ಕೋವಿನ್‌ನಲ್ಲಿ ಇಂದಿನಿಂದ 4 ಅಂಕಿಗಳ ಸೆಕ್ಯುರಿಟಿ ಕೋಡ್
Team Udayavani, May 8, 2021, 6:46 AM IST
ಲಸಿಕೆ ನೋಂದಣಿ ವೇಳೆ ಡೇಟಾ ಎಂಟ್ರಿ ಪ್ರಮಾಣ ತಪ್ಪಿಸಲು ಕ್ರಮ ಲಸಿಕೆ ಪಡೆಯದಿದ್ದರೂ ನಿಮ್ಮ ಹೆಸರಲ್ಲಿ ಲಸಿಕೆ ಪ್ರಮಾಣಪತ್ರ ಸೃಷ್ಟಿ ಆಗಿದೆಯೇ? ನೋಂದಣಿ ಮಾಡು ವಾಗ ಡೇಟಾ ಎಂಟ್ರಿ ವೇಳೆ ಆಗುತ್ತಿದ್ದ ಈ ಪ್ರಮಾದ ತಪ್ಪಿಸಲು ಕೋವಿನ್ ಪೋರ್ಟಲ್‌ನಲ್ಲಿ ಶನಿವಾರದಿಂದಲೇ ಹೊಸ ಫೀಚರ್‌ವೊಂದನ್ನು ಪರಿಚಯಿಸಲಾಗಿದೆ.
ಏನಿದು ಹೊಸ ಫೀಚರ್? :
ಇನ್ನು ಮುಂದೆ ಕೋವಿನ್ ಪೋರ್ಟಲ್‌ನಲ್ಲಿ ನೀವು ಲಸಿಕೆಗೆ ಹೆಸರು ನೋಂದಣಿ ಮಾಡಿ, ಲಸಿಕೆಗೆ ದಿನಾಂಕ ನಿಗದಿಪಡಿಸಿದರೆ, ಕೂಡಲೇ ನಿಮಗೆ “4 ಅಂಕಿಗಳ ಭದ್ರತ ಕೋಡ್’ವೊಂದನ್ನು ನೀಡಲಾಗುತ್ತದೆ. ಲಸಿಕಾ ಕೇಂದ್ರಕ್ಕೆ ಹೋದಾಗ ಆ ಸೆಕ್ಯುರಿಟಿ ಕೋಡ್ ಅನ್ನು ತೋರಿಸಿದರಷ್ಟೇ ನಿಮಗೆ ಲಸಿಕೆ ನೀಡಲಾಗುತ್ತದೆ.
ಏಕೆ ಈ ಹೊಸ ಕೋಡ್? :
ಹಲವು ಮಂದಿ ಕೋವಿನ್ ಪೋರ್ಟಲ್‌ನಲ್ಲಿ ಲಸಿಕೆಗೆ ನೋಂದಣಿ ಮಾಡಿಕೊಂಡಿರುತ್ತಾರೆ. ಆದರೆ ಅನಿವಾರ್ಯ ಕಾರಣಗಳಿಂದಾಗಿ ನಿಗದಿತ ದಿನಾಂಕದಂದು ಹೋಗಿ ಲಸಿಕೆ ಹಾಕಿಸಿಕೊಳ್ಳಲು ಸಾಧ್ಯ ವಾಗಿರುವುದಿಲ್ಲ. ಆದರೂ, ಅವರ ಮೊಬೈಲ್‌ಗೆ “ನೀವು ಯಶಸ್ವಿಯಾಗಿ ಲಸಿಕೆ ಹಾಕಿಸಿಕೊಂಡಿದ್ದೀರಿ’ ಎಂಬ ಸಂದೇಶ ಮತ್ತು ಲಸಿಕೆ ಪ್ರಮಾಣಪತ್ರ ಬರುತ್ತದೆ. ಈ ಬಗ್ಗೆ ಅನೇಕರು ದೂರು ನೀಡಿರುವ ಹಿನ್ನೆಲೆಯಲ್ಲಿ ಹೊಸ ಭದ್ರತ ಫೀಚರ್ ಅನ್ನು ಪರಿಚಯಿಸಲಾಗಿದೆ.
ಬೇರೆಡೆ ಇಂಥ ಫೀಚರ್ ಬಳಕೆಯಾಗುತ್ತಿದೆಯೇ? :
ಹೌದು. ಪ್ರಯಾಣಿಕರು ಓಲಾ ಕ್ಯಾಬ್ ಬುಕ್ ಮಾಡಿದೊಡನೆ ಅವರಿಗೆ 4 ಅಂಕಿಗಳ ಪಾಸ್‌ವರ್ಡ್ ಕಳುಹಿಸಲಾಗುತ್ತದೆ. ಈ ಪಾಸ್‌ವರ್ಡ್ ಕ್ಯಾಬ್ ಚಾಲಕನಿಗೆ ಗೊತ್ತಿರುವುದಿಲ್ಲ. ನೀವು ಕ್ಯಾಬ್ ಅಥವಾ ಕಾರು ಹತ್ತಿದ ಬಳಿಕ ಆ ಪಾಸ್‌ವರ್ಡ್ ಅನ್ನು ನೀವು ಚಾಲಕನಿಗೆ ನೀಡುತ್ತೀರಿ. ಇದೇ ರೀತಿ, ಕೆಲವು ಅಧಿಕ ಮೌಲ್ಯದ ಸರಕುಗಳ ರವಾನೆ ವೇಳೆ ಇ-ಕಾಮರ್ಸ್ ಕಂಪನಿಗಳು ಗ್ರಾಹಕರಿಗೆ ಒನ್ ಟೈಂ ಪಿನ್ ನೀಡುತ್ತವೆೆ. ಸರಕು ಸರಿಯಾದ ವ್ಯಕ್ತಿಗೇ ತಲುಪಿದೆ ಎನ್ನುವುದನ್ನು ಖಾತ್ರಿಪಡಿಸುವುದು ಇದರ ಉದ್ದೇಶ. ಇದೇ ಮಾದರಿಯಲ್ಲಿ ಕೋವಿನ್ ಪೋರ್ಟಲ್‌ನ 4 ಅಂಕಿಗಳ ಸೆಕ್ಯುರಿಟಿ ಕೋಡ್ ಕೂಡ ಕೆಲಸ ಮಾಡುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jammu – Kashmir: ಮತ್ತೆ ಅಟ್ಟಹಾಸ ಮೆರೆದ ಉಗ್ರರು… ಇಬ್ಬರನ್ನು ಅಪಹರಿಸಿ ಹ*ತ್ಯೆ
Maharashtra: ಮತ ನೀಡಿದರೆ ಮದುವೆ ಮಾಡಿಸುವೆ: ಶರದ್ ಬಣದ ನಾಯಕ
India-Afghanistan: ಆಫ್ಘನ್ ಜೊತೆಗೆ ಬಾಂಧವ್ಯ ಪುನಃಸ್ಥಾಪನೆಗೆ ಭಾರತ ಸಜ್ಜು?
Doctor: ಸೀರೆ ಉಟ್ಟ ಸ್ತ್ರೀಯರೇ,ಪೆಟಿಕೋಟ್ ಕ್ಯಾನ್ಸರ್ ಬಗ್ಗೆ ಎಚ್ಚರವಿರಲಿ
Panaji: ವಿದೇಶಿ ಪ್ರವಾಸಿಗರ ಕಳೆದುಕೊಂಡ ಗೋವಾ: ಆರ್ಥಿಕ ಅಪಾಯದ ಭೀತಿ!
MUST WATCH
ಹೊಸ ಸೇರ್ಪಡೆ
Siddapura: ಅದೃಷ್ಟ ತಂದ ಲಾರಿ ಧರ್ಮಸ್ಥಳ ಕ್ಷೇತ್ರಕ್ಕೆ ಸಮರ್ಪಣೆ
Bengaluru: ಮಾದಾವರ ವಿಸ್ತರಿತ ಮೆಟ್ರೊದಲ್ಲಿ ಮೊದಲ ದಿನ 16000 ಜನ ಪ್ರಯಾಣ
Balaganur: ಕಾಲುವೆಯಲ್ಲಿ ನವಜಾತ ಶಿಶು ದೇಹ ಪತ್ತೆ
Bengaluru: ಅಪರಾಧ, ರೌಡಿಸಂ ನಿಯಂತ್ರಣಕ್ಕೆ ಕಠಿಣ ಕ್ರಮಕೈಗೊಳ್ಳಿ: ಡಿಜಿಪಿ ಸೂಚನೆ
Hubli: ಜೆಪಿಸಿ ಬಗ್ಗೆ ಆರೋಪ ಮಾಡುವವರಿಗೆ ಸಂವಿಧಾನದ ಬಗ್ಗೆ ಗೌರವ ಇಲ್ಲ: ಬೊಮ್ಮಾಯಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.