ಗೋವಾ : ಅಂಬ್ಯುಲೆನ್ಸ್ ನಲ್ಲಿ ಕೋವಿಡ್ ಸೋಂಕಿತರ ಓಡಾಟ ; ಆತಂಕದಲ್ಲಿ ಚೆಕ್‍ಪೋಸ್ಟ್ ಪ್ರದೇಶ
Team Udayavani, May 3, 2021, 8:13 PM IST
ಸಾಂದರ್ಭಿಕ ಚಿತ್ರ
ಪಣಜಿ: ಗೋವಾದಿಂದ ಮಹಾರಾಷ್ಟ್ರದ ಅಹಮದ್‍ನಗರಕ್ಕೆ ಅಂಬ್ಯುಲೆನ್ಸ್ ನಲ್ಲಿ ಹೊರಟಿದ್ದ 4 ಜನರನ್ನು ಮಹಾರಾಷ್ಟ್ರ ಗಡಿಯಲ್ಲಿ ಥರ್ಮಲ್ ಗನ್ ತಪಾಸಣೆ ನಡೆಸಿದಾಗ ನಾಲ್ವರಲ್ಲೂ ಜ್ವರ ಕಾಣಿಸಿಕೊಂಡಿದ್ದು ಮಾತ್ರವಲ್ಲದೆಯೇ ಈ ನಾಲ್ವರೂ ಕೋವಿಡ್ ಸೋಂಕಿತರು ಎಂದು ದೃಢಪಟ್ಟ ನಂತರ ಈ ನಾಲ್ವರನ್ನೂ ಮಹಾರಾಷ್ಟ್ರಕ್ಕೆ ಪ್ರವೇಶಾವಕಾಶ ನೀಡದೆಯೇ ಗೋವಾಕ್ಕೆ ವಾಪಸ್ಸು ಕಳುಹಿಸಿದ ಘಟನೆ ನಡೆದಿದೆ.
ಈ ನಾಲ್ವರ ಆಕ್ಸಿಜನ್ ಪ್ರಮಾಣದಲ್ಲೂ ಕೊರತೆಯಿರುವುದು ಕಂಡುಬಂದಿದೆ. ತಪಾಸಣೆ ನಡೆಸಿದಾಗ ಈ ನಾಲ್ವರೂ ಕೋವಿಡ್ ಸೋಂಕಿತರು ಎಂಬುದು ಖಚಿತವಾದ ಹಿನ್ನೆಲೆಯಲ್ಲಿ ಇವರನ್ನು ಗೋವಾಕ್ಕೆ ವಾಪಸ್ಸು ಕಳುಹಿಸಿದ ಘಟನೆ ನಡೆದಿದೆ. ಈ ಘಟನೆಯಿಂದಾಗಿ ಗೋವಾ ಮಹಾರಾಷ್ಟ್ರ ಗಡಿ ಭಾಗದಲ್ಲಿ ಆತಂಕ ಮನೆಮಾಡಿದ್ದು ಚೆಕ್‍ಪೋಸ್ಟ್ ಪ್ರದೇಶವನ್ನು ಸ್ಯಾನಿಟೈಜೇಶನ್ ಮಾಡಲಾಗಿದೆ.
ಅಂಬ್ಯುಲೆನ್ಸ್ ನಲ್ಲಿ ಮಹಾರಾಷ್ಟ್ರಕ್ಕೆ ತೆರಳುತ್ತಿದ್ದ ನಾಲ್ಕೂ ಜನ ಕೋವಿಡ್ ಸೋಂಕಿತರು ಎಂದು ಖಚಿತವಾದ ನಂತರ ಸಾವಂತವಾಡಿ ತಹಶೀಲ್ದಾರ್ ರಾಜಾರಾಮ ಮಾತ್ರೆ ರವರಿಗೆ ಈ ಮಾಹಿತಿ ನೀಡಲಾಯಿತು. ಸ್ಥಳಕ್ಕೆ ಧಾವಿಸಿದ ಬಂದ ತಹಶೀಲ್ದಾರ್ ರವರು ಈ ನಾಲ್ಕೂ ಜನರನ್ನು ಗೋವಾದಲ್ಲಿರುವ ನಿಮ್ಮ ನಿವಾಸಕ್ಕೆ ತೆರಳುವಂತೆ ಸೂಚನೆ ನೀಡಲಾಯಿತು ಎಂಬ ಮಾಹಿತಿ ಲಭ್ಯವಾಗಿದೆ.
ಆದರೆ ಗೋವಾದಿಂದ 4 ಜನ ಕೋವಿಡ್ ಸೋಂಕಿತರನ್ನು ಕರೆದುಕೊಂಡು ಮಹಾರಾಷ್ಟ್ರಕ್ಕೆ ತೆರಳುತ್ತಿದ್ದ ಕಾರಣವೇನು ಎಂಬುದು ಮಾತ್ರ ಇದುವರೆಗೂ ತಿಳಿದುಬಂದಿಲ್ಲ. ಆದರೆ ಕೋವಿಡ್ ಸೋಂಕಿತರು ಅಂಬ್ಯುಲೆನ್ಸ್ ನಲ್ಲಿ ಓಡಾಟ ನಡೆಸಿರುವುದು ಆತಂಕ ಹೆಚ್ಚುವಂತೆ ಮಾಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Muddebihal: ಟ್ರ್ಯಾಕ್ಟರ್-ಟ್ರೇಲರ್ ಗೆ ಬೈಕ್ ಡಿಕ್ಕಿ ಹೊಡೆದು ಯುವಕ ಸ್ಥಳದಲ್ಲೇ ಮೃತ್ಯು
By Election: ಶಿಗ್ಗಾಂವಿ ಸವಿ ಬೊಮ್ಮಾಯಿ ಪುತ್ರನಿಗೋ, ಯಾಸಿರ್ ಪಠಾಣಗೋ?
King Cobra: “ಕಾಳಿಂಗ’ ಸರ್ಪಕ್ಕೆ ಕನ್ನಡದ್ದೇ ವೈಜ್ಞಾನಿಕ ಹೆಸರು!
Mysuru:’ಕರ್ನಾಟದಲ್ಲಿ “ಗ್ಯಾರಂಟಿ’ ಹೆಸರಲ್ಲಿ ಲೂಟಿ, ಮಹಾರಾಷ್ಟ್ರದಲ್ಲಿ ನೀವು ಘೋಷಿಸಬೇಡಿ’
By Election: ಚನ್ನಪಟ್ಟಣದಲ್ಲಿ ಎಚ್.ಡಿ.ದೇವೇಗೌಡ Vs ಡಿ.ಕೆ.ಶಿವಕುಮಾರ್ ಮೇಕೆದಾಟು ಜಟಾಪಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.