ವಿಟ್ಲ ಪಶು ಆಸ್ಪತ್ರೆ: ನೀರೂ ಇಲ್ಲ, ಸಿಬಂದಿಯೂ ಇಲ್ಲ


Team Udayavani, May 3, 2021, 3:00 AM IST

Untitled-1

ವಿಟ್ಲ: ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ವಿಟ್ಲ ಪಶು ಆಸ್ಪತ್ರೆಯಲ್ಲಿ ಮೂಲ ಸೌಕರ್ಯವೇ ಇಲ್ಲ. ನಾಗರಿಕರು ನಾಯಿ, ಕೋಳಿ, ಬೆಕ್ಕು, ಹಸು ಇತ್ಯಾದಿ ಸಾಕುಪ್ರಾಣಿಗಳನ್ನು ಚಿಕಿತ್ಸೆಗಾಗಿ ಈ ಪಶು ಆಸ್ಪತ್ರೆಗೆ ತಂದಾಗ ಚಿಕಿತ್ಸೆಯಾದ ಬಳಿಕ ಕೈತೊಳೆಯುವುದಕ್ಕೆ ಇಲ್ಲಿ ನೀರಿಲ್ಲ. ಇದೀಗ ಕೋವಿಡ್ ಭೀತಿಯಲ್ಲಿ ಆಗಾಗ ಕೈತೊಳೆಯಬೇಕು ಎಂಬ ಸೂಚನೆಯಿದ್ದರೂ ಪ್ರಯೋಜನವಿಲ್ಲದಾಗಿದೆ. ಸರಕಾರಿ ಅಧೀನದಲ್ಲಿರುವ ಈ ನಿರ್ಲಕ್ಷಿತ ಇಲಾಖೆಗೆ ಕನಿಷ್ಠ ನೀರಿನ ಸೌಲಭ್ಯವನ್ನು ಒದಗಿಸಲಾಗಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.

ವಿಟ್ಲ ಪಟ್ಟಣ ಪಂಚಾಯತ್‌ ನೀರು ಸರಬರಾಜು ವ್ಯವಸ್ಥೆಯನ್ನು ಹಿಂದೆ ಒದಗಿಸಿತ್ತು. ಇತ್ತೀಚೆಗೆ ತಾಂತ್ರಿಕ ಸಮಸ್ಯೆಯಿಂದ ಅಲ್ಲಿಗೆ ನೀರು ತಲುಪುತ್ತಿಲ್ಲ. ಈ ಬಗ್ಗೆ ಅಧಿಕೃತವಾಗಿ ಹಾಗೂ ನೇರವಾಗಿ ದೂರು ನೀಡಲಾಗಿದೆ. ನೀರು ಬಿಡುವ ಸಿಬಂದಿ, ಮುಖ್ಯಾಧಿಕಾರಿ, ಜನಪ್ರತಿನಿಧಿಗಳಿಗೂ ಇಲ್ಲಿ ನೀರಿಲ್ಲ ಎಂಬ ಮಾಹಿತಿಯಿದೆ. ಆದರೆ ಎತ್ತರ ಪ್ರದೇಶ ವಾದುದರಿಂದ ನೀರು ಅಲ್ಲಿಗೆ ಏರುತ್ತಿಲ್ಲ ಎಂಬ ಕಾರಣವಿದೆ. ಅದಕ್ಕೆ ಪರ್ಯಾಯ ವ್ಯವಸ್ಥೆ ಮಾಡಿಕೊಡಬೇಕು ಎಂಬುದು ಸಾಕುಪ್ರಾಣಿ ಮಾಲಕರ ಆಗ್ರಹ.

ವಿಟ್ಲ ಮೇಗಿನಪೇಟೆಯ ಸಮೀಪ ದಲ್ಲಿರುವ ಈ ಪಶು ಆಸ್ಪತ್ರೆ ವಿಟ್ಲ ಪೇಟೆಗಿಂತ ಎತ್ತರದಲ್ಲಿದೆ. ಅದು ನೀರು ಏರಲಾರದಷ್ಟು ಎತ್ತರ ಪ್ರದೇಶವಲ್ಲ.  ಒಂದು ವರ್ಷದ ಹಿಂದೆ ಸರಕಾರದ ಅನುದಾನದಲ್ಲೇ ಕೊಳವೆಬಾವಿ ಕೊರೆಸಲಾಗಿತ್ತು. ಆದರೆ ನೀರು ಸಿಗಲಿಲ್ಲ. ಅಲ್ಲಿಗೆ ಇಲಾಖೆ ಕೈತೊಳೆದುಬಿಟ್ಟಿದೆ. ಆಮೇಲೆ ತಿರುಗಿ ನೋಡಲಿಲ್ಲ. ಇಲಾ ಖೆಯಲ್ಲಿ ಅನುದಾನ ಇಲ್ಲ, ಸಿಬಂದಿ ಇಲ್ಲ, ಯಾವುದೇ ವ್ಯವಸ್ಥೆಯಿಲ್ಲ. ಈ ಇಲಾಖೆಯನ್ನು ಎಲ್ಲ ಪಕ್ಷದವರೂ ಎಲ್ಲ ಸರ ಕಾರಗಳೂ ತೀವ್ರವಾಗಿ ನಿರ್ಲಕ್ಷಿಸಿದ್ದು ನಿಜ.

ಕೆಲವು ದಿನಗಳ ಹಿಂದೆ ನಾಯಿಗಳಿಗೆ ವಾಂತಿ ಬೇಧಿ ರೋಗ ಹರಡಿತ್ತು. ನಾಯಿ ತಂದವರು ಕೈತೊಳೆಯಬೇಕು ಮತ್ತು ಸಿಬಂದಿ ನಾಯಿಗೆ ಚಿಕಿತ್ಸೆ ನೀಡಿ ಕೈತೊಳೆದೆ ಇನ್ನೊಂದು ನಾಯಿಯ ಆರೈಕೆ ಮಾಡಬೇಕು. ಒಂದೆರಡು ನಾಯಿಗೆ ಚಿಕಿತ್ಸೆ ನೀಡಿದಾಗಲೇ ಸಿಬಂದಿ ತಂದ ನೀರು ಖಾಲಿ ಯಾಗಿತ್ತು. ಪಕ್ಕದ ಮನೆಯಿಂದ ನೀರು ತರುವುದಕ್ಕೆ ಸಿಬಂದಿಯೂ ಇಲ್ಲಿಲ್ಲ. ಇಂತಹ ಸ್ಥಿತಿಯನ್ನು ಹೋಗಲಾಡಿಸಿ, ಸುಸ್ಥಿತಿಗೆ ತಲುಪಿಸಬೇಕಾಗಿದೆ.

ವಿಟ್ಲ ಪಶು ಆಸ್ಪತ್ರೆಯಲ್ಲಿ ಸಿಬಂದಿ ತಾವು ಕುಡಿಯಲು ತಂದ ಬಾಟ್ಲಿಯಿಂದ ಕೊಟ್ಟ ನೀರಲ್ಲಿ ಕೈತೊಳೆಯಬೇಕು. ಈ ಅವ್ಯವಸ್ಥೆ ಬಗ್ಗೆ ಸಂಬಂಧಪಟ್ಟವರಿಗೆ ತಿಳಿಸಿದ್ದೇನೆ. ಆದರೆ ನೀರು ಸರಬರಾಜು ಮಾಡುವ ಬಗ್ಗೆ ಗಮನಹರಿಸಿದವರೇ ಇಲ್ಲ. -ಸೀತಾರಾಮ ಶೆಟ್ಟಿ ಒಕ್ಕೆತ್ತೂರು

ಚಿಕಿತ್ಸೆಗಾಗಿ ನಾಯಿಯನ್ನು ತೆಗೆದು ಕೊಂಡು ಹೋದೆ. ನಾಯಿ ಮುಟ್ಟಿದ ಬಳಿಕ ಕೈತೊಳೆಯಬೇಕೆಂದು ಕೇಳಿದಾಗ ಸಿಬಂದಿ, ತಾನು ಕುಡಿಯಲು ತಂದ ನೀರಿನ ಬಾಟ್ಲಿಯನ್ನು ನೀಡಿದರು. ಇಲ್ಲಿಗೆ ನೀರು ಸರಬರಾಜಾಗುವುದಿಲ್ಲ ಎಂದರು. -ಚಂದ್ರಶೇಖರ

ಶೇ. 20ರಷ್ಟು ಸಿಬಂದಿ :

ಇಲ್ಲಿ ಪಶು ವೈದ್ಯಾಧಿಕಾರಿಯಿಲ್ಲ. 8 ತಿಂಗಳ ಹಿಂದೆ ಇದ್ದ ವೈದ್ಯರು ಭಡ್ತಿ ಹೊಂದಿ ಮಡಿಕೇರಿಗೆ ವರ್ಗಾಯಿಸಲ್ಪಟ್ಟಿದ್ದಾರೆ. ಆ ಬಳಿಕ ಆ ಹುದ್ದೆ ಖಾಲಿಯಾಗಿದೆ. ಅಡ್ಯನಡ್ಕದ ವೈದ್ಯಾಧಿಕಾರಿ ಇಲ್ಲಿ ಪ್ರಭಾರ ಜವಾಬ್ದಾರಿಯನ್ನು ಹೊತ್ತುಕೊಳ್ಳಬೇಕಾಗಿದೆ. ಇವರನ್ನು ಸೇರಿಸಿ ಇಲ್ಲಿ ಮೂವರೇ ತಾಂತ್ರಿಕ ಸಿಬಂದಿಯಿದ್ದು, ಓರ್ವ ಗ್ರೂಪ್‌ ಡಿ ನೌಕರ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇಲ್ಲಿಯ ಜಾನುವಾರು ವೈದ್ಯಾಧಿಕಾರಿ ಕನ್ಯಾನ ಮತ್ತು ಪರಿಯಾಲ್ತಡ್ಕ ಕೇಂದ್ರದ ಜವಾಬ್ದಾರಿಯನ್ನು ಹೊರಬೇಕು. ಹಿರಿಯ ಪಶು ವೈದ್ಯ ಪರೀಕ್ಷಕರಿಗೆ ಕುಡ್ತಮುಗೇರು ಕೇಂದ್ರವನ್ನು ನಿಭಾಯಿಸಬೇಕು. ಈ ಮೂವರು ತಾಂತ್ರಿಕ ಸಿಬಂದಿ 14 ಗ್ರಾಮಗಳ ಭಾರವನ್ನು ಹೊರಬೇಕು. ವಿಟ್ಲ, ವಿಟ್ಲಮುಟ್ನೂರು, ವಿಟ್ಲಪಟ್ನೂರು, ಕೊಳ್ನಾಡು, ಸಾಲೆತ್ತೂರು, ಕನ್ಯಾನ, ಕರೋಪಾಡಿ, ಪೆರುವಾಯಿ, ಮಾಣಿಲ, ಅಳಿಕೆ, ಕೇಪು, ಪುಣಚ, ಇಡಿRದು, ಕುಳ ಗ್ರಾಮಗಳಲ್ಲಿ ವಿಟ್ಲ, ಕುಡ್ತಮುಗೇರು, ಕನ್ಯಾನ, ಪರಿಯಾಲ್ತಡ್ಕದಲ್ಲಿ ಪಶು ಚಿಕಿತ್ಸಾ ಕೇಂದ್ರಗಳಿದ್ದು ಶೇ. 20ರಷ್ಟು ಸಿಬಂದಿಯಿದ್ದಾರೆ. ಉಳಿದ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವವರೂ ಇಲ್ಲವಾಗಿದೆ.

 

-ಉದಯಶಂಕರ್‌ ನೀರ್ಪಾಜೆ

ಟಾಪ್ ನ್ಯೂಸ್

BBK11: ಚೈತ್ರಾ ಅವರೇ ನನ್ನ ಬಾಸ್.. ಅವರ ಹೆಜ್ಜೆ ಫಾಲೋ ಮಾಡ್ತೇನೆ ಎಂದ ರಜತ್

BBK11: ಚೈತ್ರಾ ಅವರೇ ನನ್ನ ಬಾಸ್.. ಅವರ ಹೆಜ್ಜೆ ಫಾಲೋ ಮಾಡ್ತೇನೆ ಎಂದ ರಜತ್

Uttar Pradesh ಈಗ ರಾಜಕಾರಣಿಗಳಿಂದ “ಬಿಳಿಟವಲ್‌’ ರಾಜಕೀಯ!

Uttar Pradesh ಈಗ ರಾಜಕಾರಣಿಗಳಿಂದ “ಬಿಳಿಟವಲ್‌’ ರಾಜಕೀಯ!

Andhra Pradesh: ಲಡ್ಡು ಪ್ರಸಾದ ವಿವಾದ: ತಿರುಪತಿಗೆ ಎಸ್‌ಐಟಿ ಭೇಟಿ

Andhra Pradesh: ಲಡ್ಡು ಪ್ರಸಾದ ವಿವಾದ: ತಿರುಪತಿಗೆ ಎಸ್‌ಐಟಿ ಭೇಟಿ

Belgavi-Roberry

Belagavi: ದೂರು ಕೊಟ್ಟವರ ಮೊದಲು ಬಂಧಿಸಿ ಬಳಿಕ ನೈಜ ದರೋಡೆಕೋರರ ಸೆರೆ ಹಿಡಿದ ಪೊಲೀಸರು!

k

Udupi: ಆರೆಸ್ಸೆಸ್‌ ಹಿರಿಯ ಪ್ರಚಾರಕ್‌ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ

Bagalakote-Dryer

Bagalakote: ಪ್ರೇಯಸಿ ಗೆಳತಿ ಹ*ತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!  

Sagara: ಟ್ರಾಫಿಕ್‌ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು

Sagara: ಟ್ರಾಫಿಕ್‌ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನವೆಂಬರ್‌ 26-30: ಧರ್ಮಸ್ಥಳ ಲಕ್ಷದೀಪೋತ್ಸವ ಸಂಭ್ರಮ

ನವೆಂಬರ್‌ 26-30: ಧರ್ಮಸ್ಥಳ ಲಕ್ಷದೀಪೋತ್ಸವ ಸಂಭ್ರಮ

12-

Belthangady: ನ. 21- ಮೇ 23: ಧರ್ಮಸ್ಥಳ ಮೇಳದಿಂದ ಯಕ್ಷ ಗಾನ ಸೇವೆ

7-dharmasthala

Dharmasthala: ನ.26-30: ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸವ

5-video

ಹೊಸ ಟ್ರೆಂಡ್ ನ ಪ್ಯಾಂಟ್ ಧರಿಸಿದ ಯುವಕ;ಸ್ನೇಹಿತರಿಂದ ಅವಮಾನ, ನೊಂದ ಯುವಕ ಆತ್ಮಹತ್ಯೆಗೆ ಯತ್ನ

Fraud Case: ಗೂಗಲ್‌ ಪೇ ಮಾಡಿದೆ ಎಂದು ಹೇಳಿ ಮೋಸ

Fraud Case: ಗೂಗಲ್‌ ಪೇ ಮಾಡಿದೆ ಎಂದು ಹೇಳಿ ಮೋಸ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

highcourt

ವಾಲ್ಮೀಕಿ ನಿಗಮ ಅಕ್ರಮ ತನಿಖಾ ವರದಿ ಸಲ್ಲಿಸಲು ಸಿಬಿಐಗೆ ಹೈಕೋರ್ಟ್‌ ಸೂಚನೆ

1-koo

Violation of the Code of Conduct; ಕೋಟ, ಗುರ್ಮೆ ವಿರುದ್ಧದ ಪ್ರಕರಣ ರದ್ದು

BBK11: ಚೈತ್ರಾ ಅವರೇ ನನ್ನ ಬಾಸ್.. ಅವರ ಹೆಜ್ಜೆ ಫಾಲೋ ಮಾಡ್ತೇನೆ ಎಂದ ರಜತ್

BBK11: ಚೈತ್ರಾ ಅವರೇ ನನ್ನ ಬಾಸ್.. ಅವರ ಹೆಜ್ಜೆ ಫಾಲೋ ಮಾಡ್ತೇನೆ ಎಂದ ರಜತ್

Uttar Pradesh ಈಗ ರಾಜಕಾರಣಿಗಳಿಂದ “ಬಿಳಿಟವಲ್‌’ ರಾಜಕೀಯ!

Uttar Pradesh ಈಗ ರಾಜಕಾರಣಿಗಳಿಂದ “ಬಿಳಿಟವಲ್‌’ ರಾಜಕೀಯ!

Andhra Pradesh: ಲಡ್ಡು ಪ್ರಸಾದ ವಿವಾದ: ತಿರುಪತಿಗೆ ಎಸ್‌ಐಟಿ ಭೇಟಿ

Andhra Pradesh: ಲಡ್ಡು ಪ್ರಸಾದ ವಿವಾದ: ತಿರುಪತಿಗೆ ಎಸ್‌ಐಟಿ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.