ಕನ್ನಡಿಗರ ಉಸಿರನ್ನೇ ಕಿತ್ತುಕೊಳ್ಳುವ ಕೇಂದ್ರದ ಮಾರಕ ತಾರತಮ್ಯ ಬದಲಾಗಬೇಕು : ಹೆಚ್.ಡಿಕೆ
Team Udayavani, May 6, 2021, 10:29 PM IST
ಬೆಂಗಳೂರು : ಕರ್ನಾಟಕದಿಂದ ಎಲ್ಲವನ್ನೂ ಪಡೆದ ಕೇಂದ್ರ ಕರ್ನಾಟಕವನ್ನು ಇನ್ನೆಷ್ಟು ವಂಚಿಸಬೇಕೆಂದಿದೆ? ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ಆಮ್ಲಜನಕ ಪೊರೈಕೆಯ ವಿಷಯದಲ್ಲಿ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಮಾಡುತ್ತಿರುವ ಧೋರಣೆ ಬಗ್ಗೆ ಧ್ವನಿ ಎತ್ತಿದ್ದಾರೆ.
ಕರ್ನಾಟಕಕ್ಕೆ ನಿತ್ಯ 1200 ಟನ್ ಆಮ್ಲಜನಕ ಪೂರೈಸುವಂತೆ ಹೈಕೋರ್ಟ್ ನೀಡಿದ್ದ ಆದೇಶವನ್ನು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಿದೆ. ‘ಕರ್ನಾಟಕಕ್ಕೆ ಆಮ್ಲಜನಕ ಪೂರೈಕೆ ಹೆಚ್ಚಿಸಿದರೆ ಆರೋಗ್ಯ ವ್ಯವಸ್ಥೆ ಕುಸಿಯಲಿದೆ’ ಎಂದು ವಾದಿಸಿದೆ. ಕರ್ನಾಟಕದಿಂದ ಎಲ್ಲವನ್ನೂ ಪಡೆದ ಕೇಂದ್ರ ಕರ್ನಾಟಕವನ್ನು ಇನ್ನೆಷ್ಟು ವಂಚಿಸಬೇಕೆಂದಿದೆ? ಎಂದು ಪ್ರಶ್ನಿಸಿದ್ದಾರೆ.
ರಾಜ್ಯಕ್ಕೆ ನಿತ್ಯ 1700 ಟನ್ ಆಮ್ಲಜನಕದ ಅಗತ್ಯವಿದೆ. ಆದರೂ, 1200 ಟನ್ ಆಮ್ಲಜನಕ ಇದ್ದರೆ ಪರಿಸ್ಥಿತಿ ಹೇಗೋ ನಿಭಾಯಿಸಬಹುದು. ಕರ್ನಾಟಕದಲ್ಲಿ ಹೆಚ್ಚು ಕಡಿಮೆ 1200 ಟನ್‌ಗೂ ಅಧಿಕ ಪ್ರಮಾಣದ ಆಮ್ಲಜನಕವೂ ಉತ್ಪಾದನೆಯಾಗುತ್ತಿದೆ. ಆದರೆ, ನಮ್ಮಿಂದ ಆಮ್ಲಜನಕ ಕಿತ್ತುಕೊಳ್ಳುತ್ತಿರುವ ಕೇಂದ್ರ ಪೂರೈಸುತ್ತಿರುವುದು 865-965 ಟನ್ ಮಾತ್ರ ಎಂದು ಹೇಳಿದ್ದಾರೆ.
ಇದನ್ನೂ ಓದಿ :ದಾವಣಗೆರೆ: ಸೂಕ್ತ ಸಮಯಕ್ಕೆ ಸಿಗದ ಬೆಡ್ : ಆಸ್ಪತ್ರೆ ಆವರಣದಲ್ಲೇ ಮೃತಪಟ್ಟ ವ್ಯಕ್ತಿ
ಅನುದಾನದಲ್ಲಿ ತಾರತಮ್ಯ, ಜಿಎಸ್‌ಟಿ ಬಾಕಿಯಲ್ಲಿ ತಾರತಮ್ಯ, ನೆರೆ-ಬರ ಪರಿಹಾರದಲ್ಲಿ ಮಾಡಲಾದ ತಾರತಮ್ಯವನ್ನು ಕರ್ನಾಟಕ, ಕನ್ನಡಿಗರು ಹೇಗೋ ಸಹಿಸಿದ್ದಾರೆ. ಆದರೆ, ಉಸಿರನ್ನೇ ಕಿತ್ತುಕೊಳ್ಳುವ ಕೇಂದ್ರದ ಈ ಮಾರಕ ತಾರತಮ್ಯವನ್ನು ಸಹಿಸುವುದಾದರೂ ಹೇಗೆ. ಇದು ಕನ್ನಡಿಗರ ಜೀವ, ಜೀವನದ ಪ್ರಶ್ನೆ ಎಂಬುದನ್ನು ಕೇಂದ್ರ ಸರ್ಕಾರ ಅರಿಯುತ್ತಿಲ್ಲ ಏಕೆ? ಎಂದು ಕೇಂದ್ರದ ವಿರುದ್ಧ ಗುಡುಗಿದ್ದಾರೆ.
ಅಷ್ಟಕ್ಕೂ ನಾವು ಅಧಿಕವಾಗಿ ಏನೂ ಕೇಳುತ್ತಿಲ್ಲ. ನಮ್ಮಲ್ಲಿ ಉತ್ಪಾದನೆಯಾಗುತ್ತಿರುವ ಆಮ್ಲಜನಕವನ್ನು ನಮಗೇ ನೀಡಿ ಎಂಬುದು ನಮ್ಮ ಬೇಡಿಕೆ. ನಮ್ಮವರ ಜೀವವನ್ನೇ ಕಿತ್ತು ಗುಜರಾತ್ ಮತ್ತಿತರ ರಾಜ್ಯಗಳ ಜನರ ಜೀವ ಉಳಿಸಬೇಕಾದ ಅನಿವಾರ್ಯತೆ, ತ್ಯಾಗ ಮಾಡಬೇಕಾದ ಸಂದಿಗ್ಧತೆಯಲ್ಲಿ ನಮ್ಮನ್ನು ಸಿಲುಕಿಸಬಾರದು. ಕೇಂದ್ರ ನಮ್ಮ ಪಾಲನ್ನು ನಮಗೆ ನೀಡಲಿ ಎಂದು ಕೇಳಿಕೊಂಡಿದ್ದಾರೆ.
ರಾಜ್ಯದಿಂದ ಆಯ್ಕೆಯಾಗಿರುವ ಬಿಜೆಪಿ ಸಂಸದರು ಕೇಂದ್ರದ ಇಂಥ ತಾರತಮ್ಯವನ್ನು ಪ್ರಶ್ನಿಸಬೇಕು. ಇಲ್ಲಿವರೆಗೆ ಬಾಯಿಗೆ ಬೀಗ ಹಾಕಿಕೊಂಡಿರುವ ಬಿಜೆಪಿ ಸಂಸದರು ಈಗ ಜನರ ಜೀವ ಉಳಿಸುವುದಕ್ಕಾದರೂ ಬಾಯಿ ಬಿಡಲಿ. ರಾಜ್ಯದಿಂದ ಶಕ್ತಿ ಪಡೆದಿರುವ ಕೇಂದ್ರ ಅದೇ ಶಕ್ತಿಯನ್ನು ಬಳಸಿಕೊಂಡು ರಾಜ್ಯದ ಮೇಲೆ ಗದಾಪ್ರಹಾರ ನಡೆಸುತ್ತಿರುವುದನ್ನು ಜನ ಗಮನಿಸಲಿ ಎಂದಿದ್ದಾರೆ.
ಕರ್ನಾಟಕಕ್ಕೆ ನಿತ್ಯ 1200 ಟನ್ ಆಮ್ಲಜನಕ ಪೂರೈಸುವಂತೆ ಹೈಕೋರ್ಟ್ ನೀಡಿದ್ದ ಆದೇಶವನ್ನು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಿದೆ. ‘ಕರ್ನಾಟಕಕ್ಕೆ ಆಮ್ಲಜನಕ ಪೂರೈಕೆ ಹೆಚ್ಚಿಸಿದರೆ ಆರೋಗ್ಯ ವ್ಯವಸ್ಥೆ ಕುಸಿಯಲಿದೆ’ ಎಂದು ವಾದಿಸಿದೆ. ಕರ್ನಾಟಕದಿಂದ ಎಲ್ಲವನ್ನೂ ಪಡೆದ ಕೇಂದ್ರ ಕರ್ನಾಟಕವನ್ನು ಇನ್ನೆಷ್ಟು ವಂಚಿಸಬೇಕೆಂದಿದೆ?
1/5 pic.twitter.com/ZtNEYxqeij— H D Kumaraswamy (@hd_kumaraswamy) May 6, 2021
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karnataka: ಒಳ ಮೀಸಲು ಜಾರಿವರೆಗೆ ಸರಕಾರಿ ನೇಮಕಾತಿಗೆ ತಡೆ
Bengaluru: ಬಾಳೆಕುದ್ರು ಶ್ರೀಮಠದ ಶಿಷ್ಯ ಸ್ವೀಕಾರ
Mysuru: ‘ಕೋಲು ಮಂಡೆ ಜಂಗಮ’ ಹಾಡು ನೃತ್ಯ ಸಂಯೋಜಕ ಕಂಸಾಳೆ ಕಲಾವಿದ ಕುಮಾರಸ್ವಾಮಿ ನಿಧನ
Bengaluru: ಹಿಂದೂ ದೇವತೆಗಳ ಬಗ್ಗೆ ಅಶ್ಲೀಲ ಪದ ಬಳಕೆ: ಕಿಡಿಗೇಡಿ ವಿರುದ್ಧ ದೂರು
Gift: ಶಿಗ್ಗಾವಿಯಲ್ಲಿ ನಾಮಪತ್ರ ವಾಪಸ್ ಪಡೆದ ಖಾದ್ರಿಗೆ ಹೆಸ್ಕಾಂ ಅಧ್ಯಕ್ಷಗಿರಿ ಹುದ್ದೆ!
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.