ಸೋಂಕಿತರು ಹೆಚ್ಚಿದ್ರೆ ಜೈನ್ ಆಸ್ಪತ್ರೆ ಬಳಕೆ
Team Udayavani, May 2, 2021, 5:58 PM IST
ಚಿಕ್ಕಬಳ್ಳಾಪುರ: ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಕೊರೊನಾ ಸೋಂಕು ಹೆಚ್ಚಳವಾದ್ರೆ ಈಗಿರುವಸರ್ಕಾರಿ ಆಸ್ಪತ್ರೆಗಳಲ್ಲಿನ ಬೆಡ್ ಭರ್ತಿಯಾದಲ್ಲಿ,ಆಕ್ಸಿಜನ್ ವ್ಯವಸ್ಥೆ ಇರುವ 90 ಹಾಸಿಗೆಗಳಸಾಮರ್ಥ್ಯದ ಜೈನ್ ಆಸ್ಪತ್ರೆ ಬಳಸಿಕೊಳ್ಳಲಾಗುವುದು ಎಂದು ಜಿಲ್ಲಾ ಧಿಕಾರಿ ಆರ್.ಲತಾ ತಿಳಿಸಿದರು.
ನಗರ ಹೊರವಲಯದ ಬಿ.ಬಿ.ರಸ್ತೆಯಲ್ಲಿನಿರ್ಮಾಣಗೊಂಡು ಉದ್ಘಾಟನೆಗೆ ಸಿದ್ಧವಿರುವ ಜೈನ್‌ಆಸ್ಪತ್ರೆಯಲ್ಲಿನ ಮೂಲ ಸೌಲಭ್ಯ ಪರಿಶೀಲಿಸಿಮಾತನಾಡಿದ ಅವರು, ಕೊರೊನಾ ಸೋಂಕಿತರುದಿನೇದಿನೆ ಹೆಚ್ಚುತ್ತಿದ್ದು, ಅದರಲ್ಲೂ ಆಕ್ಸಿಜನ್‌ಅವಲಂಬಿತರ ಸಂಖ್ಯೆಯೂ ಹೆಚ್ಚಳವಾಗುತ್ತಿದೆ ಎಂದುವಿವರಿಸಿದರು.
ಆಕ್ಸಿಜನ್ ಶೇ.25 ಆರೋಗ್ಯ ಸೇವೆಗೆ: ಪ್ರಸ್ತುತಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರದಲ್ಲಿ 200, ಗೌರಿಬಿದನೂರಿ ನಲ್ಲಿ 100, ಇತರೆ ತಾಲೂಕು ಕೇಂದ್ರಗಳಲ್ಲಿ ತಲಾ50 ಆಕ್ಸಿಜನ್ ಹಾಸಿಗೆಗಳು ಕೊರೊನಾ ಸೋಂಕಿತರಚಿಕಿತ್ಸೆಗೆ ಲಭ್ಯವಿವೆ. ಆ ಹಾಸಿಗೆಗಳಲ್ಲಿ ಶೇ.75ಹಾಸಿಗೆಗಳು ಭರ್ತಿ ಆಗಿದ್ದು, ಶೇ.25 ಆರೋಗ್ಯಸೇವೆಗೆ ಲಭ್ಯವಿವೆ ಎಂದು ಹೇಳಿದರು.
ಮುನ್ನೆಚ್ಚರಿಕೆ ಕ್ರಮ: ಮುಂದಿನ ದಿನಗಳಲ್ಲಿ ಸೋಂಕುಹೆಚ್ಚಾದಲ್ಲಿ ಪರಿಸ್ಥಿತಿ ಕಷ್ಟ ಆಗಬಾರದು ಎಂಬಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾ ಉಸ್ತುವಾರಿ ಸಚಿವಡಾ.ಸುಧಾಕರ್ ನಿರ್ದೇಶನದಂತೆ ಕಾಮಗಾರಿಪೂರ್ಣಗೊಂಡು ಉದ್ಘಾಟನೆಗೆ ಸಿದ್ಧವಿರುವ ಜೈನ್‌ಆಸ್ಪತ್ರೆಯನ್ನು ಕೋವಿಡ್ ಆಸ್ಪತ್ರೆಯನ್ನಾಗಿ ಮಾಡಲುಯೋಜಿಸಲಾಗಿದೆ ಎಂದು ವಿವರಿಸಿದರು.
ಮೇ 5 ರಂದು ಜಿಲ್ಲಾಡಳಿತದ ವಶಕ್ಕೆ ಆಸ್ಪತ್ರೆನೀಡುವುದಾಗಿ ಆಸ್ಪತ್ರೆಯ ಟ್ರಸ್ಟಿಗಳು ಭರವಸೆನೀಡಿರುವುದು ಅಭಿನಂದನಾರ್ಹ. ಮುಂದಿನದಿನಗಳಲ್ಲಿ ಸಂಕಷ್ಟ ಎದುರಾಗಿ ಅವಶ್ಯಕತೆಬಿದ್ದಲ್ಲಿ ಜಿಲ್ಲಾಡಳಿತ ಜೈನ್ ಆಸ್ಪತ್ರೆಯ ಅಮೂಲ್ಯಕೊಡುಗೆ ಸದ್ವಿನಿಯೋಗ ಮಾಡಿಕೊಳ್ಳಲಿದೆಎಂದು ತಿಳಿಸಿದರು.
ಕೋವಿಡ್ನ ನಿಯಮ ಪಾಲಿಸಿ: ಜನತಾ ಕರ್ಫ್ಯೂಅವ ಧಿಯಲ್ಲಿ ರಾಜ್ಯ ಸರ್ಕಾರದ ಕೋವಿಡ್‌ಮಾರ್ಗಸೂಚಿಗಳ ಅನ್ವಯ ಜಿಲ್ಲಾಡಳಿತದ ಅಧಿ àನದಕಚೇರಿಗಳು ಕಾರ್ಯನಿರ್ವಹಿಸಿ ಜನರ ಕೆಲಸ ಕಾರ್ಯಗಳಿಗೆನೆರವಾಗುವಂತೆ ಹಾಗೂ ಕೋವಿಡ್ ಕರ್ತವ್ಯಕ್ಕೆನಿಯೋಜನೆಗೊಂಡಿರುವ ಅ ಧಿಕಾರಿ, ಸಿಬ್ಬಂದಿ 24×7ಜನರ ಸೇವೆಗೆ ಸಿದ್ಧರಿರಬೇಕೆಂದು ಅ ಧಿಕಾರಿಗಳಿಗೆಸೂಚನೆ ನೀಡಿದರು.
ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರಕಾಪಾಡುವುದು ಸೇರಿ ಕೋವಿಡ್ ಮಾರ್ಗಸೂಚಿಕಟ್ಟುನಿಟ್ಟಾಗಿ ಪಾಲಿಸಿ, ಕರ್ಫ್ಯೂ ಅವ ಧಿಯಲ್ಲಿಕೊರೊನಾ ಸುಗಮವಾಗಿ ನಿರ್ಮೂಲನೆಮಾಡಲು ಜಿಲ್ಲೆಯ ನಾಗರಿಕರು ಸಹಕರಿಸುವಂತೆಮಾನವಿ ಮಾಡಿದರು.ಜಿಲ್ಲಾ ಆರೋಗ್ಯಾಧಿ ಕಾರಿ ಡಾ.ಇಂದಿರಾ ಆರ್.ಕಬಾಡೆ, ತಾಲೂಕು ನೋಡಲ್ ಅ ಧಿಕಾರಿ ಭಾಸ್ಕರ್,ಉಪವಿಭಾಗಾ ಧಿಕಾರಿ ರಘುನಂದನ್, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ರಮೇಶ್‌ಬಾಬು, ತಹಶೀಲ್ದಾರ್ ಗಣಪತಿಶಾಸ್ತ್ರಿ, ಜೈನ್ ಆಸ್ಪತ್ರೆಯ ಟ್ರಸ್ಟಿಗಳಾದ ಡಾ.ನರಪತ್‌ಸೋಲಂಕಿ, ಉತ್ತಮ್ ಚಂದ್ ಕೊಠಾರಿ,ಡಾ.ಪ್ರಿಯಾಂಕಾ ಸೋಲಂಕಿ, ರಾಕೇಶ್‌ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chikkaballapura: ಕಾರಿನಲ್ಲಿ ಸಾಗಿಸುತ್ತಿದ್ದ 7.20 ಲಕ್ಷ ರೂ. ಮೌಲ್ಯದ ಗಾಂಜಾ ವಶ
Karnataka Govt: ಹಿಂದೂಗಳ ದಮನಕ್ಕೆ ಮುಂದಾದ ಕಾಂಗ್ರೆಸ್: ಆರ್. ಅಶೋಕ್ ಆರೋಪ
Dr. Sudhakar: ಹಿಂದಿನ ಕಾಂಗ್ರೆಸ್‌ರ ಸರ್ಕಾರದ ಭ್ರಷ್ಟಾಚಾರ ಬಿಚ್ಚಿಡುವೆ
Chikkaballapura: ನಮ್ಮನ್ನು ಖಳ ನಾಯಕರನ್ನಾಗಿ ಮಾಡಲು ಹೊರಟಿದ್ದಾರೆ: ಸಂಸದ ಡಾ.ಕೆ.ಸುಧಾಕರ್
Chikkaballapur: ಪರಿಹಾರ ಕೊಡದ ಎಸಿ ಕಚೇರಿ ಸಂತ್ರಸ್ತರಿಂದ ಜಪ್ತಿ!
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Dandeli: ಬೇಡರ ಶಿರಗೂರಿನ ರೈತರ ಗದ್ದೆಗಳಲ್ಲಿ ಮತ್ತೆ ಕಾಣಿಕೊಂಡ ಕಾಡಾನೆಗಳು
IPL Mega Auction: ಮೊದಲ ದಿನದ ಹರಾಜಿನ ಬಳಿಕ ಆರ್ ಸಿಬಿ ತಂಡ ಹೀಗಿದೆ ನೋಡಿ
Arrested: ಹೊಯ್ಸಳ ಪೊಲೀಸ್ ಮೇಲೆ ಹಲ್ಲೆ; ಬಂಧನ
Sambhal Violence: ಮೃತರ ಸಂಖ್ಯೆ ನಾಲ್ಕಕ್ಕೆ, ಇಂಟರ್ನೆಟ್ ಸ್ಥಗಿತ, ನಿಷೇಧಾಜ್ಞೆ ಜಾರಿ
Bengaluru: ಮನೆಯ ಮುಂದೆ ಕುಳಿತು ಮೊಬೈಲ್ ನೋಡುತ್ತಿದ್ದ ವ್ಯಕ್ತಿಗೆ ಕಾರು ಡಿಕ್ಕಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.