ಭೂಮಿಯನ್ನು ಪೂಜಿಸೋಣ…ಹಸುರನ್ನು ಬೆಳೆಸೋಣ…

Team Udayavani, May 4, 2021, 6:00 AM IST

ಭೂಮಿಯನ್ನು ಪೂಜಿಸೋಣ…ಹಸುರನ್ನು ಬೆಳೆಸೋಣ…

ಈ ಭೂಮಿಯಲ್ಲಿ ಅದೆಷ್ಟೋ ಸಹಸ್ರ ವಿಧದ ಜೀವವೈವಿಧ್ಯಗಳಿವೆ. ಇವುಗಳಲ್ಲಿ ಮಾನವ ಕೇವಲ ಒಂದು ಜೀವಿಯಷ್ಟೇ. ಆದರೆ ಮಾನವನಿಗೆ ಬೇರೆಲ್ಲ ಜೀವಿಗಳಿಗಿರದ ಬುದ್ಧಿ ಎಂಬ ಮಾಂತ್ರಿಕ ಶಕ್ತಿ ಇದೆ. ವಿದ್ಯಾಭ್ಯಾಸದ ಮೂಲಕ ಜ್ಞಾನ ಸಂಪಾದನೆಯನ್ನು ಮಾಡುವ ಅಪೂರ್ವ ಅವಕಾಶ ಮಾನವನಿಗಿದೆ. ಆದರೆ ಮಾನವ ಶ್ರಮ ಮತ್ತು ಜ್ಞಾನದ ಮಹತ್ವವನ್ನು ಅರಿಯದೇ ನಿರಂತರವಾಗಿ ಪ್ರಕೃತಿಯ ಮೇಲೆ ದಬ್ಟಾಳಿಕೆ ನಡೆಸುತ್ತಲೇ ಬಂದಿದ್ದಾನೆ.

ಕನಕಪುರ ಎಂಬ ಊರಿನಲ್ಲಿ ಸೋಮಪ್ಪ ಎಂಬ ರೈತನಿದ್ದ. ಆತನಿಗೆ ಒಂದು ಎಕರೆ ಜಮೀನು ಇತ್ತು. ಆ ಜಮೀನಿನಲ್ಲಿಯೇ ಕಷ್ಟಪಟ್ಟು ದುಡಿದು ಆರಾಮವಾದ ಜೀವನ ನಡೆಸುತ್ತಿದ್ದನು. ಆತನಿಗೆ ಒಬ್ಬನೇ ಮಗ ರಂಗ. ರಂಗ ಚಿಕ್ಕವನಿರುವಾಗಲೇ ಸೋಮಪ್ಪ ತನ್ನ ಹೆಂಡತಿಯನ್ನು ಕಳೆದುಕೊಂಡನು.  ತಾಯಿ ಇಲ್ಲದ ಮಗು ಎಂದು ಬಹು ಮುದ್ದಿನಿಂದ ಸಾಕಿದ. ಚೆನ್ನಾಗಿ ಓದಿ ಒಳ್ಳೆಯ ಉದ್ಯೋಗ ಪಡೆಯಲಿ ಎಂದು ಶಾಲೆಗೆ ಸೇರಿಸಿದ. ಆದರೆ ವಿದ್ಯೆ ಅವನ ತಲೆಗೆ ಹತ್ತಲಿಲ್ಲ. ಉಡಾಫೆಯಾಗಿ, ಸೋಮಾರಿಯಾಗಿ ಬೆಳೆದ. ಸೋಮಪ್ಪನಿಗೆ ರಂಗನದೇ ಚಿಂತೆಯಾಯಿತು!

ಇದ್ದಕ್ಕಿದ್ದಂತೆ ಸೋಮಪ್ಪ ನಿತ್ರಾಣಗೊಳ್ಳಲು ಆರಂಭಿಸಿದನು. ವೈದ್ಯರು ಪರೀಕ್ಷಿಸಿ “ನೀನು ಹೆಚ್ಚು ದಿನ ಬದುಕುಳಿಯುವುದಿಲ್ಲ’ ಎಂದರು. ಸೋಮಪ್ಪ ಚಿಂತಾಕ್ರಾಂತನಾದ. ತನ್ನ ಅನಂತರ ಮಗನ ಜೀವನ ಹೇಗೆ? ಎಂದು ಆಲೋಚಿಸಿಯೇ ಹಾಸಿಗೆ ಹಿಡಿದ. ಒಂದು ದಿನ ರಂಗನನ್ನು ಕರೆದು ಒಂದು ಚೀಲವನ್ನು ಕೊಟ್ಟು “ಇದರಲ್ಲಿ ಸ್ವಲ್ಪ ಹಣವಿದೆ. ನಿನ್ನ ಜೀವನಕ್ಕೆ ಆಗುತ್ತದೆ. ಇದರಲ್ಲಿರುವ ಹಣ ಖಾಲಿಯಾದ ಮೇಲೆ ಪ್ರತೀ ಅಡಿಕೆ ಮರದ ಕೆಳಗೆ ಹಣವನ್ನು ಹುಗಿದಿಟ್ಟಿದ್ದೇನೆ. ಅದನ್ನು ತೆಗೆದುಕೋ’ ಎಂದು ಹೇಳಿ ಕಣ್ಮುಚ್ಚಿದನು.

ರಂಗ ತಂದೆ ಕೊಟ್ಟ ಹಣವನ್ನು ಖಾಲಿ ಮಾಡತೊಡಗಿದ. “ಕೂತು ಉಂಡರೆ ಕುಡಿಕೆ ಹೊನ್ನು ಸಾಲದು’ ಎಂಬಂತೆ ಸೋಮಪ್ಪ ಕೊಟ್ಟ ಹಣವೆಲ್ಲ ಖಾಲಿಯಾಯಿತು. ಮುಂದೇನು? ಎಂದು ಯೋಚಿಸಲಾರಂಭಿಸಿದ ಆತನಿಗೆ  “ಪ್ರತೀ ಅಡಿಕೆ ಮರದ ಬುಡದಲ್ಲಿ ಹಣ ಇಟ್ಟಿದ್ದೇನೆ’ ಎಂದು ತಂದೆ ಹೇಳಿದ ಮಾತು ನೆನಪಾಯಿತು. ಪ್ರತೀ ಅಡಿಕೆ ಮರದ ಬುಡ ಅಗೆಯಲು ಪ್ರಾರಂಭಿಸಿದನು. ಆದರೆ ಒಂದೂ ಅಡಿಕೆ ಮರದ ಬುಡದಲ್ಲಿ ಹಣ ಸಿಗಲಿಲ್ಲ. ನಿರಾಶೆಗೊಂಡ ರಂಗ ತಂದೆಗೆ ಬೈಯಲಾರಂಭಿಸಿದನು. ಆ ಸಮಯಕ್ಕೆ ಆಗಮಿಸಿದ ಪಕ್ಕದ ಮನೆಯವನು ಹೇಗೂ ಅಡಿಕೆ ಮರದ ಬುಡ ಅಗೆದಿದ್ದೀಯಾ. ಅದಕ್ಕೆ ಸೊಪ್ಪು, ಗೊಬ್ಬರ ಹಾಕಿ ಮಣ್ಣು ಮುಚ್ಚು ಎಂದನು. ರಂಗ ಒಲ್ಲದ ಮನಸ್ಸಿನಿಂದ ಹಾಗೆಯೇ ಮಾಡಿದ. ಕಾಲಕ್ಕೆ ಸರಿಯಾಗಿ ಮಳೆಯೂ ಸುರಿಯಿತು. ಉತ್ತಮ ಫ‌ಸಲು ಬಂದಿತು. ಅದಕ್ಕೆ ಸರಿಯಾಗಿ ಅಡಿಕೆಗೆ ಉತ್ತಮ ಬೆಲೆಯೂ ಸಿಗಲಾರಂಭಿಸಿತು. ರಂಗ ತನ್ನ ಇಳುವರಿಯನ್ನು ಮಾರಿ ಹಣ ಸಂಪಾದಿಸಿದ. ಇದರಿಂದ ತನ್ನ ಜೀವನವನ್ನು ನಡೆಸಲಾರಂಭಿಸಿದ. ಈ ಹಿಂದಿನ ಸೋಮಾರಿತನವನ್ನು ಬಿಟ್ಟು ತೋಟದಲ್ಲಿ ದುಡಿಯಲಾರಂಭಿಸಿದ. ಉತ್ತಮ ಜೀವನ ಕಂಡುಕೊಂಡ. ತಂದೆ ಸೋಮಪ್ಪ ಹೇಳಿದ ಮಾತಿನ ಮರ್ಮ ಅರಿವಾಯಿತು.

ಇದೊಂದು ಕಥೆಯಷ್ಟೆ! ಆದರೆ ಇದರಲ್ಲಿರುವ ನೀತಿ ನಮ್ಮ ಜೀವನಕ್ಕೆ ಆಧಾರವಾಗಿದೆ. ಪ್ರತಿಯೊಬ್ಬರೂ ದುಡಿದು ತಿನ್ನಬೇಕು. ಬೆವರು ಸುರಿಸಿ ದುಡಿದರೆ ದೇವರು ಉತ್ತಮ ಪ್ರತಿಫ‌ಲವನ್ನು ನೀಡುತ್ತಾನೆ. ಭೂಮಿಯಲ್ಲಿ ದುಡಿಯುವುದರಿಂದ ನಮ್ಮ ಮಾನಸಿಕ ಆರೋಗ್ಯ, ದೈಹಿಕ ಆರೋಗ್ಯ ಉತ್ತಮವಾಗಿರುತ್ತದೆ. ಮಾನವನ ಅತಿಯಾದ ಸ್ವಾರ್ಥದಿಂದಾಗಿ, ಹಣದ ಮೇಲಿನ ವ್ಯಾಮೋಹದಿಂದಾಗಿ ಇಡೀ ಪ್ರಕೃತಿಯೇ ಮಾನವನ ಚಟುವಟಿಕೆಗಳಿಂದ ನಾಶವಾಗಿ ಹೋಗುತ್ತಿದೆ. ಇದರ ಪರಿಣಾಮವಾಗಿ ಕಂಡು ಕೇಳರಿಯದ ರೋಗಗಳು ಮಾನವನನ್ನು ಆವರಿಸಿಕೊಂಡಿದೆ. ಕಾಲ ಮಿಂಚಿ ಹೋಗುವ ಮೊದಲೇ ಪಶ್ಚಾತ್ತಾಪ ಪಡುವ ಮುನ್ನವೇ ಎಚ್ಚೆತ್ತುಕೊಳ್ಳೋಣ. ಮುಂದಿನ ಪೀಳಿಗೆಯವರಿಗೆ ಒಂದಿಷ್ಟು ಶುದ್ಧವಾದ ಗಾಳಿ, ಶುದ್ಧವಾದ ನೀರು ಉಳಿಸೋಣ. ಪ್ರಕೃತಿಯನ್ನು ಉಳಿಸೋಣ…ಬೆಳೆಸೋಣ….

-ಭಾಗ್ಯಶ್ರೀ, ಹಾಲಾಡಿ

ಟಾಪ್ ನ್ಯೂಸ್

Tamil Director: ಖ್ಯಾತ ತಮಿಳು ಚಿತ್ರ ನಿರ್ದೇಶಕ ಸುರೇಶ್ ಸಂಗಯ್ಯ ನಿಧನ

Tamil Director: ಖ್ಯಾತ ತಮಿಳು ಚಿತ್ರ ನಿರ್ದೇಶಕ ಸುರೇಶ್ ಸಂಗಯ್ಯ ವಿಧಿವಶ

SMAT: ಸಯ್ಯದ್‌ ಮುಷ್ತಾಕ್‌ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ

SMAT 2024: ಸಯ್ಯದ್‌ ಮುಷ್ತಾಕ್‌ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ

2-news

ಹೆದ್ದಾರಿ ತಡೆ ನಡೆಸಿದ ಆರೋಪ; ಸುಳ್ಯ, ಬೈಂದೂರು ಶಾಸಕರ ಸಹಿತ ಹಲವರ ವಿರುದ್ಧ ಪ್ರಕರಣ

IPL Auction: Mallika Sagar will conduct the entire IPL auction

IPL Auction: ಸಂಪೂರ್ಣ ಐಪಿಎಲ್‌ ಹರಾಜು ನಡೆಸಲಿದ್ದಾರೆ ಮಲ್ಲಿಕಾ ಸಾಗರ್

Jhansi Hospital: ಅಗ್ನಿ ದುರಂತ, ನವಜಾತ ಶಿಶುಗಳ ಸಜೀವ ದಹನ… ಮೋದಿ ಸಂತಾಪ, ಪರಿಹಾರ ಘೋಷಣೆ

Jhansi Hospital: ಅಗ್ನಿ ದುರಂತ, ನವಜಾತ ಶಿಶುಗಳ ಸಜೀವ ದಹನ… ಮೋದಿ ಸಂತಾಪ, ಪರಿಹಾರ ಘೋಷಣೆ

bhairathi ranagal review

Bhairathi Ranagal Review: ರೋಣಾಪುರದ ರಣಬೇಟೆಗಾರ

Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ

Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-sugama

Music; ಸುಗಮ ಸಂಗೀತಕ್ಕೆ ನವೋದಯ ಸಾಹಿತ್ಯ ಬುನಾದಿ

3-kananda-1

Kannada: ಕನ್ನಡನಾಡಲ್ಲಿ ಕನ್ನಡ ಕಲಿಕೆಯ ಹಾಡು-ಪಾಡು

India: ಭಾರತದಲ್ಲಿ ರಹಸ್ಯ ವಾಸ್ತವ್ಯ, ಬಿಗಿ ಭದ್ರತೆ…ಶೇಖ್‌ ಹಸೀನಾ ಆಶ್ರಯ ಪಡೆದು 100 ದಿನ!

India: ಭಾರತದಲ್ಲಿ ರಹಸ್ಯ ವಾಸ್ತವ್ಯ, ಬಿಗಿ ಭದ್ರತೆ…ಶೇಖ್‌ ಹಸೀನಾ ಆಶ್ರಯ ಪಡೆದು 100 ದಿನ!

ಯಕ್ಷಗಾನದ ಕನ್ನಡ ಭಾಷಾ ಸಂಪದ ಉಳಿಸಿ, ಬೆಳೆಸೋಣ

ಯಕ್ಷಗಾನದ ಕನ್ನಡ ಭಾಷಾ ಸಂಪದ ಉಳಿಸಿ, ಬೆಳೆಸೋಣ

ರಾಷ್ಟ್ರೀಯ ಆರ್ಥಿಕ ಉತ್ಥಾನದ ಪದದರ್ಶಿ ಸಹಕಾರಿ ಸಂಸ್ಥೆಗಳು

ರಾಷ್ಟ್ರೀಯ ಆರ್ಥಿಕ ಉತ್ಥಾನದ ಪದದರ್ಶಿ ಸಹಕಾರಿ ಸಂಸ್ಥೆಗಳು

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Tamil Director: ಖ್ಯಾತ ತಮಿಳು ಚಿತ್ರ ನಿರ್ದೇಶಕ ಸುರೇಶ್ ಸಂಗಯ್ಯ ನಿಧನ

Tamil Director: ಖ್ಯಾತ ತಮಿಳು ಚಿತ್ರ ನಿರ್ದೇಶಕ ಸುರೇಶ್ ಸಂಗಯ್ಯ ವಿಧಿವಶ

SMAT: ಸಯ್ಯದ್‌ ಮುಷ್ತಾಕ್‌ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ

SMAT 2024: ಸಯ್ಯದ್‌ ಮುಷ್ತಾಕ್‌ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ

2-news

ಹೆದ್ದಾರಿ ತಡೆ ನಡೆಸಿದ ಆರೋಪ; ಸುಳ್ಯ, ಬೈಂದೂರು ಶಾಸಕರ ಸಹಿತ ಹಲವರ ವಿರುದ್ಧ ಪ್ರಕರಣ

IPL Auction: Mallika Sagar will conduct the entire IPL auction

IPL Auction: ಸಂಪೂರ್ಣ ಐಪಿಎಲ್‌ ಹರಾಜು ನಡೆಸಲಿದ್ದಾರೆ ಮಲ್ಲಿಕಾ ಸಾಗರ್

Jhansi Hospital: ಅಗ್ನಿ ದುರಂತ, ನವಜಾತ ಶಿಶುಗಳ ಸಜೀವ ದಹನ… ಮೋದಿ ಸಂತಾಪ, ಪರಿಹಾರ ಘೋಷಣೆ

Jhansi Hospital: ಅಗ್ನಿ ದುರಂತ, ನವಜಾತ ಶಿಶುಗಳ ಸಜೀವ ದಹನ… ಮೋದಿ ಸಂತಾಪ, ಪರಿಹಾರ ಘೋಷಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.