ಆಧಾರ್ ಕಾರ್ಡ್ ಬಗ್ಗೆ ಗೊಂದಲವಿದೆಯೇ.? ಪರಿಹಾರ ನೀಡಲಿದೆ ‘ಈ’ ಸಹಾಯವಾಣಿ
Team Udayavani, May 5, 2021, 4:19 PM IST
ನವ ದೆಹಲಿ : ಆಧಾರ್ ಕಾರ್ಡ್ ನ ಬಗ್ಗೆ ಇನ್ನೂ ಸಾರ್ವಜನಿಕರಲ್ಲಿ ಗೊಂದಲವಿದೆ. ಹೇಗೆ ತಪ್ಪಾದ ಹೆಸರನ್ನು ಆಧಾರ್ ಕಾರ್ಡ್ ನಲ್ಲಿ ಸರಿಪಡಿಸಿಕೊಳ್ಳುವುದು..? ಹೇಗೆ ಪಾನ್ ನನ್ನು ಆಧಾರ್ ಗೆ ಜೋಡಿಸುವುದು..? ಆಧಾರ್ ನಲ್ಲಿರುವ ವಿಳಾಸವನ್ನು ಹೇಗೆ ಸರಿಪಡಿಸಿಕೊಳ್ಳುವುದು..? ಹೀಗೆ ಹಲವು ಪ್ರಶ್ನೆಗಳು ಸಾರ್ವಜನಿಕರಲ್ಲಿವೆ. ಆ ಎಲ್ಲಾ ಪ್ರಶ್ನೆಗಳಿಗೆ ಪರಿಹಾರವಾಗಿ ಯುಐಡಿಎಐ (UIDA) ಸಹಾಯ ವಾಣಿ ಸಂಖ್ಯೆ 1947 ನೀಡಿದೆ.
ಓದಿ : ಕೋವಿಡ್ ನಿಯಂತ್ರಣಕ್ಕೆ ಹೊಸ ಟಾಸ್ಕ್ ಪೋರ್ಸ್ ಕಮಿಟಿ ರಚನೆ : ಎಸ್.ಟಿ.ಸೋಮಶೇಖರ್
ಯುಐಡಿಎಐ ನೀಡಿರುವ ಸಹಾಯವಾಣಿಗೆ ಕರೆ ಮಾಡುವ ಮುಖಾಂತರ ಆಧಾರ್ ಕಾರ್ಡ್ ಬಗೆಗಿರುವ ಎಲ್ಲಾ ಸಮಸ್ಯೆಗಳ ಬಗ್ಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ.
ಆಧಾರ್ ನ ಈ ಸೇವೆ ಒಟ್ಟು 12 ಭಾಷೆಗಳಲ್ಲಿ ಸಾರ್ವಜನಿಕರಿಗೆ ಲಭ್ಯವಾಗಲಿದ್ದು, ಹಿಂದಿ, ತೆಲುಗು, ಕನ್ನಡ, ತಮಿಳು, ಮಲಯಾಳಂ, ಪಂಜಾಬಿ, ಗುಜರಾತಿ, ಮರಾಠಿ, ಒಡಿಯಾ, ಬಂಗಾಳಿ, ಅಸ್ಸಾಮಿ ಹಾಗೂ ಉರ್ದು ಭಾಷೆಗಳಲ್ಲಿ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ.
ಇನ್ನು, ಮಿಂಚಂಚೆ ಅಥವಾ ಮೇಲ್ ಮಾಡುವ ಮೂಲಕ ಕೂಡ ನೀವು ನಿಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು. ಇದಕ್ಕಾಗಿ ನೀವು [email protected] ಮೇಲ್ ಐಡಿಗೆ ನಿಮ್ಮ ಸಮಸ್ಯೆಯನ್ನು ವಿವರಿಸಿ ಮೇಲ್ ಮಾಡಬೇಕಾಗುತ್ತದೆ.
ಯುಐಡಿಎಐ ನ ವೆಬ್ ಸೈಟ್ ನ ಮೂಲಕವೂ ಕೂಡ ಸಮಸ್ಯೆಯನ್ನು ಬಗೆ ಹರಿಸಿಕೊಳ್ಳಬಹುದು :
- UIDAI ಅಧಿಕೃತ ವೆಬ್ ತಾಣಕ https://resident.uidai.gov.in ಗೆ ಭೇಟಿ ನೀಡಬೇಕು .
- ಬಳಿಕ ಸಂಪರ್ಕ ಹಾಗೂ ಸಮರ್ಥನೆಗಾಗಿ ‘Ask Aadhaar'(ಆಸ್ಕ್ ಆಧಾರ್) ಆಯ್ಕೆಯನ್ನು ನೀವು ತಲುಪಬೇಕು.
- ಇದಾದ ಬಳಿಕ ಇಲ್ಲಿ ನೀವು ಓರ್ವ ಆಧಾರ್ ಎಕ್ಸಿಕ್ಯೂಟಿವ್ ಜೊತೆಗೆ ಸಂಪರ್ಕ ಹೊಂದುತ್ತೀರಿ. ನೀವು ಅವರೊಂದಿಗೆ ನಿಮ್ಮ ಸಮಸ್ಯೆಗಳ ಕುರಿತು ಹೇಳಿಕೊಳ್ಳಬಹುದು.
ಓದಿ : ರಾಜ್ಯದಲ್ಲಿ ಉತ್ಪಾದನೆಯಾಗುವ ಆಕ್ಷಿಜನ್ ರಾಜ್ಯದ ಬಳಕೆಗೆ ಇರಲಿ: ಸಿದ್ದರಾಮಯ್ಯ ಆಗ್ರಹ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.