೇಂದ್ರಕ್ಕೆ ತಾಲೂಕಿನಿಂದ ನಿಯೋಜನೆಗೊಂಡ ಸಿಬ್ಬಂದಿಗಳನ್ನೂ ಪ್ರತ್ಯೇಕವಾಗಿ ಕೋವಿಡ್ ಪರೀಕ್ಷೆ ಒಳಪಡಿಸಲಾಯಿತು. ಕಂದಾಯ, ಶಿಕ್ಷಣ ಸೇರಿ ಇತರೆ ಇಲಾಖೆ ಸಿಬ್ಬಂದಿ ಹಾಗೂ ಪೊಲೀಸ್ ಸಿಬ್ಬಂದಿ ಕೊರೊನಾ ಟೆಸ್ಟ್ ಮಾಡಿಸಿಕೊಂಡರು. ಆರೋಗ್ಯ ಇಲಾಖೆಯ ಡಾ| ಮೌನೇಶ ಸೇರಿ ಇತರೆ ವೈದ್ಯಕೀಯ ಸಿಬ್ಬಂದಿ ಪರೀಕ್ಷೆ ನಡೆಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mantralayam: ತುಂಗಭದ್ರಾ ನದಿಯಲ್ಲಿ ಮಂತ್ರಾಲಯ ಶ್ರೀಗಳಿಂದ ದಂಡೋದಕ ಸ್ನಾನ
Raichur: ಕುದುರೆಗೆ ಮೈ ತೊಳೆಸಲು ಹೋದ ಯುವಕ ಕೆರೆಪಾಲು
Raichur: ಹುಲಿಯಂತಿದ್ದ ಸಿಎಂ ಇಲಿಯಾಗಿದ್ದಾರೆ: ರಮೇಶ್ ಜಾರಕಿಹೊಳಿ
Raichuru: ಆರ್‌ಟಿಪಿಎಸ್ ಬೂದಿ ಹೊಂಡದ ನೀರು ಕೃಷ್ಣಾ ನದಿಗೆ; ಜನರಲ್ಲಿ ಆತಂಕ
Dhananjay: ಸಿಕ್ಕ ಸಿಕ್ಕಲೆಲ್ಲ ಕೇಳ್ತಿದ್ರಲ್ಲ; ಅದಕ್ಕೆ ಅನೌನ್ಸ್ ಮಾಡಿದೆ: ಡಾಲಿ
MUST WATCH
ಹೊಸ ಸೇರ್ಪಡೆ
New Zealand: ತವರಿನಂಗಳದಲ್ಲೇ ಟೆಸ್ಟ್ ನಿವೃತ್ತಿಗೆ ಸೌಥಿ ನಿರ್ಧಾರ
Punjalkatte: ಬೈಕ್ ಢಿಕ್ಕಿ; ರಸ್ತೆ ಬದಿ ನಿಂತಿದ್ದ ವ್ಯಕ್ತಿ ಸಾವು
Shivamogga: ಆಸ್ಪತ್ರೆಯಲ್ಲಿನ ತೆರೆದ ನೀರಿನ ತೊಟ್ಟಿಗೆ ಬಿದ್ದು ಮಗು ಮೃತ್ಯು!
Padubidri: ನವವಿವಾಹಿತೆಗೆ ಕಿರುಕುಳ; ಪತಿಯ ಮನೆಮಂದಿ ವಿರುದ್ಧ ದೂರು
Karkala: ಗೋವಾ ಮದ್ಯ ಅಕ್ರಮ ದಾಸ್ತಾನು ಪ್ರಕರಣ; ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.