ನಂದಿಗ್ರಾಮದಲ್ಲಿ ಸೋತರೂ ದೀದಿ ಸಿಎಂ ಆಗ್ತಾರಾ? ಆಯ್ಕೆ ಏನು?
Team Udayavani, May 3, 2021, 7:45 AM IST
ಕೋಲ್ಕತ್ತಾ: ಇಡೀ ದೇಶವೇ ತಿರುಗಿ ನೋಡುವಂತೆ ಮಾಡಿದ್ದ ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯ ಫಲಿತಾಂಶ ಪ್ರಕಟವಾಗಿದೆ. ತಮ್ಮ ಪಕ್ಷವನ್ನು ಭರ್ಜರಿ ಗೆಲುವಿನತ್ತ ಕೊಂಡೊಯ್ದ ಸಿಎಂ ಮಮತಾ ಬ್ಯಾನರ್ಜಿ, ನಂದಿಗ್ರಾಮದಲ್ಲಿ ತಮ್ಮ ಒಂದು ಕಾಲದ ಆಪ್ತ, ಬಿಜೆಪಿ ನಾಯಕ ಸುವೇಂದು ಅಧಿಕಾರಿ ವಿರುದ್ಧ ಸೋಲುಂಡಿದ್ದಾರೆ.
ಸದ್ಯ ದೀದಿ ಸೋತಿರುವ ಕಾರಣ ಅವರು “ಸಿಎಂ” ಹುದ್ದೆಗೆ ಏರಲು ಆಗುತ್ತದೆಯೇ ಎಂಬ ಪ್ರಶ್ನೆ ಹಲವರದ್ದು. ಅದಕ್ಕೆ ಉತ್ತರ ಇಲ್ಲಿದೆ: ದೀದಿ ಸಿಎಂ ಹುದ್ದೆಗೆ ಏರಲು ಸಾಧ್ಯವಿದೆ. ಇಲ್ಲಿ ಅವರಿಗೆ 2 ಆಯ್ಕೆಗಳಿವೆ.
ಇದನ್ನೂ ಓದಿ:ಅಸ್ಸಾಂನಲ್ಲಿ ಕಮಲ 2ನೇ ಇನ್ನಿಂಗ್ಸ್
ಮೊದಲನೆಯದ್ದು, ಟಿಎಂಸಿಯ ನೂತನ ಶಾಸಕರು ಮಮತಾರನ್ನು ಶಾಸಕಾಂಗ ಪಕ್ಷದ ನಾಯಕಿ ಎಂದು ಘೋಷಿಸುವುದು. ಇದಾದ ಬಳಿಕ 6 ತಿಂಗಳ ಒಳಗಾಗಿ ವಿಧಾನಪರಿಷತ್ ಸದಸ್ಯೆ (ಎಂಎಲ್‌ಸಿ)ಯಾಗಿ ಆಯ್ಕೆಯಾಗಿ ಮಮತಾ ಸಿಎಂ ಹುದ್ದೆಗೆ ಏರಬಹುದು.
ಎರಡನೆಯದ್ದು, ಖಾಲಿಯಿರುವ ಯಾವುದಾದರೂ ಕ್ಷೇತ್ರ (ಉದಾ: ಖರ್ದಾಹಾ)ದಲ್ಲಿ ನಾಮಪತ್ರ ಸಲ್ಲಿಸಿ, 6 ತಿಂಗಳೊಳಗೆ ಉಪಚುನಾವಣೆಯಲ್ಲಿ ಗೆದ್ದು ಬಂದು ಮುಖ್ಯಮಂತ್ರಿ ಕುರ್ಚಿಯಲ್ಲಿ ಕುಳಿತುಕೊಳ್ಳಬಹುದು. ನಿತೀಶ್ ಕುಮಾರ್, ಯೋಗಿ ಆದಿತ್ಯನಾಥ್, ಉದ್ಧವ್ ಠಾಕ್ರೆ, ಮಾಯಾವತಿ, ಅಖೀಲೇಶ್, ಮನೋಹರ್ ಪರ್ರಿಕರ್ ಮತ್ತಿತರರು ಕೂಡ ಈ ರೀತಿಯ ಅವಕಾಶ ಬಳಸಿಕೊಂಡು ಸಿಎಂ ಹುದ್ದೆಗೆ ಏರಿದ್ದರು.
ಇದನ್ನೂ ಓದಿ: ಹಣ ಕೊಟ್ಟು ಮತ ನೀಡಿ ಎನ್ನುವ ನೀಚರ ಕಪಾಳಕ್ಕೆ ಬಾರಿಸಿ: ನಟ ಉಪೇಂದ್ರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.