ಕರಾವಳಿಯಲ್ಲಿ ಕರ್ಫ್ಯೂ 4ನೇ ದಿನವೂ ಯಶಸ್ವಿ
Team Udayavani, May 2, 2021, 5:27 AM IST
ಮಂಗಳೂರು/ಉಡುಪಿ: ರಾಜ್ಯಾದ್ಯಂತ ಜಾರಿಯಲ್ಲಿರುವ ಲಾಕ್‌ಡೌನ್ ಮಾದರಿಯ ಕರ್ಫ್ಯೂ 4ನೇ ದಿನವಾದ ಶನಿವಾರವೂ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಾದ್ಯಂತ ಯಶಸ್ವಿಯಾಗಿದೆ.
ಬೆಳಗ್ಗೆ 6ರಿಂದ 10 ಗಂಟೆ ಅವಧಿ ಯಲ್ಲಿ ವಾಹನಗಳ ಓಡಾಟ ಅಧಿಕ ಪ್ರಮಾಣದಲ್ಲಿ ಕಂಡು ಬಂದಿದ್ದರೂ ಅನಂತರ ವಿರಳವಾಗಿತ್ತು. ಆನ್‌ಲೈನ್ ಡೆಲಿವರಿ, ತುರ್ತು ಸೇವೆಯ ವಾಹನಗಳು ಓಡಾಡಿದವು.
ಮಂಗಳೂರಿನ ಸೆಂಟ್ರಲ್ ಮಾರ್ಕೆಟ್ ಮತ್ತು ಸುತ್ತಮುತ್ತ ರಸ್ತೆ ಬದಿಯ ವ್ಯಾಪಾರ ನಿಷೇಧಿಸಿದ್ದ ರಿಂದ ಮಾರ್ಕೆಟ್‌ನ ಒಳಗೆ ಮತ್ತು ಆಸುಪಾಸಿನಲ್ಲಿ ಶನಿವಾರ ಬೀದಿ ಬದಿ ವ್ಯಾಪಾರ ಇರಲಿಲ್ಲ. ಆದರೆ ಸಮೀಪದಲ್ಲಿ ವ್ಯಾಪಾರ ನಡೆಯಿತು.
ಮಂಗಳೂರಿನ ಮೀನುಗಾರಿಕಾ ದಕ್ಕೆ ಪ್ರದೇಶದಲ್ಲಿ ಶನಿವಾರ ಬೆಳಗ್ಗೆ ಸಾರ್ವಜನಿಕರ ಪ್ರವೇಶಕ್ಕೆ ಅನುಮತಿ ನಿರಾಕರಿಸಲಾಗಿತ್ತು. ಮೀನುಗಾರರು ಮತ್ತು ಮೀನು ಮಾರಾಟಗಾರರಿಗೆ ಮಾತ್ರ ಪ್ರವೇಶಾವಕಾಶ ಕಲ್ಪಿಸಲಾಗಿತ್ತು.
ಉಡುಪಿ: 14 ಪ್ರಕರಣ ದಾಖಲು
ಉಡುಪಿ ಜಿಲ್ಲೆಯಾದ್ಯಂತ ಕರ್ಫ್ಯೂ ಉಲ್ಲಂಘಿಸಿ ಶನಿವಾರ ರಸ್ತೆಗಿಳಿದ 48 ವಾಹನಗಳನ್ನು ಪೊಲೀಸರು ಮುಟ್ಟು ಗೋಲು ಹಾಕಿಕೊಂಡು 14 ಪ್ರಕರಣ ಗಳನ್ನು ದಾಖಲಿಸಿಕೊಂಡಿದ್ದಾರೆ.
ಉಡುಪಿ ತಾಲೂಕಿನಲ್ಲಿ ಕೋವಿಡ್ ಮಾರ್ಗಸೂಚಿಸಿ ಉಲ್ಲಂ ಸಿದವರ ಮೇಲೆ 9 ಪ್ರಕರಣ ದಾಖಲಾಗಿದ್ದು, 7 ದ್ವಿಚಕ್ರ, ಒಂದು ಕಾರನ್ನು ಮುಟ್ಟು ಗೋಲು ಹಾಕಿದ್ದಾರೆ. ಕಾರ್ಕಳದಲ್ಲಿ 4 ನಿಯಮಾವಳಿ ಉಲ್ಲಂಘನೆ ಪ್ರಕರಣ ದಾಖಲಾಗಿದ್ದು, ಒಂದು ದ್ವಿಚಕ್ರ ವಾಹನ ಮುಟ್ಟುಗೋಲು ಹಾಕಲಾಗಿದೆ. ಕುಂದಾಪುರ ತಾಲೂಕು ವ್ಯಾಪ್ತಿಯಲ್ಲಿ 1 ಕೋವಿಡ್ ಮಾರ್ಗಸೂಚಿ ಉಲ್ಲಂಘನೆ ಪ್ರಕರಣ ದಾಖಲಿಸಿದ್ದು, 29 ದ್ವಿಚಕ್ರ ಹಾಗೂ 10 ಕಾರುಗಳನ್ನು ಪೊಲೀಸರು ಮುಟ್ಟುಗೋಲು ಹಾಕಿದ್ದಾರೆ.
ಶನಿವಾರ ನಗರದಲ್ಲಿ ಜನರ ಓಡಾಟ ಸ್ವಲ್ಪ ಪ್ರಮಾಣದಲ್ಲಿ ಕಡಿಮೆ ಇತ್ತು. ಅಗತ್ಯ ವಸ್ತುಗಳ ಸಾಗಾಟದ ಅಧಿಕ ಪ್ರಮಾಣದಲ್ಲಿ ಕಂಡುಬಂದರು. ಬೆಳಗ್ಗೆ 6ರಿಂದ 10ರ ವರೆಗಿನ ಅವಧಿಯಲ್ಲಿ ಜನರು ದಿನಸಿ ಸಾಮಗ್ರಿಗಳು ಸಹಿತ ಅಗತ್ಯ ವಸ್ತುಗಳ ಖರೀದಿಗೆ ಜನರು ಮುಗಿಬಿದ್ದರು. ಹೊಟೇಲ್‌ಗಳಲ್ಲಿ ಪಾರ್ಸೆಲ್‌ಗೆ ಅವಕಾಶ ಕಲ್ಪಿಸಲಾಗಿತ್ತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.