ಕೊಪ್ಪಳ: ಆಕ್ಸಿಜನ್, ಐಸಿಯು ಬೆಡ್ ಬಹುತೇಕ ಭರ್ತಿ
ಖಾಸಗಿ, ಸರ್ಕಾರಿಯಲ್ಲಿ 39 ಬೆಡ್ ಮಾತ್ರ ಖಾಲಿ !ಆಸ್ಪತ್ರೆಗೆ ದಾಖಲಾಗಲು ಬೆಡ್ ಇಲ್ಲದ ಸ್ಥಿತಿ
Team Udayavani, May 6, 2021, 8:50 PM IST
ದತ್ತು ಕಮ್ಮಾರ
ಕೊಪ್ಪಳ: ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಬೆಡ್‌ಗಳು, ವೆಂಟಿಲೇಟರ್ ಹಾಗೂ ಐಸಿಯು ಬೆಡ್‌ಗಳು ಬಹುತೇಕ ಭರ್ತಿಯಾಗುತ್ತಿವೆ. ಜಿಲ್ಲಾಡಳಿತವು ಅಗತ್ಯವಾಗಿ ಹೆಚ್ಚುವರಿ ಬೆಡ್‌ಗಳ ವ್ಯವಸ್ಥೆ ಮಾಡಲೇಬೇಕಿದೆ.
ಹೌದು.. ಜಿಲ್ಲೆಯಲ್ಲಿ ಸೋಂಕಿನ ಪ್ರಮಾಣ ಏರಿಕೆಯಾಗುತ್ತಿರುವುದನ್ನು ನೋಡಿದರೆ ಪರಿಸ್ಥಿತಿ ಮತ್ತಷ್ಟು ವಿಕೋಪಕ್ಕೆ ತಲುಪಲಿದೆ ಎನ್ನುವುದನ್ನು ಅಲ್ಲಗಳೆಯುವಂತ್ತಿಲ್ಲ. ಅದಕ್ಕೂ ಮೊದಲೇ ಜಿಲ್ಲಾಡಳಿತ ತುರ್ತಾಗಿ ಬೆಡ್‌ಗಳ ವ್ಯವಸ್ಥೆ ಮಾಡಿ, ಅವುಗಳಿಗೆ ಆಕ್ಸಿಜನ್ ಸೇರಿ ವೆಂಟಿಲೇಟರ್ ಸೌಲಭ್ಯ ಅಳವಡಿಸಿದರೆ ಮಾತ್ರ ಸೋಂಕಿತರಿಗೆ ಬೆಡ್‌ಗಳು ಸಿಗಲಿವೆ. ಇಲ್ಲದಿದ್ದರೆ ಮುಂದಿನ ಪರಿಸ್ಥಿತಿ ಊಹಿಸಲು ಸಾಧ್ಯವಿಲ್ಲದಂತಾಗಲಿದೆ.
ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಆರೈಕೆಗಾಗಿ 8 ಸರ್ಕಾರಿ ಆಸ್ಪತ್ರೆ ಹಾಗೂ ಕೋವಿಡ್ ಕೇರ್ ಸೆಂಟರ್‌ಗಳು ಕಾರ್ಯ ನಿರ್ವಹಿಸುತ್ತಿದ್ದರೆ 9 ಖಾಸಗಿ ಆಸ್ಪತ್ರೆಗಳು ಸೇರಿದಂತೆ ಒಟ್ಟಾರೆ 17 ಆಸ್ಪತ್ರೆಗಳು ಸೋಂಕಿತರ ಆರೈಕೆಗೆ ಕಾರ್ಯ ನಿರ್ವಹಿಸುತ್ತಿವೆ. ಈ ಪೈಕಿ ಒಟ್ಟಾರೆ 1004 ಬೆಡ್‌ಗಳಿದ್ದು, ಇವುಗಳಲ್ಲಿ 257 ಬೆಡ್ ಗಳನ್ನು ಕೋವಿಡ್‌ಗಾಗಿ ಬಳಕೆ ಮಾಡಿಕೊಳ್ಳಲಾಗಿದೆ. ಅವುಗಳಲ್ಲಿ 178 ಬೆಡ್ ಭರ್ತಿಯಾಗಿವೆ. ಅಂದರೆ ಸರ್ಕಾರಿ, ಖಾಸಗಿ ಆಸ್ಪತ್ರೆ ಹಾಗೂ ಕೋವಿಡ್ ಕೇರ್ ಸೆಂಟರ್‌ನಲ್ಲಿ ಸಾಮಾನ್ಯ ಬೆಡ್‌ನಲ್ಲಿ 178 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಸಾಮಾನ್ಯ ಬೆಡ್ ಗಳಲ್ಲಿ 79 ಬೆಡ್‌ಗಳು ಮಾತ್ರ ಖಾಲಿ ಇವೆ.
ಆಕ್ಸಿಜನ್ ಬೆಡ್‌ಗಳ ಪೈಕಿ ಒಟ್ಟಾರೆ ಖಾಸಗಿ, ಸರ್ಕಾರಿ ಆಸ್ಪತ್ರೆಗಳಲ್ಲಿ 193 ಬೆಡ್‌ಗಳಿವೆ. ಅವುಗಳಲ್ಲಿ 184 ಬೆಡ್‌ಗಳು ಭರ್ತಿಯಾಗಿದ್ದು, 5 ಬೆಡ್‌ಗಳು ಮಾತ್ರ ಖಾಲಿಯಿವೆ. ಎಚ್ ಎಫ್‌ಎನ್‌ಸಿ ಬೆಡ್ ಪೈಕಿ ಒಟ್ಟು 18 ಬೆಡ್‌ಗಳಿದ್ದು 15 ಬೆಡ್ ಗಳನ್ನು ಕೋವಿಡ್‌ಗೆ ಕಾಯ್ದಿರಿಸಲಾಗಿದೆ. ಅವುಗಳಲ್ಲಿ 9 ಭರ್ತಿಯಾಗಿ 4 ಬೆಡ್‌ಗಳು ಖಾಲಿಯಿವೆ.
ಐಸಿಯು ಬೆಡ್ ಗಳ ಲೆಕ್ಕಾಚಾರದಲ್ಲಿ ಒಟ್ಟಾರೆ 55 ಬೆಡ್‌ಗಳನ್ನು ಗುರುತಿಸಿದ್ದು, ಅವುಗಳಲ್ಲಿ 55 ಬೆಡ್‌ಕೋವಿಡ್‌ಗೆ ಕಾಯ್ದಿರಿಸಲಾಗಿದೆ. ಈ ಪೈಕಿ 44 ಬೆಡ್‌ಗಳು ಭರ್ತಿಯಾಗಿ 9 ಬೆಡ್‌ಗಳು ಖಾಲಿಯಿವೆ. ಜೊತೆಗೆ ವೆಂಟಿಲೇಟರ್ ಜೊತೆಗೆ ಐಸಿಯು ಬೆಡ್‌ಗಳ ಲೆಕ್ಕಾಚಾರದಲ್ಲಿ ಒಟ್ಟಾರೆ 49 ಬೆಡ್ ಕೋವಿಡ್‌ಗೆ ಕಾಯ್ದಿರಿಸಿದೆ. ಈ ಪೈಕಿ 39 ಭರ್ತಿಯಾಗಿ, 5 ಬೆಡ್‌ಗಳು ಮಾತ್ರ ಖಾಲಿಯಿವೆ. ಅಂದರೆ, ಜಿಲ್ಲೆಯಲ್ಲಿ ಸಾಮಾನ್ಯ ಬೆಡ್‌ಗಳನ್ನು ಹೊರತುಪಡಿಸಿ ಆಕ್ಸಿಜನ್ ಬೆಡ್, ಐಸಿಯು, ಎಚ್‌ಡಿಯು, ವೆಂಟಿಲೇಟರ್ ಬೆಡ್ ಜೊತೆ ಐಸಿಯು ಬೆಡ್‌ಗಳು ಒಟ್ಟಾರೆ 315 ಬೆಡ್‌ಗಳು ಮಾತ್ರ ಇವೆ. ಇವುಗಳಲ್ಲಿ 276 ಬೆಡ್‌ಗಳು ಬುಧವಾರದ ಅಂತ್ಯದವರೆಗೂ ಭರ್ತಿಯಾಗಿವೆ.
ಜಿಲ್ಲಾದ್ಯಂತ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ 39 ಬೆಡ್‌ಗಳು ಮಾತ್ರ ಖಾಲಿಯಿವೆ. ಆಸ್ಪತ್ರೆಗೆ ಸೋಂಕಿತರು ಕೊನೆಯ ಹಂತಕ್ಕೆ ಆಗಮಿಸುತ್ತಿರುವುದರಿಂದ ಅವರ ಆರೋಗ್ಯದ ಸ್ಥಿತಿ ಗಂಭೀರವಾಗಿರುತ್ತದೆ. ಆ ಸಂದರ್ಭದಲ್ಲಿ ಅವರಿಗೆ ಆಕ್ಸಿಜನ್, ವೆಂಟಿಲೇಟರ್ ಇಲ್ಲವೇ ಐಸಿಯು ಬೆಡ್‌ಗಳ ಅಗತ್ಯವಿರುತ್ತದೆ. ಆದರೆ ಜಿಲ್ಲೆಯಲ್ಲಿ ಇರುವ 315 ಬೆಡ್‌ಗಳ ಪೈಕಿ ಬಹುಪಾಲು ಭರ್ತಿಯಾಗಿವೆ. ಉಳಿದ 39 ಬೆಡ್‌ಗಳು ಇನ್ನು ಒಂದೆರಡು ದಿನದಲ್ಲಿ ಭರ್ತಿಯಾದರೂ ಅಚ್ಚರಿಪಡಬೇಕಿಲ್ಲ. ಜಿಲ್ಲಾಡಳಿತ ಈಗಲೇ ಹೆಚ್ಚುವರಿ ಐಸಿಯು, ಆಕ್ಸಿಜನ್ ಹಾಗೂ ವೆಂಟಿಲೇಟರ್ ಬೆಡ್‌ಗಳನ್ನು ಮುಂಜಾಗೃತೆಯಿಂದ ವ್ಯವಸ್ಥೆ ಮಾಡಿಕೊಳ್ಳದಿದ್ದರೆ ಮುಂದಿನ ದಿನದಲ್ಲಿ ಪರಿಸ್ಥಿತಿ ಮತ್ತಷ್ಟು ವಿಷಮವಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ
Tawargera: ಚಲಿಸುತ್ತಿದ್ದ ಬಸ್ಸಿಗೆ ಡಿಕ್ಕಿ ಹೊಡೆದು ನಂತರ ಕುರಿಗಳ ಮೇಲೆ ಹರಿದ ಕ್ಯಾಂಟರ್
Gangavathi: ಪತ್ನಿ ವರದಕ್ಷಿಣೆ ತಂದಿಲ್ಲ ಎಂದು ಮನೆಗೆ ಬೀಗ ಹಾಕಿ ಪತಿ ಹಾಗೂ ಮನೆಯವರು ಪರಾರಿ
Koppala ಗವಿಮಠ ಜಾತ್ರೆಗೆ ನಟ ಅಮಿತಾಬ್ ಬಚ್ಚನ್?
ಕನಕಗಿರಿ:ಮಂಗಳೂರು ಮೂಲದ ಕುಟುಂಬ-ಸೌಹಾರ್ದತೆಗೆ ಸಾಕ್ಷಿ 4 ದಶಕದ ಸಕ್ಕರೆ ಗೊಂಬೆ ತಯಾರಿಕೆ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.