ಬಂಟ್ವಾಳ: ದಿನೇ ದಿನೆ ವಾಹನ ಓಡಾಟ ಹೆಚ್ಚಳ
Team Udayavani, May 2, 2021, 4:50 AM IST
ಬಂಟ್ವಾಳ: ಕೊರೊನಾ ನಿಯಂತ್ರಣದ ದೃಷ್ಟಿಯಿಂದ ಸರಕಾರ ಜಾರಿಗೆ ತಂದಿರುವ ಲಾಕ್‌ಡೌನ್ ಮಾದರಿಯ ಕರ್ಫ್ಯೂ 4ನೇ ದಿನವೂ ಮುಂದುವರಿದಿದೆ. ಆದರೆ ಬೆಳಗ್ಗಿನ ಹೊತ್ತು ಅಗತ್ಯ ವಸ್ತುಗಳ ಖರೀದಿಯ ಹೆಸರಿನಲ್ಲಿ ದಿನೇ ದಿನೇ ವಾಹನಗಳ ಓಡಾಟ ಹೆಚ್ಚುತ್ತಿದೆ.
ಶನಿವಾರವೂ ಇದೇ ರೀತಿ ವಾಹನ ಓಡಾಡಿದ್ದು, ಬಂಟ್ವಾಳ ಪೇಟೆಯಲ್ಲಿ ಬೆಳಗ್ಗೆ ಸಂಚಾರದೊತ್ತಡ ಕಂಡುಬಂತು. ತಾಲೂಕಿನ ಬಿ.ಸಿ.ರೋಡ್, ಬಂಟ್ವಾಳ ಪೇಟೆ, ಕಲ್ಲಡ್ಕ, ಮೆಲ್ಕಾರ್, ವಿಟ್ಲ, ಮಾಣಿ, ಕೈಕಂಬ, ಫರಂಗಿಪೇಟೆ, ವಾಮದಪದವು, ಸಿದ್ದಕಟ್ಟೆ, ಪುಂಜಾಲಕಟ್ಟೆ ಮೊದಲಾದ ಭಾಗಗಳಲ್ಲಿ ಬೆಳಗ್ಗೆ ಹೆಚ್ಚಿನ ವಾಹನಗಳು ಓಡಾಟ ನಡೆಸಿದ್ದು, 10 ಗಂಟೆಯ ಬಳಿಕ ಎಲ್ಲಡೆ ಬಂದ್‌ನ ವಾತಾವರಣ ಕಂಡು ಬಂತು. ಬೆಳಗ್ಗಿನ ಹೊತ್ತು ಬಂಟ್ವಾಳ ಪೇಟೆಗೆ ಹೆಚ್ಚಿನ ವಾಹನಗಳು ಏಕಾಏಕಿ ಆಗಮಿಸಿದ ಪರಿಣಾಮ ಕೊಂಚ ಮಟ್ಟಿನ ಬ್ಲಾಕ್ ಉಂಟಾಗಿತ್ತು. ಬಳಿಕ ಬಂಟ್ವಾಳ ನಗರ ಠಾಣಾ ಅಪರಾಧ ವಿಭಾಗದ ಪಿಎಸ್‌ಐ ಕಲೈಮಾರ್ ಅವರು ಸ್ಥಳಕ್ಕೆ ತೆರಳಿ ವಾಹನಗಳಿಗೆ ಎಚ್ಚರಿಕೆ ನೀಡಿದರು. ಬಂಟ್ವಾಳ ಸಂಚಾರ ಠಾಣೆಯ ಎಎಸ್‌ಐ ಬಾಲಕೃಷ್ಣ ಗೌಡ ಕೂಡ ಪೇಟೆಗೆ ತೆರಳಿ ವಾಹನ ಚಾಲಕರು/ ಸವಾರರಿಗೆ ಎಚ್ಚರಿಕೆ ನೀಡಿದರು.
ಆಟೋ ಸಂಚಾರ
ಬೆಳಗ್ಗೆ ತುರ್ತು ಕೆಲಸಗಳಿಗೆ ತೆರಳುವವರ ಪ್ರಯಾಣಕ್ಕಾಗಿ ಬೆಳಗ್ಗೆ ಒಂದೆರಡು ಕೆಎಸ್‌ಆರ್‌ಟಿಸಿ ಬಸ್‌ಗಳು ಓಡಾಡಿದ್ದು, ಜತೆಗೆ ಬೆಳಗ್ಗೆ ಆಟೋ ಸಂಚಾರವೂ ಇತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Gangolli: ಬೈಕ್‌ಗೆ ಕಾರು ಢಿಕ್ಕಿ; ಇಬ್ಬರಿಗೆ ಗಾಯ
Udupi: ಪಿಕಪ್ ವಾಹನ ಢಿಕ್ಕಿ ಹೊಡೆದು ವ್ಯಕ್ತಿ ಗಾಯ
Gift: ಶಿಗ್ಗಾವಿಯಲ್ಲಿ ನಾಮಪತ್ರ ವಾಪಸ್ ಪಡೆದ ಖಾದ್ರಿಗೆ ಹೆಸ್ಕಾಂ ಅಧ್ಯಕ್ಷಗಿರಿ ಹುದ್ದೆ!
Davanagere: ʼಸೋಲಿಲ್ಲದ ಸರದಾರʼ ಎನಿಸಿದ್ದ ʼಬೆಳ್ಳೂಡಿ ಕಾಳಿʼ ಟಗರು ಅನಾರೋಗ್ಯದಿಂದ ನಿಧನ
IFFI 2024; ಫಿಲ್ಮ್ ಬಜಾರ್: ಮತ್ತೊಂದು ಯಶಸ್ವಿ ಮುನ್ನುಡಿಯೊಂದಿಗೆ ಉತ್ಸವ ಸಮಾಪನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.