ಲಾಕ್ ಡೌನ್ ಇದ್ದರೂ ಜನರ ಅನಗತ್ಯ ಸಂಚಾರ: ವಿಟ್ಲ ಪೊಲೀಸರಿಂದ ಕಠಿಣ ಕ್ರಮ
Team Udayavani, May 6, 2021, 11:31 AM IST
ವಿಟ್ಲ: ವಿಟ್ಲ ಪೇಟೆಗೆ ಅನಗತ್ಯವಾಗಿ ಬರುವವರನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಗುರುವಾರ ಪೇಟೆಯ ಜಂಕ್ಷನ್ ನ ನಾಲ್ಕು ರಸ್ತೆಯಲ್ಲಿ ಸುಮಾರು ಒಂದು ಕಿಮೀ ದೂರದಲ್ಲಿ ವಿಟ್ಲ ಪೊಲೀಸರು ನಾಕಾಬಂದಿ ಹಾಕಿದ್ದಾರೆ.
ಲಾಕ್ ಡೌನ್ ವೇಳೆ ನಾಗರಿಕರು ಅಗತ್ಯ ವಸ್ತುಗಳನ್ನು ಖರೀದಿಸುವ ನೆಪದಲ್ಲಿ ಪ್ರತಿದಿನ ಪೇಟೆಗೆ ಆಗಮಿಸುತ್ತಿದ್ದಾರೆ. ಸಾಕಷ್ಟು ಎಚ್ಚರಿಕೆಗಳನ್ನು ನೀಡಿದರೂ ನಿರ್ಲಕ್ಷಿಸುತ್ತಿದ್ದಾರೆ. ಅದಕ್ಕಾಗಿ ಬೆಳಗ್ಗೆ ಗಂಟೆ 8.30ರಿಂದ ಪುತ್ತೂರು ರಸ್ತೆಯ ಮೇಗಿನಪೇಟೆಯಲ್ಲಿ, ಕಾಸರಗೋಡು ರಸ್ತೆಯ ಸರ್ಕಾರಿ ಬಸ್ ನಿಲ್ದಾಣದ ಬಳಿ, ಮಂಗಳೂರು ರಸ್ತೆಯ ಬೊಬ್ಬೆಕೇರಿಯಲ್ಲಿ, ಸಾಲೆತ್ತೂರು ರಸ್ತೆಯ ನಾಡಕಚೇರಿ ಬಳಿಯಲ್ಲಿ ನಾಕಾಬಂದಿಯನ್ನು ಹಾಕಿದ ಪೊಲೀಸರು ಪ್ರತಿಯೊಬ್ಬರ ದಾಖಲೆಗಳನ್ನು ಪರಿಶೀಲಿಸಿ, ನೈಜ ಕಾರಣ ಇದ್ದರೆ ಪೇಟೆಯೊಳಗೆ ತೆರಳಲು ಅನುಮತಿ ನೀಡಿದ್ದಾರೆ.
ಸಮೀಪದಲ್ಲಿ ಅಗತ್ಯ ವಸ್ತುಗಳು ಸಿಗದೆ ವಿಟ್ಲದಲ್ಲಿ ಮಾತ್ರ ಸಿಗುವ ವಸ್ತುಗಳಿಗೆ ಬಂದವರು ಆಧಾರ್ ಕಾರ್ಡ್ ತೋರಿಸಿದಲ್ಲಿ ಅವರಿಗೆ ಪೇಟೆಗೆ ಪ್ರವೇಶಿಸಲು ಅನುಮತಿ ಕೊಡಲಾಗಿದೆ. ಸಮೀಪದಲ್ಲಿ ಸಾಮಗ್ರಿಗಳು ಇದ್ದೂ ಪೇಟೆಗೆ ಅನಗತ್ಯವಾಗಿ ಆಗಮಿಸುವವರ ಮೇಲೆ ಕಾನೂನು ಕ್ರಮ ಜರಗಿಸಲಾಗಿದೆ. ವಿಟ್ಲ ಠಾಣಾಧಿಕಾರಿ ವಿನೋದ್ ರೆಡ್ಡಿ ಅವರ ನೇತೃತ್ವದಲ್ಲಿ ಬಿಗು ಬಂದೋಬಸ್ತ್ ಕ್ರಮಕೈಗೊಳ್ಳಲಾಗಿದ್ದು ವಿಟ್ಲ ಪೇಟೆಯಲ್ಲಿ ಆವಶ್ಯಕ ವಸ್ತುಗಳ ಖರೀದಿ ಸಂದರ್ಭ ನಾಗರಿಕರ ಸಂಖ್ಯೆ ನಿಯಂತ್ರಣದಲ್ಲಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi: ಆರೆಸ್ಸೆಸ್ ಹಿರಿಯ ಪ್ರಚಾರಕ್ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ
Bagalakote: ಪ್ರೇಯಸಿ ಗೆಳತಿ ಹ*ತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ
Sagara: ಟ್ರಾಫಿಕ್ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.