ಮೈಸೂರು, ಚಾ.ನಗರ ಡೀಸಿ ಅಮಾನತಿಗೆ ಸಾರಾ ಆಗ್ರಹ
Team Udayavani, May 5, 2021, 3:49 PM IST
ಮೈಸೂರು: ಚಾಮರಾಜನಗರದಲ್ಲಿ ಆಕ್ಸಿಜನ್‌ಲಭ್ಯವಾಗದೇ 24 ಮಂದಿ ಮೃತಪಟ್ಟಿರುವುದಕ್ಕೆಮೈಸೂರು ಮತ್ತು ಚಾಮರಾಜನಗರ ಜಿಲ್ಲಾಡಳಿತನಡುವಿನ ಸಮನ್ವಯತೆ ಕೊರತೆಯೇ ಕಾರಣವಾಗಿದ್ದು, ಅಮಾಯಕರ ಸಾವಿಗೆ ಕಾರಣರಾದ ಡ್ರಗ್‌ಕಂಟ್ರೋಲರ್, ಮೈಸೂರು, ಚಾಮರಾಜನಗರಡೀಸಿಗಳನ್ನು ಅಮಾನತು ಮಾಡಬೇಕು ಎಂದು ಶಾಸಕಸಾ.ರಾ.ಮಹೇಶ್ ಒತ್ತಾಯಿಸಿದರು.
ತಮ್ಮ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿದಅವರು, ಚಾಮರಾಜನಗರದ ದುರಂತದಲ್ಲಿ ಮೃತಪಟ್ಟಕುಟುಂಬದವರಿಗೆ ನ್ಯಾಯ ದೊರೆಯಬೇಕಾದರೆ ಭ್ರಷ್ಟಾಚಾರಕಳಂಕ ರಹಿತ ನ್ಯಾಯಾಧೀಶರಿಂದ ತನಿಖೆ ಮಾಡಿಸಿ, ತಪ್ಪಿತಸ್ಥರನ್ನು ಶಿಕ್ಷೆಗೆ ಗುರಿಪಡಿಸುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದರು.
ಆಕ್ಸಿಜನ್ ಕೊರತೆಯಿಂದ ಮೂವರು ಮೃತಪಟ್ಟಿದ್ದಾರೆಂದುಸಚಿವರು ಹೇಳುತ್ತಾರೆ. ಹಾಗಾದರೆ ಅದು ಸಾವಲ್ಲವೇ? ಇಷ್ಟೆಲ್ಲಅದ್ವಾನದ ನಡುವೆಯೂ ಡೀಸಿಯನ್ನು ಯಾರಒತ್ತಡಕ್ಕೆ ಮಣಿದು ಇನ್ನೂ ಇಲ್ಲೇ ಉಳಿಸಿಕೊಂಡಿದ್ದೀರೋಗೊತ್ತಿಲ್ಲ. ತಕ್ಷಣ ಅವರನ್ನು ಅಮಾನತು ಮಾಡದೇಏನು ತನಿಖೆ ಮಾಡುತ್ತೀರಿ ಎಂದು ಪ್ರಶ್ನಿಸಿದರು.ಜಿಲ್ಲೆಗೆ ಸಚಿವರು ಅಥವಾ ಯಾವುದಾದರೂ ಕಮಿಟಿಗಳು ಬಂದರೆ ಅವರನ್ನು ಭೇಟಿಯಾಗಲು ಜಿಲ್ಲಾಧಿಕಾರಿಗೆ ಸಮಯ ಇರುವುದಿಲ್ಲ. ಆದರೆ,ಆಡಳಿತ ನಡೆಸುತ್ತಿರುವ ಪಕ್ಷದ ಅಧ್ಯಕ್ಷರು ಬಂದಾಗ ಅವರ ಭೇಟಿಯಾಗುತ್ತಾರೆ.
ಇದು ಜಿಲ್ಲೆಯ ದುರ್ದೆçವ ಎಂದರು.ಕೆ.ಆರ್.ನಗರದ ಕೋವಿಡ್ ರೋಗಿಗೆ ತಾಲೂಕು ಆಸ್ಪತ್ರೆಯಲ್ಲೇ ಚಿಕಿತ್ಸೆ ನೀಡದೆ, ಮೈಸೂರಿಗೆ ಕಳುಹಿಸಿದ್ದಕ್ಕೆಅಲ್ಲಿನ ತಹಶೀಲ್ದಾರ್‌ಗೆ ಜಿಲ್ಲಾಧಿಕಾರಿ ನೋಟಿಸ್ ನೀಡಿದ್ದರ ಸಂಬಂಧ ಪ್ರತಿಕ್ರಿಯಿಸಿ, ಅದು ಅವರ ಆಡಳಿತಕ್ಕೆ ಸಂಬಂಧಿಸಿದ ವಿಷಯ. ಆ ಬಗ್ಗೆ ನಾವು ತಲೆ ಹಾಕಲ್ಲ. ನಮಗೆ ವ್ಯವಸ್ಥೆಸರಿಯಾಗಬೇಕು ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Parliament; ಪ್ರಿಯಾಂಕಾ ಗಾಂಧಿ- ರಾಹುಲ್ ಜತೆ ಸೇರಿ ಬಿಜೆಪಿ ನಿದ್ದೆಗೆಡಿಸುತ್ತಾರೆ :ಪೈಲಟ್
Sagara: ತರಗತಿ ಕೊಠಡಿಯಲ್ಲಿ ಅವ್ಯವಸ್ಥೆ… ಕಾಲೇಜು ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ
Dandeli: ಅಧಿಕಾರಿಗಳಿಂದ ರೈಲು ಮಾರ್ಗದ ವಿದ್ಯುದ್ದೀಕರಣ ಪರಿಶೀಲನೆ
Love Reddy: ತೆರೆಗೆ ಬಂತು ʼಲವ್ ರೆಡ್ಡಿʼ
Yadagiri: ಕೆಡಿಪಿ ಸಭೆಯಲ್ಲಿ ಸಚಿವರ-ಶಾಸಕರ ನಡುವೆ ವಾಕ್ ಸಮರ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.