ಅಗ್ರಸ್ಥಾನಕ್ಕೆ ನೆಗೆದ ಡೆಲ್ಲಿ
Team Udayavani, May 2, 2021, 11:15 PM IST
ಅಹ್ಮದಾಬಾದ್: ಪಂಜಾಬ್ ಕಿಂಗ್ಸ್ ವಿರುದ್ಧ ಅಮೋಘ ಆಟವಾಡಿದ ಡೆಲ್ಲಿ ಕ್ಯಾಪಿಟಲ್ಸ್ 7 ವಿಕೆಟ್ ಜಯ ದೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ನೆಗೆದಿದೆ.
ಮೊದಲ ಸಲ ನಾಯಕನ ಜವಾಬ್ದಾರಿ ಹೊತ್ತ ಮಾಯಾಂಕ್ ಅಗರ್ವಾಲ್ ಅವರ ಏಕಾಂಗಿ ಹೋರಾಟದಿಂದಾಗಿ ಪಂಜಾಬ್ ಕಿಂಗ್ಸ್ 6 ವಿಕೆಟಿಗೆ 166 ರನ್ ಗಳಿಸಿತು. ಡೆಲ್ಲಿ 17.4 ಓವರ್‌ಗಳಲ್ಲಿ 3 ವಿಕೆಟಿಗೆ 167 ರನ್ ಬಾರಿಸಿ ಜಯ ಸಾಧಿಸಿತು. ಇದು 8 ಪಂದ್ಯಗಳಲ್ಲಿ ಪಂತ್ ಬಳಗಕ್ಕೆ ಒಲಿದ 6ನೇ ಗೆಲುವು. ಪಂಜಾಬ್‌ಗ ಇಷ್ಟೇ ಪಂದ್ಯಗಳಲ್ಲಿ ಎದುರಾದ 5ನೇ ಸೋಲು.
ಚೇಸಿಂಗ್ ವೇಳೆ ಡೆಲ್ಲಿ ಯಾವುದೇ ಒತ್ತಡಕ್ಕೆ ಸಿಲುಕಲಿಲ್ಲ. ಆರಂಭಕಾರ ಶಿಖರ್ ಧವನ್ 47 ಎಸೆತಗಳಿಂದ 69 ರನ್ (6 ಬೌಂಡರಿ, 2 ಸಿಕ್ಸರ್) ಮಾಡಿ ಅಜೇಯರಾಗಿ ಉಳಿದರು. ಪೃಥ್ವಿ ಶಾ 39, ಸ್ಮಿತ್ 24 ರನ್ ಮಾಡಿದರೆ, ಹೆಟ್‌ಮೈರ್ 4 ಎಸೆತಗಳಿಂದ 16 ರನ್ ಸಿಡಿಸಿದರು.
ಅಗರ್ವಾಲ್ ಅಜೇಯ 99 :
ಓಪನರ್ ಅಗರ್ವಾಲ್ ಅಜೇಯರಾಗಿ ಉಳಿದು 99 ರನ್ ಬಾರಿಸಿದರು (58 ಎಸೆತ, 8 ಬೌಂಡರಿ, 4 ಸಿಕ್ಸರ್). ಅವರ ಶತಕಕ್ಕೆ ಅಂತಿಮ 3 ಎಸೆತಗಳಲ್ಲಿ 15 ರನ್ ಅಗತ್ಯವಿತ್ತು. ಗರಿಷ್ಠ ಪ್ರಯತ್ನ ಮಾಡಿದ ಅಗರ್ವಾಲ್ 14 ರನ್ ಬಾರಿಸಿ (4, 6, 4) ಒಂದೇ ರನ್ನಿನಿಂದ ಸೆಂಚುರಿ ತಪ್ಪಿಸಿಕೊಂಡರು.
ಆರ್‌ಸಿಬಿಯನ್ನು ಮಣಿಸಿದ ಉತ್ಸಾಹದಲ್ಲಿದ್ದರೂ ನಾಯಕ ರಾಹುಲ್ ಗೈರು ತಂಡದ ಮೇಲೆ ಒತ್ತಡ ಹೇರಿದ್ದು ಸ್ಪಷ್ಟವಾಗಿ ಗೋಚರಕ್ಕೆ ಬಂತು. ಕ್ರಿಸ್ ಗೇಲ್ ಕೂಡ ಸಿಡಿಯಲು ವಿಫಲರಾದರು.
ಟಿ20 ಕ್ರಿಕೆಟಿನ ನಂ.1 ಬ್ಯಾಟ್ಸ್‌ಮನ್ ಡೇವಿಡ್ ಮಲಾನ್ ಡೆಲ್ಲಿ ವಿರುದ್ಧ ಐಪಿಎಲ್‌ಗೆ ಪದಾರ್ಪಣೆ ಮಾಡಿದರು. ಇವರಿಗಾಗಿ ನಿಕೋಲಸ್ ಪೂರಣ್ ಅವರನ್ನು ಕೈಬಿಡಲಾಯಿತು.
ಸಂಕ್ಷಿಪ್ತ ಸ್ಕೋರ್: ಪಂಜಾಬ್ ಕಿಂಗ್ಸ್-6 ವಿಕೆಟಿಗೆ 166 (ಅಗರ್ವಾಲ್ ಔಟಾಗದೆ 99, ಮಲಾನ್ 26, ರಬಾಡ 36ಕ್ಕೆ 3). ಡೆಲ್ಲಿ-17.4 ಓವರ್‌ಗಳಲ್ಲಿ 3 ವಿಕೆಟಿಗೆ 167( ಧವನ್ ಅಜೇಯ 69, ಶಾ, 39, ಹರ್‌ಪ್ರೀತ್ 19ಕ್ಕೆ 1).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
C.T. Ravi; ಅವಾಚ್ಯ ಶಬ್ದಗಳಿಂದ ನಿಂದಿಸಿದ ದಾಖಲೆ ಇಲ್ಲ: ಮಹತ್ವ ಪಡೆದ ಸಭಾಪತಿ ಹೇಳಿಕೆ
TuluMovie; ತೆರೆಗೆ ಬರಲು ಸಿದ್ದವಾಯ್ತು ಮಿಡಲ್ ಕ್ಲಾಸ್ ಫ್ಯಾಮಿಲಿ: ರಿಲೀಸ್ ದಿನಾಂಕ ಬಂತು
BJP ಪೂರ್ವಾಂಚಲಿಗಳನ್ನು ರೋಹಿಂಗ್ಯಾಗಳೆಂದು ಮತಗಳನ್ನು ಅಳಿಸುತ್ತಿದೆ: ಕೇಜ್ರಿವಾಲ್ ಆರೋಪ
Gold & Cash: ಕಾಡಿನ ಬಳಿ ನಿಲ್ಲಿಸಿದ್ದ ಕಾರಿನಲ್ಲಿ 52 ಕೆ.ಜಿ ಚಿನ್ನ, 9 ಕೋಟಿ ನಗದು ಪತ್ತೆ
Aligarh; ಮುಸ್ಲಿಂ ಬಾಹುಳ್ಯದ ಪ್ರದೇಶದಲ್ಲಿ ಮತ್ತೊಂದು ಶಿವ ದೇವಾಲಯ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.