ಡೆಲ್ಲಿ ವಿರುದ್ಧ ಸೇಡಿಗೆ ಕಾದಿದೆ ಪಂಜಾಬ್ ಕಿಂಗ್ಸ್
Team Udayavani, May 2, 2021, 6:20 AM IST
ಅಹ್ಮದಾಬಾದ್: ಶುಕ್ರವಾರದ ಸೆಣಸಾಟದಲ್ಲಿ ಬಲಿಷ್ಠ ಆರ್‌ಸಿಬಿಯನ್ನು ಉರುಳಿಸಿ “ರಾಜ’ನೆನಿಸಿಕೊಂಡ ಪಂಜಾಬ್ ಕಿಂಗ್ಸ್ ಈಗ ಡೆಲ್ಲಿಯನ್ನು ಕೆಡವಲು ಸ್ಕೆಚ್ ಹಾಕುತ್ತಿದೆ. ರವಿವಾರದ ದ್ವಿತೀಯ ಪಂದ್ಯದಲ್ಲಿ ಕೆ.ಎಲ್. ರಾಹುಲ್-ರಿಷಭ್ ಪಂತ್ ಪಡೆಗಳು ಮುಖಾಮುಖೀಯಾಗುತ್ತಿವೆ. ಇದರೊಂದಿಗೆ 14ನೇ ಐಪಿಎಲ್ ಕೂಟದ ದ್ವಿತೀಯ ಸುತ್ತಿನ ಹೋರಾಟವೂ ಮೊದಲ್ಗೊಳ್ಳಲಿದೆ.
ಪಂಜಾಬ್ ಪಾಲಿಗೆ ಇದು ಸೇಡಿನ ಪಂದ್ಯವೂ ಹೌದು. ಚೆನ್ನೈಯಲ್ಲಿ ನಡೆದ ಮೊದಲ ಸುತ್ತಿನ ಬ್ಯಾಟಿಂಗ್ ಮೇಲಾಟದಲ್ಲಿ ಡೆಲ್ಲಿ 6 ವಿಕೆಟ್‌ಗಳಿಂದ ರಾಹುಲ್ ಪಡೆಯನ್ನು ಮಗುಚಿತ್ತು. ಪಂಜಾಬ್ 4ಕ್ಕೆ 195 ರನ್ ಪೇರಿಸಿದರೆ, ಡೆಲ್ಲಿ 18.2 ಓವರ್‌ಗಳಲ್ಲಿ ನಾಲ್ಕೇ ವಿಕೆಟ್ ನಷ್ಟದಲ್ಲಿ 198 ರನ್ ಬಾರಿಸಿ ಗೆದ್ದು ಬಂದಿತ್ತು.
ಶಿಖರ್ ಧವನ್ 92 ರನ್ ಬಾರಿಸಿ ಡೆಲ್ಲಿಯ ಯಶಸ್ವಿ ಚೇಸಿಂಗ್‌ನಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಪಂಜಾಬ್ ಆರಂಭಿಕರಾದ ರಾಹುಲ್ (61)-ಅಗರ್ವಾಲ್ (69) 122 ರನ್ ಜತೆಯಾಟದಲ್ಲಿ ಭಾಗಿಯಾಗಿದ್ದರು. ಆದರೆ ಅಹ್ಮದಾಬಾದ್ ಟ್ರ್ಯಾಕ್‌ನಲ್ಲಿ ಇಷ್ಟೊಂದು ದೊಡ್ಡ ಮೊತ್ತ ಸಂಗ್ರಹವಾಗುವುದು ಅನುಮಾನ. 170 ರನ್ ಇಲ್ಲಿನ ಎವರೇಜ್ ಸ್ಕೋರ್ ಆಗಿದೆ. ಚೇಸಿಂಗ್ ತುಸು ಕಷ್ಟ.
ಡೆಲ್ಲಿ ಹೆಚ್ಚು ಬಲಿಷ್ಠ
ಮೇಲ್ನೋಟಕ್ಕೆ ಡೆಲ್ಲಿಯೇ ಹೆಚ್ಚು ಬಲಿಷ್ಠವಾಗಿ ಗೋಚರಿಸುತ್ತಿದೆ. ಧವನ್-ಶಾ ಅಬ್ಬರಿಸತೊಡಗಿದರೆ ಡೆಲ್ಲಿಯ ಅರ್ಧ ಕೆಲಸ ಮುಗಿದಂತೆ. ಇವರಿಬ್ಬರು ಈಗಾಗಲೇ 580 ರನ್ ಪೇರಿಸಿದ್ದಾರೆ. ಈ ಜೋಡಿಯನ್ನು ಬೇಗನೇ ಬೇರ್ಪಡಿಸಿದರಷ್ಟೇ ಪಂಜಾಬ್‌ಗ ಲಾಭ. ಆಗ ಸ್ಮಿತ್, ಪಂತ್, ಸ್ಟೋಯಿನಿಸ್ ಮೇಲೂ ಒತ್ತಡ ಹೇರಬಹುದಾಗಿದೆ.
ಅಶ್ವಿನ್ ಹೊರಬಿದ್ದರೂ ಡೆಲ್ಲಿ ಸ್ಪಿನ್ ವಿಭಾಗವೇನೂ ದುರ್ಬಲಗೊಂಡಿಲ್ಲ. ಅಕ್ಷರ್ ಪಟೇಲ್, ಆಫ್ಸ್ಪಿನ್ನರ್ ಲಲಿತ್ ಯಾದವ್ ಸಿಕ್ಕಿದ ಅವಕಾಶವನ್ನು ಸಮರ್ಥವಾಗಿ ಬಳಸಿಕೊಳ್ಳುತ್ತಿದ್ದಾರೆ. ಅನುಭವಿ ಸ್ಪಿನ್ನರ್ ಅಮಿತ್ ಮಿಶ್ರಾ ತಂಡಕ್ಕೆ ಮರಳುವ ಎಲ್ಲ ಸಾಧ್ಯತೆ ಇದೆ. ಆಗ ಯಾದವ್ ಅವರೇ ಜಾಗ ಬಿಡಬೇಕಾದ ಸಾಧ್ಯತೆ ಹೆಚ್ಚು.
ರಾಹುಲ್-ಗೇಲ್ ನಿರ್ಣಾಯಕ
ಪಂಜಾಬ್ ಆರ್‌ಸಿಬಿಯನ್ನು ಕೆಡವಿತೇನೋ ನಿಜ, ಆದರೆ ಬ್ಯಾಟಿಂಗ್ ವಿಭಾಗವೇನೂ ಸಶಕ್ತವಲ್ಲ. ಸಿಡಿದದ್ದು ರಾಹುಲ್ ಮತ್ತು ಗೇಲ್ ಮಾತ್ರ. ಡೆಲ್ಲಿ ಬೌಲರ್ ಇವರಿಬ್ಬರನ್ನು ಟಾರ್ಗೆಟ್ ಮಾಡುವುದರಲ್ಲಿ ಅನುಮಾನವಿಲ್ಲ. ಪೂರಣ್, ಹೂಡಾ, ಶಾರೂಖ್ ಖಾನ್ ಮೇಲೆ ನಂಬಿಕೆ ಇಡುವುದು ಕಷ್ಟ. ಕೀಪರ್ ಕಂ ಓಪನರ್ ಆಗಿರುವ ಪ್ರಭ್‌ಸಿಮ್ರಾನ್ ನಿರೀಕ್ಷಿತ ಯಶಸ್ಸು ಸಾಧಿಸಿಲ್ಲ. ಹೀಗಾಗಿ ಅಗರ್ವಾಲ್ ಮರಳಿ ಕಣಕ್ಕಿಳಿಯುವ ಸಾಧ್ಯತೆ ಇದೆ.
ಡೆಲ್ಲಿಯಂತೆ ಪಂಜಾಬ್ ಸ್ಪಿನ್ ವಿಭಾಗ ಬಲಿಷ್ಠ. ರವಿ ಬಿಷ್ಣೋಯಿ, ಮೊದಲ ಐಪಿಎಲ್ ಪಂದ್ಯದಲ್ಲೇ ಮಿಂಚಿದ ಹರ್‌ಪ್ರೀತ್ ಬ್ರಾರ್ ಮತ್ತೆ ಮ್ಯಾಜಿಕ್ ಮಾಡಿದರೆ ಹೋರಾಟ ತೀವ್ರಗೊಳ್ಳಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BGT 2024: ಪರ್ತ್ ನಲ್ಲಿ ಪಲ್ಟಿ ಹೊಡೆದ ಆಸೀಸ್: ಬುಮ್ರಾ ಪಡೆಗೆ ಮೊದಲ ಪಂದ್ಯದಲ್ಲಿ ಜಯ
IPL Mega Auction: ಮೊದಲ ದಿನದ ಹರಾಜಿನ ಬಳಿಕ ಎಲ್ಲಾ 10 ತಂಡಗಳು ಹೀಗಿವೆ ನೋಡಿ
IPL Mega Auction: ಮೊದಲ ದಿನದ ಹರಾಜಿನ ಬಳಿಕ ಆರ್ ಸಿಬಿ ತಂಡ ಹೀಗಿದೆ ನೋಡಿ
Singapore: ಇಂದಿನಿಂದ ವಿಶ್ವ ಚೆಸ್: ಗುಕೇಶ್-ಲಿರೆನ್ ಮುಖಾಮುಖಿ
Australia: ಪರ್ತ್‌ಗೆ ಆಗಮಿಸಿದ ರೋಹಿತ್ ಶರ್ಮ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
BBK11: ಧರ್ಮ ಬಿಗ್ ಬಾಸ್ ಆಟಕ್ಕೆ ತೊಡಕಾದ ಅಂಶಗಳೇನು? ʼಚಾಕ್ಲೇಟ್ ಹೀರೋʼ ಎಡವಿದ್ದೆಲ್ಲಿ?
Maharashtra: ಕಾಂಗ್ರೆಸ್ ಗೆ ಕೇವಲ 16 ಸ್ಥಾನ; ಕೈ ಅಧ್ಯಕ್ಷ ಸ್ಥಾನಕ್ಕೆ ಪಟೋಲೆ ರಾಜೀನಾಮೆ
Politics: ಫಡ್ನವೀಸ್ ಗೆ ಬೆಂಬಲ ನೀಡಿದ ಅಜಿತ್; ಮಹಾರಾಷ್ಟ್ರದಲ್ಲಿ ಮುಗಿಯದ ಸಿಎಂ ತಿಕ್ಕಾಟ
Video: ನೋಟಿನ ಮಾಲೆಯ ನೋಟು ಎಗರಿಸಿದ ಕಳ್ಳ… ಮದುವೆ ಬಿಟ್ಟು ಕಳ್ಳನ ಹಿಂದೆ ಓಡಿದ ವರ
Sudeep: ʼಮ್ಯಾಕ್ಸ್ʼ ರಿಲೀಸ್ ದಿನ ಫಿಕ್ಸ್: ಕಿಚ್ಚನ ಸಿಟ್ಟಿಗೆ ಎಚ್ಚೆತ್ತ ನಿರ್ಮಾಣ ಸಂಸ್ಥೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.