![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, May 5, 2021, 6:08 PM IST
ಕೋಲಾರ: ಪ್ರಸಿದ್ಧ ಐಫೋನ್ ತಯಾರಿಕಾ ಘಟಕ ವಿಸ್ಟ್ರಾನ್ ಕಂಪನಿಯಲ್ಲಿ 60ಕ್ಕೂಹೆಚ್ಚು ಕೊರೊನಾ ಸೋಂಕಿತರು ಪತ್ತೆಯಾದ ಹಿನ್ನೆಲೆಯಲ್ಲಿ ತಯಾರಿಕಾ ಘಟಕವನ್ನುಒಂದು ವಾರ ಸ್ಥಗಿತಗೊಳಿಸಿ ಸ್ವತ್ಛತಾ ಕಾರ್ಯಕೈಗೆತ್ತಿಕೊಳ್ಳಲಾಗಿದೆ.ವಿಸ್ಟ್ರಾನ್ ಕಂಪನಿಯಲ್ಲಿ ಹಲವರಿಗೆ ಕೊರೊನಾ ಮೆದು ಲಕ್ಷಣಗಳಿರುವಶಂಕೆಯಲ್ಲಿ ಕಾರ್ಮಿಕರಿಗೆ ಕೊರೊನಾ ಪರೀಕ್ಷೆ ಮಾಡಿಸಲಾಗಿದ್ದು, 60 ಮಂದಿಕಾರ್ಮಿಕರಿಗೆ ಸೋಂಕು ದೃಢವಾಗಿತ್ತು.
ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಮತ್ತು ಪೊಲೀಸ್ ವರಿಷ್ಠಾಧಿಕಾರಿ ಡಾ.ಕಾರ್ತಿಕ್ ರೆಡ್ಡಿ ಘಟಕಕ್ಕೆ ಭೇಟಿ ನೀಡಿಪರಿಶೀಲಿಸಿ ಇದೇ ಪರಿಸ್ಥಿತಿಯಲ್ಲಿ ಕಂಪನಿಮುಂದುವರಿದರೆ ಮತ್ತಷ್ಟು ಕೊರೊನಾಸೋಂಕಿತರು ಪತ್ತೆಯಾಗುವ ಸಾಧ್ಯತೆ ಇದೆ.ಆದ್ದರಿಂದ ಮೇ 1ರಿಂದ 7ರವರೆಗೂಐಫೋನ್ ತಯಾರಿಕಾ ಘಟಕದ ಎಲ್ಲಾವಿಭಾಗಗಳನ್ನು ಮುಚ್ಚಲು ಸೂಚಿಸಿದ್ದಾರೆ.
ಇದೀಗ ಆರೋಗ್ಯ ಇಲಾಖೆಯ ತಂಡವುಕಂಪನಿಯ ಇನ್ನಿತರೆ ಕಾರ್ಮಿಕರ ಆರೋಗ್ಯತಪಾಸಣೆ ಮಾಡುತ್ತಿದ್ದು, ಇಡೀಕಾರ್ಖಾನೆಯಲ್ಲಿ ಸ್ವತ್ಛತಾ ಕಾರ್ಯಗಳನ್ನುನಡೆಸಲಾಗುತ್ತಿದೆ. ಮೇ 8ರ ನಂತರ ಕೆಲಸಕ್ಕೆಹಾಜರಾಗಬೇಕಾದರೆ ಪ್ರತಿ ಕಾರ್ಮಿಕರುಕೊರೊನಾ ಸೋಂಕಿನ ತಪಾಸಣಾ ವರದಿತರಬೇಕೆಂದು ಕಂಪನಿಯು ಸೂಚಿಸಿದೆ.
ವೇಮಗಲ್ ಮತ್ತು ನರಸಾಪುರಸುತ್ತಮುತ್ತಲಿನ ಹಲವು ಕೈಗಾರಿಕೆಗಳುಕೋವಿಡ್ ಮಾರ್ಗಸೂಚಿ ಪ್ರಕಾರನಡೆಯುತ್ತಿದ್ದರೂ, ಯಾವುದೇ ಕಾರ್ಮಿಕಕೊರೊನಾ ಸೋಂಕಿನ ಲಕ್ಷಣಗಳು ಕಂಡುಬಂದಲ್ಲಿ ಕೂಡಲೇ ಆರೋಗ್ಯ ಇಲಾಖೆಯಗಮನಕ್ಕೆ ತರುವಂತೆ ಅಧಿಕಾರಿಗಳು ಕಂಪನಿಮುಖ್ಯಸ್ಥರಿಗೆ ಸೂಚನೆ ನೀಡಿದ್ದಾರೆ.ಈ ಸಂಬಂಧ ಆರೋಗ್ಯ ಇಲಾಖೆಯಸಿಬ್ಬಂದಿ ಕೈಗಾರಿಕೆಗಳನ್ನು ನಿಯಮಿತವಾಗಿಭೇಟಿ ನೀಡಿ ವರದಿ ನೀಡುವಂತೆಯೂ ಸೂಚಿಸಲಾಗಿದೆ.
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.