ಮಾಲ್ಡೀವ್ಸ್‌  ತಲುಪಿದ ಆಸ್ಟ್ರೇಲಿಯ ಕ್ರಿಕೆಟಿಗರು

Team Udayavani, May 6, 2021, 6:34 AM IST

ಮಾಲ್ಡೀವ್ಸ್‌   ತಲುಪಿದ ಆಸ್ಟ್ರೇಲಿಯ ಕ್ರಿಕೆಟಿಗರು

ಹೊಸದಿಲ್ಲಿ: ಕೋವಿಡ್ ಬಲೆಗೆ ಸಿಲುಕಿದ ಐಪಿಎಲ್‌ ಪಂದ್ಯಾವಳಿಯನ್ನು ಅರ್ಧದಲ್ಲೇ ನಿಲ್ಲಿಸುವ ಮೂಲಕ ಬಿಸಿಸಿಐ ತನ್ನ ತಲೆಹೊರೆಯನ್ನು ಇಳಿಸಿಕೊಂಡಿದೆ. ಜತೆಗೆ ವಿದೇಶಿ ಕ್ರಿಕೆಟಿಗರ ಪ್ರಯಾಣಕ್ಕೆ ಸೂಕ್ತ ವ್ಯವಸ್ಥೆ ರೂಪಿಸುವ ಯೋಜನೆಯಲ್ಲೂ ಯಶಸ್ಸು ಕಂಡಿದೆ.

ಆಸ್ಟ್ರೇಲಿಯ ಕ್ರಿಕೆಟಿಗರನ್ನು ಸುರಕ್ಷಿತ ವಾಗಿ ತಾಯ್ನಾಡಿಗೆ ಕಳುಹಿಸಿಕೊಡುವುದು ಬಿಸಿಸಿಐ ಮುಂದಿರುವ ದೊಡ್ಡ ಸಮಸ್ಯೆ ಯಾಗಿತ್ತು. ಆದರೆ ಬುಧವಾರವೇ ವಿಶೇಷ ವಿಮಾನದ ಮೂಲಕ ಆಸೀಸ್‌ ತಂಡವನ್ನು ಮಾಲ್ಡೀವ್ಸ್‌ಗೆ ಕಳುಹಿಸಲಾಗಿದೆ. ಇಲ್ಲಿ ತಾತ್ಕಾಲಿಕ ವಸತಿ ಕಲ್ಪಿಸಿ ಮೇ 15ರ ಬಳಿಕ ಅಲ್ಲಿಂದಲೇ ಆಸ್ಟ್ರೇಲಿಯಕ್ಕೆ ಕಳುಹಿಸಲು ಬಿಸಿಸಿಐ ನಿರ್ಧರಿಸಿದೆ. ಮೇ 15ರ ತನಕ ಭಾರತದ ವಿಮಾನಗಳಿಗೆ ಆಸ್ಟ್ರೇಲಿಯ ನಿರ್ಬಂಧ ವಿಧಿಸಿದೆ.

38 ಸದಸ್ಯರ ದೊಡ್ಡ ತಂಡ :

ಐಪಿಎಲ್‌ನಲ್ಲಿ ಆಸ್ಟ್ರೇಲಿಯದ ಬಹು ದೊಡ್ಡ ತಂಡವೇ ಪಾಲ್ಗೊಂಡಿತ್ತು. ಆಟಗಾರರು, ತರಬೇತುದಾರರು, ಅಂಪಾ ಯರ್, ಮಾಧ್ಯಮ ಸಿಬಂದಿ ಸೇರಿ 38 ಜನರಿದ್ದಾರೆ. ಇವರಲ್ಲಿ ಮೈಕಲ್‌ ಸ್ಲೇಟರ್‌ ಮೊದಲೇ ಮಾಲ್ಡೀವ್ಸ್‌ ತಲುಪಿದ್ದರು. ಕೊರೊನಾ ಸೋಂಕಿತ ಚೆನ್ನೈ ತಂಡದ ಬ್ಯಾಟಿಂಗ್‌ ಕೋಚ್‌ ಮೈಕಲ್‌ ಹಸ್ಸಿ ಮಾತ್ರ ಭಾರತದಲ್ಲೇ ಉಳಿದಿದ್ದಾರೆ.

ಬಿಸಿಸಿಐನ ಈ ವ್ಯವಸ್ಥೆಗೆ ಪ್ರತಿಕ್ರಿಯಿ ಸಿರುವ ಕ್ರಿಕೆಟ್‌ ಆಸ್ಟ್ರೇಲಿಯ, “ವಿಶೇಷ ವಿಮಾನದ ಮೂಲಕ ಆಸ್ಟ್ರೇಲಿಯ ಆಟಗಾರರನ್ನು ಮಾಲ್ಡೀವ್ಸ್‌ಗೆ ಕಳುಹಿಸಿದ್ದು ಉತ್ತಮ ಬೆಳವಣಿಗೆ. ಬಳಿಕ ಅಲ್ಲಿಂದ ನಮ್ಮ ಆಟಗಾರರನ್ನು ತವರಿಗೆ ತಲುಪಿಸುವ ವ್ಯವಸ್ಥೆಯನ್ನೂ ಮಾಡೀತೆಂಬ ನಿರೀಕ್ಷೆ ಯಲ್ಲಿದ್ದೇವೆ’ ಎಂದಿದೆ.

ನ್ಯೂಜಿಲ್ಯಾಂಡ್‌ ಕ್ರಿಕೆಟಿಗರೆಲ್ಲ.ಹೊಟೇಲ್‌ ಐಸೊಲೇಶನ್‌ನಲ್ಲಿದ್ದಾರೆ. ಕೇನ್‌ ವಿಲಿಯಮ್ಸನ್‌ ಮತ್ತಿತರ ಸದಸ್ಯರು ಐಸಿಸಿ ಟೆಸ್ಟ್‌ ಚಾಂಪಿಯನ್‌ಶಿಪ್‌ನಲ್ಲಿ ಪಾಲ್ಗೊಳ್ಳಲು ಭಾರತದಿಂದಲೇ ಲಂಡನ್‌ಗೆ  ತೆರಳುವುದು ನಿಗದಿಯಾಗಿದೆ.

ಇಂಗ್ಲೆಂಡ್‌ ಕ್ರಿಕೆಟಿಗರು ಲಂಡನ್‌ಗೆ :

ಹೊಸದಿಲ್ಲಿ: ಐಪಿಎಲ್‌ನಲ್ಲಿದ್ದ ಇಂಗ್ಲೆಂಡ್‌ ಕ್ರಿಕೆಟಿಗರ ಪ್ರಯಾಣಕ್ಕೆ ಯಾವುದೇ ತೊಂದರೆ ಆಗಿಲ್ಲ. ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಆಟಗಾರರು ಮಂಗಳ ವಾರ ರಾತ್ರಿಯೇ ಅಹ್ಮದಾಬಾದ್‌ನಿಂದ ಹೊಸದಿಲ್ಲಿಗೆ ಪ್ರಯಾಣಿಸಿದ್ದಾರೆ. ಅಲ್ಲಿ ರುವ ತಮ್ಮ ದೇಶದ ಕ್ರಿಕೆಟಿಗರೊಂದಿಗೆ ತವರಿಗೆ ವಿಮಾನವನ್ನು ಏರಿ ಲಂಡನ್‌ಗೆ ಬಂದಿಳಿದಿದ್ದಾರೆ.

ಇವರೆಂದರೆ ಜಾನಿ ಬೇರ್‌ಸ್ಟೊ, ಜಾಸ್‌ ಬಟ್ಲರ್‌, ಸ್ಯಾಮ್‌ ಬಿಲ್ಲಿಂಗ್ಸ್‌, ಕ್ರಿಸ್‌ ವೋಕ್ಸ್‌, ಮೊಯಿನ್‌ ಅಲಿ, ಜಾಸನ್‌ ರಾಯ್‌ ಮತ್ತು ಕರನ್‌ ಬ್ರದರ್. ಲಂಡನ್‌ ತಲುಪಿದ ಬಳಿಕ ಇವರೆಲ್ಲ ಸರಕಾರ ಸೂಚಿಸಿದ ಹೊಟೇಲ್‌ಗ‌ಳಲ್ಲಿ ಕಠಿನ ಕ್ವಾರಂಟೈನ್‌ಗೆ

ಒಳಗಾಗಬೇಕಿದೆ. ಉಳಿದ ಕ್ರಿಕೆಟಿಗರಾದ ಇಯಾನ್‌ ಮಾರ್ಗನ್‌, ಡೇವಿಡ್‌ ಮಲಾನ್‌ ಮತ್ತು ಕ್ರಿಸ್‌ ಜೋರ್ಡನ್‌ ಮುಂದಿನ 48 ಗಂಟೆಗಳಲ್ಲಿ ಲಂಡನ್‌ಗೆ ಪ್ರಯಾಣಿಸಲಿದ್ದಾರೆ ಎಂದು ತಿಳಿದು ಬಂದಿದೆ.

ಟಾಪ್ ನ್ಯೂಸ್

Exam 3

Question paper leak ಶಂಕೆ: ಪಿಡಿಒ ಪರೀಕ್ಷೆ ಬಹಿಷ್ಕರಿಸಿ ಪ್ರತಿಭಟನೆ

1-kanaka

Kanakadasa Jayanthi ಇಂದು; ಕನಕದಾಸರ ತಣ್ತೀಗಳು ಹಿಂದೆಂದಿಗಿಂತ ಇಂದಿಗೆ ಹೆಚ್ಚು ಪ್ರಸ್ತುತ

parthagali

Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ

kalaranga

Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ

kapu-marigudi

Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Elephant

Belthangady: ಚಾರ್ಮಾಡಿ: ಪರ್ಲಾಣಿಯಲ್ಲಿ ಕಾಡಾನೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Pro Kabaddi Match: ತಲೈವಾಸ್‌ಗೆ ಸೋಲುಣಿಸಿದ ಹರಿಯಾಣ

Pro Kabaddi Match: ತಲೈವಾಸ್‌ಗೆ ಸೋಲುಣಿಸಿದ ಹರಿಯಾಣ

Syed Mushtaq Ali Trophy: ಮುಂಬಯಿಗೆ ಅಯ್ಯರ್‌ ನಾಯಕ

Syed Mushtaq Ali Trophy: ಮುಂಬಯಿಗೆ ಅಯ್ಯರ್‌ ನಾಯಕ

Hockey: ವನಿತಾ ಏಷ್ಯನ್‌ ಚಾಂಪಿಯನ್ಸ್‌ ಹಾಕಿ: ಭಾರತದ ಅಜೇಯ ಓಟ

Hockey: ವನಿತಾ ಏಷ್ಯನ್‌ ಚಾಂಪಿಯನ್ಸ್‌ ಹಾಕಿ: ಭಾರತದ ಅಜೇಯ ಓಟ

WI vs ENG: 219 ರನ್‌ ಬೆನ್ನಟ್ಟಿ ಗೆದ್ದ ವಿಂಡೀಸ್‌

WI vs ENG: 219 ರನ್‌ ಬೆನ್ನಟ್ಟಿ ಗೆದ್ದ ವಿಂಡೀಸ್‌

ಮುಂದಿನ ವಿಮಾನದಲ್ಲೇ ಶಮಿ ಆಸ್ಟ್ರೇಲಿಯಕ್ಕೆ ತೆರಳಲಿ: ಗಂಗೂಲಿ

Sourav Ganguly: ಮುಂದಿನ ವಿಮಾನದಲ್ಲೇ ಶಮಿ ಆಸ್ಟ್ರೇಲಿಯಕ್ಕೆ ತೆರಳಲಿ

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

Exam 3

Question paper leak ಶಂಕೆ: ಪಿಡಿಒ ಪರೀಕ್ಷೆ ಬಹಿಷ್ಕರಿಸಿ ಪ್ರತಿಭಟನೆ

1-kanaka

Kanakadasa Jayanthi ಇಂದು; ಕನಕದಾಸರ ತಣ್ತೀಗಳು ಹಿಂದೆಂದಿಗಿಂತ ಇಂದಿಗೆ ಹೆಚ್ಚು ಪ್ರಸ್ತುತ

parthagali

Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ

kalaranga

Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ

kapu-marigudi

Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.