ಸಿಂಗಲ್ ಕಾಲಂ ತಂತ್ರಜ್ಞಾನ ಬಳಸಿ ಸೇತುವೆಗಳ ನಿರ್ಮಾಣ
Team Udayavani, May 2, 2021, 1:38 PM IST
ಮುಂಬಯಿ: ಕರಾವಳಿ ರಸ್ತೆ ಯೋಜನೆಯಡಿ ಸಿಂಗಲ್ ಕಾಲಂ ತಂತ್ರಜ್ಞಾನ ಬಳಸಿ ಸೇತುವೆಗಳನ್ನು ನಿರ್ಮಿಸಲು ಬಿಎಂಸಿ ಮುಂದಾಗಿದ್ದು, ಇದಕ್ಕಾಗಿ ಪ್ರಕ್ರಿಯೆ ಪ್ರಾರಂಭಗೊಂಡಿದೆ.
ತಂತ್ರಜ್ಞಾನ ಬಳಸಿಕೊಂಡು ಈ ಸೇತುವೆಗಳ ಅಡಿಯಲ್ಲಿ 176 ಸ್ತಂಭಗಳನ್ನು ನಿರ್ಮಿಸಲಾಗುವುದು. ಭಾರತದಲ್ಲಿ ಮೊದಲ ಬಾರಿಗೆ ಮೊನೊ ಪೈಲ್ ತಂತ್ರಜ್ಞಾನ ಬಳಸಲಾಗುವುದು. ಆರಂಭದಲ್ಲಿ 3 ಪರೀಕ್ಷಾ ಕಾಲಂಗಳನ್ನು ನಿರ್ಮಿಸಲಾಗುವುದು. ಮುಂಬಯಿ ಮಹಾನಗರ ಪಾಲಿಕೆಯ ಮಹತ್ವಾಕಾಂಕ್ಷೆಯ ಯೋಜನೆಯಾದ ಕರಾವಳಿ ರಸ್ತೆಯ ಉದ್ದಕ್ಕೂ ಸುಮಾರು 34 ಮೀಟರ್ ಅಗಲ ಮತ್ತು ಸುಮಾರು 2,100 ಮೀಟರ್ ಉದ್ದದ ಇಂತಹ ಸೇತುವೆಗಳನ್ನು ನಿರ್ಮಿಸಲಾಗುವುದು.
704 ಸ್ತಂಭಗಳ ಬದಲಾಗಿ 176 ಸ್ತಂಭಗಳ ಬಳಕೆ
ಒಟ್ಟು 15.66 ಕಿ. ಮೀ ಇಂಟಚೇಂಜ್‌ಗಳನ್ನು ಕೂಡಾ ನಿರ್ಮಿಸಲಾಗುವುದು. ಈ ಸೇತುವೆಗಳನ್ನು ನಿರ್ಮಿಸುವಾಗ ಸಾಂಪ್ರದಾಯಿಕ ಬಹು ಕಾಲಂ ವಿಧಾನವನ್ನು ಬಳಸಿಕೊಂಡು ಈ 176 ಸ್ತಂಭಗಳನ್ನು ನಿರ್ಮಿಸಬೇಕಾದರೆ, 4 ಬೆಂಬಲ ಸ್ತಂಭಗಳ ಪ್ರಕಾರ ಪ್ರತಿ ಸ್ತಂಭಕ್ಕೆ ಸಮುದ್ರ ಮಟ್ಟದಲ್ಲಿ ಒಟ್ಟು 704 ಸ್ತಂಭಗಳನ್ನು ನಿರ್ಮಿಸಬೇಕಾಗುತ್ತದೆ. ಸಮುದ್ರತಳದಲ್ಲಿ ಹೆಚ್ಚಿನ ಜಾಗವನ್ನು ಬಳಸಲು ಇದು ಹೆಚ್ಚು ಸಮಯ ಮತ್ತು ವೆಚ್ಚವನ್ನು ತೆಗೆದುಕೊಳ್ಳುತ್ತಿತ್ತು. ಆದರೆ ಸಿಂಗಲ್‌ಕಾಲಂ ತಂತ್ರಜ್ಞಾನ ಬಳಸಿ ನಿರ್ಮಿಸಲಾದ ಸ್ತಂಭಗಳು ಕೆಳಗಿನಿಂದ ಮೇಲಕ್ಕೆ ಒಂದೇ ಸ್ತಂಭಗಳಾಗಿರುತ್ತವೆ. ಆದ್ದರಿಂದ 704 ಸ್ತಂಭಗಳ ಬದಲಿಗೆ 176 ಸ್ತಂಭಗಳನ್ನು ನಿರ್ಮಿಸಲಾಗುವುದು.
ನಿರ್ಮಾಣ ವೆಚ್ಚವೂ ಕಡಿಮೆ
ಕಾಲಂಗಳ ಸಂಖ್ಯೆಯನ್ನು 704ರಿಂದ 176ಕ್ಕೆ ಇಳಿಸುವುದರಿಂದ ಸಮುದ್ರತಳದ ಬಳಕೆ ಮತ್ತು ಪರಿಸರಕ್ಕೆ ಅಪಾಯ ಕಡಿಮೆ ಮಾಡುತ್ತದೆ. ಕಾಲಂಗಳ ಸಂಖ್ಯೆಯಲ್ಲಿನ ಕಡಿತವು ಸಮಯ ಮತ್ತು ನಿರ್ಮಾಣ ವೆಚ್ಚವನ್ನು ಉಳಿಸುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ನಿರ್ಮಾಣಕ್ಕೆ ಬೇಕಾದ ಯಂತ್ರೋಪಕರಣಗಳನ್ನು ಯುರೋಪಿನಿಂದ ಆಮದು ಮಾಡಿಕೊಳ್ಳಲಾಗಿದ್ದು, ಅಂತಹ ತಂತ್ರಜ್ಞಾನ ಅನುಷ್ಠಾನಗೊಳಿಸುವ ಪ್ರಾಯೋಗಿಕ ಅನುಭವ ಹೊಂದಿರುವ ವಿದೇಶದಿಂದ ನುರಿತ ತಂತ್ರಜ್ಞರು ವೈಯಕ್ತಿಕವಾಗಿ ಹಾಜರಿರುತ್ತಾರೆ ಮತ್ತು ಕೆಲಸಕ್ಕೆ ಮಾರ್ಗದರ್ಶನ ನೀಡುತ್ತಾರೆ ಎಂದು ಸೀ ಕೋಸ್ಟ್ ಪ್ರಾಜೆಕ್ಟ್‌ನ ಮುಖ್ಯ ಎಂಜಿನಿಯರ್ ಸುಪ್ರಭಾ ಮರಾಠೆ ಹೇಳಿದ್ದಾರೆ.
ವರ್ಲಿಯಲ್ಲಿ 3 ಪರೀಕ್ಷಾ ಅಂಕಣಗಳು
ಸಿಂಗಲ್ ಕಾಲಂ ತಂತ್ರಜ್ಞಾನದ ಪ್ರಕಾರ ಕಾಲಂಗಳ ನಿರ್ಮಾಣವು ಮಾನ್ಸೂನ್ ಬಳಿಕ ಪ್ರಾರಂಭವಾಗುತ್ತದೆ, ಅಂದರೆ ಸೆಪ್ಟಂಬರ್ 2021ರ ಬಳಿಕ ಇದು ಪ್ರಾರಂಭಗೊಳ್ಳಲಿದೆ.
ಮೊದಲು 3 ಪರೀಕ್ಷಾ ಕಾಲಂಗಳನ್ನು ನಿರ್ಮಿಸಲಾಗುವುದು. ಈ ಸ್ತಂಭಗಳ ಒಟ್ಟು ಎತ್ತರವು ನೆಲದ ಕೆಳಗೆ ಮತ್ತು ನೆಲಕ್ಕಿಂತ ಮೇಲಿರುತ್ತದೆ. ವರ್ಲಿಯ ಅಬ್ದುಲ್ ಗಫಾರ್ ಖಾನ್ ರಸ್ತೆಯ ಮಾಧವ್ ಠಾಕ್ರೆ ಚೌಕ್ ಬಳಿಯ ಬೀಚ್ ರಸ್ತೆಯಲ್ಲಿ ಈ ಸ್ತಂಭಗಳನ್ನು ನಿರ್ಮಿಸಲಾಗುವುದು.
ಸಿಂಗಲ್ ಕಾಲಂ ಎಂದರೇನು?
ಸಾಮಾನ್ಯವಾಗಿ ಸಮುದ್ರಗಳು, ನದಿಗಳು, ಸರೋವರಗಳು ಇತ್ಯಾದಿಗಳ ಮೇಲೆ ಸೇತುವೆಗಳನ್ನು ನಿರ್ಮಿಸುವಾಗ ಅವುಗಳ ಕೆಳಗಿರುವ ಸ್ತಂಭಗಳನ್ನು ಗುಂಪು ರಾಶಿಯಲ್ಲಿ ನಿರ್ಮಿಸಲಾಗುತ್ತದೆ. ಇದು ಸಾಮಾನ್ಯವಾಗಿ ಪ್ರತಿ ಸ್ತಂಭದ ಕೆಳಗೆ 4 ಸ್ತಂಭಗಳನ್ನು ಹೊಂದಿರುತ್ತದೆ. ಆದಾಗ್ಯೂ ಮೊನೊ ಪೈಲ್ ವ್ಯವಸ್ಥೆಯಲ್ಲಿ ಕೆಳಗಿನಿಂದ ಮೇಲಕ್ಕೆ ಒಂದೇ ಘನ ಕಾಲಂ ಅನ್ನು ಸ್ಥಾಪಿಸಲಾಗಿದೆ. ಅದರಂತೆ ಕರಾವಳಿ ಯೋಜನೆಯಡಿ ನಿರ್ಮಿಸಲಿರುವ ಸೇತುವೆಗಳ ಅಡಿಯಲ್ಲಿ 176 ಸ್ತಂಭಗಳನ್ನು ನಿರ್ಮಿಸಲಾಗುವುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
ಇಂಗ್ಲೆಂಡ್‌ನ ರಾದರಮ್ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’
Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.