ಅವಳಿ ಜಿಲ್ಲೆಗಳಲ್ಲಿ ಬೇಡಿಕೆಗೆ ತಕ್ಕಂತೆ ಸಿಗದ ಕೊವ್ಯಾಕ್ಸಿನ್‌


Team Udayavani, May 6, 2021, 5:42 PM IST

covid effect in mandya

ಮಂಡ್ಯ: ಕೊರೊನಾ ನಿಯಂತ್ರಿಸಲು ನಾಗರಿಕರಿಗೆ ಕೊವ್ಯಾಕ್ಸಿನ್‌ಹಾಗೂ ಕೋವಿಶೀಲ್ಡ್‌ ಲಸಿಕೆ ನೀಡಲಾಗುತ್ತಿದೆ. ಇದರಲ್ಲಿಕೊವ್ಯಾಕ್ಸಿನ್‌ಲಸಿಕೆ ಕೊರತೆ ಉಂಟಾಗಿದೆ. ಜಿಲ್ಲೆಯ ಜಿಲ್ಲಾಸ್ಪತ್ರೆ,ತಾಲೂಕು ಆಸ್ಪತ್ರೆಗಳಲ್ಲಿ ಲಸಿಕೆ ಹಾಕಲಾಗುತ್ತಿದೆ. ಕೇವಲ 2ಸಾವಿರ ಲಸಿಕೆ ಇತ್ತು. ಇದರಲ್ಲಿ 2 ಸಾವಿರ ಮಂದಿಗೆ ನೀಡಲಾಗಿದೆ.ಬುಧವಾರ ಸಂಜೆ 2 ಸಾವಿರ ಲಸಿಕೆ ಬರುತ್ತಿದೆ. ಅದರನ್ನು 2ನೇಬಾರಿ ಲಸಿಕೆ ಪಡೆಯುತ್ತಿರುವವರಿಗೆ ನೀಡಲಾಗುತ್ತದೆ.

18 ಸಾವಿರ ಕಾಯುವಿಕೆ: ಜಿಲ್ಲಾದ್ಯಂತ 22 ಸಾವಿರ ಮಂದಿಗೆಮೊದಲ ಲಸಿಕೆ ಕೋವ್ಯಾಕ್ಸಿನ್‌ ಲಸಿಕೆ ಹಾಕಲಾಗಿದೆ. ಇದರಲ್ಲಿಈಗಾಗಲೇ 2 ಸಾವಿರ ಮಂದಿಗೆ 2ನೇ ಲಸಿಕೆ ನೀಡಲಾಗಿದೆ.ಉಳಿದಂತೆ ಬುಧವಾರ ಸಂಜೆ ಬರುವ 2 ಸಾವಿರ ಲಸಿಕೆಯನ್ನುಗುರುವಾರ ನೀಡಲಾಗುತ್ತಿದೆ. ಇನ್ನುಳಿದ 18 ಸಾವಿರ ಮಂದಿಗೆಲಸಿಕೆ ಇಲ್ಲದಂತಾಗಿದೆ.

6 ವಾರ ಕಳೆದಿವೆ: ಈಗಾಗಲೇ ಮೊದಲ ಲಸಿಕೆ ಪಡೆದವರು 6ವಾರ ಕಳೆದಿದ್ದು, ಲಸಿಕೆಗಾಗಿ ಕಾಯುತ್ತಿದ್ದಾರೆ. ಅವರೆಲ್ಲರಿಗೂಲಸಿಕೆ ಲಭ್ಯತೆ ಆಧರಿಸಿ ನೀಡಲಾಗುವುದು. ಮೊದಲ ಲಸಿಕೆ ಬೇರೆಯಾರಿಗೂ ನೀಡುವುದಿಲ್ಲ.

ಕೋವಿಶೀಲ್ಡ್‌ ಲಸಿಕೆ ಲಭ್ಯ: ಜಿಲ್ಲೆಯಲ್ಲಿ ಸದಸ್ಯ ಕೋವಿಶೀಲ್ಡ್‌12500 ಸಾವಿರ ಲಸಿಕೆ ಲಭ್ಯವಿದೆ. ಇದರಲ್ಲಿ ಶೇ.70ರಷ್ಟು 2ನೇಡೋಸ್‌ ಪಡೆಯುವವರಿಗೆ ನೀಡಲಾಗುತ್ತಿದೆ. ಉಳಿದಂತೆಶೇ.30ರಷ್ಟು ಲಸಿಕೆಯನ್ನು ಮೊದಲ ಬಾರಿ ಪಡೆಯುವವರಿಗೆನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಲಸಿಕೆ ಲಭ್ಯವಾಗಲಿದ್ದು,ಅದರಂತೆ ನೀಡಲಾಗುತ್ತದೆ.

ಹಾಸನ ಜಿಲ್ಲೆಗೆ 3700 ಡೋಸ್‌ ಕೊವ್ಯಾಕ್ಸಿನ್‌ ಪೂರೈಕೆ

ಜಿಲ್ಲೆಗೆ ಕಳೆದ 10 ದಿನಗಳಿಂದ ಕೊವ್ಯಾ ಕ್ಸಿನ್‌ ಲಸಿಕೆ ಪೂರೈಕೆಸ್ಥಗಿತಗೊಂಡಿತ್ತು. ಈಗ, 3700 ಡೋಸ್‌ ಲಸಿಕೆ ಹಾಸನ ಜಿಲ್ಲೆಗೆಬಿಡುಗಡೆಯಾಗಿದೆ.ಜಿಲ್ಲೆಗೆ ಒಟ್ಟು 38 ಸಾವಿರ ಕೊವ್ಯಾಕ್ಸಿನ್‌ ಚುಚ್ಚು ಮದ್ದುಸರಬರಾಜಾಗಿತ್ತು. ಒಂದನೇ ಡೋಸ್‌ ಪಡೆದು 28 ದಿನಪೂರೈಸಿದವರಿಗೆ 2ನೇ ಡೋಸ್‌ ಪಡೆಯಲು 15,600ಮಂದಿ ಕಾಯುತ್ತಿದ್ದಾರೆ. 3700 ಕೊವ್ಯಾಕ್ಸಿನ್‌ ಚುಚ್ಚುಮದ್ದು ಬುಧವಾರ ಹಾಸನಜಿಲ್ಲೆಗೆ ಬಿಡುಗಡೆಯಾ ಗಿದ್ದು ಗುರುವಾರ ದಿಂದ 2ನೇಡೋಸ್‌ಗೆ ಅರ್ಹರಿದ್ದವರು ಲಸಿಕೆಯನ್ನು ಸರ್ಕಾರಿಆಸ್ಪತ್ರೆ ಗಳಲ್ಲಿ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಪಡೆದುಕೊಳ್ಳಬಹುದು.

ಆತಂಕ ಪಡುವ ಅಗತ್ಯವಿಲ್ಲ: ಕೊವ್ಯಾಕ್ಸಿನ್‌ ಲಸಿಕೆಪೂರೈಕೆಯಲ್ಲಿ ವ್ಯತ್ಯಯವಾಗಿತ್ತು. ಬುಧವಾರ ಹಾಸನಜಿಲ್ಲೆಗೆ 3700 ಡೋಸ್‌ ಹಂಚಿಕೆಯಾಗಿದ್ದು,ಗುರುವಾರದಿಂದ 2ನೇ ಡೋಸ್‌ ಪಡೆಯಲುಅರ್ಹರಾಗಿರುವವರು ಅಂದರೆ ಮೊದಲ ಲಸಿಕೆ ಪಡೆದು 28ದಿನ ಪೂರೈಸಿದವರು ಲಸಿಕೆ ಪಡೆದುಕೊಳ್ಳಬಹುದಾಗಿದೆ. 28ದಿನ ಮುಗಿದ ತಕ್ಷಣವೇ 2ನೇ ಡೋಸ್‌ ಪಡೆಯಬೇಕೆಂದೇನಿಲ್ಲ. 4 ರಿಂದ 6ವಾರಗಳ ನಡುವೆ 2ನೇ ಡೋಸ್‌ ಪಡೆದರೆ ಸಾಕು. ಕೆಲ ದಿನಗಳು ಹೆಚ್ಚುಕಡಿಮೆಯಾದರೂ ಆತಂಕಪಡದೆ 2ನೇ ಡೋಸ್‌ ಲಸಿಕೆ ಪಡೆಯಬೇಕು.ಮೊದಲ ಲಸಿಕೆ ಪಡೆದು 6 ವಾರ ಸಮೀಪಿಸುತ್ತಿರುವವರು ಆದ್ಯತೆ ಮೇಲೆಲಸಿಕೆ ಪಡೆಯಬೇಕು. ಮುಂದಿನ ದಿನಗಳಲ್ಲಿ ಹಂತ, ಹಂತವಾಗಿಲಸಿಕೆ ಪೂರೈಕೆಯಾಗಲಿದೆ. ನೂಕು ನುಗ್ಗಲಿನಲ್ಲಿ ಲಸಿಕೆಪಡೆಯುವ ಧಾವಂತ ಬೇಡ ಎಂದು ಜಿಲ್ಲಾ ಆರೋಗ್ಯಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ್‌ಕುಮಾರ್‌ತಿಳಿಸಿದ್ದಾರೆ.

ಆತಂಕ ಎದುರಾಗಿದೆ: ನಾನು ಕೊವ್ಯಾಕ್ಸಿನ್‌ ಲಸಿಕೆಪಡೆದು 39 ದಿನವಾಗಿದೆ. ಮೊದಲ ಡೋಸ್‌ ಪಡೆದ 28 ದಿನದನಂತರ 2ನೇ ಡೋಸ್‌ ಪಡೆಯಬೇಕೆಂದು ಸೂಚಿಸಲಾಗಿತ್ತು. ಆದರೆ,ಇದುವರೆಗೂ ಲಸಿಕೆ ಪೂರೈಕೆಯಿಲ್ಲ ಎಂದು ಆಸ್ಪತ್ರೆಯಲ್ಲಿ ಹೇಳುತ್ತಿದ್ದಾರೆ. ನಿರ್ದಿಷ್ಟ ಅವಧಿಯಲ್ಲಿ 2ನೇ ಡೋಸ್‌ ಪಡೆಯದಿದ್ದರೆಮೊದಲ ಡೋಸ್‌ ಪಡೆದದ್ದೂ ವ್ಯರ್ಥವಾದೀತೆ ಎಂಬ ಆತಂಕಎದುರಾಗಿದೆ. ಸರ್ಕಾರ ಕೊವ್ಯಾಕ್ಸಿನ್‌ ಲಸಿಕೆ ಪೂರೈಕೆ ಮಾಡಿ 2ನೇಡೋಸ್‌ಗೆ ಅರ್ಹರಿರುವ ಹಿರಿಯ ನಾಗರೀಕರು ಮತ್ತು 45 ವರ್ಷಮೇಲ್ಪಟ್ಟವರಿಗೆ ಆದ್ಯತೆ ಮೇಲೆ ನೀಡಲಿ. ಆನಂತರ 18 ವರ್ಷಮೇಲ್ಪಟ್ಟವರಿಗೆ ನೀಡಲಿ ಎಂದು ಮೊದಲ ಡೋಸ್‌ ಕೊವ್ಯಾಕ್ಸಿನ್‌ಲಸಿಕೆ ಪಡೆದ ಹಾಸನದ ವಿವೇಕ ನಗರದ ಅನ್ನಪೂರ್ಣ ಮನವಿಮಾಡಿದ್ದಾರೆ.

ಟಾಪ್ ನ್ಯೂಸ್

Fraud Case: ಗೂಗಲ್‌ ಪೇ ಮಾಡಿದೆ ಎಂದು ಹೇಳಿ ಮೋಸ

Fraud Case: ಗೂಗಲ್‌ ಪೇ ಮಾಡಿದೆ ಎಂದು ಹೇಳಿ ಮೋಸ

ಕಸ್ತೂರಿಂಗನ್‌ ವರದಿ ತಿರಸ್ಕಾರ ಆಗ್ರಹಿಸಿ “ಬೆಂಗಳೂರು ಚಲೋ’

ಕಸ್ತೂರಿಂಗನ್‌ ವರದಿ ತಿರಸ್ಕಾರ ಆಗ್ರಹಿಸಿ “ಬೆಂಗಳೂರು ಚಲೋ’

1-lll

Border-Gavaskar Test series ಇಂದಿನಿಂದ: ಹೋರಾಟಕ್ಕೆ ಭಾರತ-ಆಸ್ಟ್ರೇಲಿಯ ಸಿದ್ಧ

ರಾಷ್ಟ್ರ ರಾಜಧಾನಿಗೆ ನಂದಿನಿ ಲಗ್ಗೆ: ಹೈನುಗಾರರಿಗೂ ಸಿಗಲಿ ಮನ್ನಣೆ

New Delhi: ರಾಷ್ಟ್ರ ರಾಜಧಾನಿಗೆ ನಂದಿನಿ ಲಗ್ಗೆ: ಹೈನುಗಾರರಿಗೂ ಸಿಗಲಿ ಮನ್ನಣೆ

Yasin Malik

Yasin Malik ವಿಚಾರಣೆಗೆ ತಿಹಾರ್‌ ಜೈಲಿನಲ್ಲೇ ಕೋರ್ಟ್‌ ರೂಂ: ಸುಪ್ರೀಂ

court

Himachal Pradesh;ನಷ್ಟದಲ್ಲಿರುವ ಹೊಟೇಲ್‌ ಮುಚ್ಚಲು ಹೈಕೋರ್ಟ್‌ ಆದೇಶ

1-moi

Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಹಿಷಿ ವರದಿ ಅಧಿಕೃತ ಶಾಸನವಾಗಲಿ: ಗೊ.ರು. ಚನ್ನಬಸಪ್ಪ

ಮಹಿಷಿ ವರದಿ ಅಧಿಕೃತ ಶಾಸನವಾಗಲಿ: ಗೊ.ರು. ಚನ್ನಬಸಪ್ಪ

Cheluvaraya-swamy

By Election: ಮಗನ ಚುನಾವಣೆಗಾಗಿ ಎಚ್‌ಡಿಕೆ ಸಾವಿರಾರು ಕೋಟಿ ಸಂಗ್ರಹ: ಚಲುವರಾಯಸ್ವಾಮಿ

Mandya-Temple

Mandya: ದಲಿತರ ದೇಗುಲ ಪ್ರವೇಶ: ಮೂರ್ತಿ ಹೊತ್ತೊಯ್ದ ಸವರ್ಣೀಯರು!

Sumalatha

Active Politics: ನಾನು ಎಂದೂ ಮಂಡ್ಯ ಕ್ಷೇತ್ರ ಬಿಡುವುದಿಲ್ಲ: ಮಾಜಿ ಸಂಸದೆ ಸುಮಲತಾ

HD-Devegowda

By Election: ಸಿದ್ದರಾಮಯ್ಯ ಸರಕಾರ ಕಿತ್ತೊಗೆಯುವವರೆಗೂ ಹೋರಾಟ ನಿಲ್ಲಲ್ಲ: ಎಚ್‌.ಡಿ.ದೇವೇಗೌಡ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Fraud Case: ಗೂಗಲ್‌ ಪೇ ಮಾಡಿದೆ ಎಂದು ಹೇಳಿ ಮೋಸ

Fraud Case: ಗೂಗಲ್‌ ಪೇ ಮಾಡಿದೆ ಎಂದು ಹೇಳಿ ಮೋಸ

ಕಸ್ತೂರಿಂಗನ್‌ ವರದಿ ತಿರಸ್ಕಾರ ಆಗ್ರಹಿಸಿ “ಬೆಂಗಳೂರು ಚಲೋ’

ಕಸ್ತೂರಿಂಗನ್‌ ವರದಿ ತಿರಸ್ಕಾರ ಆಗ್ರಹಿಸಿ “ಬೆಂಗಳೂರು ಚಲೋ’

1-lll

Border-Gavaskar Test series ಇಂದಿನಿಂದ: ಹೋರಾಟಕ್ಕೆ ಭಾರತ-ಆಸ್ಟ್ರೇಲಿಯ ಸಿದ್ಧ

ರಾಷ್ಟ್ರ ರಾಜಧಾನಿಗೆ ನಂದಿನಿ ಲಗ್ಗೆ: ಹೈನುಗಾರರಿಗೂ ಸಿಗಲಿ ಮನ್ನಣೆ

New Delhi: ರಾಷ್ಟ್ರ ರಾಜಧಾನಿಗೆ ನಂದಿನಿ ಲಗ್ಗೆ: ಹೈನುಗಾರರಿಗೂ ಸಿಗಲಿ ಮನ್ನಣೆ

Yasin Malik

Yasin Malik ವಿಚಾರಣೆಗೆ ತಿಹಾರ್‌ ಜೈಲಿನಲ್ಲೇ ಕೋರ್ಟ್‌ ರೂಂ: ಸುಪ್ರೀಂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.