ರಾಹುಲ್ಗೆ ಅಪೆಂಡಿಸೈಟಿಸ್: ಅಗರ್ವಾಲ್ ನಾಯಕ
Team Udayavani, May 3, 2021, 6:00 AM IST
ಅಹ್ಮದಾಬಾದ್: ಪಂಜಾಬ್ ಕಿಂಗ್ಸ್ ನಾಯಕ ಕೆ.ಎಲ್. ರಾಹುಲ್ ಅವರಲ್ಲಿ ಅಪೆಂಡಿಸೈಟಿಸ್ ಲಕ್ಷಣ ಕಾಣಿಸಿಕೊಂಡಿದ್ದು, ಚಿಕಿತ್ಸೆಗಾಗಿ ಮುಂಬಯಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ರಾಹುಲ್ ಗೈರಲ್ಲಿ ಮಾಯಾಂಕ್ ಅಗರ್ವಾಲ್ ಪಂಜಾಬ್ ತಂಡದ ಬದಲಿ ನಾಯಕರಾಗಿ ನೇಮಕಗೊಂಡಿದ್ದು, ರವಿವಾರ ರಾತ್ರಿಯ ಡೆಲ್ಲಿ ಎದುರಿನ ಪಂದ್ಯದಲ್ಲೇ ತಂಡವನ್ನು ಮುನ್ನಡೆಸಿದರು.
“ಕಳೆದ ರಾತ್ರಿ ರಾಹುಲ್ ಅವರಿಗೆ ಹೊಟ್ಟೆನೋವು ಕಾಣಿಸಿಕೊಂಡಿತ್ತು. ಚಿಕಿತ್ಸೆಗೆ ಸ್ಪಂದಿಸದ ಕಾರಣ ತೀವ್ರ ನಿಗಾ ಕೋಣೆಯಲ್ಲಿ ಪರಿಶೀಲಿಸಿದಾಗ ಅಪೆಂಡಿಸೈಟಿಸ್ ಇರುವುದು ಪತ್ತೆಯಾಯಿತು. ಇದಕ್ಕೆ ಶಸ್ತ್ರಚಿಕಿತ್ಸೆಯ ಅಗತ್ಯವಿದೆ. ಸುರಕ್ಷತೆಯ ದೃಷ್ಟಿಯಿಂದ ಅವರನ್ನು ಮುಂಬಯಿ ಆಸ್ಪತ್ರೆಗೆ ದಾಖಲಿಸಲಾಗಿದೆ’ ಎಂದು ಪಂಜಾಬ್ ತಂಡ ಪ್ರಕಟನೆ ತಿಳಿಸಿದೆ.
ರಾಹುಲ್ ಚೇತರಿಕೆಗೆ ಕನಿಷ್ಠ ಒಂದು ವಾರ ಬೇಕಿದ್ದು, ಆವರು 3 ಪಂದ್ಯಗಳಿಂದ ಹೊರಗುಳಿಯುವ ಸಾಧ್ಯತೆ ಇದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.