ಬಿಬಿಎಂಪಿ ವಾರ್ ರೂಂನಲ್ಲಿ ಒಂದು ಕೋಮಿನ ವಿರುದ್ಧ ದುರ್ವತನೆ ತೋರಿಲ್ಲ: ಉದಯ್ ಗರುಡಾಚಾರ್
Team Udayavani, May 7, 2021, 10:31 PM IST
ಬೆಂಗಳೂರು : ನಗರದ ಬಿಬಿಎಂಪಿ ವಾರ್ ರೂಂ ನಲ್ಲಿ ಕೋವಿಡ್ ಹಾಸಿಗೆಗಳ ಬ್ಲಾಕ್ ಮಾಡುವ ಹಗರಣ ಪತ್ತೆ ಮಾಡುವಾಗ ನಾವು ಯಾವುದೇ ಒಂದು ಕೋಮಿನ ಜನರನ್ನು ಗುರಿಯಾಗಿಸಿಕೊಂಡು ಟೀಕೆ ಮಾಡಿಲ್ಲ. ನಮಗೆ ಸಂವಿಧಾನವೇ ಪರಮೋಚ್ಛ. ಪ್ರತಿಯೊಂದು ಜಾತಿ, ಜನಾಂಗದ ಎಲ್ಲರೂ ನಮಗೆ ಸಮಾನರು ಎಂದು ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಉದಯ್ ಗರುಡಾಚಾರ್ ಹೇಳಿದ್ದಾರೆ.
ನಗರದ ನ್ಯಾಷನಲ್ ಕಾಲೇಜ್ ಬಳಿ ಇರುವ ವಾಸವಿ ಕನ್ವೆನ್ಷನ್ ಸೆಂಟರ್ ನಲ್ಲಿ 40 ಬೆಡ್ ಗಳ ಕೋವಿಡ್ ಎಮರ್ಜೆನ್ಸಿ ಆಕ್ಸಿಜನ್ ಸೆಂಟರ್ ಕೇಂದ್ರವನ್ನಾಗಿ ಪರಿವರ್ತನೆ ಮಾಡಲಾಗಿದೆ. ಶಾಸಕ ಉದಯ ಗರುಡಾಚಾರ್ ಹಾಗೂ ವಾಸವಿ ಸಂಸ್ಥೆಯ ಮುಖ್ಯಸ್ಥರು ಸ್ಥಳಕ್ಕೆ ಭೇಟಿ ನೀಡಿ ಆಕ್ಸಿಜನ್ ಅಳವಡಿಕೆ ಬೆಡ್ ಗಳ ಪರಿಶೀಲನೆ ನಡೆಸಿದರು.
ಬಸವನಗುಡಿಯಲ್ಲಿರುವ ವಾಸವಿ ಕನ್ವೆನ್ಷನ್ ಹಾಲ್ ನಲ್ಲಿ 40 ಮಂದಿ ಸೋಂಕಿತರಿಗೆ ಆಮ್ಲಜನಕ ಹಾಸಿಗೆಗಳನ್ನೊಳಗೊಂಡ ಕೋವಿಡ್ ಆರೈಕೆ ಕೇಂದ್ರದ ಸಿದ್ಧತೆಗಳನ್ನು ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲಾ ಜನಪ್ರತಿನಿಧಿಗಳಿಗೂ ಸಂವಿಧಾನವೇ ಪರಮೋಚ್ಛವಾಗಿದೆ. ತಾವೂ ಕೂಡ ಶಾಸಕರಾಗಿ ಪ್ರಮಾಣವಚನ ಸ್ವೀಕರಿಸಿದಾಗ ಸಂವಿಧಾನದ ಮೇಲೆ ಆಣೆ ಮಾಡಿದ್ದೇನೆ. ನಮ್ಮ ಸಂಸದರು ಮತ್ತು ಇತರೆ ಶಾಸಕರಿಗೂ ಸಂವಿಧಾನದ ಬಗ್ಗೆ ಇದೇ ರೀತಿಯ ಗೌರವವಿದೆ ಎಂದರು.
ಸಂಸದ ತೇಜಸ್ವಿ ಸೂರ್ಯ ಅವರ ಜತೆ ತಾವು ಹಾಗೂ ಶಾಸಕ ಸತೀಶ್ ರೆಡ್ಡಿ ಅವರಿದ್ದೇವು. ನಾವು ವಾರ್ ರೂಂ ನಲ್ಲಿ ಯಾವುದೇ ನಿರ್ದಿಷ್ಟ ಕೋಮಿನ ಜನರನ್ನು ಗುರಿಯಾಗಿಸಿಕೊಂಡು ಟೀಕೆ ಮಾಡಿಲ್ಲ. ಸಂಸದ ತೇಜಸ್ವಿ ಸೂರ್ಯ ಅವರ ಬಗ್ಗೆ ವರದಿಯಾಗಿರುವಂತೆ ಅವರು ಸಹ ವರ್ತನೆ ಮಾಡಿಲ್ಲ. ಅವರಿಗೂ ಈ ರೀತಿಯ ಭಾವನೆ ಇಲ್ಲ. ಯಾರೋ ತಪ್ಪು ಮಾಹಿತಿ ನೀಡಿರಬಹುದು. ಇದರಿಂದ ಗೊಂದಲ ಉಂಟಾಗಿದೆ ಎಂದು ಶಾಸಕ ಉದಯ್ ಗರುಡಾಚಾರ್ ಸ್ಪಷ್ಟನೆ ನೀಡಿದರು.
ವಾರ್ ರೂಂ ನಲ್ಲಿ ಬಿಸಿ ಬಿಸಿ ಮಾತಿನ ವಿನಿಯಮ ನಡೆಯಿತು. ಇದಕ್ಕೆ ಕಾರಣವಿದೆ. ವಾರ್ ರೂಂನಲ್ಲಿ ಡಾ, ರೆಹಾನ್ ಎಂಬ ವೈದ್ಯರಿದ್ದರು. ಅವರಿಗೆ ನಾವು ಪ್ರತಿದಿನ ಐದು ಬೆಡ್ ಗಳ ವ್ಯವಸ್ಥೆ ಮಾಡಿ ಎಂದು ಕೋರಿದ್ದೇವು. ಅದಕ್ಕೆ ಅವರು ಒಪ್ಪಿಗೆ ನೀಡಿದ್ದರು. ನಂತರ ಕರೆ ಮಾಡಿದರೆ ಬೆಡ್ ಇಲ್ಲ ಎನ್ನುತ್ತಿದ್ದರು. ಹೀಗಾಗಿ ನಾವು ಸಂಸದರ ಜತೆಗೂಡಿ ವಾರ್ ರೂಂಗೆ ಹೋಗಿದ್ದೇವು. ವಲಯ ಆಯುಕ್ತರಾದ ತುಳಸೀ ಮದ್ದಿನೇನಿ, ಮತ್ತೋರ್ವ ಅಧಿಕಾರಿ ವೀರಭದ್ರಸ್ವಾಮಿ, ಡಾ. ಶಿವಕುಮಾರ್ ಮತ್ತಿತರರ ಜತೆ ಚರ್ಚೆ ನಡೆಸಿದೆವು. ಅಧಿಕಾರಿಗಳನ್ನು ನಾವು ಎಳೆದಾಡಿಲ್ಲ. ಅಲ್ಲಿ ಸುಮಾರು 200 ಜನರಿದ್ದರು. ಅಧಿಕಾರಿಗಳ ಜತೆ ಚರ್ಚೆ ನಂತರ ನಾವು ವಾಪಸ್ ಬಂದೆವು. ಆದರೆ ವಿವಾದದ ಸ್ವರೂಪ ಪಡೆಯುವಂತಹ ಯಾವುದೇ ವರ್ತನೆ ನಾವು ತೋರಿಲ್ಲ ಎಂದರು.
ಮೂಲತಃ ತೇಜಸ್ವಿ ಸೂರ್ಯ ಅವರನ್ನು ಚಿಕ್ಕಂದಿನಿಂದ ನೋಡುತ್ತಿದ್ದೇನೆ. ತಮಗೆ ಸಂವಿಧಾನದ ಬಗ್ಗೆ ಅಪಾರ ಗೌರವವಿದೆ. ಎಲ್ಲಾ ಜಾತಿ, ಸಮುದಾಯದವರು ನಮಗೆ ಒಂದೇ ಎಂದು ಹಲವಾರು ಬಾರಿ ತಮ್ಮ ಬಳಿಯೂ ತೇಜಸ್ವಿ ಹೇಳಿದ್ದಾರೆ. ನಮ್ಮ ಶಾಸಕರು ಸಹ ಇದೇ ರೀತಿ ಮಾತನಾಡಿದ್ದಾರೆ ಎಂದು ಹೇಳಿದರು.
ತಮ್ಮ ವಿಧಾನಸಭಾ ಕ್ಷೇತ್ರದಲ್ಲಿ 60 ಸಾವಿರ ಮುಸ್ಲೀಂ ಮತದಾರರಿದ್ದಾರೆ. 32 ಮಸೀದಿಗಳಿವೆ. ಮಸೀದಿ ಸಮಸ್ಯೆಗಳನ್ನು ಬಗೆಹರಿಸುತ್ತೇವೆ. ಹಿಂದೂ, ಮುಸ್ಲೀಂ, ಕ್ರೈಸ್ತರ ಜತೆ ನಾವು ಸೌಹಾರ್ದತೆಯಿಂದ ಬದುಕುತ್ತಿದ್ದೇವೆ. ಯಾವುದೇ ಕೋಮಿನವರು ಮತ್ತೊಂದು ಕೋಮಿನ ಮೇಲೆ ಮಾತನಾಡಬಾರದು. ಭಾರತ ಜಾತ್ಯತೀತ ರಾಷ್ಟ್ರ. ನಮ್ಮ ಧರ್ಮ, ಸಂಪ್ರದಾಯವನ್ನು ಮನೆಯ ಹೊಸಲಿನ ಒಳಗಡೆ ಇಟ್ಟುಕೊಳ್ಳಬೇಕು. ಹೊಸಲು ದಾಟಿದ ನಂತರ ನಾವು ವಿಶ್ವ ಮಾನವರು. ಇಲ್ಲಿರುವ ಎಲ್ಲರಿಗೂ ಈ ದೇಶದಲ್ಲಿ ಸಮಾನ ಹಕ್ಕಿದೆ ಎಂದರು.
ರಂಜಾನ್ ಸಮಯದಲ್ಲಿ ಮುಸ್ಲೀಂ ಸಮುದಾಯ ಅತ್ಯಂತ ನಿಷ್ಠೆಯಿಂದ ಕೆಲಸ ಮಾಡುತ್ತದೆ. ಇವರಲ್ಲಿಯೂ ಸಾಕಷ್ಟು ಕೌಶಲ್ಯವಿದೆ. ಪ್ರತಿಯೊಂದು ಸಮುದಾಯವೂ ಸಹ ವಿಶೇಷವಾಗಿದೆ. ಅದೇ ರೀತಿಯಲ್ಲಿ ಹಿಂದುಗಳಲ್ಲಿ ಸಹ ಸಾಕಷ್ಟು ಕೌಶಲ್ಯವಿದೆ ಎಂದು ಶಾಸಕ ಉದಯ್ ಗರುಡಾಚಾರ್ ಸಮರ್ಥಿಸಿಕೊಂಡರು.
ಸೋಮವಾರದಿಂದ ಇಲ್ಲಿ 40 ಹಾಸಿಗೆಗಳ ಟ್ರಾನ್ಸಿಟ್ ಕೇರ್ ಕೇಂದ್ರ ಪ್ರಾರಂಭವಾಗಲಿದೆ. ನಮ್ಮ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಕೆಮ್ಮುವುದು, ಆಮ್ಲಜನಕ ಪ್ರಮಾಣ ಕಡಿಮೆಯಾದಾಗ ಇಲ್ಲಿಗೆ ಕರೆತಂದು ಆರೈಕೆ ಮಾಡುತ್ತೇವೆ. ಪರಿಸ್ಥಿತಿ ಗಂಭೀರವಾದರೆ ಐಸಿಯುಗಳಿಗೆ ದಾಖಲಿಸುತ್ತೇವೆ ಎಂದರು.
ಇದು ಸಂಪೂರ್ಣವಾಗಿ ವೈಶ್ಯ ಸಮುದಾಯದ ದಾನಿಗಳಿಂದ ಮಾಡಿರುವ ವ್ಯವಸ್ಥೆ ಇದಾಗಿದೆ. ಇದರ ಜತೆಗೆ ನಾಲ್ಕು ತೀವ್ರ ನಿಗಾ ಘಟಕ ಐಸಿಯು ಹಾಸಿಗೆಗಳನ್ನು ಸ್ಥಾಪಿಸುವಂತೆ ಸಹ ಕೋರಲಾಗಿದೆ. ಇಲ್ಲಿ 30 ಸುಸಜ್ಜಿತ ವೈದ್ಯರ ತಂಡ ಸಹ ಕಾರ್ಯನಿರ್ವಹಿಸಲಿದೆ ಎಂದು ಮಾಹಿತಿ ನೀಡಿದರು.
ಓದಿ : ಹೊಸ ಅವತಾರದಲ್ಲಿ ಲಗ್ಗೆಯಿಡುತ್ತಿದೆ ಪಬ್ ಜಿ: ಗೇಮ್ ಆಡಲು ಈ ನಿಯಮಗಳನ್ನು ಪಾಲಿಸಲೇಬೇಕು !
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Road Mishap: ಬೀದರ್ ನಲ್ಲಿ ಭೀಕರ ರಸ್ತೆ ಅಪಘಾತ… ಬೈಕ್ ಸವಾರ ಮೃತ್ಯು, ಮಹಿಳೆ ಗಂಭೀರ
Belgavi;ಸುವರ್ಣ ವಿಧಾನ ಸೌಧದ ಸುತ್ತ ನಿಷೇಧಾಜ್ಞೆ
ಬಾಯಿ ಮುಚ್ಚಿ ಕುಳಿತರೆ ಒಳ್ಳೆಯದು, ಇಲ್ಲದಿದ್ದರೆ.. ಸ್ವಪಕ್ಷೀಯರ ವಿರುದ್ಧವೇ ಯತ್ನಾಳ್ ಕಿಡಿ
Karnataka ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿರುದ್ಧ ಲೈಂಗಿ*ಕ ದೌರ್ಜನ್ಯ ಪ್ರಕರಣ
ಕುದೂರು; ಸ್ವಂತ ಖರ್ಚಲ್ಲಿ ಶಿಕ್ಷಕನಿಂದ ವಿದ್ಯಾರ್ಥಿಗಳಿಗೆ ವಿಮಾನ ಪ್ರವಾಸ!
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.