ಡಿಮೆನ್ಶಿಯಾ  ಹೊಂದಿರುವ ವ್ಯಕ್ತಿಗಳ ಆರೈಕೆಗಾಗಿ  ಕೆಲವು ಸಲಹೆಗಳು


Team Udayavani, May 2, 2021, 2:21 PM IST

Dementia

ಡಿಮೆನ್ಸಿಯಾವು ವ್ಯಕ್ತಿಯ ನೆನಪಿನ ಶಕ್ತಿ, ಆಲೋಚನಾ ಸಾಮರ್ಥ್ಯ, ನಡವಳಿಕೆ ಮತ್ತು ದೈನಂದಿನ ಚಟುವಟಿಕೆಗಳಲ್ಲಿ  ಅವರ ಭಾಗವಹಿಸುವಿಕೆ ಇವೆಲ್ಲವುಗಳ ಮೇಲೆ ಪರಿಣಾಮವನ್ನು ಬೀರುತ್ತದೆ. ಆರಂಭಿಕ ಅಥವಾ ಕನಿಷ್ಠತೆಯ ಹಂತಗಳಲ್ಲಿ ಡಿಮೆನ್ಸಿಯಾವನ್ನು ಹೊಂದಿರುವ ವ್ಯಕ್ತಿಯು ತನ್ನ ಹೆಚ್ಚಿನ ಕಾರ್ಯ ಚಟುವಟಿಕೆಗಳನ್ನು ಸ್ವತಂತ್ರವಾಗಿ ಅಥವಾ  ಸ್ವಲ್ಪಮಟ್ಟಿನ ಸಹಾಯ/ಮೇಲ್ವಿಚಾರಣೆಯೊಂದಿಗೆ ಮಾಡಬಹುದು.

ಆದರೆ ಅದು ಉಲ್ಬಣಗೊಳ್ಳುತ್ತಿದ್ದಂತೆ, ಡಿಮೆನ್ಸಿಯಾ ಹೊಂದಿರುವ ವ್ಯಕ್ತಿಯು ನಿದ್ದೆ, ಶೌಚಾಲಯ, ಸ್ನಾನ, ತಿನ್ನುವುದು, ಸಂವಹನ ಇತ್ಯಾದಿ ಪ್ರತಿನಿತ್ಯದ ಚಟುವಟಿಕೆಗಳನ್ನು ನಡೆಸಲು ತಮ್ಮ ಕುಟುಂಬ ಸದಸ್ಯರನ್ನು ಅವಲಂಬಿಸಬೇಕಾಗುತ್ತದೆ. ತಮ್ಮ ಸರಿ-ತಪ್ಪಿನ ಅರಿವು ಮತ್ತು ನಡವಳಿಕೆಯ ಸಮಸ್ಯೆಗಳಿಂದಾಗಿ ಡಿಮೆನ್ಸಿಯಾದ ಅವಧಿಯು ಬದಲಾಗುತ್ತದೆ. ಮತ್ತು ತುಂಬಾ ದೀರ್ಘಾವಧಿಯಾಗಿದ್ದು , ಸಾಮಾನ್ಯವಾಗಿ 3-7 ವರ್ಷಗಳು. ಡಿಮೆನ್ಸಿಯಾಕ್ಕೆ ಯಾವುದೇ ಚಿಕಿತ್ಸೆಯಿಲ್ಲ ಮತ್ತು ಅದರ ನಿರ್ವಹಣೆಯು ಹೆಚ್ಚಾಗಿ ಔಷಧವನ್ನು ಒಳಗೊಂಡಿರುವುದಿಲ್ಲ.

ಆದ್ದರಿಂದ ಡಿಮೆನ್ಸಿಯಾ ಹೊಂದಿರುವ ವ್ಯಕ್ತಿಗಳನ್ನು ನೋಡಿಕೊಳ್ಳುವ ಕುಟುಂಬ ಸದಸ್ಯರಿಗೆ, ಅದರಲ್ಲೂ ವಿಶೇಷವಾಗಿ ಅವರನ್ನು ನೋಡಿಕೊಳ್ಳಲು ಇರುವ ಪ್ರಾಥಮಿಕ ಆರೈಕೆದಾರರಿಗೆ ಸಾಕಷ್ಟು  ಬೇಡಿಕೆಯಿದೆ. ಭಾರತದಲ್ಲಿ 2030ರ ವೇಳೆಗೆ  ಸುಮಾರು 75 ಲಕ್ಷ ಜನರು ಈ ರೀತಿಯ ಡಿಮೆನ್ಸಿಯಾಕ್ಕೆ ಒಳಗಾಗುತ್ತಾರೆ ಎಂದು ಅಂದಾಜಿಸಲಾಗಿದೆ. ಇದು ಕುಟುಂಬ ಆರೈಕೆದಾರರನ್ನು ಒಳಗೊಂಡಿರುವ ಭಾರಿ ಜನಸಂಖ್ಯೆಯ ಮೇಲೆ ಪರಿಣಾಮ ಬೀರುತ್ತದೆ. ಇದಕ್ಕಾಗಿ ವಿಶ್ವ ಆರೋಗ್ಯ ಸಂಸ್ಥೆಯು ಜಾಗತಿಕ ಮಟ್ಟದಲ್ಲಿ ಒಂದು ಕ್ರಿಯಾ ಯೋಜನೆಯನ್ನು ರೂಪಿಸಿದೆ.

ಈ ಯೋಜನೆಯ ಏಳು ಕ್ರಿಯಾ ಕ್ಷೇತ್ರಗಳಲ್ಲಿ ಡಿಮೆನ್ಸಿಯಾದಿಂದ ಬಳಲುವ ವ್ಯಕ್ತಿಯ ಆರೈಕೆದಾರರಿಗೆ ಬೆಂಬಲವನ್ನು ನೀಡುವುದು ಒಂದಾಗಿದೆ. ಈ ಲೇಖನದಲ್ಲಿ  ಆರೈಕೆದಾರರು ಎದುರಿಸುತ್ತಿರುವ ಸಾಮಾನ್ಯ ಸಮಸ್ಯೆಗಳಿಗೆ ನಾವು ಕೆಲವು ಸಾಮಾನ್ಯ ಸಲಹೆಗಳನ್ನು ನೀಡುತ್ತೇವೆ. ಡಿಮೆನ್ಸಿಯಾ ಹೊಂದಿರುವ ವ್ಯಕ್ತಿಯ ದೈನಂದಿನ ಚಟುವಟಿಕೆಗಳನ್ನು ಮಾಡಲು ತೊಂದರೆ, ಡಿಮೆನ್ಸಿಯಾ ವ್ಯಕ್ತಿಗಳೊಂದಿಗೆ ಸಂವಹನ ಮಾಡುವುದು ಮತ್ತು ಅವರ ಸುರಕ್ಷತೆಯನ್ನು ನೋಡಿಕೊಳ್ಳುವುದು.

ಡಿಮೆನ್ಸಿಯಾ ಹೊಂದಿರುವ ವ್ಯಕ್ತಿಗಳ ದೈನಂದಿನ ಕಾರ್ಯಗಳನ್ನು  ನಿರ್ವಹಿಸುವುದು.

ಡಿಮೆನ್ಸಿಯಾದ ಆರಂಭಿಕ ಹಂತಗಳಲ್ಲಿ ಅವರು ತಮ್ಮ ದೈನಂದಿನ ಚಟುವಟಿಕೆಗಳನ್ನು  ಅಥವಾ ಕೆಲಸಗಳನ್ನು ನಿರ್ವಹಿಸಲು ಸಾಧ್ಯವಾಗುತ್ತದೆ. ಆದರೆ ಇತ್ತೀಚಿನ ಘಟನೆಗಳ ನೆನಪಿನ ದುರ್ಬಲತೆಯಿಂದಾಗಿ ಬ್ಯಾಂಕ್‌ಗೆ ಹೋಗುವ ಕೆಲಸ, ಶಾಪಿಂಗ್‌, ಪ್ರಯಾಣ ಇತ್ಯಾದಿಗಳಂತಹ ದೈನಂದಿನ ಚಟುವಟಿಕೆಗಳಲ್ಲಿ ಅವರಿಗೆ ಸ್ವಲ್ಪಮಟ್ಟಿನ ಸಮಸ್ಯೆಗಳಿರಬಹುದು. ಸಮಯದ ದೃಷ್ಟಿಕೋನ ಮತ್ತು ನಿರ್ವಹಣೆಯಲ್ಲೂ ಅವರಿಗೆ ಕಷ್ಟವಾಗ

ಬಹುದು ಮತ್ತು ಇದರ ಪರಿಣಾಮವಾಗಿ ಅವರು ನಿಗದಿತ ಸಮಯಕ್ಕೆ ಸರಿಯಾಗಿ ಭೇಟಿಯಾಗುವುದನ್ನು ಕಳೆದುಕೊಳ್ಳಬಹುದು. ಕೆಲವೊಂದು ಚಟುವಟಿಕೆಗಳಿಗೆ ಸಮಯವನ್ನು ನಿರ್ಧರಿಸಲು ಕಷ್ಟವಾಗಬಹುದು ಮತ್ತು ಅವರ ದಿನಚರಿಯನ್ನು ಯೋಜಿಸಲು ಕಷ್ಟವಾಗುವುದು. ಇದರಿಂದಾಗಿ ಅವರು ಈ ಚಟುವಟಿಕೆಗಳನ್ನು ನಿರ್ಲಕ್ಷಿಸಬಹುದು. ಅಥವಾ ಬಿಟ್ಟುಬಿಡಬಹುದು.

ಈ ಹಂತದಲ್ಲಿ ಅವರು ಸಂಪೂರ್ಣವಾಗಿ ಸ್ವತಂತ್ರರಾಗಬಹುದು ಮತ್ತು ಅವರು ತಮ್ಮ ಸಣ್ಣ  ಸಣ್ಣ ಸಮಸ್ಯೆಗಳನ್ನು ನಿರ್ವಹಿಸಲು ಕೆಲವೊಂದು ತಂತ್ರಗಳೊಂದಿಗೆ ಏಕಾಂಗಿಯಾಗಿ ಬದುಕಬಹುದು. ಇವುಗಳಲ್ಲಿ ತಮ್ಮ ಸುತ್ತಮುತ್ತಲಿನ ಪ್ರದೇಶದಲ್ಲಿ  ಸಂಘಟಿತ ಮತ್ತು ರಚನಾತ್ಮಕ ಮನೆಯನ್ನು ಹೊಂದಿರುವುದು, ಉತ್ತಮವಾದ ದಿನಚರಿ, ಸಕ್ರೀಯತೆಯಿಂದ ಕೂಡಿದ ಜೀವನ ಶೈಲಿ ಮತ್ತು ಸಾಕಷ್ಟು ಸಾಮಾಜೀಕರಣಗಳೂ ಸೇರಿವೆ.

ತಮ್ಮ ಭಾಗವಹಿಸುವಿಕೆಯನ್ನು ಹೆಚ್ಚಿಸಲು ಮತ್ತು ರೂಢಿಯಲ್ಲಿರುವ ಚಟುವಟಿಕೆಗಳನ್ನು ಕಾಪಾಡಿಕೊಳ್ಳಲು ಆರೈಕೆದಾರರು ಮೌಖೀಕ ಸೂಚನೆಗಳನ್ನು ಬಳಸಬಹುದು, ಟೈಮರ್‌, ಚಿತ್ರಗಳನ್ನು ಜೋಡಿಸಬಹುದು ಮತ್ತು ದಿನಚರಿಯ ನಕಾಶೆಯನ್ನು ರಚಿಸಬಹುದು. ಇದರಿಂದ ನಿರ್ದಿಷ್ಟವಾದ ಚಟುವಟಿಕೆಗಳನ್ನು ಸರಿಯಾದ ಸಮಯಕ್ಕೆ ಪ್ರಾರಂಭಿಸಲು ಅವರಿಗೆ ಸಹಾಯ ಮಾಡುತ್ತದೆ. ಸಮಯ, ಸಮಯದ ನಿರ್ವಹಣೆ ಮತ್ತು ನೆನಪಿನ ಶಕ್ತಿಯ ಸಮಸ್ಯೆಗಳಿಗೆ ಸಹಾಯ ಮಾಡಲು ವಿಶೇಷವಾದ ಸಮಯ ಸಹಾಯಕ ಸಾಧನಗಳು ಸಹ ಲಭ್ಯವಿದೆ.

ಆಗಾಗ್ಗೆ ಬಳಸುವ ವಸ್ತುಗಳನ್ನು ಅಂದರೆ ಬಾಚಣಿಗೆ, ನೀರಿನ ಬಾಟಲಿ, ಸ್ನಾನದ ಟವೆಲ್‌ ಮತ್ತು ಟಿವಿ ರಿಮೋಟ್‌ ಇಂತಹ ವಸ್ತುಗಳನ್ನು ಕಣ್ಣಿಗೆ ಕಾಣುವ ಸ್ಥಳಗಳಲ್ಲಿ ಇಡುವುದರಿಂದ ಡಿಮೆನ್ಸಿಯಾ ಹೊಂದಿರುವ ವ್ಯಕ್ತಿಯು ಇವುಗಳನ್ನು ಸುಲಭವಾಗಿ ತಲುಪಲು ಸಹಾಯವಾಗುತ್ತದೆ.

ಈ ಪರಿಸ್ಥಿತಿಯು ಮುಂದುವರಿಯುತ್ತಿದ್ದಂತೆ ಡಿಮೆನ್ಸಿಯಾ ಹೊಂದಿರುವ ವ್ಯಕ್ತಿಗೆ ಸ್ನಾನಕ್ಕೆ, ಶೌಚಾಲಯಕ್ಕೆ, ಊಟ ಮಾಡಲು, ಬಟ್ಟೆ  ಧರಿಸಲು ಇತ್ಯಾದಿಗಳಿಗೆ ಆರೈಕೆದಾರರು ಜೊತೆಗಿದ್ದು ನೆರವು ನೀಡಬೇಕಾಗುತ್ತದೆ. ಆರೈಕೆದಾರರು ತಮ್ಮ ಸಮಯವನ್ನು  ನಿರ್ವಹಿಸಲು ಮತ್ತು ಒತ್ತಡವನ್ನು ಕಡಿಮೆ ಮಾಡಲು ದೈನಂದಿನ ಚಟುವಟಿಕೆಗಳನ್ನು ಸರಳೀಕರಿಸಬಹುದು ಮತ್ತು ಯೋಚಿಸಬಹುದು. ಕೆಲವೊಂದು ಉದಾಹರಣೆಗಳು ಈ ಕೆಳಗಿನಂತಿವೆ.

  1. ವಾರಕ್ಕೆ 2 ಅಥವಾ 3 ಬಾರಿ ಸರಿಯಾಗಿ ಸ್ನಾನವನ್ನು ಮಾಡಿಸಿ ಮತ್ತು ಉಳಿದ ದಿನಗಳಲ್ಲಿ ಮೇಲ್ಮೇಲೆ ಮೈ ತೊಳೆಯುವಂತೆ ಬದಲಿಸಬಹುದು.
  2. ಡಿಮೆನ್ಸಿಯಾ ಹೊಂದಿರುವ ವ್ಯಕ್ತಿಯ ಮಲ ಮತ್ತು ಮೂತ್ರ ವಿಸರ್ಜನೆಯ ನಿಯಂತ್ರಣಕ್ಕೆ ಅನುಕೂಲವಾಗುವಂತೆ ಅವರನ್ನು ನಿಯಮಿತ ಆಂತರದಲ್ಲಿ ಶೌಚಾಲಯಕ್ಕೆ ಕರೆದೊಯ್ಯಬಹುದು ಮತ್ತು ನೀರಿನ ಸೇವನೆಯ ಮಟ್ಟವನ್ನು  ನೋಡಿಕೊಳ್ಳುತ್ತಿರಬಹುದು.
  3. ಡಿಮೆನ್ಸಿಯಾ ಹೊಂದಿರುವ ವಕ್ತಿಗೆ ಸೀರೆ ಅಥವಾ ಪ್ಯಾಂಟ್‌ ಬದಲು, ನೈಟ್‌ ಗೌನ್‌ ಅಥವಾ ಪಂಚೆಯನ್ನು ಧರಿಸುವಂತೆ ಮಾಡಬಹುದು. ಇದು ಶೌಚಾಲಯದ ಸಮಯದಲ್ಲಿ ಸುಲಭವಾಗಿ ತೆಗೆಯಲು ಸಹಾಯವಾಗುತ್ತದೆ. ಒಂದು ವೇಳೆ ಅವರ ಹತೋಟಿಯಲ್ಲಿ ಇಲ್ಲದಿದ್ದರೆ ಡೈಪರ್‌ ಬಳಸುವುದನ್ನು ಯೋಚಿಸಬಹುದು.
  4. ಉಡುಪನ್ನು ಧರಿಸಲು, ನಿಮ್ಮ ಅನುಕೂಲಕ್ಕೆ ತಕ್ಕಂತೆ ಬಟ್ಟೆಯ ಶೈಲಿಯನ್ನು ಬದಲಾಯಿಸಿ, ತಲೆಯ ಮೇಲಿಂದ ಹಾಕುವ ಬಟ್ಟೆ ಶೈಲಿಗಳ ಬದಲಾಗಿ ಮುಂಭಾಗದಲ್ಲಿ ಗುಂಡಿಗಳಿರುವಂಥಹ ಆರಾಮದಾಯಕ ಹತ್ತಿ ಬಟ್ಟೆಗಳನ್ನು ಬಳಸಿ, ಅವರು ಧರಿಸಬೇಕಾದ ಬಟ್ಟೆಗಳನ್ನು  ಕ್ರಮದಲ್ಲಿ  ಜೋಡಿಸಿ ಇರಿಸಿ. ಉದಾಹರಣೆಗೆ: ಒಳ ಉಡುಪುಗಳನ್ನು ಮೇಲ್ಭಾಗದಲ್ಲಿ ಮತ್ತು ಹೊರಗಿನ ಉಡುಪುಗಳನ್ನು ಕೆಳಭಾಗದಲ್ಲಿ ಜೋಡಿಸಿಡಿ.
  5. ಡಿಮೆನ್ಸಿಯಾ ಹೊಂದಿರುವ ವ್ಯಕ್ತಿಯು ಇಷ್ಟಪಡುವಂತಹ ಪೌಷ್ಟಿಕ ಮತ್ತು ಸಮತೋಲನದ ಆಹಾರವನ್ನು ನಿಗದಿತ ಸಮಯದಲ್ಲಿ , ನಿಯಮಿತವಾಗಿ, ಬಿಸಿ ಬಸಿಯಾದ ಮತ್ತು ರುಚಿಕರವಾದ ಆಹಾರವನ್ನು ಒದಗಿಸಿ.
  6. ರಾತ್ರಿ ವೇಳೆ ನಿದ್ರಾಹೀನತೆಯನ್ನು ತಪ್ಪಿಸಲು ಹಗಲು ಹೊತ್ತಿನಲ್ಲಿ ಮಲಗುವುದನ್ನು ಪ್ರೋತ್ಸಾಹಿಸದಿರುವುದು.
  7. ಅವರ ಸ್ಥಿತಿಗೆಹೊಂದಿಕೆಯಾಗುವಂತೆ ಆ ವ್ಯಕ್ತಿಯನ್ನು ಉತ್ತೇಜಿಸಲ್ಪಡುವ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಿ .
  8. ನಿಮಗೆ ಮತ್ತು ಡಿಮೆನ್ಸಿಯಾ ಹೊಂದಿರುವ ವ್ಯಕ್ತಿಗೆ ಆಸಕ್ತಿಯಿರುವ ಕೆಲವೊಂದು ಬಿಡುವು ನೀಡುವ ಚಟುವಟಿಕೆಗಳನ್ನು ಗುರುತಿಸಿ. ಇದರಿಂದ ನೀವಿಬ್ಬರು ಒಟ್ಟಿಗೆ ಈ ಚಟುವಟಿಕೆಯಲ್ಲಿ ಭಾಗವಹಿಸಬಹುದು.

ಉದಾಹರಣೆಗೆ : ಒಟ್ಟಿಗೆ ನಡೆದುಕೊಂಡು ಹೋಗುವುದು, ಟಿವಿ ನೋಡುವುದು, ರಿಪೇರಿ ಕೆಲಸಗಳನ್ನು ಮಾಡುವುದು, ಗಿಡಗಳನ್ನು ನೆಡುವುದು ಇತ್ಯಾದಿ. ಸೂಕ್ತವಾದ ಮೇಲ್ವಿಚಾರಣೆ ಮತ್ತು ಸೂಚನೆಗಳೊಂದಿಗೆ ಬಟ್ಟೆಗಳನ್ನು ಮಡಚಿಡುವುದು, ಅಂಗಳ ಗುಡಿಸುವುದು, ಟೇಬಲ್‌ ಒರೆಸುವುದು, ತರಕಾರಿಗಳನ್ನು ಬೇರೆ ಬೇರೆಯಾಗಿ ಜೊಡಿಸಿಡುವುದು ಮುಂತಾದ ಅರ್ಥಪೂರ್ಣವಾದ, ಅವರಿಗೆ ತಿಳಿದಿರುವ, ಪರವಾದ ಮತ್ತು ಪುನರಾವರ್ತಿತ ಮನೆಕೆಲಸಗಳಲ್ಲಿ ಭಾಗವಹಿಸಲು ಅವರನ್ನು  ಪ್ರೋತ್ಸಾಹಿಸಿ.

ಕಷ್ಟಕರವಾದ ನಡವಳಿಕೆಗಳ ನಿರ್ವಹಣೆ

ಡಿಮೆನ್ಶಿಯಾ ಹೊಂದಿರುವ ವ್ಯಕ್ತಿಯು ವಿಶೇಷವಾಗಿ ಮಧ್ಯಮ ಮತ್ತು ಅನಂತರದ ಹಂತಗಳಲ್ಲಿ  ವಿಶ್ರಾಂತಿರಹಿತರಾಗಬಹುದು, ಜಗಳಗಂಟರಾಗಬಹುದು, ಎಗರಬಹುದು ಮತ್ತು ಹಠಮಾರಿತನದವರೂ ಆಗಬಹುದು. ಈ ಎಲ್ಲ ವರ್ತನೆಗಳು ಅವರ ದೈನಂದಿನ ಕೆಲಸ ಕಾರ್ಯಗಳ ಮೇಲೆ ಹಸ್ತಕ್ಷೇಪವನ್ನು ಮಾಡುತ್ತದೆ ಮತ್ತು ಅವರ ಸುರಕ್ಷತೆಗೆ ಅಡ್ಡಿಯನ್ನುಂಟುಮಾಡುತ್ತದೆ. ಅದಕ್ಕಾಗಿ ಈ ಕೆಳಗಿನ ಕೆಲವೊಂದು ಅಂಶಗಳು ಸಹಾಯವಾಗಬಹುದು.

> ಪ್ರಚೋದಕಗಳನ್ನು ಗುರುತಿಸುವುದು (ಕನ್ನಡಿಗಳು, ಪ್ರಕಾಶಮಾನವಾದ ಬೆಳಕು, ದೈಹಿಕ ಅಸ್ವಸ್ಥತೆ ಮತ್ತು ಅತಿಯಾದ ಶಬ್ದ), ಮಲಬದ್ಧತೆ, ಹಲ್ಲುನೋವು ಇತ್ಯಾದಿ ಸಮಸ್ಯೆಗಳು ಅವರಿಗೆ ಸಂವಹನ ನಡೆಸಲು ತಡೆಯಾಗಬಹುದು. ಸಾಧ್ಯವಾದರೆ ಯಾವುದೇ ಚಟುವಟಿಕೆಗಳನ್ನು ಆರಂಭಿಸುವ ಮೊದಲು ಇವೆಲ್ಲವುಗಳನ್ನು ತೆಗೆದುಹಾಕಲು ಪ್ರಯತ್ನಿಸಿ.

> ಈ ಎಲ್ಲಾ  ವರ್ತನೆಗಳನ್ನು ನಿರ್ವಹಿಸಲು ಅವರನ್ನು ಪ್ರೀತಿಯಿಂದ ಸವರುವುದು, ಕೈಯನ್ನು ಹಿಡಿದುಕೊಳ್ಳುವುದು, ವಿನಯತೆಯಿಂದ ನೋಡಿಕೊಳ್ಳುವುದು, ಸಂಗೀತವನ್ನು ನುಡಿಸುವುದು ಇತ್ಯಾದಿ.

> ಡಿಮೆನ್ಸಿಯಾ ಹೊಂದಿರುವ ವ್ಯಕ್ತಿಯು ಬಾಗಿಲುಗಳನ್ನು ತೆರೆಯುವುದು ಮತ್ತು ಮುಚ್ಚುವುದು, ಆಗಾಗ ಕೈಯನ್ನು ತೊಳೆಯುವುದು ಮುಂತಾದ ಪುನರಾವರ್ತಿತ ವರ್ತನೆಗಳನ್ನು ಮಾಡಲೂಬಹುದು. ಸಾಧ್ಯವಾದರೆ ಅವರ ಗಮನವನ್ನು ಬೇರೆಡೆ ಸೆಳೆಯಲು ಪ್ರಯತ್ನಿಸಿ. ಆದರೆ ಬಲವಂತವಾಗಿ ತಡೆಯಲು ಪ್ರಯತ್ನಿಸಬೇಡಿ.

> ಆರೈಕೆದಾರರು ಸಾಮಾನ್ಯವಾಗಿ ಎದುರಿಸುತ್ತಿರುವ ವರ್ತನೆಗಳ ಸಮಸ್ಯೆಗಳಲ್ಲಿ ಅಲೆದಾಡುತ್ತಿರುವುದು ಒಂದು. ಈ ಅಲೆದಾಟವನ್ನು ತಡೆಯಲು ಡಿಮೆನ್ಸಿಯಾ ಹೊಂದಿರುವ ವ್ಯಕ್ತಿಗೆ ಬೇರೆ ರೀತಿಯ ಚಟುವಟಿಕೆಯನ್ನು ನೀಡುವ ಮೂಲಕ ಅವರ ಗಮನವನ್ನು ಬೇರೆಡೆ ಸೆಳೆಯಿರಿ ಅಥವಾ ಸದ್ದಿಲ್ಲದೆ ಸುತ್ತಮುತ್ತಲಿನ ಕಡೆಗೆ ಕರೆದೊಯ್ಯಿರಿ.

> ವ್ಯಕ್ತಿಯು ನಿಮ್ಮ ಮೇಲೆ ಎಗರುವ ರೀತಿಯಲ್ಲಿದ್ದರೆ, ಅವರನ್ನು ಮುಟ್ಟಲು ಹೋಗಬೇಡಿ. ಬದಲಾಗಿ ಸ್ವಲ್ಪ ಹೊತ್ತು ಕಾಯಿರಿ. ಡಿಮೆನ್ಸಿಯಾ ಹೊಂದಿರುವ ವ್ಯಕ್ತಿಯ ಮಾತುಗಳನ್ನು ಸರಿಯಾಗಿ ಆಲಿಸಿ ಮತ್ತು ಸಾಧ್ಯವಾದರೆ ಪರಿಸ್ಥಿತಿಯನ್ನು ವಿವರಿಸಿ ಅಥವಾ ಕಥೆಯ ರೂಪದಲ್ಲಿ ನಿಧಾನವಾಗಿ ಹೇಳಿ, ಹಾಗಿದ್ದರೂ ನಿಮಗೆ ದೈಹಿಕವಾಗಿ ಅಪಾಯವಿದ್ದಲ್ಲಿ  ತಕ್ಷಣ ಇನ್ನೊಬ್ಬರ ಸಹಾಯವನ್ನು ಕೇಳಿರಿ.

> ಒಂದು ವೇಳೆ ಡಿಮೆನ್ಸಿಯಾ ಹೊಂದಿರುವ ವ್ಯಕ್ತಿಯು ಹಠಮಾರಿಯಾಗಿದ್ದರೆ, ಅವನು ತನ್ನಿಚ್ಛೆಯಂತೆ ನಡೆದುಕೊಳ್ಳಲಿ. ಉದಾಹರಣೆಗೆ : ಅವರು ಏನನ್ನಾದರೂ ನಿರಾಕರಿಸಿದರೆ ಅದನ್ನು ವಿವರಿಸಲು ಅಥವಾ ಒತ್ತಾಯಿಸಲು ಪ್ರಯತ್ನಿಸಬೇಡಿ. ಸ್ವಲ್ಪ ಸಮಯ ಕಾಯಿರಿ ಮತ್ತು ಅವರು ಸ್ವಲ್ಪ ಸಮಾಧಾನಗೊಂಡಾಗ ಮತ್ತೆ ಪ್ರಯತ್ನಿಸಿ.

> ಭಿನ್ನಾಭಿಪ್ರಾಯ, ವಾದ ಅಥವಾ ಅವರು ನಂಬುವಂಥಹ ವಿಷಯವು ಸುಳ್ಳು ಅಥವಾ ನಿಖರವಾಗಿಲ್ಲವೆಂದು ಮನವರಿಕೆ ಮಾಡಲು ಪ್ರಯತ್ನಿಸುವುದನ್ನು ತಪ್ಪಿಸಿ.

> ಅವರ ವರ್ತನೆಗಳಿಗೆ ಮತ್ತು ಅದು ಸಂಭವಿಸಲು ಕಾರಣವಾದ ಅಂಶಗಳನ್ನು ಗುರುತಿಸಲು ಪ್ರತ್ನಿಸಿ, ಆರೋಗ್ಯ ವೃತ್ತಿಪರರೊಂದಿಗೆ ಜೊತೆಗೂಡಿ ಕೆಲವೊಂದು ತಂತ್ರಗಳನ್ನು ಕಂಡುಹಿಡಿಯಿರಿ.

 

ಡಾ| ಸೆಬೆಸ್ಟಿನಾ ಅನಿತಾ ಡಿ’ಸೋಜಾ

ಪ್ರೊಫೆಸರ್‌, ಆಕ್ಯುಪೇಶನಲ್‌

ಥೆರಪಿ ವಿಭಾಗ ಮತ್ತು ಸಂಯೋಜಕರು, ಹಿರಿಯರ ಆರೋಗ್ಯಕರ ಅಧ್ಯಯನ ಕೇಂದ್ರ

 

ಕೌಶಿಕಾ ವಿ.

ಸ್ನಾತಕೋತ್ತರ ವಿದ್ಯಾರ್ಥಿನಿ, ನ್ಯುರೋರಿಹ್ಯಾಬಿಲಿಟೇಶನ್‌

ಆಕ್ಯುಪೇಶನಲ್‌ ಥೆರಪಿ ವಿಭಾಗ

ಎಂಸಿಎಚ್‌ಪಿ, ಮಾಹೆ, ಮಣಿಪಾಲ

ಟಾಪ್ ನ್ಯೂಸ್

Vijayapura: ಅಪಹರಿಸಿದ ಮಗು ಮರಳಿಸಿದ ಅಪರಿಚಿತ!: ಕಂದಮ್ಮನ ಕಿಡ್ನ್ಯಾಪ್ ಕೇಸ್‌ ಸುಖಾಂತ್ಯ

Vijayapura: ಅಪಹರಿಸಿದ ಮಗು ಮರಳಿಸಿದ ಅಪರಿಚಿತ!: ಕಂದಮ್ಮನ ಕಿಡ್ನ್ಯಾಪ್ ಕೇಸ್‌ ಸುಖಾಂತ್ಯ

BBK11: ಧರ್ಮ ಬಿಗ್‌ ಬಾಸ್‌ ಆಟಕ್ಕೆ ತೊಡಕಾದ ಅಂಶಗಳೇನು? ʼಚಾಕ್ಲೇಟ್‌ ಹೀರೋʼ ಎಡವಿದ್ದೆಲ್ಲಿ?

BBK11: ಧರ್ಮ ಬಿಗ್‌ ಬಾಸ್‌ ಆಟಕ್ಕೆ ತೊಡಕಾದ ಅಂಶಗಳೇನು? ʼಚಾಕ್ಲೇಟ್‌ ಹೀರೋʼ ಎಡವಿದ್ದೆಲ್ಲಿ?

Maharashtra: ಕಾಂಗ್ರೆಸ್‌ ಗೆ ಕೇವಲ 16 ಸ್ಥಾನ; ಕೈ ಅಧ್ಯಕ್ಷ ಸ್ಥಾನಕ್ಕೆ ಪಟೋಲೆ ರಾಜೀನಾಮೆ

Maharashtra: ಕಾಂಗ್ರೆಸ್‌ ಗೆ ಕೇವಲ 16 ಸ್ಥಾನ; ಕೈ ಅಧ್ಯಕ್ಷ ಸ್ಥಾನಕ್ಕೆ ಪಟೋಲೆ ರಾಜೀನಾಮೆ

Ajit Pawar supports Devendra Fadnavis; CM tussle continues in Maharashtra

Politics: ಫಡ್ನವೀಸ್‌ ಗೆ ಬೆಂಬಲ ನೀಡಿದ ಅಜಿತ್;‌ ಮಹಾರಾಷ್ಟ್ರದಲ್ಲಿ ಮುಗಿಯದ ಸಿಎಂ ತಿಕ್ಕಾಟ

Video: ನೋಟಿನ ಮಾಲೆಯಲ್ಲಿ ನೋಟು ಎಗರಿಸಿ ಕಳ್ಳ… ಮದುವೆ ಬಿಟ್ಟು ಕಳ್ಳನ ಹಿಂದೆ ಓಡಿದ ವರ

Video: ನೋಟಿನ ಮಾಲೆಯ ನೋಟು ಎಗರಿಸಿದ ಕಳ್ಳ… ಮದುವೆ ಬಿಟ್ಟು ಕಳ್ಳನ ಹಿಂದೆ ಓಡಿದ ವರ

Sudeep: ‘Max’ release date fixed: Production company wakes up to Kichchan’s anger

Sudeep: ʼಮ್ಯಾಕ್ಸ್‌ʼ ರಿಲೀಸ್‌ ದಿನ ಫಿಕ್ಸ್: ಕಿಚ್ಚನ ಸಿಟ್ಟಿಗೆ ಎಚ್ಚೆತ್ತ ನಿರ್ಮಾಣ ಸಂಸ್ಥೆ

Bidar: Waqf should be removed from India : Yatnal

‌Bidar: ಭಾರತದಿಂದಲೇ ವಕ್ಫ್ ತೊಲಗಿಸಬೇಕು: ಯತ್ನಾಳ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Infections: ಅಗೋಚರ ಕೊಲೆಗಾರ – ಸೋಂಕುಗಳ ವಿರುದ್ಧದ ಹೋರಾಟದಲ್ಲಿ ನಾವು ಸೋಲುತ್ತಿದ್ದೇವೆಯೇ?

5–COPD

COPD: ಕ್ರೋನಿಕ್‌ ಒಬ್‌ಸ್ಟ್ರಕ್ಟಿವ್‌ ಪಲ್ಮನರಿ ಡಿಸೀಸ್‌ (ಸಿಒಪಿಡಿ)

4-Laparoscopic

Laparoscopic surgery: ಸಂತಾನೋತ್ಪತ್ತಿ ಹೆಚ್ಚಿಸುವ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆ

World Diabetes Day; ಮಧುಮೇಹದಲ್ಲಿದೆ ಹಲವು ರೀತಿ; ಇಲ್ಲಿದೆ ಅದರ ಸಂಪೂರ್ಣ ವಿವರ

World Diabetes Day; ಮಧುಮೇಹದಲ್ಲಿದೆ ಹಲವು ರೀತಿ; ಇಲ್ಲಿದೆ ಅದರ ಸಂಪೂರ್ಣ ವಿವರ

3-health

Mother: ತಾಯಂದಿರ ಮಾನಸಿಕ ಆರೋಗ್ಯ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Vijayapura: ಅಪಹರಿಸಿದ ಮಗು ಮರಳಿಸಿದ ಅಪರಿಚಿತ!: ಕಂದಮ್ಮನ ಕಿಡ್ನ್ಯಾಪ್ ಕೇಸ್‌ ಸುಖಾಂತ್ಯ

Vijayapura: ಅಪಹರಿಸಿದ ಮಗು ಮರಳಿಸಿದ ಅಪರಿಚಿತ!: ಕಂದಮ್ಮನ ಕಿಡ್ನ್ಯಾಪ್ ಕೇಸ್‌ ಸುಖಾಂತ್ಯ

BBK11: ಧರ್ಮ ಬಿಗ್‌ ಬಾಸ್‌ ಆಟಕ್ಕೆ ತೊಡಕಾದ ಅಂಶಗಳೇನು? ʼಚಾಕ್ಲೇಟ್‌ ಹೀರೋʼ ಎಡವಿದ್ದೆಲ್ಲಿ?

BBK11: ಧರ್ಮ ಬಿಗ್‌ ಬಾಸ್‌ ಆಟಕ್ಕೆ ತೊಡಕಾದ ಅಂಶಗಳೇನು? ʼಚಾಕ್ಲೇಟ್‌ ಹೀರೋʼ ಎಡವಿದ್ದೆಲ್ಲಿ?

Maharashtra: ಕಾಂಗ್ರೆಸ್‌ ಗೆ ಕೇವಲ 16 ಸ್ಥಾನ; ಕೈ ಅಧ್ಯಕ್ಷ ಸ್ಥಾನಕ್ಕೆ ಪಟೋಲೆ ರಾಜೀನಾಮೆ

Maharashtra: ಕಾಂಗ್ರೆಸ್‌ ಗೆ ಕೇವಲ 16 ಸ್ಥಾನ; ಕೈ ಅಧ್ಯಕ್ಷ ಸ್ಥಾನಕ್ಕೆ ಪಟೋಲೆ ರಾಜೀನಾಮೆ

Ajit Pawar supports Devendra Fadnavis; CM tussle continues in Maharashtra

Politics: ಫಡ್ನವೀಸ್‌ ಗೆ ಬೆಂಬಲ ನೀಡಿದ ಅಜಿತ್;‌ ಮಹಾರಾಷ್ಟ್ರದಲ್ಲಿ ಮುಗಿಯದ ಸಿಎಂ ತಿಕ್ಕಾಟ

Video: ನೋಟಿನ ಮಾಲೆಯಲ್ಲಿ ನೋಟು ಎಗರಿಸಿ ಕಳ್ಳ… ಮದುವೆ ಬಿಟ್ಟು ಕಳ್ಳನ ಹಿಂದೆ ಓಡಿದ ವರ

Video: ನೋಟಿನ ಮಾಲೆಯ ನೋಟು ಎಗರಿಸಿದ ಕಳ್ಳ… ಮದುವೆ ಬಿಟ್ಟು ಕಳ್ಳನ ಹಿಂದೆ ಓಡಿದ ವರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.