ಜಿಪಂ-ತಾಪಂ ಸದಸ್ಯ ಸ್ಥಾನಕ್ಕೆ ಮೀಸಲಾತಿ ನಿಗದಿ
Team Udayavani, May 2, 2021, 6:33 PM IST
ಬಳ್ಳಾರಿ: ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿಯ ಕ್ಷೇತ್ರ ಮರುವಿಂಗಡಣೆ ಮಾಡಿದ್ದ ರಾಜ್ಯ ಚುನಾವಣಾ ಆಯೋಗ ಇದೀಗ ಆಯಾ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿಗೆ ಸದಸ್ಯ ಸ್ಥಾನಗಳು, ಮೀಸಲಾತಿಯನ್ನು ನಿಗದಿಪಡಿಸಿದೆ. ಜತೆಗೆ ಶೇ.50ರಷ್ಟು ಮಹಿಳೆಯರಿಗೂ ಮೀಸಲಾತಿಯನ್ನೂ ನಿಗದಿಪಡಿಸಿದೆ. ಗಣಿನಾಡು ಬಳ್ಳಾರಿ ಜಿಲ್ಲೆಯನ್ನು ವಿಭಜಿಸಿ ಪ್ರತ್ಯೇಕ ವಿಜಯನಗರ ಜಿಲ್ಲೆ ರಚನೆಯಾದಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ಯ ಇಲಾಖೆಯು ಅವಿಭಜಿತ ಬಳ್ಳಾರಿ ಜಿಲ್ಲೆಯಲ್ಲಿದ್ದ ಜಿಪಂ, ತಾಪಂ ಸದಸ್ಯ ಸ್ಥಾನಗಳನ್ನು ಬೇರ್ಪಡಿಸಿ ಉಭಯ ಜಿಲ್ಲೆಗಳಿಗೆ ಪ್ರತ್ಯೇಕಗೊಳಿಸಿದೆ.
ಅದರಂತೆ ರಾಜ್ಯ ಚುನಾವಣಾ ಆಯೋಗವು ಬಳ್ಳಾರಿ ಜಿಲ್ಲೆಯ ಐದು ತಾಲೂಕುಗಳಿಗೆ 24, ವಿಜಯನಗರ ಜಿಲ್ಲೆಯ ಆರು ತಾಲೂಕುಗಳಿಗೆ 31 ಜಿಪಂ ಸದಸ್ಯ ಸ್ಥಾನಗಳನ್ನು ನಿಗದಿಪಡಿಸಿದೆ. ಇನ್ನು ಉಭಯ ಜಿಲ್ಲೆಗಳ 11 ತಾಲೂಕುಗಳಿಗೂ ತಾಪಂ ಸದಸ್ಯ ಸ್ಥಾನಗಳನ್ನು ನಿಗದಿಪಡಿಸಿರುವ ರಾಜ್ಯ ಚುನಾವಣಾ ಆಯೋಗ ಶೇ.50ರಷ್ಟು ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿರಿಸಿ ಶುಕ್ರವಾರ ಅಧಿ ಸೂಚನೆ ಹೊರಡಿಸಿದೆ. ಬಳ್ಳಾರಿಗೆ 24 ಜಿಪಂ ಸ್ಥಾನ: ಅವಿಭಜಿತ ಬಳ್ಳಾರಿ ಜಿಲ್ಲೆಯಲ್ಲಿ ಈ ಮೊದಲು 40 ಜಿಪಂ ಸದಸ್ಯ ಸ್ಥಾನಗಳು ಇದ್ದವು. ದಾವಣಗೆರೆ ಜಿಲ್ಲೆಯಲ್ಲಿದ್ದ ಹರಪನಹಳ್ಳಿ ತಾಲೂಕು 2019ರಲ್ಲಿ ಪುನಃ ಬಳ್ಳಾರಿ ಜಿಲ್ಲೆಗೆ ಸೇರ್ಪಡೆಯಾದ ಹಿನ್ನೆಲೆಯಲ್ಲಿ ಹರಪನಹಳ್ಳಿಯ 8 ಜಿಪಂ ಸದಸ್ಯರು ಬಳ್ಳಾರಿಗೆ ಜಿಲ್ಲೆಗೆ ಸೇರಿದ್ದ ಸದಸ್ಯ ಸ್ಥಾನಗಳ ಸಂಖ್ಯೆ 48ಕ್ಕೆ ಏರಿಕೆಯಾಯಿತು. ಇದಾಗಿ ಎರಡು ವರ್ಷ ಕಳೆಯುವುದರೊಳಗೆ ಹೊಸಪೇಟೆ ಕೇಂದ್ರ ಸ್ಥಾನವಾಗಿಸಿ ಪ್ರತ್ಯೇಕ ವಿಜಯನಗರ ಜಿಲ್ಲೆ ರಚನೆಯಾಗಿದ್ದು, ಜಿಪಂ ಕ್ಷೇತ್ರ ಕಡಿಮೆಯಾಗಿವೆ. ಬಳ್ಳಾರಿ ಜಿಲ್ಲೆಗೆ 24 ಜಿಪಂ ಸದಸ್ಯ ಸ್ಥಾನಗಳನ್ನು ನಿಗದಿಪಡಿಸಿರುವ ರಾಜ್ಯ ಚುನಾವಣಾ ಆಯೋಗ ಈ ಪೈಕಿ 12 ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿರಿಸಿದೆ. ಪರಿಶಿಷ್ಟ ಜಾತಿಗೆ 5 ಸ್ಥಾನಗಳು (3 ಮಹಿಳೆಯರಿಗೆ ಮೀಸಲು), ಪರಿಶಿಷ್ಟ ಪಂಗಡಕ್ಕೆ 6 (3 ಮಹಿಳೆಯರಿಗೆ), ಹಿಂದುಳಿದ ಅ ವರ್ಗಕ್ಕೆ 1 (1 ಮಹಿಳೆಯರಿಗೆ), ಹಿಂದುಳಿದ ಬ ವರ್ಗಕ್ಕೆ ಯಾವುದೇ ಸ್ಥಾನ ಮೀಸಲಿರಿಸಿಲ್ಲ.
ಸಾಮಾನ್ಯಕ್ಕೆ 12 (5 ಮಹಿಳೆಯರಿಗೆ) ಸ್ಥಾನಗಳನ್ನು ಮೀಸಲಿರಿಸಿ ರಾಜ್ಯ ಚುನಾವಣಾ ಆಯೋಗದ ಅಧಿಧೀನ ಕಾರ್ಯದರ್ಶಿ ಎನ್. ಆರ್. ನಾಗರಾಜ್ ಅವರು ಅಧಿ ಸೂಚನೆ ಹೊರಡಿಸಿದ್ದಾರೆ. ವಿಜಯನಗರಕ್ಕೆ 31 ಸ್ಥಾನಗಳು; ಹೊಸಪೇಟೆ ಜಿಲ್ಲಾ ಕೇಂದ್ರವಾಗಿಸಿ ನೂತನವಾಗಿ ರಚನೆಯಾಗಿರುವ ವಿಜಯನಗರ ಜಿಲ್ಲೆಗೆ 31 ಜಿಪಂ ಸದಸ್ಯ ಸ್ಥಾನಗಳನ್ನು ನಿಗದಿಪಡಿಸಲಾಗಿದೆ. ಈ ಪೈಕಿ 16 ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿರಿಸಿದೆ. ಇದರಲ್ಲಿ ಪರಿಶಿಷ್ಟ ಜಾತಿಗೆ 8 (4 ಮಹಿಳೆಯರಿಗೆ) ಸ್ಥಾನಗಳನ್ನು ಮೀಸಲಿರಿಸಲಾಗಿದೆ. ಪರಿಶಿಷ್ಟ ಪಂಗಡಕ್ಕೆ 6 (3 ಮಹಿಳೆಯರಿಗೆ), ಹಿಂದುಳಿದ ಅ ವರ್ಗಕ್ಕೆ 1 (1 ಮಹಿಳೆಯರಿಗೆ), ಹಿಂದುಳಿದ ಬ ವರ್ಗಕ್ಕೆ ಯಾವುದೇ ಸ್ಥಾನವನ್ನು ಮೀಸಲಿರಿಸಿಲ್ಲ. ಸಾಮಾನ್ಯ ವರ್ಗಕ್ಕೆ 16 ಸ್ಥಾನಗಳನ್ನು ಮೀಸಲಿರಿಸಲಾಗಿದ್ದು ಇದರಲ್ಲಿ 8 ಮಹಿಳೆಯರಿಗೆ ಮೀಸಲಿರಿಸಲಾಗಿದೆ.
ಬಳ್ಳಾರಿ ಜಿಲ್ಲಾ ತಾಪಂ; ಬಳ್ಳಾರಿ ತಾಲೂಕು ತಾಪಂಗೆ 17 ಸದಸ್ಯ ಸ್ಥಾನಗಳನ್ನು ನಿಗದಿಪಡಿಸಿರುವ ರಾಜ್ಯ ಚುನಾವಣಾ ಆಯೋಗವು ಈ ಪೈಕಿ 9 ಸದಸ್ಯ ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿರಿಸಿದೆ. ಇದರಲ್ಲಿ ಪರಿಶಿಷ್ಟ ಜಾತಿಗೆ 4 (2 ಮಹಿಳೆ), ಪರಿಶಿಷ್ಟ ಪಂಗಡಕ್ಕೆ 5 (3 ಮಹಿಳೆ), ಹಿಂದುಳಿದ ಅ, ಬ ವರ್ಗಕ್ಕೆ ಯಾವುದೇ ಸ್ಥಾನಗಳು ಮೀಸಲಿರಿಸದೆ, ಸಾಮಾನ್ಯಕ್ಕೆ 8 (4) ಮಹಿಳೆಯರಿಗೆ ಮೀಸಲಿರಿಲಾಗಿದೆ. ಸಿರುಗುಪ್ಪ ತಾಪಂಗೆ 16 ಸದಸ್ಯ ಸ್ಥಾನಗಳಲ್ಲಿ 8 ಮಹಿಳೆಯರಿಗೆ ಮೀಸಲಾಗಿದೆ. ಪರಿಶಿಷ್ಟ ಜಾತಿಗೆ 4 (2 ಮಹಿಳೆ), ಪರಿಶಿಷ್ಟ ಪಂಗಡಕ್ಕೆ 3 (2 ಮಹಿಳೆ), ಹಿಂದುಳಿದ ಅ ವರ್ಗಕ್ಕೆ 1 (1 ಮಹಿಳೆ), ಹಿಂದುಳಿದ ಬ ವರ್ಗಕ್ಕೆ ಯಾವುದೇ ಸ್ಥಾನ ಮೀಸಲಿರಿಸಿಲ್ಲ. ಸಾಮಾನ್ಯಕ್ಕೆ 8 (3 ಮಹಿಳೆ) ಸ್ಥಾನಗಳನ್ನು ಮೀಸಲಿರಿಸಲಾಗಿದೆ. ಸಂಡೂರು ತಾಪಂಗೆ 17 ಸದಸ್ಯ ಸ್ಥಾನಗಳಲ್ಲಿ 9 ಮಹಿಳೆಯರಿಗೆ ಮೀಸಲು, ಪರಿಶಿಷ್ಟ ಜಾತಿ 3 (2 ಮಹಿಳೆ), ಪರಿಶಿಷ್ಟ ಪಂಗಡ 5 (3 ಮಹಿಳೆ), ಹಿಂದುಳಿದ ಅ, ಬ ವರ್ಗಕ್ಕೆ ಯಾವುದೇ ಸ್ಥಾನಗಳನ್ನು ಮೀಸಲಿರಿಸಿಲ್ಲ. ಸಾಮಾನ್ಯಕ್ಕೆ 9 (4 ಮಹಿಳೆ) ಸದಸ್ಯ ಸ್ಥಾನಗಳನ್ನು ಮೀಸಲಿರಿಸಲಾಗಿದೆ.
ಕುರುಗೋಡು ತಾಪಂನ 11 (6 ಮಹಿಳೆ) ಸದಸ್ಯ ಸ್ಥಾನಗಳಲ್ಲಿ ಪರಿಶಿಷ್ಟ ಜಾತಿ 2(1 ಮಹಿಳೆ), ಪರಿಶಿಷ್ಟ ಪಂಗಡಕ್ಕೆ 3 (2 ಮಹಿಳೆ), ಸಾಮಾನ್ಯ ವರ್ಗಕ್ಕೆ 9 (4 ಮಹಿಳೆ) ಸ್ಥಾನಗಳು, ಕಂಪ್ಲಿ ತಾಪಂನ 11 (6 ಮಹಿಳೆ) ಸದಸ್ಯ ಸ್ಥಾನಗಳಲ್ಲಿ ಪರಿಶಿಷ್ಟ ಜಾತಿ 3 (3 ಮಹಿಳೆ), ಪರಿಶಿಷ್ಟ ಪಂಗಡ 1 (1 ಮಹಿಳೆ), ಹಿಂದುಳಿದ ಅ ವರ್ಗಕ್ಕೆ 1 (1 ಮಹಿಳೆ), ಸಾಮಾನ್ಯಕ್ಕೆ 6 (2 ಮಹಿಳೆ) ಸದಸ್ಯ ಸ್ಥಾನಗಳನ್ನು ಮೀಸಲಿರಿಸಲಾಗಿದೆ. ವಿಜಯಗರ ಜಿಲ್ಲೆ ತಾಪಂ; ಹೊಸಪೇಟೆ ತಾಲೂಕು 9 (5 ಮಹಿಳೆ) ಸದಸ್ಯ ಸ್ಥಾನಗಳು, ಪರಿಶಿಷ್ಟ ಜಾತಿ 3 (2 ಮಹಿಳೆ), ಪರಿಶಿಷ್ಟ ಪಂಗಡ 2 (1 ಮಹಿಳೆ), ಸಾಮಾನ್ಯ 4 (2 ಮಹಿಳೆ) ಸದಸ್ಯ ಸ್ಥಾನಗಳು. ಹ.ಬೊ.ಹಳ್ಳಿ ತಾಪಂ 12 (6 ಮಹಿಳೆ) ಸದಸ್ಯ ಸ್ಥಾನಗಳಲ್ಲಿ ಪರಿಶಿಷ್ಟ ಜಾತಿ 3 (2 ಮಹಿಳೆ), ಪರಿಶಿಷ್ಟ ಪಂಗಡ 2 (1 ಮಹಿಳೆ), ಹಿಂದುಳಿದ ಅ ವರ್ಗ 1 (1 ಮಹಿಳೆ), ಸಾಮಾನ್ಯ 6 (2 ಮಹಿಳೆ) ಸದಸ್ಯ ಸ್ಥಾನಗಳು. ಕೂಡ್ಲಿಗಿ ತಾಪಂ 15 (8 ಮಹಿಳೆ) ಸದಸ್ಯ ಸ್ಥಾನಗಳು, ಪರಿಶಿಷ್ಟ ಜಾತಿ 3 (2 ಮಹಿಳೆ), ಪರಿಶಿಷ್ಟ ಪಂಗಡ 5 (3 ಮಹಿಳೆ), ಸಾಮಾನ್ಯ 7 (3 ಮಹಿಳೆ) ಸದಸ್ಯ ಸ್ಥಾನಗಳು. ಹರಪನಹಳ್ಳಿ ತಾಪಂ 21 (11 ಮಹಿಳೆ) ಸದಸ್ಯ ಸ್ಥಾನಗಳು, ಪರಿಶಿಷ್ಟ ಜಾತಿ 6 (3 ಮಹಿಳೆ), ಪರಿಶಿಷ್ಟ ಪಂಗಡ 4 (2 ಮಹಿಳೆ), ಸಾಮಾನ್ಯ 11 (6 ಮಹಿಳೆ) ಸದಸ್ಯ ಸ್ಥಾನಗಳು. ಹಡಗಲಿ ತಾಪಂ 14 (7 ಮಹಿಳೆ) ಸ್ಥಾನಗಳು, ಪರಿಶಿಷ್ಟ ಜಾತಿ 4 (2 ಮಹಿಳೆ), ಪರಿಶಿಷ್ಟ ಪಂಗಡ 1 (1 ಮಹಿಳೆ), ಹಿಂದುಳಿದ ಅ ವರ್ಗ 2(1 ಮಹಿಳೆ), ಸಾಮಾನ್ಯಕ್ಕೆ 7 (3 ಮಹಿಳೆ) ಸ್ಥಾನಗಳು. ಕೊಟ್ಟೂರು ತಾಪಂಗೆ 11 (6 ಮಹಿಳೆ) ಸದಸ್ಯ ಸ್ಥಾನಗಳು, ಪರಿಶಿಷ್ಟ ಜಾತಿ 3 (2 ಮಹಿಳೆ), ಪರಿಶಿಷ್ಟ ಪಂಗಡ 2 (1 ಮಹಿಳೆ), ಸಾಮಾನ್ಯಕ್ಕೆ 6 (3 ಮಹಿಳೆ) ಸದಸ್ಯ ಸ್ಥಾನಗಳನ್ನು ಮೀಸಲಿರಿಸಿ ರಾಜ್ಯ ಚುನಾವಣಾ ಆಯೋಗ ಅಧಿ ಸೂಚನೆ ಹೊರಡಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bellary: ತುಕಾರಾಂ ಆಡಳಿತದಲ್ಲಿ ಸಂಡೂರು ಅಭಿವೃದ್ಧಿಯಾಗಿದೆ: ಡಿಕೆ ಶಿವಕುಮಾರ್
Waqf Notice: ಸಿಎಂ ಪಿತೂರಿ, ಸಚಿವ ಜಮೀರ್ ದ್ರೋಹದಿಂದ ಜಮೀನು ಕಬಳಿಸುವ ಕೆಲಸ: ವಿಜಯೇಂದ್ರ
By Election: ಮಾತಿನ ಭರದಲ್ಲಿ ವಿಜಯೇಂದ್ರಗೂ ಪಾಲು ಎಂದ ಶ್ರೀರಾಮುಲು!
Modi,BSY ಬಗ್ಗೆ ಮಾತನಾಡುವ ಮೊದಲು ಎಚ್ಚರಿಕೆ ಇರಲಿ: ಸಿದ್ದರಾಮಯ್ಯ ವಿರುದ್ಧ ವಿಜಯೇಂದ್ರ ಕಿಡಿ
Kotturu: ಹಸಿರು ಪಟಾಕಿ ಹೆಸರಿನಲ್ಲಿ ನಿಯಮ ಉಲ್ಲಂಘಿಸಿ ಮಾಮೂಲಿ ಪಟಾಕಿ ಮಾರಾಟ…
MUST WATCH
ಹೊಸ ಸೇರ್ಪಡೆ
Vyasanagar: ಮಣ್ಣಿನ ಒಳ ರಸ್ತೆಗಳಿಗೆ ಬೇಕು ಬೀದಿದೀಪ
Mangalore: ಅಡ್ಯಾರ್ ಕಣ್ಣೂರಿನಲ್ಲಿ ತ್ಯಾಜ್ಯ ಸುಡುವಿಕೆಯಿಂದ ಪರಿಸರ ಮಾಲಿನ್ಯ
Dandeli ನಗರ ಠಾಣೆಯ ತನಿಖಾ ವಿಭಾಗದ ಪಿಎಸ್ಐಯಾಗಿ ಕಿರಣ್ ಪಾಟೀಲ್ ಅಧಿಕಾರ ಸ್ಬೀಕಾರ
Thirthahalli: ತುಂಗಾ ನದಿಯಲ್ಲಿ ಅಪರಿಚಿತ ಮೃತದೇಹ ಪತ್ತೆ
Waqf issue: ಅಲ್ಲಾನ ಹೆಸರಲ್ಲಿ ಅಲ್ಲಾನಿಗೆ ದೋಖಾ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.