ಮಿಲಿಂಡಾಗೆ ಸಿಗಲಿದೆ ಹಲವು ಕೋಟಿ ಮೌಲ್ಯದ ಆಸ್ತಿ, ಸಂಪತ್ತು
Team Udayavani, May 6, 2021, 7:00 AM IST
ವಾಷಿಂಗ್ಟನ್: ದಾಂಪತ್ಯ ಜೀವನದಿಂದ ದೂರವಾಗಲಿರುವ ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್, ಪತ್ನಿ ಮಿಲಿಂಡಾ ಗೇಟ್ಸ್ ಹೆಸರಲ್ಲಿರುವ ಆಸ್ತಿ ಹಂಚಿಕೆ ಬಗ್ಗೆ ಸ್ಪಷ್ಟ ಚಿತ್ರಣ ಲಭಿಸಲಿದೆ.
ಮೈಕ್ರೋಸಾಫ್ಟ್ ಜತೆಗೇ ಗೇಟ್ಸ್ ಹುಟ್ಟುಹಾಕಿದ್ದ ಕ್ಯಾಸ್ಕೇಡ್ ಇನ್ವೆಸ್ಟ್ಮೆಂಟ್ ಸಂಸ್ಥೆ, 13,292 ಕೋಟಿ ರೂ. ಮೊತ್ತದ ಚರಾಸ್ತಿಯನ್ನು ಮಿಲಿಂಡಾಗೆ ವರ್ಗಾಯಿಸ ಲಿದೆ. ಇದರಲ್ಲಿ, ಕೆನಡಿಯನ್ ರೈಲ್ವೇ ಇಲಾಖೆಯಲ್ಲಿ ಗೇಟ್ಸ್ ಹೊಂದಿರುವ 11,077 ಸಾವಿರ ಕೋಟಿ ರೂ. ಮೊತ್ತದ ಷೇರುಗಳು ಸೇರಿವೆ. ಇದಲ್ಲದೆ, ಆಟೋ ನೇಶನ್ ಸಂಸ್ಥೆಯಲ್ಲಿನ 4,500 ಕೋಟಿ ರೂ. ಮೊತ್ತದ ಷೇರುಗಳೂ ಮಿಲಿಂಡಾ ಪಾಲಾಗಲಿವೆ.
ದಾನವಿನ್ನೂ ಬಾಕಿಯಿದೆ!: ಈ ಹಿಂದೆ, ಬಿಲ್ ಆ್ಯಂಡ್ ಮಿಲಿಂಡಾ ಗೇಟ್ಸ್ ಫೌಂಡೇಶನ್ ವತಿಯಿಂದ ನೀಡ ಲಾಗುವ . ಸಾಮಾಜಿಕ ಕಾರ್ಯಕ್ಕೆ ತಮ್ಮ ಆಸ್ತಿಯ ಅರ್ಧಕ್ಕಿಂತ ಹೆಚ್ಚು ಪಾಲನ್ನು ದಾನ ಮಾಡು ವುದಾಗಿ ಈ ಇಬ್ಬರೂ ಘೋಷಿಸಿದ್ದರು. . ಅದರಂತೆ, ಕಾಲಾನು ಕ್ರಮದಲ್ಲಿ ಈ ಫೌಂಡೇಶನ್ನ ನಾನಾ ಕಾರ್ಯ ಕ್ರಮಗಳಿಗೆ ಅಪಾರ ಹಣವನ್ನು ದಾನ ಮಾಡುತ್ತಲೇ ಬಂದಿದ್ದಾರೆ. ದೇಣಿಗೆ ಮಾಡುವ ಅವರಿಬ್ಬರ ಹಿಂದಿನ ಹೇಳಿಕೆ ಪರಾಮರ್ಶಿಸುವುದಾದರೆ ಇನ್ನೂ 3.6 ಲಕ್ಷ ಕೋಟಿ ರೂ. ದೇಣಿಗೆಯಾಗಿ ಬರಬೇಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Adani; ಆಸೀಸ್ ಕಲ್ಲಿದ್ದಲು ಗಣಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ
London: ಶಂಕಾಸ್ಪದ ಲಗೇಜ್ ಪತ್ತೆ: ಲಂಡನ್ ಏರ್ಪೋರ್ಟ್ ಖಾಲಿ ಮಾಡಿಸಿ ತನಿಖೆ!
ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.