ಹಣ ಕೊಟ್ಟು ಮತ ನೀಡಿ ಎನ್ನುವ ನೀಚರ ಕಪಾಳಕ್ಕೆ ಬಾರಿಸಿ: ನಟ ಉಪೇಂದ್ರ
Team Udayavani, May 2, 2021, 9:22 PM IST
ಬೆಂಗಳೂರು: ದೇಶದಲ್ಲಿ ಕೋವಿಡ್ ಎರಡನೇ ಅಲೆ ರಣಕೇಕೆ ಹಾಕುತ್ತಿರುವ ಸಂದಿಗ್ದ ಪರಿಸ್ಥಿತಿಯಲ್ಲಿ ನಟ ಉಪೇಂದ್ರ ಅವರು ಮಾಡಿರುವ ಫೇಸ್‍ಬುಕ್ ಪೋಸ್ಟ್ ವೊಂದು ಸಂಚಲನ ಮೂಡಿಸುತ್ತಿದೆ.
ಸಾಲು ಸಾಲು ಚಿತೆಗಳು ಉರಿಯುತ್ತಿದೆ, ಅಂದು ಎಲ್ಲೊ , ಇಂದು ನಮ್ಮ ಸುತ್ತ ಮುತ್ತಾ!! ನಾಳೆ? ಎಂದು ಪ್ರಶ್ನಿಸಿದ್ದಾರೆ. ನೀವು ಇನ್ನಾದರೂ ಬದಲಾಗಿ ಎಂದಿರುವ ಉಪ್ಪಿ ಕೆಲವೊಂದು ಮಹತ್ವದ ಮಾತುಗಳನ್ನಾಡಿದ್ದಾರೆ. ಅವುಗಳು ಈ ಕೆಳಗಿನಂತಿವೆ.
- ಹಣ ಕೊಟ್ಟು ಮತ ನೀಡಿ ಎನ್ನುವ ನೀಚರ ಕಪಾಳಕ್ಕೆ ಬಾರಿಸಿ…
- ಜಾತಿ, ಧರ್ಮ ನಮ್ಮ ವೈಯಕ್ತಿಕ, ಅದನ್ನು ರಾಜಕೀಯದಿಂದ ದೂರ ಇಡಿ…..
- ಬುದ್ದಿವಂತ ಮತದಾರರೇ… ಮತ ಹಾಕಿದರೆಷ್ಟು ಬಿಟ್ಟರೆಷ್ಟು? ಯಾರು ಬಂದರೂ ಅಷ್ಟೇ ಎನ್ನುವ ತಿರಸ್ಕಾರ ಮನೋಭಾವದಿಂದ ಹೊರ ಬನ್ನಿ…
- ವಿಚಾರಕ್ಕೆ ಮಾತ್ರ ನಿಮ್ಮ ಮತ ಮೀಸಲಿಡಿ ಮತ್ತು ಪ್ರತಿನಿಧಿ ಹೇಳಿದ ರೀತಿ ನಡೆಯದಿದ್ದರೆ ರಸ್ತೆಯಲ್ಲಿ ನಿಲ್ಲಿಸಿ ಕೇಳುವ ನಾಯಕತ್ವದ ಗುಣ ಬೆಳೆಸಿಕೊಳ್ಳಿ…
- ಸಭೆ ಸಮಾರಂಭಕ್ಕೆ ಚಿಲ್ಲರೆ, ಬಿರಿಯಾನಿ ಪ್ಯಾಕೆಟ್ ನೀಡಿ ಕರೆಯುವವರಿಗೆ ಛೀಮಾರಿ ಹಾಕಿ….
- ರಾಜಕೀಯ ಪಕ್ಷಗಳ ಕಾರ್ಯಕರ್ತರು ನಿಮ್ಮ ಸ್ವಾರ್ಥಕ್ಕಾಗಿ ಯಾರನ್ನೂ ಬೆಂಬಲಿಸಬೇಡಿ…ಸುಳ್ಳು ಪ್ರಚಾರ ಮಾಡಬೇಡಿ…..
- ಹಣಕ್ಕಾಗಿ ಭ್ರಷ್ಟ ರಾಜಕೀಯ ನಾಯಕರನ್ನು ವೈಭವೀಕರಿಸುವುದನ್ನು ಟಿವಿ ಮಾಧ್ಯಮಗಳು ಕೈಬಿಡಿ…. ಚುನಾವಣೆ ಸಮಯದಲ್ಲಿ ಜನರ ತೆರಿಗೆಯ ಪೈಸೆ ಪೈಸೆಗೂ ಲೆಕ್ಕ ಕೊಡಲು ಕೇಳಿ……
- ಕೊನೆಯದಾಗಿ ಭ್ರಷ್ಟ ರಾಜಕೀಯ ನಾಯಕರೇ ಸಾಕು, ಪಾರ್ಟಿ ಫಂಡ್, ಪ್ರಚಾರ, ಸುಳ್ಳು ಆಶ್ವಾಸನೆ, ಹಣ ಚೆಲ್ಲಿ ಸಭೆ ರ್ಯಾಲೀ ಸಮಾರಂಭ, ಪ್ರತಿಭಟನೆ, ಮಾಧ್ಯಮಗಳಲ್ಲಿ ಪ್ರಚಾರ, ಅಧಿಕಾರ ಹಿಡಿದು ಚೆಲ್ಲಿದ ಹಣ ದುಪ್ಪಟ್ಟು ಮಾಡುವ ಭ್ರಮೆಯಿಂದ ಹೊರಬನ್ನಿ…. ನಿಮಗಾಗಿ ಅಲ್ಲದಿದ್ದರೂ ನಿಮ್ಮ ಮಕ್ಕಳಿಗಾಗಿ ಸುಂದರ ಸಮಾಜ ನೀವು ಕಟ್ಟಬೇಕಿದೆ…
- ಭ್ರಷ್ಟ ಅಧಿಕಾರಿಗಳೇ ನಿಮಗೆ ಎಲ್ಲಾ ತಿಳಿದಿದೆ, ಲಂಚ ಕೊಟ್ಟು ಸಿಗುವ ಆ ಪದವಿಗಳನ್ನು ನೀವು ತಿರಸ್ಕರಿಸುವ ಕಾಲ ಬಂದಿದೆ…..
ಕರೋನದಿಂದ ಈ ಪಾಠ ನಾವು ಕಲಿಯದಿದ್ದರೆ ನೀವು ಓದಿರುವ ವಿದ್ಯೆ ವ್ಯರ್ಥ..
ಸಾಲು ಸಾಲು ಚಿತೆಗಳು ಉರಿಯುತ್ತಿದೆ, ಅಂದು ಎಲ್ಲೊ , ಇಂದು ನಮ್ಮ ಸುತ್ತ ಮುತ್ತಾ !! ನಾಳೆ ??!!
ಇನ್ನಾದರೂ ಬದಲಾಗಿ…….
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress; ಔತಣಕೂಟದ ಸಭೆಗೆ ರಾಜಕೀಯ ಮಹತ್ವ ಬೇಕಿಲ್ಲ: ಸತೀಶ್ ಜಾರಕಿಹೊಳಿ
Hubli; ಅಧಿಕಾರಕ್ಕಾಗಿ ಕಾಂಗ್ರೆಸ್ ಯಾವ ಕೀಳು ಮಟ್ಟಕ್ಕೆ ಇಳಿಯಲು ಹೇಸಲ್ಲ: ಪ್ರಹ್ಲಾದ ಜೋಶಿ
Gold Fraud Case: ಐಶ್ವರ್ಯಗೌಡ ದಂಪತಿಯ 3 ಐಷಾರಾಮಿ ಕಾರು ಜಪ್ತಿ
Gold Cheating Case: ಚಿನಾಭರಣ ವಂಚನೆ… ಶ್ವೇತಾಗೌಡ ವಿರುದ್ಧ ಇನ್ನೊಂದು ದೂರು
Metro: ಮೆಟ್ರೋದಲ್ಲಿ ಮಹಿಳಾ ಟೆಕಿ ಫೋಟೋ ತೆಗೆದು ಸಿಕ್ಕಿಬಿದ್ದ ಆಯುರ್ವೇದಿಕ್ ವೈದ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.