ಐಪಿಎಲ್ ಬೆಟ್ಟಿಂಗ್ ದಂಧೆ : 6 ಆರೋಪಿಗಳ ಬಂಧನ
Team Udayavani, May 4, 2021, 3:06 PM IST
ಮಂಗಳೂರು : ಐಪಿಎಲ್ ಬೆಟ್ಟಿಂಗ್ ಹೆಸರಿನಲ್ಲಿ ವಂಚನೆ ಮಾಡುತ್ತಿದ್ದ ಬುಕ್ಕಿಗಳನ್ನು ಮಂಗಳೂರು ಸಿಸಿಬಿ ಪೊಲೀಸರು ಮತ್ತು ನಾರ್ಕೋಟಿಕ್ ಕ್ರೈಂ ವಿಭಾಗದ ಪೊಲೀಸರು ಆರು ಮಂದಿಯನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ವಿಕ್ರಂ ಕುಂಪಲ, ಧನಪಾಲ್ ಶೆಟ್ಟಿ, ಕಮಲೇಶ್ ಹರೀಶ್ ಶೆಟ್ಟಿ, ಪ್ರೀತೇಶ್, ಅವಿನಾಶ್ ಉರ್ವಾ ಎಂದು ಗುರುತಿಸಲಾಗಿದೆ. ಈ ಆರೋಪಿಗಳು ಆಕ್ಸಿನ್, ಕರ್ನಾಟಕ ಮತ್ತು ಹೆಚ್ ಡಿ ಎಫ್ ಸಿ ಬ್ಯಾಂಕುಗಳನ್ನು ನಕಲಿ ಖಾತೆ ತೆರೆದು ವಂಚನೆ ಮಾಡುತ್ತಿದ್ದರು ಎಂದು ಆರೋಪಿಸಲಾಗಿದೆ.
ಈ ಪ್ರಕರಣಕ್ಕೆ ಸಂಬಧಿಸಿದಂತೆ 20 ಬ್ಯಾಂಕ್ ಖಾತೆಗಳನ್ನು ಪೊಲೀಸರು ಮುಟ್ಟುಗೋಲು ಹಾಕಿಕೊಂಡು ಸುಮಾರು 20 ಲಕ್ಷ ಹಣ ಮತ್ತು ಮೂರು ಲಕ್ಷ ನಗದು ಸೇರಿದಂತೆ 10 ಮೊಬೈಲ್ ಫೋನ್ ಗಳನ್ನು ವಶಕ್ಕೆ ಪಡೆಯಲಾಗಿದೆ.
ಮಂಗಳೂರು ನಗರ ಉಪ ಪೊಲೀಸ್ ಆಯುಕ್ತರಾದ ಶ್ರೀ ಹರಿರಾಮ್ ಶಂಕರ್ ಐಪಿಎಸ್ ಮತ್ತು ವಿನಯ ಗಾಂವಕರ್ ನಿರ್ದೇಶನದಂತೆ ಸಿಸಿಬಿ ಪೊಲೀಸ್ ನಿರೀಕ್ಷಕರಾದ ಮಹೇಶ್ ಪ್ರಸಾದ್ ಮತ್ತು ಸಿಬ್ಬಂದಿ ಪ್ರಕರಣವನ್ನು ಮತ್ತೆ ಮಾಡಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.