ಜಮಖಂಡಿಯಲ್ಲಿ 100 ಹಾಸಿಗೆಗಳ ಕೋವಿಡ್ ಸೆಂಟರ್
Team Udayavani, May 2, 2021, 7:04 PM IST
ಜಮಖಂಡಿ: ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರಕಾರ ಜಿಲ್ಲೆಗೊಂದು ಕೊರೊನಾ ಸೆಂಟರ್ ನಿರ್ಮಿಸಿದೆ. ಆದರೆ, ತಾಲೂಕಿನಲ್ಲಿ ಸಹಕಾರಿ ತತ್ವದಡಿಯಲ್ಲಿ ಕೊರೊನಾ ಸೆಂಟರ್ ಆರಂಭಿಸುವ ಚಿಂತನೆಗಳು ನಡೆದಿವೆ.
ತಾಲೂಕಿನಲ್ಲಿ ಸರಕಾರಿ ಇಲಾಖೆ, ಭಾರತೀಯ ವೈದ್ಯಕೀಯ ಸಂಸ್ಥೆ ಹಾಗೂ ಸಾರ್ವಜನಿಕರ ಸಹಕಾರದೊಂದಿಗೆ 100 ಹಾಸಿಗೆಗಳ ಕೊರೊನಾ ಸೆಂಟರ್ ಆರಂಭಿಸುವ ಚಿಂತನೆ ನಡೆದಿದ್ದು, ಎರಡು ದಿನಗಳಲ್ಲಿ ರೂಪರೇಷೆ ಪೂರ್ಣಗೊಳ್ಳಲಿವೆ. ಕೊರೊನಾ ಸೋಂಕಿತರಿಗೆ ದಿನದ 24 ಗಂಟೆ ಸೇವೆ ಲಭಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗುತ್ತಿದ್ದು, ಸರಕಾರಿ ಯಂತ್ರ ಮತ್ತು ಖಾಸಗಿ ಸಂಸ್ಥೆಗಳು ಅಂದಾಜು 70:30 ಅನುಪಾತದಲ್ಲಿ ಕೆಲಸ ನಡೆಯಲಿದೆ.
ಶೇ.70ರ ಅನುಪಾತದಲ್ಲಿ:
100 ಹಾಸಿಗೆ ಕೊರೊನಾ ಸೆಂಟರ್ ಆರಂಭಕ್ಕೆ ಚಿಂತನೆಗಳು ನಡೆಯುತ್ತಿದ್ದು, ಆರೋಗ್ಯ, ಕಂದಾಯ ಇಲಾಖೆ, ನಗರಸಭೆ ಮತ್ತು ಪೊಲೀಸ್ ಇಲಾಖೆ ಆರಕ್ಷಕರು ಶೇ. 70ರ ಅನುಪಾತದಲ್ಲಿ ಕೆಲಸ ನಿರ್ವಹಿಸಲಿದ್ದಾರೆ. ಆರೋಗ್ಯ ಇಲಾಖೆ ವಿವಿಧ ವಿಭಾಗಗಳ ವೈದ್ಯರು, ನಸ್ ìಗಳು, ಆರೋಗ್ಯ ಮೇಲ್ವಿಚಾರಕರು, ಆಶಾ ಕಾರ್ಯಕರ್ತೆಯರು ಸೇವೆ ಮಾಡಲಿದ್ದಾರೆ. ಕಂದಾಯ ಇಲಾಖೆ 100 ಹಾಸಿಗೆ ಕೊರೊನಾ ಸೆಂಟರಕ್ಕೆ ಅಗತ್ಯ ಸುಸಜ್ಜಿತ ಕಟ್ಟಡ ನೀಡಲಿದೆ. ಪೊಲೀಸ್ ಇಲಾಖೆ ಕೊರೊನಾ ಸೆಂಟರ್ ಒಳ-ಹೊರಾಂಗಣ ಭದ್ರತೆ ವಹಿಸಿಕೊಳ್ಳಲಿದೆ. ನಗರಸಭೆ ಕೊರೊನಾ ಸೆಂಟರ್ ಒಳಗೆ- ಹೊರಗಡೆ ಸ್ವತ್ಛತೆ ಕಾಪಾಡಲಿದೆ. ಆಶಾ ಕಾರ್ಯಕರ್ತೆಯರು ರೋಗಿಗಳ ಚಲನವಲನ-ಆರೋಗ್ಯ ವಿಚಾರಣೆ ನಡೆಸಲಿದ್ದಾರೆ.
ಶೇ.30ರ ಅನುಪಾತ:
ಸಹಕಾರ ತತ್ವದಡಿಯಲ್ಲಿ ನಿರ್ಮಾಣವಾಗಲಿರುವ ಕೊರೊನಾ ಸೆಂಟರ್‌ದಲ್ಲಿ ಖಾಸಗಿ ವೈದ್ಯರ ಪಾತ್ರ ಬಹುಮುಖ್ಯ. ದಿನದ 24 ಗಂಟೆ ಸೇವೆ ನಿರ್ವಹಿಸುವ ಕೊರೊನಾ ಸೆಂಟರ್ ದಲ್ಲಿ 8 ಗಂಟೆ ನಿಗದಿಪಡಿಸಿದ ಅವಧಿ ಯಲ್ಲಿ ಮೂರು ವಿಭಾಗದಲ್ಲಿ ವೈದ್ಯರು, ನರ್ಸ್‌ಗಳ ತಂಡ ಕೆಲಸ ನಿರ್ವಹಿಸುವ ಯೋಜನೆ ಇದಾಗಿದೆ. 24 ಗಂಟೆ ಸೇವೆ ಸಲ್ಲಿಸುವ ಕೊರೊನಾ ಸೆಂಟರ್‌ನಲ್ಲಿ ರೋಗಿಗಳಿಗೆ ನೀರು, ವಿದ್ಯುತ್, ಶೌಚಾಲಯ, ಸ್ವತ್ಛತೆ, ಭದ್ರತೆ, ಉಪಹಾರ, ಊಟದ ವ್ಯವಸ್ಥೆ ನಡೆಯಲಿದೆ. ಈಗಾಗಲೇ ಶಾಸಕ ಆನಂದ ನ್ಯಾಮಗೌಡ ನೇತೃತ್ವದಲ್ಲಿ ಕಂದಾಯ, ಆರೋಗ್ಯ ಇಲಾಖೆ, ನಗರಸಭೆ, ಪೊಲೀಸ್ ಮತ್ತು ಭಾರತೀಯ ವೈದ್ಯಕೀಯ ಸಂಸ್ಥೆಯ ಖಾಸಗಿ ಆಸ್ಪತ್ರೆಗಳ ವೈದ್ಯರ ಜಂಟಿ ಸಭೆ ನಡೆದಿದ್ದು, ಬಹುತೇಕ ಯಶಸ್ವಿಯಾಗಿದೆ. ತಾಲೂಕಿನ ಕೊರೊನಾ ಸೋಂಕಿತರಿಗೆ ಉತ್ತಮ ಸೇವೆ ಲಭ್ಯವಾಗಲಿದೆ.
ಕಂದಾಯ ಇಲಾಖೆ 100 ಹಾಸಿಗೆಯ ಸುಸಜ್ಜಿತ ಕಟ್ಟಡ ನೀಡಲಿದೆ. ಆರೋಗ್ಯ ಇಲಾಖೆ ಆಕ್ಸಿಜನ್, ರೋಗಿಗಳಿಗೆ ಪಿಪಿ ಕಿಟ್, ಔಷಧಿ ಸಹಿತ ಇತರೇ ಪರಿಕರ ನೀಡಲಿದೆ. ಪೊಲೀಸ್ ಇಲಾಖೆ ಸುರಕ್ಷತೆ, ಭದ್ರತೆ ವ್ಯವಸ್ಥೆ ಮಾಡಲಿದೆ. ನಗರಸಭೆ ಕಾರ್ಮಿಕರು ಸ್ವತ್ಛತೆ ಕಾಪಾಡಲಿದೆ. ಖಾಸಗಿ ವೈದ್ಯರ ತಂಡ ದಿನದ 24 ಗಂಟೆ ರೋಗಿಗಳಿಗೆ ಚಿಕಿತ್ಸೆ ನೀಡಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Achievement: ಮಹಾಲಿಂಗಪುರದ ಬಿಸನಾಳ ಹಾಲಿನ ಡೇರಿಗೆ ಕೇಂದ್ರದ ಪ್ರಶಸ್ತಿ ಗರಿ!
Bagalakote: ಪ್ರೇಯಸಿ ಗೆಳತಿ ಹ*ತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!
70 ವಿದ್ಯಾರ್ಥಿಗಳಿಗೆ ಒಂದೇ ಶೌಚಾಲಯ; ಮೂತ್ರ ವಿಸರ್ಜನೆಗೆ ಬಯಲೇ ಗತಿ
Mudhol: ಕೈಕೊಟ್ಟ ಬೆಳೆ… ಸಾಲಬಾಧೆಗೆ ಹೆದರಿ ನೇಣಿಗೆ ಶರಣಾದ ರೈತ
Mudhol: ಟ್ರ್ಯಾಕ್ಟರ್ ಹಾಗೂ ಬೊಲೆರೋ ಮುಖಾಮುಖಿ ಡಿಕ್ಕಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
ಮಕ್ಕಳನ್ನು ಶಾಲೆಗೆ ಸೇರಿಸೋದು ಮುಖ್ಯವಲ್ಲ, ನಿತ್ಯವೂ ಕಳುಹಿಸಿ… :ಸಚಿವ ಮಧು ಬಂಗಾರಪ್ಪ
Protest: ಡಿ.10 ರಂದು ಸುವರ್ಣಸೌಧಕ್ಕೆ 5 ಸಾವಿರ ಟ್ರ್ಯಾಕ್ಟರ್ ಮುತ್ತಿಗೆ; ಕೂಡಲಸಂಗಮ ಶ್ರೀ
Drink & Drive Case: ಕುಡಿದು ವಾಹನ ಚಾಲನೆ; ʼಮಂಜುಮ್ಮೆಲ್ ಬಾಯ್ಸ್ʼ ನಟ ಬಂಧನ
Dandeli: ಬೇಡರ ಶಿರಗೂರಿನ ರೈತರ ಗದ್ದೆಗಳಲ್ಲಿ ಮತ್ತೆ ಕಾಣಿಕೊಂಡ ಕಾಡಾನೆಗಳು
IPL Mega Auction: ಮೊದಲ ದಿನದ ಹರಾಜಿನ ಬಳಿಕ ಆರ್ ಸಿಬಿ ತಂಡ ಹೀಗಿದೆ ನೋಡಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.