“ನಾನೇ’ ನನ್ನ ಶಕ್ತಿ


Team Udayavani, May 6, 2021, 1:14 PM IST

“I ‘m my strength

ಅಕ್ಷೀ!!

ಅಯ್ಯೋ ನನಗೆ ಶೀತ ಆದಂಗಿದೆಯಲ್ಲ! ಅನ್ನುವಷ್ಟರಲ್ಲಿ ಕೆಮ್ಮು ಶುರುವಾಯ್ತು. ಮೈಯೆಲ್ಲ ಭಾರ , ಹಣೆ ಒತ್ತಿ ನೋಡಿದರೆ ಬಿಸಿ, ಆತಂಕಕ್ಕೇನು ಬರವಿಲ್ಲ, ಬಾಯಿ ಬಿಟ್ಟು ಹೇಳುವುದೇನು? ಮನಸಲ್ಲಿ ಆ ಪ್ರಶ್ನೆ ಥಟ್‌ ಅಂತ ಬಂದೇ ಬಿಟ್ಟಿತು, ಇದು ಕೊರೊನಾ  ನಾ?!

ಮೈ ಬೆವರಿಟ್ಟು, ತಲೆ ತಿರುಗಿ, ಇನ್ನೇನು ನಾನು ಸತ್ತೇ ಹೋದೆ ಎಂದು ನೆಲದ ಮೇಲೆ ಬೀಳುವಷ್ಟರಲ್ಲಿ ಎಚ್ಚರವಾಯಿತು ನೋಡಿ.ಅಬ್ಟಾ ! ಇದು ಕನಸು ಎನ್ನುತ್ತಾ ಸುದೀರ್ಘ‌ವಾದ ಉಸಿರು ತೆಗೆದು ಕೊಂಡು  ಸಮಾಧಾನ ಪಟ್ಟುಕೊಂಡೆ. 20ರ ದಶಕದಲ್ಲಿ ಜಗತ್ತನ್ನೇ ನಡುಗಿಸಿದ ಈ ಮಹಾಮಾರಿಗೆ ಕಡಿವಾಣ ಇಷ್ಟೊಂದು ಕಷ್ಟವೇ? ಇದರ ಇತಿಹಾಸವನ್ನು ತೆಗಳಿ ಏನು ಪ್ರಯೋಜನ? ಭವಿಷ್ಯದ ಬಗ್ಗೆ ಯೋಚಿಸುವುದರ ಮೊದಲೇ ನಾನಿಲ್ಲ ವಾಗಬಹುದಲ್ಲವೇ? ಹಾಗಾದರೆ ವರ್ತಮಾನ? ವರ್ತಮಾನವಂತೂ ಕೊರೊನಾಮಯ.

ಎಲ್ಲೆಂದರಲ್ಲಿ ಕೊರೊನಾ ಸುದ್ದಿ. ಈ ಕೊರೊನಾ ಯಾವುದೇ ಜಾತಿ- ಮತ, ಧರ್ಮ,ಲಿಂಗ, ಆಸ್ತಿ- ಅಂತಸ್ತು, ರಾಜಕೀಯ ಪಕ್ಷಭೇದವಿಲ್ಲದೇ ನಮ್ಮೆಲ್ಲರ ಮನೆಗೆ ನುಗ್ಗಿದೆ. ಹಾಗಂತ ನಾವೇನು ಅದನ್ನು ತಡೆಹಿಡಿದಿಲ್ಲ, ಬದಲಾಗಿ ಬರಮಾಡಿಕೊಳ್ಳುತ್ತಿದ್ದೇವೆ.

ನನಗೆ ಕೊರೋನಾ ಬಂದರೆ ನನ್ನನ್ನು ಬಿಟ್ಟು ನನ್ನ ಜತೆ ಯಾರೂ ಇಲ್ಲ. ಅಪ್ಪ ,ಅಮ್ಮ, ಅಣ್ಣ, ತಂಗಿ ಎಲ್ಲರನ್ನೂ ದೂರ ಮಾಡುವ ಈ ಕೊರೊನಾ ಮಾತ್ರ ನನ್ನನ್ನು ನುಂಗುವವರೆಗೆ ಅದೇ ನನ್ನ ಸಂಗಾತಿ. ಈ ಮಹಾಮಾರಿ ಆಕ್ರಮಿಸಿದ್ದಷ್ಟೇ ತಡ ಅದೆಷ್ಟು  ಜನರು ಮರಣ ಹೊಂದಿದರೋ ಗೊತ್ತಿಲ್ಲ. ದಿನದಿಂದ ದಿನಕ್ಕೆ ಸಂಖ್ಯೆ ಏರುತ್ತಲೇ ಇದೆ.

ಮುಪ್ಪನ್ನು ಕಂಡು ಮೊಮ್ಮಕ್ಕಳ ಜತೆ ಆಡುವ ಆಸೆಯನ್ನು ಇಟ್ಟುಕೊಂಡವರು, ಸುಖವಾಗಿ ಸಂಸಾರ ನಡೆಸುವ ನಿಟ್ಟಿನಲ್ಲಿರುವ ಪತಿ- ಪತ್ನಿ, ಜೀವನದÇÉೇನೋ ಸಾಧಿಸಬೇಕೆಂಬ ದೃಢ ನಿರ್ಧಾರ ಮಾಡಿಕೊಂಡ ಯುವಕರು, ಜೀವನವೇ ಗೊತ್ತಿಲ್ಲದ ಎಳೆಯರು ಹೀಗೆ ಎಲ್ಲರೂ ನಮ್ಮನ್ನು ಅಗಲತೊಡಗಿದ್ದಾರೆ.

ಹಾಗಾದರೆ ನಾನೇನು ಮಾಡಬೇಕು? ನಾನು ಈ ಭೂಮಿಯ ಮೇಲೆ ಜನಿಸಿದ ಒಂದು ಜೀವ. ನನಗೂ ಒಂದು ಕರ್ತವ್ಯವಿದೆಯಲ್ಲವೇ? ಮೊಟ್ಟಮೊದಲು ಈ ಕೊರೊನಾ ಎಂಬ ಯುದ್ಧದಲ್ಲಿ ನಾನು ಶಸ್ತ್ರ ಸಜ್ಜಿತಳಾಗಬೇಕು. ನನ್ನ ಶಕ್ತಿಯ ಮೇಲೆ ನನಗೆ ದೃಢ ವಿಶ್ವಾಸವಿರಬೇಕು. ಕೊರೊನಾ ಎಂಬುದು ಕೇವಲ ದೇಶದ ಅಥವಾ ಸರಕಾರದ ಜವಾಬ್ದಾರಿಯಲ್ಲ. ಇದು ನನಗೆ ಹಾಗೂ ನನ್ನ ಸುತ್ತಮುತ್ತಲಿನವರಿಗೆ ಬಾರದ ಹಾಗೆ ನೋಡಿಕೊಳ್ಳುವುದು ನನ್ನ ಪ್ರಮುಖ ಜವಾಬ್ದಾರಿಯಾಗಿದೆ.

ಕೊರೊನಾ ಬಂದರೆ ವೈದ್ಯರು ಔಷಧೋಪಚಾರ ಮಾಡಿ, ನಾವು ಹೇಗೆ ಇರಬೇಕು ಎಂದೆಲ್ಲ ವಿವರಿಸು ತ್ತಾರೆ. ಕೆಲವರು ಇದರಿಂದ ಗುಣ ಮುಖರಾದರೆ, ಹಲವರು ನರಳಿ- ನರಳಿ ಸಾಯುತ್ತಿದ್ದಾರೆ. ಮಾಸ್ಕ್  ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಇವುಗಳನ್ನು ಎಲ್ಲೆಂದರಲ್ಲಿ ಕೇಳುತ್ತಿದ್ದೇವೆ. ಆದರೆ ಪಾಲಿಸುತ್ತಿದ್ದೇವೆಯೇ? ಹೌದು ಕೆಲವರು ಪಾಲಿಸುತ್ತಿದ್ದೇವೆ. ಆದರೆ ಪಾಲಿಸದವರ ಬೇಜವಾಬ್ದಾರಿತನಕ್ಕೆ ತುತ್ತಾಗುತ್ತಿದ್ದೇವೆ.

ಇಲ್ಲಿ ರೋಗಾಣುವನ್ನು ಹೊಂದಿದವರು, ಹರಡುತ್ತಿರುವವರು, ಹೊಂದದೇ ಇರುವವರು, ಯಾರು ಸುಖೀ? ರೋಗಾಣುವನ್ನು ಹೊಂದದೇ ಇರುವವರೇ? ಅಲ್ಲವೇ ಅಲ್ಲ, ಇಲ್ಲಿ ಯಾರೂ ಸುಖೀಯಲ್ಲ, ಏಕೆಂದರೆ ಹೊಂದದೇ ಇರುವವರು ಸಹ ಭಯದಿಂದ ತತ್ತರಿಸುತ್ತಿದ್ದಾರೆ.

ಆದ್ದರಿಂದ ನನ್ನ ಸುರಕ್ಷೆ ನನ್ನ ಕರ್ತವ್ಯ. ನಾನು ಮೊದಲು ಆತ್ಮಬಲವನ್ನು ವೃದ್ಧಿಸಿಕೊಳ್ಳಬೇಕು. ನಾನು ಆರೋಗ್ಯವಂತೆ, ಶಕ್ತಿವಂತೆ, ಧೈರ್ಯವಂತೆ ಎಂದು ಮನಸ್ಸಿನಲ್ಲಿ ಪದೇ ಪದೇ ಹೇಳಿಕೊಳ್ಳುತ್ತೇನೆ. ಸರಿಯಾದ ಆಹಾರ ಕ್ರಮ, ಕೋವಿಡ್‌ ತಡೆಯುವ ಸುರಕ್ಷ ಕ್ರಮಗಳನ್ನು ಪಾಲಿಸುತ್ತೇನೆ, ಪಾಲಿಸಿದ ಅನಂತರವೂ ಕೋವಿಡ್‌ ಬಂದರೆ ಧೈರ್ಯದಿಂದ ಎದುರಿಸುತ್ತೇನೆ. ನನ್ನಿಂದ ಮತ್ತೂಬ್ಬರಿಗೆ ಹರಡದಂತೆ ತಡೆಯುತ್ತೇನೆ. ನನ್ನ ಶಕ್ತಿ ಮೀರಿ ಹೋರಾಡುತ್ತೇನೆ. ಮತ್ತೆ ಮೊದಲಿನಂತೆ ಸುಂದರ ಜೀವನವನ್ನು ನೋಡಲಿಚ್ಛಿಸುತ್ತೇನೆ. ಆದ್ದರಿಂದ ಇಂದು ಹಾಗೂ ಎಂದೆಂದಿಗೂ “ನಾನೇ’ ನನ್ನ ಶಕ್ತಿಯಾಗಿದ್ದೇನೆ.

 

ಜಯಾ ಛಬ್ಬಿ, ಓಮನ್‌

ಟಾಪ್ ನ್ಯೂಸ್

ಟ್ರಕ್ ಡಿಕ್ಕಿ ಹೊಡೆದು ಗ್ಯಾಸ್ ಟ್ಯಾಂಕರ್ ಸೇರಿ ಹಲವು ವಾಹನ ಬೆಂಕಿಗಾಹುತಿ… ಓರ್ವ ಸಾ*ವು

Tragedy: ಬೆಳ್ಳಂಬೆಳಗ್ಗೆ ಭೀಕರ ಅಪಘಾತ… ಗ್ಯಾಸ್ ಟ್ಯಾಂಕರ್ ಸೇರಿ ಹಲವು ವಾಹನ ಬೆಂಕಿಗಾಹುತಿ

7-icc

ICC Champions Trophy: ಹೈಬ್ರಿಡ್‌ ಮಾದರಿಯೇ ಅಂತಿಮ

6-mandya

Mandya; ಸಕ್ಕರೆ ನಾಡಿನಲ್ಲಿ ಇಂದಿನಿಂದ  87ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನ

5-dinesh

Dinesh Gundu Rao; ಬಾಣಂತಿಯರ ಸಾ*ವು ಪ್ರಕರಣ ನ್ಯಾಯಾಂಗ ತನಿಖೆಗೆ

4-train

Train; ಮಂಗಳೂರು-ಪುತ್ತೂರು ಪ್ಯಾಸೆಂಜರ್‌ ರೈಲು ಸುಬ್ರಹ್ಮಣ್ಯಕ್ಕೆ?

3-ct-ravi

ರಾತ್ರಿಯಿಡೀ ಸಿ.ಟಿ. ರವಿಯನ್ನು ಸುತ್ತಾಡಿಸಿದ ಪೊಲೀಸರು: ಮಧ್ಯರಾತ್ರಿ ರಸ್ತೆಯಲ್ಲೇ ಪ್ರತಿಭಟನೆ

2-r-ashwin

Ravichandran Ashwin: ಯಾವುದೇ ಪಶ್ಚಾತ್ತಾಪವಿಲ್ಲ: ಅಶ್ವಿ‌ನ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kannada Sahitya Sammelana: ಕಾವೇರಿ ಹೊನಲಲ್ಲಿ ಕನ್ನಡ ಉಕ್ಕಲಿ…

Kannada Sahitya Sammelana: ಕಾವೇರಿ ಹೊನಲಲ್ಲಿ ಕನ್ನಡ ಉಕ್ಕಲಿ…

One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?

One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?

8

Year ender: ಈ ವರ್ಷ ನಕ್ಕು ನಗಿಸಿ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆದ ವಿಡಿಯೋಗಳಿವು..

ಅಪಾಯಕ್ಕೆ ಎದೆಯೊಡ್ಡಿ ವಕ್ಫ್ ವರದಿ ಮಾಡಿದ್ದು ನಾನು, ಅದರಿಂದ ಹಣ ಮಾಡಿದ್ದು ಅನೇಕರು!

ಅಪಾಯಕ್ಕೆ ಎದೆಯೊಡ್ಡಿ ವಕ್ಫ್ ವರದಿ ಮಾಡಿದ್ದು ನಾನು, ಅದರಿಂದ ಹಣ ಮಾಡಿದ್ದು ಅನೇಕರು!

ಕರಾವಳಿಯಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆ ­ಅತ್ಯಗತ್ಯ

ಕರಾವಳಿಯಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆ ­ಅತ್ಯಗತ್ಯ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

8-belthangady

Belthangady: ಬೈಕಿಗೆ ಕಾರು ಢಿಕ್ಕಿ, ಓಡಿಲ್ನಾಳದ ಯುವಕ ಸಾವು

ಟ್ರಕ್ ಡಿಕ್ಕಿ ಹೊಡೆದು ಗ್ಯಾಸ್ ಟ್ಯಾಂಕರ್ ಸೇರಿ ಹಲವು ವಾಹನ ಬೆಂಕಿಗಾಹುತಿ… ಓರ್ವ ಸಾ*ವು

Tragedy: ಬೆಳ್ಳಂಬೆಳಗ್ಗೆ ಭೀಕರ ಅಪಘಾತ… ಗ್ಯಾಸ್ ಟ್ಯಾಂಕರ್ ಸೇರಿ ಹಲವು ವಾಹನ ಬೆಂಕಿಗಾಹುತಿ

7-icc

ICC Champions Trophy: ಹೈಬ್ರಿಡ್‌ ಮಾದರಿಯೇ ಅಂತಿಮ

6-mandya

Mandya; ಸಕ್ಕರೆ ನಾಡಿನಲ್ಲಿ ಇಂದಿನಿಂದ  87ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನ

5-dinesh

Dinesh Gundu Rao; ಬಾಣಂತಿಯರ ಸಾ*ವು ಪ್ರಕರಣ ನ್ಯಾಯಾಂಗ ತನಿಖೆಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.