ಎಲ್ಲ ಲಸಿಕೆಯೂ ಸಮರ್ಥ
Team Udayavani, May 4, 2021, 6:10 AM IST
ಕೋವಿಡ್ ಎರಡನೇ ಅಲೆ ವ್ಯಾಪಕವಾಗುತ್ತಿರುವ ಕಾರಣ ವೈರಾಣುವನ್ನು ನಿಯಂತ್ರಿಸಲು 18ರಿಂದ 45 ವರ್ಷದವರಿಗೆ ಲಸಿಕೆ ನೀಡಿಕೆ ಆರಂಭವಾಗಿದೆ. ಲಸಿಕೆ ಕೊರತೆಯಿಂದಾಗಿ ಅನೇಕ ರಾಜ್ಯಗಳು ತಡವಾಗಿ ಲಸಿಕೆ ಅಭಿಯಾನಕ್ಕೆ ಮುಂದಾಗಿವೆ. ಈ ನಡುವೆ ಸದ್ಯ ದೇಶದಲ್ಲಿ ಲಭ್ಯವಿರುವ ಲಸಿಕೆಗಳ ಬಗ್ಗೆ ತಿಳಿದುಕೊಳ್ಳುವುದು ಮುಖ್ಯ. ಯಾವ ಲಸಿಕೆ ಉತ್ತಮವಾಗಿದೆ ಎಂಬ ಚರ್ಚೆಯೂ ಪ್ರಾರಂಭವಾಗಿದೆ. ಕೊವಿಶೀಲ್ಡ್, ಕೋವ್ಯಾಕ್ಸಿನ್ ಅಥವಾ ಮೂರನೇ ಲಸಿಕೆ, ರಷ್ಯಾದ ಸ್ಪುಟ್ನಿಕ್ ವಿ ದೇಶದಲ್ಲಿದೆ. ಈಗಾಗಲೇ ಕೊವಿಶೀಲ್ಡ್ ಮತ್ತು ಕೋವಾಕ್ಸಿನ್ ಜ. 16ರಿಂದಲೇ ಬಳಕೆಯಲ್ಲಿವೆ. ಇಲ್ಲಿ ಈ ಮೂರು ಲಸಿಕೆಗಳ ಪ್ರಮುಖ ಅಂಶಗಳು ಮತ್ತು ಸಾಮ್ಯತೆಯನ್ನು ವಿವರಿಲಾಗಿದೆ.
ಯಾವ ಲಸಿಕೆ ಉತ್ತಮವಾಗಿದೆ? :
ಕೋವಿಡ್ ತೀವ್ರ ರೋಗಲಕ್ಷಣಗಳನ್ನು ತಡೆಗಟ್ಟಲು ಮತ್ತು ಸಾವನ್ನು ತಪ್ಪಿಸಲು ಈ ಮೂರೂ ಲಸಿಕೆಗಳು ಶೇ. 100ರಷ್ಟು ಪರಿಣಾಮಕಾರಿಯೇ. ಇದೇ ಕಾರಣಕ್ಕಾಗಿ ಪ್ರಪಂಚದಾದ್ಯಂತದ ವಿಜ್ಞಾನಿಗಳು ಯಾವುದೇ ಲಸಿಕೆ ಲಭ್ಯವಿದ್ದರೂ ಅದನ್ನು ನೀಡಿ ಎಂದು ಮನವಿ ಮಾಡಿಕೊಳ್ಳುತ್ತಿದ್ದಾರೆ. ಈ ಮೂರು ಲಸಿಕೆಗಳು ಉತ್ತಮ ಫಲಿತಾಂಶವನ್ನು ನೀಡಿವೆ. ಕೋವ್ಯಾಕ್ಸಿನ್ ಅನ್ನು ಸಂಪೂರ್ಣವಾಗಿ ಭಾರತದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಕೊವಿಶೀಲ್ಡ್ ಅನ್ನು ಆಕ್ಸ್‌ಫರ್ಡ್ ವಿ.ವಿ. ಮತ್ತು ಅಸ್ಟ್ರಾಜೆನೆಕಾ ಜಂಟಿಯಾಗಿ ಅಭಿವೃದ್ಧಿಪಡಿಸಿವೆ. ಈಗ ಪುಣೆಯಲ್ಲಿ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಇದನ್ನು ತಯಾರಿಸುತ್ತಿದೆ.
ಮೇ 1ರಂದು ಭಾರತಕ್ಕೆ ಆಗಮಿಸಿರುವ ರಷ್ಯಾದ ಲಸಿಕೆ ಸ್ಪುಟ್ನಿಕ್ ವಿಯನ್ನು ಮಾಸ್ಕೋದ ಗಮಲಯ ಸಂಸ್ಥೆ “ರಷ್ಯಾದ ಅಭಿವೃದ್ಧಿ ಮತ್ತು ಹೂಡಿಕೆ ನಿಧಿ’ (ಆರ್‌ಡಿಎಫ್) ಯ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಿದೆ. ಭಾರತದಲ್ಲಿ 6 ಕಂಪೆನಿಗಳು ಇದನ್ನು ಹೈದರಾಬಾದ್‌ನ ಡಾ| ರೆಡ್ಡಿ ಪ್ರಯೋಗಾಲಯದ ಉಸ್ತುವಾರಿಯಲ್ಲಿ ಉತ್ಪಾದಿಸಲಿವೆ. ಆದರೆ ಆರಂಭಿಕ 1.25 ಕೋಟಿ ಲಸಿಕೆಗಳನ್ನು ಆಮದು ಮಾಡಿಕೊಳ್ಳಲಾಗುತ್ತದೆ.
ಬೆಲೆ ಮತ್ತು ಲಭ್ಯತೆ ಏನು? :
ಕೋವ್ಯಾಕ್ಸಿನ್ ಮತ್ತು ಕೊವಿಶೀಲ್ಡ್ ಶೀಘ್ರದಲ್ಲೇ ಮುಕ್ತ ಮಾರುಕಟ್ಟೆಯಲ್ಲಿ ಲಭ್ಯವಾಗಲಿವೆ. ರಾಜ್ಯ ಸರಕಾರಗಳು ಕೂಡ ಇವುಗಳನ್ನು ಖರೀದಿಸಲು ಮತ್ತು ಬಳಸಲು ಸಾಧ್ಯವಾಗುತ್ತದೆ. ಸ್ಪುಟ್ನಿಕ್ ವಿ ಲಸಿಕೆ ಕೂಡ ಶೀಘ್ರದಲ್ಲೇ ಮಾರುಕಟ್ಟೆಯಲ್ಲಿ ಲಭ್ಯವಾಗುವ ಸಾಧ್ಯತೆಯಿದೆ.
ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾವು ಒಂದು ಕೊವಿಶೀಲ್ಡ್ ಡೋಸ್ ಬೆಲೆಯನ್ನು ರಾಜ್ಯ ಸರಕಾರ ಗಳಿಗೆ 300 ರೂ. ಮತ್ತು ಖಾಸಗಿ ಆಸ್ಪತ್ರೆಗಳಿಗೆ 600 ರೂ. ಎಂದು ನಿಗದಿಪಡಿಸಿದೆ. ಆದರೆ ಕೋವ್ಯಾಕ್ಸಿನ್ ಸ್ವಲ್ಪ ದುಬಾರಿ ಯಾಗಿದೆ. ಇದು ರಾಜ್ಯ ಸರಕಾರಗಳಿಗೆ 400 ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ 1,200 ರೂ.ಗಳಿಗೆ ಲಭ್ಯವಿರುತ್ತದೆ.
ಸ್ಪುಟ್ನಿಕ್ ವಿ ಅಭಿವೃದ್ಧಿಪಡಿಸಲು ಸಹಾಯ ಮಾಡಿದ ಆರ್‌ಡಿಐಎಫ್ ಮುಖ್ಯಸ್ಥ ಡಿಮಿಟ್ರೆವ್ ಪ್ರಕಾರ ಈ ಲಸಿಕೆ 700 ರೂ.ಗಳಿಗೆ ಲಭ್ಯವಿರಲಿದೆ. ರಾಜ್ಯ ಸರಕಾರಗಳು ಮತ್ತು ಖಾಸಗಿ ಆಸ್ಪತ್ರೆ ಗಳಿಗೆ ದರಗಳನ್ನು ಬಹಿರಂಗಪಡಿಸಿಲ್ಲ. 24 ರಾಜ್ಯಗಳು ಇಲ್ಲಿಯ ವರೆಗೆ 18+ ನಾಗರಿಕರಿಗೆ ಉಚಿತವಾಗಿ ಲಸಿಕೆ ನೀಡುವುದಾಗಿ ಘೋಷಿಸಿವೆ.
ಲಸಿಕೆ ಡೋಸ್‌ಗಳ ನಡುವಿನ ವಾರಗಳ ಅಂತರ ಎಷ್ಟು ? :
ಈ ಎಲ್ಲ ಮೂರು ಲಸಿಕೆಗಳ :
ಎರಡು ಡೋಸ್ ಅನ್ನು ತೆಗೆದುಕೊಂಡರೆ ಕೊರೊನಾದ ತೀವ್ರತೆಯಿಂದ ಪಾರಾಗಲು ಸಾಧ್ಯವಾಗುತ್ತದೆ. ಅಂದರೆ ಕೊರೊನಾ ವಿರುದ್ಧ ಪ್ರತಿರಕ್ಷಣ ಪ್ರತಿಕ್ರಿಯೆಗಾಗಿ ಎರಡು ಡೋಸ್‌ಗಳು ಆವಶ್ಯಕ. ಈ ಲಸಿಕೆ ಇಂಟ್ರಾಮಸ್ಕಾಲರ್ ಆಗಿದೆ. ಅಂದರೆ ಇಲ್ಲಿ ಭುಜದ ಬಳಿ ತೋಳಿನ ಸ್ನಾಯುಗಳಿಗೆ ಚುಚ್ಚಲಾಗುತ್ತದೆ.
ಕೋವ್ಯಾಕ್ಸಿನ್‌ನ ಎರಡು ಡೋಸ್‌ಗಳನ್ನು 4ರಿಂದ 6 ವಾರಗಳ ಅಂತರದಲ್ಲಿ ನೀಡಲಾಗು ತ್ತದೆ. 6-8 ವಾರಗಳ ಅಂತರದೊಂದಿಗೆ ಕೊವಿಶೀಲ್ಡ್‌ನ ಎರಡು ಡೋಸ್ ನೀಡಬೇಕಾ ಗುತ್ತದೆ. ಇವೆರಡರ ಮಧ್ಯೆ ಮೂರು ವಾರ ಗಳ ಅಂತರವಿದೆ. ಆದರೆ ಸ್ಪುಟ್ನಿಕ್ ವಿಯನ್ನು ತೆಗೆದುಕೊಳ್ಳುವ ಅಂತರ 21 ದಿನಗಳು.
ಆರಂಭದಲ್ಲಿ ಭಾರತದಲ್ಲಿ ಎರಡು ಡೋಸ್ ಕೊವಿಶೀಲ್ಡ್ ಅನ್ನು 4-6 ವಾರಗಳ ಅಂತರದಲ್ಲಿ ಇರಿಸಲಾಗಿತ್ತು. ಆದರೆ ಕೊವಿಶೀಲ್ಡ್‌ನ ಎರಡನೇ ಡೋಸ್ ಅನ್ನು ಇನ್ನಷ್ಟು ಮುಂದೂಡಿದರೆ ಅದರ ಪರಿಣಾಮಕತ್ವ ಹೆಚ್ಚಾಗುತ್ತದೆ ಎಂದು ಪ್ರಯೋಗಗಳಲ್ಲಿ ತಿಳಿದುಬಂದಿದೆ.
ಹೊಸ ರೂಪಾಂತರಗಳಿಗೆ ಈ ಲಸಿಕೆ ಎಷ್ಟು ಪರಿಣಾಮಕಾರಿ? :
ಕೋವಿಡ್ ವೈರಸ್‌ನ ಹಲವಾರು ಹೊಸ ರೂಪಾಂತರಿತ ತಳಿಗಳು ಅನೇಕ ದೇಶಗಳಲ್ಲಿವೆ. ಯುಕೆ ಕೆಂಟ್ ತಳಿಗಳು, ಬ್ರೆಜಿಲ್, ದ. ಆಫ್ರಿಕಾದ ತಳಿಗಳು ಮತ್ತು ಡಬಲ್ ರೂಪಾಂತರಿತ ಮತ್ತು ಟ್ರಿಪಲ್ ರೂಪಾಂತರಿತ ತಳಿಗಳು ಅನೇಕ ದೇಶಗಳಲ್ಲಿ ಕಂಡುಬಂದಿವೆ. ಈ ರೂಪಾಂತರಗಳ ವಿರುದ್ಧ ಕೋವ್ಯಾಕ್ಸಿನ್ ಪರಿಣಾಮಕಾರಿ ಎಂಬುದು ಸಾಬೀತಾಗಿದೆ. ಕೊವಿಶೀಲ್ಡ್ ಮತ್ತು ಸ್ಪುಟ್ನಿಕ್ ವಿ ಕೂಡ ಸಮರ್ಥವಾಗಿದ್ದು ಲಸಿಕೆಯನ್ನು ತೆಗೆದುಕೊಳ್ಳುವುದು ಆವಶ್ಯಕವಾಗಿದೆ. ಇವುಗಳು ಕೋವಿಡ್ ವಿರುದ್ಧ ಹೋರಾಡುವುದರಲ್ಲಿ ಎರಡು ಮಾತಿಲ್ಲ.
ಅಡ್ಡಪರಿಣಾಮಗಳು ? :
ಈ ಮೂರೂ ಲಸಿಕೆಗಳು ಒಂದೇ ತೆರನಾದ ಅಡ್ಡ ಪರಿಣಾಮ ಗಳನ್ನು ಹೊಂದಿವೆ. ಒಳ-ಸ್ನಾಯು ಮತ್ತು ಕೈಗೆ ಆಳವಾಗಿ ಚುಚ್ಚಲಾಗುತ್ತದೆ. ಇಂಜೆಕ್ಷನ್ ನೀಡಿದ ಸ್ಥಳದಲ್ಲಿ ನೋವು, ಊತಕ್ಕೆ ಕಾರಣವಾಗುತ್ತದೆ. ಅಂತೆಯೇ ಲಘು ಜ್ವರ, ಸೌಮ್ಯ ಶೀತ, ತಲೆನೋವು, ಕೈ ಕಾಲುಗಳ ನೋವು ಕೂಡ ಕಾಣಿಸಿಕೊಳ್ಳಬಹುದು. ಆದರೆ ಇವುಗಳು ಕಡಿಮೆಯಾಗುತ್ತವೆ. ಆದರೆ ಇದಕ್ಕಾಗಿ ಯಾರೂ ಹೆದರುವ ಅಗತ್ಯ ಇಲ್ಲ ಎಂದು ತಜ್ಞರು ಪುನರುಚ್ಚರಿಸಿದ್ದಾರೆ.
ಈ ಲಸಿಕೆಗಳ ಪರಿಣಾಮ ಎಷ್ಟು ಕಾಲ ಉಳಿಯುತ್ತದೆ? :
ಈ ಎಲ್ಲ ಲಸಿಕೆಗಳನ್ನು ಬಹಳ ಕಡಿಮೆ ಸಮಯದಲ್ಲಿ ತಯಾರಿಸ ಲಾಗಿದೆ. ಇದು ಎಷ್ಟು ಸಮಯದವರೆಗೆ ಪರಿಣಾಮಕಾರಿ ಎಂಬು ದನ್ನು ಪ್ರಯೋಗಗಳು ಸಾಬೀತು ಮಾಡಿಲ್ಲ. ಈ ಕಾರಣಕ್ಕಾಗಿ ಅವು ಎಷ್ಟು ಸಮಯದವರೆಗೆ ಪರಿಣಾಮ ಬೀರುತ್ತವೆ ಎಂದು ಹೇಳುವುದು ತುಂಬಾ ಕಷ್ಟ. ಅದೇನೇ ಇದ್ದರೂ ಕೊರೊನಾ ವಿರುದ್ಧದ ಪ್ರತಿಕಾಯಗಳು ಕನಿಷ್ಠ 9ರಿಂದ 12 ತಿಂಗಳ ವರೆಗೆ ಪರಿಣಾಮಕಾರಿ ಯಾಗುತ್ತವೆ ಎಂದು ತಜ್ಞರು ಹೇಳುತ್ತಾರೆ. ಇತ್ತೀಚೆಗೆ ಫೈಜರ್ ಲಸಿಕೆಗೆ ಸಂಬಂಧಿಸಿದ ವರದಿಯಂತೆ ಒಂದು ವರ್ಷದೊಳಗೆ ಮೂರನೇ ಡೋಸ್ ಅಗತ್ಯವಿರಬಹುದು. ಈ ಕುರಿತಂತೆ ಅಧ್ಯಯನ ಮುಂದು ವರಿದಿದ್ದು, ಆದಷ್ಟು ಬೇಗ ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲ.
ಹೇಗೆ ತಯಾರಿಸಲಾಗುತ್ತದೆ? :
ಕೋವ್ಯಾಕ್ಸಿನ್ ಅನ್ನು ಸತ್ತ ವೈರಸ್‌ನಿಂದ ತಯಾ ರಿಸಲಾಗುತ್ತದೆ. ಹೀಗಾಗಿ ಇದು ಪ್ರತಿಕಾಯದ ಪ್ರತಿಕ್ರಿಯೆಯನ್ನು ದೇಹದಲ್ಲಿ ಉಂಟುಮಾಡುತ್ತದೆ. ಜತೆಗೆ ದೇಹವು ವೈರಸ್ ಅನ್ನು ಗುರುತಿಸಿ ಅದರ ವಿರುದ್ಧ ಹೋರಾಡಲು ಸಿದ್ಧವಾಗುತ್ತದೆ.
ಕೊವಿಶೀಲ್ಡ್ ಎಂಬುದು ವೈರಲ್ ವೆಕ್ಟರ್ ಲಸಿಕೆ. ಕೊರೊನಾ ವೈರಸ್‌ನಂಥೆ ಸ್ಪೈಕ್ ಪ್ರೊಟೀನ್ ಅನ್ನು ರಚಿಸಲು ಇದು ಚಿಂಪಾಂಜಿಗಳಲ್ಲಿ ಕಂಡುಬರುವ ಅಡೆನೊ ವೈರಸ್ ChAD0x1 ಅನ್ನು ಬಳಸುತ್ತದೆ. ಇದು ದೇಹಕ್ಕೆ ರಕ್ಷಣೆ ನೀಡುತ್ತದೆ.
ಸ್ಪುಟ್ನಿಕ್ ವಿ ಕೂಡ ವೈರಲ್ ವೆಕ್ಟರ್ ಲಸಿಕೆಯಾ ಗಿದೆ. ಆದರೆ ವ್ಯತ್ಯಾಸವೆಂದರೆ ಇದನ್ನು ಒಂದರ ಬದಲು ಎರಡು ವೈರಸ್‌ಗಳಿಂದ ತಯಾರಿಸಲಾಗುತ್ತದೆ. ಇದರಲ್ಲಿ ಎರಡೂ ಪ್ರಮಾಣಗಳು ವಿಭಿನ್ನವಾಗಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Smart meters: ನೀರು ಸಂರಕ್ಷಿಸುವ ವಿಚಾರದಲ್ಲಿ ಕ್ರಾಂತಿ ಮಾಡಿದ ಸ್ಮಾರ್ಟ್ ವಾಟರ್ ಮೀಟರ್
Karnataka; ಕೇಂದ್ರ ಸ್ವಾಮ್ಯದ ಸಂಸ್ಥೆಗಳಲ್ಲಿ ಕನ್ನಡಿಗರೇಕೆ ವಿರಳ? ಆಗಬೇಕಿರುವುದೇನು?
ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ
Kannada; ಅನಿವಾಸಿ ಕನ್ನಡಿಗರ ಮಕ್ಕಳಲ್ಲೂ ಕನ್ನಡ ಚಿಗುರಲಿ
Kanchi swamiji; ದೇವಸ್ಥಾನಗಳ ಭೂಮಿ ದೇವಸ್ಥಾನಗಳಿಗೇ ಇರಲಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Udupi: ಪಿಕಪ್ ವಾಹನ ಢಿಕ್ಕಿ ಹೊಡೆದು ವ್ಯಕ್ತಿ ಗಾಯ
Gift: ಶಿಗ್ಗಾವಿಯಲ್ಲಿ ನಾಮಪತ್ರ ವಾಪಸ್ ಪಡೆದ ಖಾದ್ರಿಗೆ ಹೆಸ್ಕಾಂ ಅಧ್ಯಕ್ಷಗಿರಿ ಹುದ್ದೆ!
Davanagere: ʼಸೋಲಿಲ್ಲದ ಸರದಾರʼ ಎನಿಸಿದ್ದ ʼಬೆಳ್ಳೂಡಿ ಕಾಳಿʼ ಟಗರು ಅನಾರೋಗ್ಯದಿಂದ ನಿಧನ
IFFI 2024; ಫಿಲ್ಮ್ ಬಜಾರ್: ಮತ್ತೊಂದು ಯಶಸ್ವಿ ಮುನ್ನುಡಿಯೊಂದಿಗೆ ಉತ್ಸವ ಸಮಾಪನ
IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.