ಅಧಿಕಾರಿಗಳನ್ನು ಅಮಾನತು ಮಾಡಿ, ಸಚಿವರು ರಾಜೀನಾಮೆ ನೀಡಲಿ : ಅಭಯಚಂದ್ರ
Team Udayavani, May 5, 2021, 6:35 PM IST
ಹಳೆಯಂಗಡಿ: ಚಾಮರಾಜನಗರದಲ್ಲಿನ ಆಕ್ಸಿಜನ್ ದುರಂತ ಹಾಗೂ ಬೆಂಗಳೂರಿನಲ್ಲಿನ ಬೆಡ್ ಬ್ಲಾಕಿಂಗ್ ಹಗರಣದಲ್ಲಿನ ಅಧಿಕಾರಿಗಳನ್ನು ಹಾಗೂ ಎರಡೂ ಜಿಲ್ಲೆಯ ಜಿಲ್ಲಾಧಿಕಾರಿಗಳನ್ನು ಕೂಡಲೇ ಅಮಾನತು ಮಾಡಬೇಕು, ಇದಕ್ಕೆ ನೇರ ಹೊಣೆಗಾರರಾಗಿರುವ ಆರೋಗ್ಯ ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಮಾಜಿ ಸಚಿವ ಕೆ.ಅಭಯಚಂದ್ರ ಜೈನ್ ಆಗ್ರಹಿಸಿದರು.
ಹಳೆಯಂಗಡಿಯ ಮೂಲ್ಕಿ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರಕ್ಕೆ ತನ್ನ ಆಡಳಿತದ ಅಧಿಕಾರಿಗಳನ್ನು ಹತೋಟಿಗೆ ಇಟ್ಟುಕೊಳ್ಳಲು ಸಾಧ್ಯವಾಗುತ್ತಿಲ್ಲ, ಇಷ್ಟೇಲ್ಲಾ ಹಗರಣ ನಡೆದರೂ ಕೇಂದ್ರ ಸರ್ಕಾರ ಮೌನ ವಹಿಸಿದೆ, ಆಡಳಿತ ನಡೆಸುವ ಬಿಜೆಪಿಯ ಇಬ್ಬರು ಶಾಸಕರು, ಒರ್ವ ಸಂಸದರೇ ಈ ಹಗರಣ ಬಯಲಿಗೆಳೆದಿರುವುದು ಸರ್ಕಾರದಲ್ಲಿನ ಇಚ್ಚಾಶಕ್ತಿಯ ಕೊರತೆ ಎದ್ದು ಕಾಣುತ್ತಿದೆ, ಸರ್ಕಾರದ ಮಂತ್ರಿ ಮಂಡಲ ಹಾಗೂ ಆಡಳಿತದ ಕಾರ್ಯದರ್ಶಿಯೇ ಇದಕ್ಕೆ ನೇರ ಹೊಣೆಯಾಗಿದ್ದಾರೆ. ರಾಜಕೀಯವನ್ನು ಸಮಾಜ ಸೇವೆಗೆಂದು ಮೀಸಲಿಡಿ, ಜನರ ಸಂಕಷ್ಟವನ್ನು ಅರಿತುಕೊಳ್ಳಬೇಕು ಎಂದ ಅವರು, ಧರ್ಮಸ್ಥಳದ ಯೋಜನೆಯಿಂದ ಬಂದಂತಹ ನೆರವು ಶ್ಲಾಘನೀಯ ಎಂದರು.
ಇದನ್ನೂ ಓದಿ:ಆಧಾರ್ ಕಾರ್ಡ್ ಬಗ್ಗೆ ಗೊಂದಲವಿದೆಯೇ.? ಪರಿಹಾರ ನೀಡಲಿದೆ ‘ಈ’ ಸಹಾಯವಾಣಿ
ಕರಾವಳಿಯ ಆಸ್ಪತ್ರೆಯವರು ಪರೋಕ್ಷವಾಗಿ ಸಮಾಜ ಸೇವಕರಾಗಿರುವುದರಿಂದ ಇಲ್ಲಿ ಬೆಂಗಳೂರಿನಂತೆ ಬೆಡ್ ಬ್ಲಾಕಿಂಗ್ ಮಾಡಲು ಸಾಧ್ಯವಿಲ್ಲ, ಅಧಿಕಾರಿಗಳ ಕುಮ್ಮಕ್ಕಿನಿಂದ ನಡೆದರೆ ಅದೂ ಸಹ ಖಂಡನೀಯ ಎಂದು ಪತ್ರಕರ್ತರ ಪ್ರಶ್ನೆಯೊಂದಕ್ಕೆ ಅಭಯಚಂದ್ರ ಅವರು ಉತ್ತರಿಸಿದರು.
ವೆನ್‌ಲಾಕ್‌ನಲ್ಲಿ ವೆಂಟಿಲೇಟರ್ ಹೆಚ್ಚಿಸಿ : ಮಿಥುನ್ ರೈ
ಮಂಗಳೂರಿನ ಜಿಲ್ಲಾ ವೆನ್‌ಲಾಕ್‌ನಲ್ಲಿ ಈಗಿರುವ ವೆಂಟಿಲೇಟರ್ ಸಾಕಾಗುವುದಿಲ್ಲ, ಇದನ್ನು 100ಕ್ಕೇರಿಸಬೇಕು, ಮುಂದಿನ ಅಪಾಯವನ್ನು ಅರಿತು ಇಂದೇ ಜಾಗೃತೆ ವಹಿಸಿರಿ, ಆಕ್ಸಿಜನ್ ಸಮಸ್ಯೆ ಜಿಲ್ಲೆಗೂ ಕಾಡಲಿದೆ, ಪ್ರತಿದಿನ ಕೋವಿಡ್ ವಿರುದ್ಧ ನಡೆಸುವ ಕಾರ್ಯದ ಬಗ್ಗೆ ಉಸ್ತುವಾರಿ ಸಚಿವರು ಪ್ರತಿಸ್ಪಂದಿಸಬೇಕು, ಹೊರ ರಾಜ್ಯ, ಜಿಲ್ಲೆಯಿಂದ ಜನರು ಕೋವಿಡ್‌ನೊಂದಿಗೆ ಆಗಮಿಸುತ್ತಿದ್ದರೂ ಜಿಲ್ಲಾಡಳಿತ ಎಚ್ಚೆತ್ತಿಲ್ಲ, ಜಿಲ್ಲೆಯ ಎಲ್ಲಾ 7 ಮಂದಿ ಸಚಿವರು, ಸಂಸದವರು ಒಟ್ಟಾಗಿ ರಾಜ್ಯ, ಕೇಂದ್ರಕ್ಕೆ ಒತ್ತಡ ಹಾಕಿ ಸುರಕ್ಷತೆಗಾಗಿ ಈಗಲೇ ಎಚ್ಚೆತ್ತುಕೊಳ್ಳಬೇಕು, ಬಡವರ್ಗದ ಜನರು ನಲುಗುತ್ತಿದ್ದಾರೆ ಅವರನ್ನು ಮೊದಲು ರಕ್ಷಿಸಲು ಪ್ರಯತ್ನಿಸಿ, ಕೋವಿಡ್ ನಿಯಂತ್ರಣಕ್ಕಾಗಿ ಪಕ್ಷಬೇದ ಮರೆತು ಕೆಲಸ ಮಾಡೋಣ ಎಂದರು.
ಕೆಪಿಸಿಸಿ ಜಿಲ್ಲಾ ವಕ್ತಾರ ಎಚ್.ವಸಂತ ಬೆರ್ನಾಡ್, ಮೂಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಧನಂಜಯ ಮಟ್ಟು, ಯುವ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಪೂಜಾರ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪದ್ಮಾವತಿ ಶೆಟ್ಟಿ, ಇಂಟಕ್‌ನ ಅಧ್ಯಕ್ಷ ಮೋಹನ್ ಕೊಟ್ಯಾನ್ ಶಿಮಂತೂರು ಮತ್ತಿತರರು ಉಪಸ್ಥಿರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.