ಆದಾಯ ತೆರಿಗೆ ರಿಟರ್ನ್ : ಗಡುವು ವಿಸ್ತರಣೆ
Team Udayavani, May 2, 2021, 2:48 PM IST
ನವ ದೆಹಲಿ : ಕೋವಿಡ್-19 ಸಾಂಕ್ರಾಮಿಕ ಸೊಂಕಿನ ಕಾರಣದಿಂದಾಗಿ ಆರ್ಥಿಕ ವರ್ಷ 2019-20ರ ಸಂಬಂಧಿಸಿದಂತೆ ಪರಿಷ್ಕೃತ ಆದಾಯ ತೆರಿಗೆ ರಿಟರ್ನ್ (ಐಟಿಆರ್) ಸಲ್ಲಿಸಲು ಮೇ 31, 2021ರವರೆಗೆ ಅವಕಾಶ ಒದಗಿಸಿ ಕೊನೆಯ ದಿನಾಂಕವನ್ನು ವಿಸ್ತರಿಸಲಾಗಿದೆ.
ಕೋವಿಡ್ ಸೋಂಕಿನ ಹಟಾತ್ ಏರಿಕೆಯ ಕಾರಣದಿಂದಾಗಿ ದೇಶದ ಕೆಲವು ರಾಜ್ಯಗಳಲ್ಲಿ ನೈಟ್ ಕರ್ಫ್ಯೂ, ಹಾಫ್ ಲಾಕ್ ಡೌನ್, ಲಾಕ್ ಡೌನ್ ನಂತಹ ನಿರ್ಬಂಧಗಳನ್ನು ಹೇರಿರುವ ಕಾರಣದಿಂದಾಗಿ ತೆರಿಗೆದಾರರಿಗೆ ಪರಿಹಾರ ನೀಡಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಓದಿ : ಹುಣಸೂರು : ಗ್ರಾಮಕ್ಕೆ ನುಗ್ಗಿದ ಒಂಟಿ ಸಲಗ, ಹಸುವಿನ ಮೇಲೆ ದಾಳಿ, ಹಸು ಸ್ಥಳದಲ್ಲೇ ಸಾವು
2020-21ರ ಆರ್ಥಿಕ ವರ್ಷಕ್ಕೆ ಆದಾಯ ತೆರಿಗೆ ರಿಟರ್ನ್ /ಐ ಟಿ ಆರ್ ಸಲ್ಲಿಸುವ ದಿನಾಂಕ ಬದಲಾಗಿಲ್ಲ. ಈ ಐ ಟಿ ಆರ್ ನನ್ನು ಜುಲೈ 31 ರೊಳಗೆ ಸಲ್ಲಿಸಬೇಕು. ಈ ದಿನಾಂಕದ ವೇಳೆಗೆ, ನಿಮ್ಮ ಆದಾಯ ತೆರಿಗೆ ರಿಟರ್ನ್ ಸಲ್ಲಿಸಲು ನೀವು ಯಾವುದೇ ಹೆಚ್ಚುವರಿ ಶುಲ್ಕವನ್ನು ಪಾವತಿಸಬೇಕಾಗಿಲ್ಲ.
ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ/ Central Board of Direct Taxes) :
ಆದೇಶ ಸಿಬಿಡಿಟಿ ಹೊರಡಿಸಿದ ಆದೇಶದ ಪ್ರಕಾರ, 2020-21ರ ಮೌಲ್ಯಮಾಪನ ವರ್ಷಕ್ಕೆ (ಆರ್ಥಿಕ ವರ್ಷ 2019-20) ಆದಾಯ ತೆರಿಗೆ ಕಾಯ್ದೆ 1961 ರ ಸೆಕ್ಷನ್ 139 ರ ಉಪವಿಭಾಗ 4 ಮತ್ತು 5 ರ ಅಡಿಯಲ್ಲಿ ದ್ವಿಪಕ್ಷೀಯ ರಿಟರ್ನ್ಸ್ ಮತ್ತು ಪರಿಷ್ಕೃತ ರಿಟರ್ನ್ಸ್ ಸಲ್ಲಿಸಿದ ದಿನಾಂಕವನ್ನು 31 ಮೇ 2021 ಕ್ಕೆ ಹೆಚ್ಚಿಸಲಾಗಿದೆ. ಮೊದಲ ಗಡುವು 31 ಮಾರ್ಚ್ 2021ರವರೆಗಿದ್ದು, ಅದು ಮುಗಿದಿದೆ.
ರಿಟರ್ನ್ ಫೈಲಿಂಗ್ ಗಡುವು ಮೇ 31 ರವರೆಗೆ ವಿಸ್ತರಣೆ ಸೆಕ್ಷನ್ 148 ರ ಅಡಿಯಲ್ಲಿ ನೋಟಿಸ್ ಬಂದಿದ್ದರೆ, ರಿಟರ್ನ್ ಫೈಲಿಂಗ್ ಗಡುವನ್ನು ಮೇ 31 ರವರೆಗೆ ವಿಸ್ತರಿಸಲಾಗಿದೆ.
ಓದಿ : ಜಿದ್ದಾಜಿದ್ದಿನ ಕಣವಾದ ಬೆಳಗಾವಿ: ಮತ್ತೆ ಮುನ್ನಡೆ ಸಾಧಿಸಿದ ಸತೀಶ್ ಜಾರಕಿಹೊಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Yadagiri: ಕೆಡಿಪಿ ಸಭೆಯಲ್ಲಿ ಸಚಿವರ-ಶಾಸಕರ ನಡುವೆ ವಾಕ್ ಸಮರ!
Bengaluru: ಅನಧಿಕೃತ ಮಳಿಗೆಗಳ ತೆರವು ಕೋರಿ ಅರ್ಜಿ:ಪಾಲಿಕೆಗೆ ಹೈಕೋರ್ಟ್ ನೋಟಿಸ್
Bengaluru: ವಿಶ್ವನಾಥ್‌ಗೆ ಕೊಲೆ ಬೆದರಿಕೆ: ಆರೋಪಿ ಅರ್ಜಿ ವಜಾ
BGT 2024: ಬುಮ್ರಾ ಬೆಂಕಿ ದಾಳಿಗೆ ನಲುಗಿದ ಆಸೀಸ್: ಭಾರತದ ಹಿಡಿತದಲ್ಲಿ ಪರ್ತ್ ಟೆಸ್ಟ್
Bengaluru: ಮರಕ್ಕೆ ಬೈಕ್ ಡಿಕ್ಕಿ ಹೊಡೆದು ಯುವಕ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.