ಸದ್ದಿಲ್ಲದೇ ರಾಮನಾದ ದೂದ್ ಪೇಡ ದಿಗಂತ್
Team Udayavani, May 7, 2021, 8:36 AM IST
ಕನ್ನಡದ ದೂದ್ ಪೇಡ ಹುಡುಗ ದಿಗಂತ್ ಸದ್ದಿಲ್ಲದೇ ರಾಮನಾಗಿ ಮಿಂಚಿದ್ದಾರೆ. ದಿಗಂತ್ ನಟನೆಯ ರಾಮಾಯಣ ಆಧರಿತ ವೆಬ್ ಸಿರೀಸ್ ‘ರಾಮ್ ಯುಗ್’ ಮೇ 6 ರಂದು ಎಂ ಎಕ್ಸ್ ಪ್ಲೇಯರ್ ನಲ್ಲಿ ತೆರೆ ಕಂಡಿದೆ.
ಅತ್ಯಾಧುನಿಕ ತಂತ್ರಜ್ಞಾನಗಳನ್ನು ಬಳಿಸಿಕೊಂಡು ರಾಮ್ ಯುಗ್ ವೆಬ್ ಸರಣಿಯನ್ನು ನಿರ್ಮಾಣ ಮಾಡಲಾಗಿದೆ. ವೆಬ್ ಸರಣಿಗೆ ಕುನಾಲ್ ಕೊಹ್ಲಿ ಆಕ್ಷನ್ ಕಟ್ ಹೇಳಿದ್ದಾರೆ. ಈ ಸರಣಿಯು ಎಂಟು ಸಂಚಿಕೆಗಳಲ್ಲಿ ಬಿಡುಗಡೆ ಕಾಣಲಿದೆ.
ಈ ವೆಬ್ ಸರಣಿಯಲ್ಲಿ ದಿಗಂತ್ ಜೊತೆ ಅಕ್ಷಯ್ ದೊಗ್ರ, ಐಶ್ವರ್ಯಾ ಒಜಾ, ವಿವಾನ್ ಭಾತೆನಾ, ಅನುಪ್ ಸೋನಿ ಬಣ್ಣ ಹಚ್ಚಿದ್ದಾರೆ. ಸುದ್ದಿ ಮಾಡದೇ ಅದ್ಯಾವಾಗ ಈ ವೆಬ್ ಸರಣಿಯನ್ನು ಚಿತ್ರೀಕರಣ ಮಾಡಲಾಗಿದೆ ಎಂಬುದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. ಇದರ ಭಾಗಶಃ ಚಿತ್ರೀಕರಣವನ್ನು ಮಾರಿಷಸ್ ನಲ್ಲಿ ಮಾಡಲಾಗಿದೆಯಂತೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.