ಲಾಕ್‌ಡೌನ್‌ ಮಧ್ಯೆಯೇ ಟ್ಯಾಕ್ಸಿ ಚಾಲಕರಿಗೆ ಬಹು ಸಂಕಷ್ಟ!

Team Udayavani, May 3, 2021, 4:40 AM IST

ಲಾಕ್‌ಡೌನ್‌ ಮಧ್ಯೆಯೇ ಟ್ಯಾಕ್ಸಿ ಚಾಲಕರಿಗೆ ಬಹು ಸಂಕಷ್ಟ!

ಮಹಾನಗರ: ಲಾಕ್‌ಡೌನ್‌ನಿಂದಾಗಿ ಸಮಸ್ಯೆ ಅನುಭವಿಸುತ್ತಿರುವ ಮಂಗಳೂರಿನ ಟ್ಯಾಕ್ಸಿ ಚಾಲಕರಿಗೆ ಇದೀಗ ಮತ್ತಷ್ಟು ಸಮಸ್ಯೆಗಳ ಸರಮಾಲೆಯೇ ಎದುರಾಗಿದ್ದು, ಜೀವನ ನಿರ್ವಹಣೆಯೇ ಸವಾಲಾಗಿ ಪರಿಣಮಿಸಿದೆ.

ಒಂದೆಡೆ ಕೇರಳ ರಾಜ್ಯ ಪ್ರವಾಸಕ್ಕೆ ಹೋಗಿದ್ದ ಕರ್ನಾಟಕದ ಟ್ಯಾಕ್ಸಿ ಮತ್ತು ಮ್ಯಾಕ್ಸಿಕ್ಯಾಬ್‌ ವಾಹನಗಳಿಗೆ ಎದುರಾಗಿದ್ದ ಬಾಕಿ ತೆರಿಗೆ ಪಾವತಿ ಸಂಕಷ್ಟ ಮತ್ತೆ ಕಾಡು ತ್ತಿದ್ದರೆ; ಮತ್ತೂಂದೆಡೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪಾರ್ಕಿಂಗ್‌ ಶುಲ್ಕ ಏರಿಕೆ ಆಗಿದ್ದು, ಟ್ಯಾಕ್ಸಿ ಚಾಲಕರಿಗೆ ಇದರಿಂದ ನೇರ ಹೊಡೆತ ಬೀಳು ವಂತಾಗಿದೆ. ಇದರ ಮಧ್ಯೆ ಲಾಕ್‌ಡೌನ್‌ನಿಂದಾಗಿ ಟ್ಯಾಕ್ಸಿ ಸಂಚಾರಕ್ಕೂ ಅವಕಾಶ ಸಿಗದೆ ಚಾಲಕರ ಜೀವನ ನಿರ್ವಹಣೆಗೆ ದೊಡ್ಡ ಹೊಡೆತ ಬಿದ್ದಿದೆ.

ಟ್ಯಾಕ್ಸಿಯವರಿಗೆ ಟ್ಯಾಕ್ಸ್‌ ಸಂಕಷ್ಟ ! :

ಐದಾರು ವರ್ಷಗಳ ಹಿಂದೆ ಕೇರಳ ಪ್ರವಾಸಕ್ಕೆ ಹೋಗಿದ್ದ ಕರ್ನಾಟಕದ ಟ್ಯಾಕ್ಸಿ ಮತ್ತು ಮ್ಯಾಕ್ಸಿಕ್ಯಾಬ್‌ ವಾಹನಗಳಿಗೆ ಎದುರಾಗಿದ್ದ ಬಾಕಿ ತೆರಿಗೆ ಪಾವತಿ ಸಂಕಷ್ಟ ಇನ್ನೂ ಪೂರ್ಣ ಪ್ರಮಾಣದಲ್ಲಿ ಪರಿಹಾರ ವಾಗಿಲ್ಲ. ಕೇರಳದಲ್ಲಿ ಟ್ಯಾಕ್ಸಿ ಬಾಕಿ ಮಾಡಿದ ಕಾರಣಕ್ಕೆ ಕರ್ನಾಟಕದಲ್ಲಿ ಈ ಟ್ಯಾಕ್ಸಿಗಳನ್ನು ಬ್ಲ್ಯಾಕ್‌ ಲಿಸ್ಟ್‌ಗೆ ಹಾಕಲಾಗಿದ್ದು, ಮಾಲಕರು ಇತ್ತ ಬಾಡಿಗೆ ಓಡಿಸಲೂ ಆಗದೆ, ಅತ್ತ ವಾಹನ ಮಾರಾಟ ಮಾಡಲೂ ಆಗದೆ ಅತಂತ್ರರಾಗಿದ್ದಾರೆ. ಸಾರಿಗೆ ಇಲಾಖೆಯ ಈ ಬಿಗಿ ಕಾನೂನಿನಿಂದ ಟ್ಯಾಕ್ಸಿ ಮಾಲಕರಿಗೆ ಕೇರ ಳಕ್ಕೂ ಹೋಗಲಾಗದೆ. ಇತ್ತ ರಾಜ್ಯದಲ್ಲೂ ಬಾಡಿಗೆ ವ್ಯವಹಾರ ಮಾಡಲಾಗದ ಸಂಕಷ್ಟ ಸ್ಥಿತಿ ಅನುಭವಿಸುವಂತಾಗಿದೆ.

ಸಮಸ್ಯೆ ಏನು? :

ಕೇರಳದಲ್ಲಿ 2014ರಲ್ಲಿ ತೆರಿಗೆ ವಸೂಲಾತಿ ನಿಯಮ ತಿದ್ದುಪಡಿ ಮಾಡಲಾಗಿತ್ತು. ಆದರೆ ಅಲ್ಲಿನ ಸಾರಿಗೆ ಇಲಾಖೆ ತಿದ್ದುಪಡಿ ಮಾಡ ಲಾದ ದರದಲ್ಲಿ ತೆರಿಗೆ ವಸೂಲಿ ಮಾಡದೆ ಕಂಪ್ಯೂಟರಿಕೃತ ಆಧಾರದಲ್ಲಿ ಹಿಂದಿನಂತೆ ತೆರಿಗೆಯನ್ನು ವಸೂಲಿ ಮಾಡಿತ್ತು. ಆದರೆ 2016ರಲ್ಲಿ ಕೇರಳ ಸರಕಾರ ಆಡಿಟ್‌ ಮಾಡಿದ ಸಂದರ್ಭ ಭಾರಿ ಪ್ರಮಾಣದಲ್ಲಿ ತೆರಿಗೆ ಕಡಿಮೆ ವಸೂಲಿ ಆಗಿರುವುದು ಪತ್ತೆ ಯಾಗಿತ್ತು. ಕಾರಣ ಹುಡುಕಿದಾಗ ಕರ್ನಾ ಟಕದ ಟ್ಯಾಕ್ಸಿ ವಾಹನಗಳಿಗೆ 2014ರಿಂದ 2016ರ ವರೆಗೆ ಹಿಂದಿನ ದರದಲ್ಲೇ ತೆರಿಗೆ ವಸೂಲಾಗಿರುವುದು ಪತ್ತೆಯಾಗಿತ್ತು. ಇದರಿಂದ ಕೇರಳ ಸರಕಾರ ಕರ್ನಾಟಕದ ಸುಮಾರು 5 ಸಾವಿರಕ್ಕೂ ಅಧಿಕ ಟ್ಯಾಕ್ಸಿ ಮತ್ತು ಮ್ಯಾಕ್ಸಿಕ್ಯಾಬ್‌ ವಾಹನಗಳಿಗೆ ನೋಟಿಸ್‌ ಜಾರಿ ಮಾಡಿ ಹಿಂದಿನ ಬಾಕಿ ತೆರಿಗೆಯನ್ನು ಪಾವತಿ ಮಾಡುವಂತೆ ಸೂಚನೆ ನೀಡಿದೆ.

ಏರ್‌ಪೋರ್ಟ್‌ ಪಾರ್ಕಿಂಗ್‌ ಶುಲ್ಕ ದುಪ್ಪಟ್ಟು :

ಮೇ 1ರಿಂದ ಮಂಗಳೂರು ಅಂತಾ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪಾರ್ಕಿಂಗ್‌ ಶುಲ್ಕ ಏರಿಕೆ ಮಾಡಲಾಗಿದೆ. ಇಲ್ಲಿ ಬಾಡಿಗೆ ನಡೆಸುತ್ತಿರುವ ಟ್ಯಾಕ್ಸಿ ಚಾಲಕರಿಗೆ ಇದರಿಂದ ಸಮಸ್ಯೆ ಆಗಲಿದೆ. ಈ ಬಗ್ಗೆ “ಉದ ಯವಾಣಿ’ ಜತೆಗೆ ಮಾತನಾಡಿದ ಕಂಕನಾಡಿ ಟ್ಯಾಕ್ಸಿ ಚಾಲಕ ಶುಭಕರ, “ಏರ್‌ಪೋರ್ಟ್‌ ನಲ್ಲಿ ಟ್ಯಾಕ್ಸಿ ಚಾಲಕರಿಂದ ಇದುವರೆಗೆ ಪಡೆಯುತ್ತಿದ್ದ ಪಾರ್ಕಿಂಗ್‌ ಶುಲ್ಕವನ್ನು 20 ರೂ.ಗಳಿಂದ 90 ರೂ.ಗೆ ಏರಿಸಿದ್ದಾರೆ. ಅದೂ ಅರ್ಧ ತಾಸಿಗೆ. ಹೀಗಾಗಿ ಇನ್ನು ಮುಂದೆ ಉಡುಪಿಯಿಂದ ವಿಮಾನ ನಿಲ್ದಾಣಕ್ಕೆ ಹೋಗಲು ವಿವಿಧ ಕಡೆಯಲ್ಲಿ 250 ರೂ. ಟೋಲ್‌, ಏರ್‌ಪೋರ್ಟ್‌ನಲ್ಲಿ ದುಬಾರಿ ಪಾರ್ಕಿಂಗ್‌ ಶುಲ್ಕ ಕಟ್ಟಬೇಕು. ಮೊದಲೇ ಲಾಕ್‌ಡೌನ್‌, ಡೀಸೆಲ್‌ ದರ ಏರಿಕೆಯಿಂದ ಸಮಸ್ಯೆಯಲ್ಲಿರುವ ಟ್ಯಾಕ್ಸಿ ಚಾಲಕರಿಗೆ ಇದು ದೊಡ್ಡ ಸಮಸ್ಯೆಯಾಗಿದೆ’ ಎನ್ನುತ್ತಾರೆ.

ಮಂಗಳೂರು ವಿಮಾನ ನಿಲ್ದಾಣದಲ್ಲಿ ಖಾಸಗಿ ವಾಹನಕ್ಕೆ 10 ನಿಮಿಷ ಉಚಿತ ನೀಡುವಂತೆ ಟ್ಯಾಕ್ಸಿಯವರಿಗೂ 10 ನಿಮಿಷ ಉಚಿತ ಅವಕಾಶ ನೀಡಬೇಕು. ಬೆಂಗಳೂರು, ಕಣ್ಣೂರು ಸಹಿತ ಇತರ ವಿಮಾನ ನಿಲ್ದಾಣಗಳಲ್ಲಿರುವಂತೆ ಉಚಿತ ವಾದ “ಪಿಕಪ್‌ ವೇ’ ಮಾಡಬೇಕು.  –ಆನಂದ್‌ ಕೆ., ಪ್ರಧಾನ ಕಾರ್ಯದರ್ಶಿ, ದ.ಕ. ಜಿಲ್ಲಾ ಟ್ಯಾಕ್ಸಿ ಮತ್ತು ಮ್ಯಾಕ್ಸಿ ಕ್ಯಾಬ್‌ ಅಸೋಸಿಯೇಶನ್‌

ಕಳೆದ ಲಾಕ್‌ಡೌನ್‌ನಿಂದಾಗಿ ಹಲವು ವರ್ಗದವರು ಸಮಸ್ಯೆಅನುಭವಿಸಿ ಚೇತರಿಕೆ ಕಂಡಿದ್ದರೂ ಟ್ಯಾಕ್ಸಿ ಸಮೂಹದವರು ಮಾತ್ರ ಇನ್ನೂ ಚೇತರಿಕೆ ಕಂಡಿರಲಿಲ್ಲ. ಇಂಧನ ಬೆಲೆ ಏರಿಕೆ, ಟೋಲ್‌ ದರ ಏರಿಕೆ ಸಹಿತ ಹಲವು ಏರಿಕೆಗಳು ನಮಗೆ ಕಷ್ಟ ನೀಡಿದೆ. ಅದರ ಜತೆಗೆ ಈಗ ಮತ್ತೆ ಲಾಕ್‌ಡೌನ್‌, ಕೇರಳ ಟ್ಯಾಕ್ಸ್‌ ವಿಚಾರ, ವಿಮಾನ ನಿಲ್ದಾಣ ಪಾರ್ಕಿಂಗ್‌ ಶುಲ್ಕ ಏರಿಕೆಯು ನಮ್ಮನ್ನು ಮತ್ತಷ್ಟು ಸಂಕಷ್ಟಕ್ಕೆ ತಳ್ಳಿದೆ.  ದಿನೇಶ್‌ ಕುಂಪಲ, ಅಧ್ಯಕ್ಷರು, ದ.ಕ. ಜಿಲ್ಲಾ ಟ್ಯಾಕ್ಸಿ ಮತ್ತು ಮ್ಯಾಕ್ಸಿ ಕ್ಯಾಬ್‌ ಅಸೋಸಿಯೇಶನ್‌

ಟಾಪ್ ನ್ಯೂಸ್

Channaptna Result: ಕೊನೆ ಕ್ಷಣದಲ್ಲಿ ಪಕ್ಷ ಬದಲಿಸಿದರೂ ಗೆದ್ದ ಸೈನಿಕ: ನೆರವಾದ ಡಿಕೆ ತಂತ್ರ

Channaptna Result: ಕೊನೆ ಕ್ಷಣದಲ್ಲಿ ಪಕ್ಷ ಬದಲಿಸಿದರೂ ಗೆದ್ದ ಸೈನಿಕ: ನೆರವಾದ ಡಿಕೆ ತಂತ್ರ

11-kambala

Kambala ಋತುವಿನ ಪ್ರಥಮ ಕಂಬಳ; ಕೊಡಂಗೆ ವೀರ-ವಿಕ್ರಮ ಜೋಡುಕರೆ ಬಯಲು ಕಂಬಳಕ್ಕೆ ಚಾಲನೆ

Wayanad Results 2024:ವಯನಾಡ್‌ ನಲ್ಲಿ ಪ್ರಿಯಾಂಕಾಗೆ 3.68 ಲಕ್ಷಕ್ಕೂ ಅಧಿಕ ಮತಗಳ ಮುನ್ನಡೆ!

Wayanad Results 2024:ವಯನಾಡ್‌ ನಲ್ಲಿ ಪ್ರಿಯಾಂಕಾಗೆ 3.68 ಲಕ್ಷಕ್ಕೂ ಅಧಿಕ ಮತಗಳ ಮುನ್ನಡೆ!

Video: ವಿದ್ಯಾರ್ಥಿಯಿಂದ ಕಾಲು ಒತ್ತಲು ಹೇಳಿ ಶಾಲೆಯಲ್ಲೇ ವಿಶ್ರಾಂತಿಗೆ ಜಾರಿದ ಶಿಕ್ಷಕ

Video: ವಿದ್ಯಾರ್ಥಿಯಿಂದ ಕಾಲು ಒತ್ತಲು ಹೇಳಿ ಶಾಲೆಯಲ್ಲೇ ವಿಶ್ರಾಂತಿಗೆ ಜಾರಿದ ಶಿಕ್ಷಕ

Sandur Result: ಭದ್ರಕೋಟೆಯಲ್ಲಿ ಮತ್ತೆ ಗೆದ್ದ ಕಾಂಗ್ರೆಸ್:‌ ಇಲ್ಲಿದೆ ಮತಎಣಿಕೆಯ ಪೂರ್ಣವಿವರ

Sandur Result: ಭದ್ರಕೋಟೆಯಲ್ಲಿ ಮತ್ತೆ ಗೆದ್ದ ಕಾಂಗ್ರೆಸ್:‌ ಇಲ್ಲಿದೆ ಮತಎಣಿಕೆಯ ಪೂರ್ಣವಿವರ

Karnataka By Poll Results: ಜೆಡಿಎಸ್‌ ಅಂತಿಮ ದಿನ ಎಣಿಸತೊಡಗಿದೆ: ಸಿ.ಪಿ.ಯೋಗೇಶ್ವರ್‌

Karnataka By Poll Results: ಜೆಡಿಎಸ್‌ ಅಂತಿಮ ದಿನ ಎಣಿಸತೊಡಗಿದೆ: ಸಿ.ಪಿ.ಯೋಗೇಶ್ವರ್‌

By Poll: ಇಬ್ಬರು ಮಾಜಿ ಸಿಎಂಗಳ ಪುತ್ರರಿಗೂ ಸೋಲಿನ ರುಚಿ ತೋರಿಸಿದ ಮತದಾರ; ಎಡವಿದ್ದೆಲ್ಲಿ?

By Poll: ಇಬ್ಬರು ಮಾಜಿ ಸಿಎಂಗಳ ಪುತ್ರರಿಗೂ ಸೋಲಿನ ರುಚಿ ತೋರಿಸಿದ ಮತದಾರ; ಎಡವಿದ್ದೆಲ್ಲಿ?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Arrest

Ullala: ತ್ರಿವಳಿ ತಲಾಖ್‌ ಪ್ರಕರಣ: ಆರೋಪಿಯ ಸೆರೆ

Ullala-Balepuni

Ullala: 3ರ ಬಾಲಕಿಗೆ 70ರ ವೃದ್ಧನಿಂದ ಲೈಂಗಿಕ ಕಿರುಕುಳ

Kishor-Kodgi-Campco

Mangaluru: ಅಡಿಕೆ ಕ್ಯಾನ್ಸರ್‌ ಕಾರಕ ಎಂಬ ಡಬ್ಲ್ಯುಎಚ್‌ಒ ವಾದಕ್ಕೆ ಕ್ಯಾಂಪ್ಕೊ ಆಕ್ಷೇಪ

Suside-Boy

Mudubidre: ಅಂತಿಮ ಬಿಬಿಎಂ ವಿದ್ಯಾರ್ಥಿ ಆತ್ಮಹತ್ಯೆ

DK–BJP-Protest

Mangaluru: ತುಳುನಾಡಿನ ದೈವ-ದೇವರ ಜಾಗ ಉಳಿಸಲು ಹೋರಾಟ: ಸಂಸದ ಚೌಟ

MUST WATCH

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

ಹೊಸ ಸೇರ್ಪಡೆ

Channaptna Result: ಕೊನೆ ಕ್ಷಣದಲ್ಲಿ ಪಕ್ಷ ಬದಲಿಸಿದರೂ ಗೆದ್ದ ಸೈನಿಕ: ನೆರವಾದ ಡಿಕೆ ತಂತ್ರ

Channaptna Result: ಕೊನೆ ಕ್ಷಣದಲ್ಲಿ ಪಕ್ಷ ಬದಲಿಸಿದರೂ ಗೆದ್ದ ಸೈನಿಕ: ನೆರವಾದ ಡಿಕೆ ತಂತ್ರ

11-kambala

Kambala ಋತುವಿನ ಪ್ರಥಮ ಕಂಬಳ; ಕೊಡಂಗೆ ವೀರ-ವಿಕ್ರಮ ಜೋಡುಕರೆ ಬಯಲು ಕಂಬಳಕ್ಕೆ ಚಾಲನೆ

Wayanad Results 2024:ವಯನಾಡ್‌ ನಲ್ಲಿ ಪ್ರಿಯಾಂಕಾಗೆ 3.68 ಲಕ್ಷಕ್ಕೂ ಅಧಿಕ ಮತಗಳ ಮುನ್ನಡೆ!

Wayanad Results 2024:ವಯನಾಡ್‌ ನಲ್ಲಿ ಪ್ರಿಯಾಂಕಾಗೆ 3.68 ಲಕ್ಷಕ್ಕೂ ಅಧಿಕ ಮತಗಳ ಮುನ್ನಡೆ!

Video: ವಿದ್ಯಾರ್ಥಿಯಿಂದ ಕಾಲು ಒತ್ತಲು ಹೇಳಿ ಶಾಲೆಯಲ್ಲೇ ವಿಶ್ರಾಂತಿಗೆ ಜಾರಿದ ಶಿಕ್ಷಕ

Video: ವಿದ್ಯಾರ್ಥಿಯಿಂದ ಕಾಲು ಒತ್ತಲು ಹೇಳಿ ಶಾಲೆಯಲ್ಲೇ ವಿಶ್ರಾಂತಿಗೆ ಜಾರಿದ ಶಿಕ್ಷಕ

Sandur Result: ಭದ್ರಕೋಟೆಯಲ್ಲಿ ಮತ್ತೆ ಗೆದ್ದ ಕಾಂಗ್ರೆಸ್:‌ ಇಲ್ಲಿದೆ ಮತಎಣಿಕೆಯ ಪೂರ್ಣವಿವರ

Sandur Result: ಭದ್ರಕೋಟೆಯಲ್ಲಿ ಮತ್ತೆ ಗೆದ್ದ ಕಾಂಗ್ರೆಸ್:‌ ಇಲ್ಲಿದೆ ಮತಎಣಿಕೆಯ ಪೂರ್ಣವಿವರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.