ಕೋವಿಡ್ ಕರ್ಫ್ಯೂ: ಎಪಿಎಂಸಿಯಲ್ಲೇ ಉಳಿದ ತರಕಾರಿ


Team Udayavani, May 1, 2021, 4:55 PM IST

ಕೋವಿಡ್ ಕರ್ಫ್ಯೂ: ಎಪಿಎಂಸಿಯಲ್ಲೇ ಉಳಿದ ತರಕಾರಿ

ದಾವಣಗೆರೆ: ಕೋವಿಡ್ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರಕರ್ಫ್ಯೂ ಜಾರಿಗೊಳಿಸಿದ್ದರಿಂದ ಎಪಿಎಂಸಿಗಳಲ್ಲಿ ಸಮರ್ಪಕವ್ಯಾಪಾರ ನಡೆಯದೇ ದೊಡ್ಡ ಪ್ರಮಾಣದ ತರಕಾರಿ ದಾಸ್ತಾನು ಉಳಿಯುತ್ತಿದ್ದು, ರೈತರು ಸಿಕ್ಕಷ್ಟು ಬೆಲೆಗೆ ಮಾರಾಟ ಮಾಡುವ ದುಸ್ಥಿತಿ ಎದುರಾಗಿದೆ.

ಕರ್ಫ್ಯೂ ಜಾರಿಯಲ್ಲಿರುವ ಈ ಸಂದರ್ಭದಲ್ಲಿ ಜಿಲ್ಲೆಯ ಎಪಿಎಂಸಿಗಳಲ್ಲಿ ಬೆಳಿಗ್ಗೆ 6ರಿಂದ 10ಗಂಟೆವರೆಗೆ ಮಾತ್ರ ವ್ಯಾಪಾರಕ್ಕೆ ಅವಕಾಶ ಮಾಡಿಕೊಡಲಾಗಿದೆ. ಇಷ್ಟು ಕಡಿಮೆಅವಧಿಯಲ್ಲಿ ದೂರದ ಹಳ್ಳಿಗಳಿಂದ ತರಕಾರಿಯನ್ನುಮಾರುಕಟ್ಟೆಗೆ ತಂದು ಮಾರಾಟ ಮಾಡಲು ರೈತರಿಗೆಸಾಧ್ಯವಾಗುತ್ತಿಲ್ಲ. 10ಗಂಟೆಯಾಗುತ್ತಲೇ ವ್ಯಾಪಾರ ಬಂದ್‌ ಮಾಡುತ್ತಿರುವುದರಿಂದ ಕ್ವಿಂಟಲ್‌ಗ‌ಟ್ಟಲೆ ತರಕಾರಿಮಾರಾಟವಾಗದೆ ಉಳಿಯುತ್ತಿದೆ. ಹೀಗಾಗಿ ರೈತರುಒಂದೆರಡು ದಿನ ಕಾದು ನೋಡಿ ಕೊನೆಗೆ ವ್ಯಾಪಾರಸ್ಥರುಕೇಳಿದಷ್ಟು ದರಕ್ಕೆ ಕೊಟ್ಟು ಹೋಗುವಂತಾಗಿದೆ.

ಸಾಮಾನ್ಯವಾಗಿ ಜಿಲ್ಲೆಯ ತರಕಾರಿ ಚಿಕ್ಕಬಳ್ಳಾಪುರ, ತುಮಕೂರು, ಉತ್ತರ ಕನ್ನಡ, ಬೆಳಗಾವಿ ಸೇರಿದಂತೆಹಲವೆಡೆ ದೊಡ್ಡ ಪ್ರಮಾಣದಲ್ಲಿ ಹೋಗುತ್ತದೆ. ಕರ್ಫ್ಯೂ ಇರುವುದರಿಂದ ಹೊರ ಜಿಲ್ಲೆಗಳಿಗೆ ತರಕಾರಿ ಬಹಳಕಡಿಮೆ ಪ್ರಮಾಣದಲ್ಲಿ ಹೋಗುತ್ತಿಲ್ಲ. ಎಲ್ಲೆಡೆ ಬೇಡಿಕೆಕಡಿಮೆಯಾಗಿದ್ದರಿಂದ ಸಣ್ಣ ಸಣ್ಣ ವಾಹನಗಳಲ್ಲಿ ತರಕಾರಿಹೋಗುತ್ತಿದ್ದು, ಎಪಿಎಂಸಿಗಳಲ್ಲಿನ ತರಕಾರಿ ಮಾರಾಟಸ್ಥಳೀಯ ಬೇಡಿಕೆಯನ್ನೇ ನೆಚ್ಚಿಕೊಂಡಿದೆ.

ನೆರೆಯ ಮಹಾರಾಷ್ಟ್ರ ಸೇರಿದಂತೆ ಇನ್ನಿತರ ರಾಜ್ಯಗಳಿಗೆಹೋಗಬೇಕಿದ್ದ ಇಲ್ಲಿಯ ಹಸಿಮೆಣಸಿನಕಾಯಿ ದೊಡ್ಡಪ್ರಮಾಣದಲ್ಲಿ ಎಪಿಎಂಸಿಯಲ್ಲೇ ಕೊಳೆಯುವಂತಾಗಿದೆ.ಬದನೆಕಾಯಿ, ಟೊಮೆಟೋ, ಜವಳಿಕಾಯಿ, ನುಗ್ಗೆಕಾಯಿ, ದೊಣ್ಣಮೆಣಸಿನಕಾಯಿ ಸೇರಿದಂತೆ ಇತರ ತರಕಾರಿಗಳುಶೇ. 40ರಷ್ಟು ವ್ಯಾಪಾರವಾಗದೆ ಉಳಿಯುತ್ತಿವೆ.

ದರವೂ ಕುಸಿತ: ಹೊರ ಜಿಲ್ಲೆಗಳಿಗೆ ದೊಡ್ಡ ಪ್ರಮಾಣದಲ್ಲಿ ತರಕಾರಿ ಹೋಗದೆ ಇರುವುದರಿಂದ, ತರಕಾರಿ ವ್ಯಾಪಾರಕೇವಲ ಸ್ಥಳೀಯ ಮಾರುಕಟ್ಟೆಯ ಮೇಲೆಯೇ ಹೆಚ್ಚುಅವಲಂಬಿಸಿರುವುದರಿಂದ ಮಾರುಕಟ್ಟೆಯಲ್ಲಿ ದೊಡ್ಡಪ್ರಮಾಣದ ತರಕಾರಿ ಉಳಿಯುತ್ತಿದೆ. ಬೇಡಿಕೆಗಿಂತಹೆಚ್ಚು ತರಕಾರಿ ಬರುತ್ತಿರುವುದರಿಂದ ಬಹುತೇಕ ಎಲ್ಲ ತರಕಾರಿಗಳ ಬೆಲೆ ಕುಸಿತಕಂಡಿವೆ. ಹಸಿಮೆಣಸು ಬಹುದೊಡ್ಡಪ್ರಮಾಣದಲ್ಲಿ ಉಳಿದಿದ್ದು ದರ ಕಳೆದುಕೊಂಡಿದೆ. ಕೆ.ಜಿ.ಗೆ 30-40ರೂ.ಗಳಿಗೆ ಮಾರಾಟವಾಗುತ್ತಿದ್ದ ಹಸಿಮೆಣಸುಈಗ ಕೆ.ಜಿ.ಗೆ 16-18ರೂ. ಎಂದರೂ ಕೇಳುವವರೇಇಲ್ಲದಂತಾಗಿದೆ. ಅದೇ ರೀತಿ ಎಪಿಎಂಸಿಯಲ್ಲಿ ಕೆ.ಜಿ.ಯೊಂದಕ್ಕೆ 15ರೂ.ನಂತೆ ವ್ಯಾಪಾರವಾಗುತ್ತಿದ್ದ ನುಗ್ಗೆ ಈಗ 6ರಿಂದ 8ರೂ. ಆಗಿದೆ. ಕೆ.ಜಿ.ಗೆ 30-40ರೂ. ಇದ್ದಜವಳಿಕಾಯಿ 10-12ರೂ.ಗೆ ಇಳಿದಿದೆ. ಟೊಮೆಟೋ ಒಂದು ಬಾಕ್ಸ್‌ಗೆ ಸರಾಸರಿ 6-10ರೂ. ಆಗಿದೆ.

ಕೆಲವು ರೈತರು ಪ್ರತಿ ದಿನ ಸಂಜೆಯೇ ತರಕಾರಿಗಳನ್ನು ಎಪಿಎಂಸಿಗೆ ತರುತ್ತಿದ್ದಾರೆ. ಆದರೆ, ವ್ಯಾಪಾರ ಮಾಡಲುಅವಕಾಶ ಇಲ್ಲದೇ ಇರುವುದರಿಂದ ಬೆಳಿಗ್ಗೆವರೆಗೆ ಕಾದುಬೆಳಿಗ್ಗೆ 6ಗಂಟೆಯಿಂದ 10ಗಂಟೆಯೊಳಗೆ ವ್ಯಾಪಾರಮುಗಿಸಿಕೊಳ್ಳುತ್ತಿದ್ದಾರೆ. ಸ್ಥಳೀಯ ವ್ಯಾಪಾರಸ್ಥರುಸಹ ಎಪಿಎಂಸಿಯಿಂದ ತರಕಾರಿ ಖರೀದಿಸಿ, ತಮ್ಮಅಂಗಡಿಯಲ್ಲಿಟ್ಟು ಮಾರಾಟ ಮಾಡಲು ಸಹ ಬೆಳಿಗ್ಗೆ 10ಗಂಟೆವರೆಗೆ ಮಾತ್ರ ಅವಕಾಶ ಇರುವುದರಿಂದ ಅವರೂದೊಡ್ಡ ಪ್ರಮಾಣದಲ್ಲಿ ತರಕಾರಿ ಖರೀದಿಸುತ್ತಿಲ್ಲ. ಮಾರುಕಟ್ಟೆಯಲ್ಲಿ ತರಕಾರಿ ದರ ಕುಸಿತ ಕಂಡರೂ ಚಿಲ್ಲರೆಖರೀದಿಯಲ್ಲಿ ಮಾತ್ರ ದರ ಕಡಿಮೆಯಾಗಿಲ್ಲ. ಬಹುತೇಕವ್ಯಾಪಾರಸ್ಥರು ಮೊದಲಿನ ದರದಲ್ಲಿಯೇ ತರಕಾರಿಮಾರುತ್ತಿದ್ದಾರೆ. ಕರ್ಫ್ಯೂನಿಂದ ತರಕಾರಿ ಖರೀದಿಗೂ ಕೇವಲನಾಲ್ಕು ತಾಸು ಅವಕಾಶ ಇರುವುರಿಂದ ವ್ಯಾಪಾರಿಗಳು ಹೇಳಿದಷ್ಟು ಬೆಲೆಗೆ ತರಕಾರಿ ಖರೀದಿಸುವಂತಾಗಿದೆ.

ಸಿಎಂಗೆ ಮನವಿ :

ಎಪಿಎಂಸಿಯಲ್ಲಿ ವ್ಯಾಪಾರಕ್ಕೆ ಬೆಳಿಗಿನ ಅವಧಿ ಕೇವಲ ನಾಲ್ಕು ತಾಸು ಮಾತ್ರ ಅವಕಾಶಮಾಡಿಕೊಟ್ಟಿದ್ದರಿಂದ ರೈತರ ಉತ್ಪನ್ನಮಾರಾಟಕ್ಕೆ ತೊಂದರೆಯಾಗುತ್ತಿದೆ. ಆದ್ದರಿಂದಈ ಅವಧಿಯನ್ನು ಮಧ್ಯಾಹ್ನ 2ಗಂಟೆವರೆಗೆವಿಸ್ತರಿಸಬೇಕು ಎಂದು ಮುಖ್ಯಮಂತ್ರಿಯವರರಾಜಕೀಯ ಕಾರ್ಯದರ್ಶಿ, ಶಾಸಕರೇಣುಕಾಚಾರ್ಯ ಹಾಗೂ ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ ಅವರು ಗುರುವಾರ ಬೆಂಗಳೂರಿನಲ್ಲಿ ಮುಖ್ಯಮಂತ್ರಿಯವರಿಗೆ ಪತ್ರ ನೀಡಿ ಮನವಿ ಮಾಡಿಕೊಂಡಿದ್ದಾರೆ.

ಶೇ.40 ತರಕಾರಿ ನಷ್ಟ :

ಶುಕ್ರವಾರ ದಾವಣಗೆರೆ ಎಪಿಎಂಸಿಯಲ್ಲಿ ಆವಕವಾದ ತರಕಾರಿ ಪ್ರಮಾಣ ಅವಲೋಕಿಸಿದರೆ, ಮಾರುಕಟ್ಟೆಗೆ 35ಕ್ವಿಂಟಲ್‌ ಹಸಿಮೆಣಸು, 20ಕ್ವಿಂ. ದೊಣ್ಣಮೆಣಸು, 30ಕ್ವಿಂ. ನುಗ್ಗೆ, 15ಕ್ವಿಂ.ಬೀಟರೂಟ್‌, 20ಕ್ವಿಂ. ಹಾಗಲಕಾಯಿ, 25ಕ್ವಿಂ.ಕ್ಯಾರೇಟ್‌, 20ಕ್ವಿಂ. ಬೆಂಡೆಕಾಯಿ, 15ಕ್ವಿಂ. ಟೊಮೆಟೋ,15ಕ್ವಿಂ. ಹಿರೇಕಾಯಿ, 10ಕ್ವಿಂ.ತೊಂಡೆಕಾಯಿ, 25ಕ್ವಿಂ. ಹುರಳಿಕಾಯಿ ಬಂದಿತ್ತು.ಎಲ್ಲವೂ ಸರಾಸರಿ ಶೇ. 40ರಷ್ಟು ತರಕಾರಿ ವ್ಯಾಪಾರವಾಗದೆ ಉಳಿದಿದೆ.

ಹೊರಗಡೆ ದೊಡ್ಡ ಪ್ರಮಾಣದಲ್ಲಿ ತರಕಾರಿಹೋಗುತ್ತಿಲ್ಲ. ತರಕಾರಿ ಮಾರಾಟ ಸ್ಥಳೀಯವ್ಯಾಪಾರವನ್ನೇ ಅವಲಂಬಿಸಿದೆ. ಇತ್ತ ತರಕಾರಿಮಾರುವ ರೈತರಿಗೂ, ವರ್ತಕರಿಗೂ ವ್ಯಾಪಾರ ಮಾಡುವ ಅವಧಿ ಸಾಕಾಗುತ್ತಿಲ್ಲ. ನಂದಿನ ಹಾಲಿನಅಂಗಡಿಯಂತೆ ತರಕಾರಿ ಮಾರಾಟ, ವ್ಯಾಪಾರಕ್ಕೂ ರಾತ್ರಿ 8ಗಂಟೆವರೆಗೆ ಅವಕಾಶ ನೀಡಬೇಕು. -ಹನುಮಂತ, ವರ್ತಕ, ಎಚ್‌.ಎಂ.ವಿ. ವೇಜಿಟೇಬಲ್ಸ್‌.

ಸರ್ಕಾರದ ಮಾರ್ಗಸೂಚಿಯಂತೆಎಪಿಎಂಸಿಯಲ್ಲಿ ಬೆಳಿಗ್ಗೆ 6ರಿಂದ10ಗಂಟೆವರೆಗೆ ವ್ಯಾಪಾರ ನಡೆಯುತ್ತಿದೆ. ಕರ್ಫ್ಯೂ ಕಾರಣದಿಂದ ಮಾರಾಟ ಪ್ರಮಾಣ ಸ್ವಲ್ಪ ಕುಸಿದಿದೆ.ಸ್ಥಳೀಯ ಬೇಡಿಕೆಗೆ ತಕ್ಕಂತೆ ರೈತರು ಉತ್ಪನ್ನಗಳನ್ನುತರುತ್ತಿದ್ದಾರೆ. ವ್ಯಾಪಾರ ಅವಧಿ ವಿಸ್ತರಣೆಬಗ್ಗೆ ಸರ್ಕಾರದಿಂದ ಮಾರ್ಗಸೂಚಿ ಬಂದರೆ ಅನುಷ್ಠಾನಗೊಳಿಸಲಾಗುವುದು. -ದೊರೆಸ್ವಾಮಿ, ಕಾರ್ಯದರ್ಶಿ, ಎಪಿಎಂಸಿ.

ಮಾರುಕಟ್ಟೆಯಲ್ಲಿ ತಾಜಾ ತರಕಾರಿಗೆ ಉತ್ತಮ ಬೆಲೆ ಸಿಗುತ್ತದೆ. ಹಾಗಾಗಿ ನಾವು ಸಂಜೆ ಅಥವಾ ಬೆಳಗ್ಗೆ ಜಮೀನಿನಲ್ಲಿ ತರಕಾರಿ ಕೀಳುತ್ತೇವೆ.ಅದನ್ನು ಎಪಿಎಂಸಿಗೆ ತರುವಷ್ಟರಲ್ಲಿ ಬೆಳಗ್ಗೆ 8-9ಗಂಟೆಆಗುತ್ತದೆ. 10ಗಂಟೆ ಆಗುತ್ತಲೇ ಎಪಿಎಂಸಿಯವರುವ್ಯಾಪಾರ ಬಂದ್‌ ಮಾಡಿಸುತ್ತಾರೆ. ಇದರಿಂದ ತಂದತರಕಾರಿ ಮಾರಾಟವಾಗದೆ ಹಾಗೇ ಉಳಿಯುತ್ತಿದೆ. ಸರ್ಕಾರ ವ್ಯಾಪಾರದ ಅವಧಿ ವಿಸ್ತರಿಸಬೇಕು.– ಪ್ರಕಾಶ್‌ ದೇವಿಕೆರೆ, ರೈತ

 

-ಎಚ್‌.ಕೆ. ನಟರಾಜ

ಟಾಪ್ ನ್ಯೂಸ್

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

ಪತ್ನಿ ಜತೆ ಸಂಬಂಧ ಮುರಿದಿದ್ದ ಸೈಬರ್‌ ಟ್ರಕ್‌ ಸ್ಫೋ*ಟದ ವ್ಯಕ್ತಿ!

ಪತ್ನಿ ಜತೆ ಸಂಬಂಧ ಮುರಿದಿದ್ದ ಸೈಬರ್‌ ಟ್ರಕ್‌ ಸ್ಫೋ*ಟದ ವ್ಯಕ್ತಿ!

Formula E race corruption case: ಜ.6ರಂದು ಕೆಟಿಆರ್‌ ವಿಚಾರಣೆ

Formula E race corruption case: ಜ.6ರಂದು ಕೆಟಿಆರ್‌ ವಿಚಾರಣೆ

Bangladesh ಸುಧಾರಿಸುವವರೆಗೂ ಪ್ರಾರ್ಥನೆ ನಿಲ್ಲದು: ಇಸ್ಕಾನ್‌

Bangladesh ಸುಧಾರಿಸುವವರೆಗೂ ಪ್ರಾರ್ಥನೆ ನಿಲ್ಲದು: ಇಸ್ಕಾನ್‌

ಸನಾತನ ಅರ್ಥ ತಿಳಿಯದೆ ತಪ್ಪು ದಾರಿಗೆ ಸಮಾಜ: ಧನಕರ್‌

ಸನಾತನ ಅರ್ಥ ತಿಳಿಯದೆ ತಪ್ಪು ದಾರಿಗೆ ಸಮಾಜ: ಧನಕರ್‌

Arvind Kejriwal: ಕೇಂದ್ರ ಸರಕಾರ‌ ದಿಲ್ಲಿಯಲ್ಲಿ ಏನೂ ಮಾಡಿಲ್ಲ

Arvind Kejriwal: ಕೇಂದ್ರ ಸರಕಾರ‌ ದಿಲ್ಲಿಯಲ್ಲಿ ಏನೂ ಮಾಡಿಲ್ಲ

RSS; ಶಿಸ್ತು, ಧೈರ್ಯ ತುಂಬಲು ಆರೆಸ್ಸೆಸ್‌ನಲ್ಲಿ ಲಾಠಿ ಬಳಕೆ: ಮೋಹನ್‌ ಭಾಗವತ್‌

RSS; ಶಿಸ್ತು, ಧೈರ್ಯ ತುಂಬಲು ಆರೆಸ್ಸೆಸ್‌ನಲ್ಲಿ ಲಾಠಿ ಬಳಕೆ: ಮೋಹನ್‌ ಭಾಗವತ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬಿಸಿಯೂಟ ಸಿಬ್ಬಂದಿ ಇಡಿಗಂಟಿಗೆ ಸರ್ಕಾರದ ಮಾರ್ಗಸೂಚಿ ಪ್ರಕಟ

ಬಿಸಿಯೂಟ ಸಿಬ್ಬಂದಿ ಇಡಿಗಂಟಿಗೆ ಸರ್ಕಾರದ ಮಾರ್ಗಸೂಚಿ ಪ್ರಕಟ

Davanagere: ಆತ್ಮಹತ್ಯೆ ಮಾಡಿಕೊಂಡಿರುವ ಸಚಿನ್ ಗುತ್ತಿಗೆದಾರನೇ ಅಲ್ಲ…

Davanagere: ಆತ್ಮಹತ್ಯೆ ಮಾಡಿಕೊಂಡಿರುವ ಸಚಿನ್ ಗುತ್ತಿಗೆದಾರನೇ ಅಲ್ಲ…

suicide (2)

Davanagere; ಹೊಸ ವರ್ಷ ಆಚರಣೆ ವೇಳೆ ಅಪಘಾ*ತ: ಯುವಕ ಸಾ*ವು,ಇನ್ನೋರ್ವ ಗಂಭೀರ

Jagdish-Shetter

Davanagere: ರಾಜ್ಯದಲ್ಲಿ ಕಾಂಗ್ರೆಸ್ ಸರಕಾರದಿಂದ ಅರಾಜಕತೆ ಸೃಷ್ಟಿ: ಜಗದೀಶ್ ಶೆಟ್ಟರ್

Basavarj-horatti

ಸಿ.ಟಿ.ರವಿ-ಸಚಿವೆ ಲಕ್ಷ್ಮೀ ದೂರು ಪ್ರಕರಣ: ಪೊಲೀಸರ ವರದಿ ಬಳಿಕ ನಿಯಮಾನುಸಾರ ಕ್ರಮ: ಹೊರಟ್ಟಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

puttige-2

Udupi; ಗೀತಾರ್ಥ ಚಿಂತನೆ 145: ವೇದಪ್ರಾಮಾಣ್ಯದ ಚರ್ಚೆ

crime

Kasaragod: ಘರ್ಷಣೆಯಿಂದ ಮೂವರಿಗೆ ಗಾಯ

1-weewq

Baindur: ಬಟ್ಟೆ ವ್ಯಾಪಾರಿ ನಾಪತ್ತೆ

ಪತ್ನಿ ಜತೆ ಸಂಬಂಧ ಮುರಿದಿದ್ದ ಸೈಬರ್‌ ಟ್ರಕ್‌ ಸ್ಫೋ*ಟದ ವ್ಯಕ್ತಿ!

ಪತ್ನಿ ಜತೆ ಸಂಬಂಧ ಮುರಿದಿದ್ದ ಸೈಬರ್‌ ಟ್ರಕ್‌ ಸ್ಫೋ*ಟದ ವ್ಯಕ್ತಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.