4ಸಾವಿರ ರೂ. ಕೋವಿಡ್ ಪರಿಹಾರ, ಆವಿನ್ ಹಾಲಿನ ದರ ಕಡಿತ: ನೂತನ ಸಿಎಂ ಸ್ಟಾಲಿನ್ ಘೋಷಣೆ
ಮುಖ್ಯಮಂತ್ರಿಯಾಗಿ ಆಯ್ಕೆಯಾದ ಎಂಕೆ ಸ್ಟಾಲಿನ್ ಅನುಷ್ಠಾನಕ್ಕೆ ತಂದಿರುವುದಾಗಿ ವರದಿ ತಿಳಿಸಿದೆ.
Team Udayavani, May 7, 2021, 3:41 PM IST
ಚೆನ್ನೈ: ಕೋವಿಡ್ 19 ಸೋಂಕಿನಿಂದ ಜನರು ಭೀತಿಗೊಳಗಾಗಿರುವ ನಡುವೆಯೇ ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಶುಕ್ರವಾರ(ಮೇ 07), ರಾಜ್ಯದ ಪ್ರತಿಯೊಂದು ಕುಟುಂಬಕ್ಕೂ ನಾಲ್ಕು ಸಾವಿರ ರೂಪಾಯಿ ಕೋವಿಡ್ ಪರಿಹಾರ, ಆವಿನ್ ಹಾಲಿನ ದರ ಕಡಿತ ಮತ್ತು ಸರ್ಕಾರಿ ಬಸ್ ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಎಂದು ಘೋಷಿಸಿದ್ದಾರೆ.
ಇದನ್ನೂ ಓದಿ:ಕೋವಿಡ್ ಮೂರನೇ ಅಲೆಯನ್ನು ಹೊಡೆದುರುಳಿಸಲಿದೆ ಜರ್ಮನ್ : ಜೆನ್ಸ್ ಸ್ಪಾನ್
ಇತ್ತೀಚೆಗೆ ತಮಿಳುನಾಡಿನಲ್ಲಿ ನಡೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಡಿಎಂಕೆ ಪಕ್ಷ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಯನ್ನು ಇದೀಗ ನೂತನವಾಗಿ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಎಂಕೆ ಸ್ಟಾಲಿನ್ ಅನುಷ್ಠಾನಕ್ಕೆ ತಂದಿರುವುದಾಗಿ ವರದಿ ತಿಳಿಸಿದೆ.
ಖಾಸಗಿ ಆಸ್ಪತ್ರೆಗಳಲ್ಲಿಯೂ ಕೋವಿಡ್ 19 ಚಿಕಿತ್ಸೆಯನ್ನು ಸರ್ಕಾವಿ ವಿಮಾ ಯೋಜನೆಯಡಿ ತರಲಾಗುವುದು, ಇದರಿಂದ ಜನರಿಗೆ ಹೆಚ್ಚಿನ ನೆರವು ನೀಡಿದಂತಾಗುತ್ತದೆ ಎಂದು ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾದ ನಂತರ ಹೊರಡಿಸಿದ ಮೊದಲ ಆದೇಶದಲ್ಲಿ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ವರದಿ ವಿವರಿಸಿದೆ.
Chennai: MK Stalin takes charge as the Chief Minister of Tamil Nadu at the Secretariat. pic.twitter.com/gbo4MJkNBJ
— ANI (@ANI) May 7, 2021
ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಪ್ರತಿಯೊಂದು ಕುಟುಂಬಕ್ಕೂ ಕೋವಿಡ್ ಪರಿಹಾರವಾಗಿ ನಾಲ್ಕು ಸಾವಿರ ರೂಪಾಯಿ ನೀಡುವ ಆದೇಶಕ್ಕೆ ಸಹಿ ಹಾಕಿದ್ದು, ಮೇ ತಿಂಗಳ ಮೊದಲ ಕಂತಿನ ಎರಡು ಸಾವಿರ ರೂಪಾಯಿಹಣ ನೀಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.