ದ.ಕ.: ಇಂದು- ನಾಳೆ ಸಂಪೂರ್ಣ ಲಾಕ್‌ಡೌನ್
Team Udayavani, May 8, 2021, 7:30 AM IST
ಮಂಗಳೂರು: ಜಿಲ್ಲೆಯಲ್ಲಿ ಶುಕ್ರವಾರದಿಂದ ಕಟ್ಟುನಿಟ್ಟಿನ ನಿಯಮಾವಳಿಯ ಜತೆಗೆ ವಾರಾಂತ್ಯ ಕರ್ಫ್ಯೂ ಜಾರಿ ಮಾಡಲಾಗಿದೆ. ಕಟ್ಟು ನಿಟ್ಟಿನ ನಿಯಮಾವಳಿ ಹಿನ್ನೆಲೆಯಲ್ಲಿ ಅನಗತ್ಯ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿತ್ತು.
ಆದರೆ ಬೆಳಗ್ಗೆ 6ರಿಂದ 9ರವರೆಗೆ ಆವಶ್ಯ ವಸ್ತುಗಳ ಖರೀದಿಗೆ ಅನುಮತಿ ಇದ್ದ ಕಾರಣ ಈ ಸಂದರ್ಭದಲ್ಲಿ ಮಂಗಳೂರು ನಗರ ಸಹಿತ ಜಿಲ್ಲಾದ್ಯಂತ ವಾಹನಗಳ ಓಡಾಟ ಜಾಸ್ತಿಯಾಗಿತ್ತು. 9 ಗಂಟೆಗೆ ಅಂಗಡಿಗಳನ್ನು ಬಂದ್ ಮಾಡಿ 10 ಗಂಟೆ ವೇಳೆಗೆ ಎಲ್ಲರೂ ಮನೆ ಸೇರ ಬೇಕೆಂದು ಜಿಲ್ಲಾಡಳಿತ ಗುರುವಾರವೇ ಆದೇಶ ಹೊರಡಿಸಿತ್ತು. ಬೆಳಗ್ಗೆ 9 ಗಂಟೆ ಆಗುತ್ತಿದ್ದಂತೆ ಮಂಗಳೂರು ನಗರದಲ್ಲಿ ಪೊಲೀಸರು/ಪಾಲಿಕೆ ಅಧಿಕಾರಿಗಳು ಧ್ವನಿವರ್ಧಕದ ಮೂಲಕ ನಗರದ ಎಲ್ಲೆಡೆ ಅಂಗಡಿ ಮುಂಗಟ್ಟುಗಳನ್ನು ಮುಚ್ಚುವಂತೆ ಸೂಚಿಸಿದರು. 10 ಗಂಟೆಯ ಬಳಿಕ ಅನಗತ್ಯ ಸಂಚಾರದ ವಾಹನಗಳನ್ನು ತಡೆದ ಪೊಲೀಸರು ತಪಾಸಣೆ ನಡೆಸಿ ವಾಪಸ್ ಕಳುಹಿಸಿದರು; ವಾಹನ ಮುಟ್ಟುಗೋಲು ಹಾಕುವ ಎಚ್ಚರಿಕೆ ನೀಡಿದರು. ಇನ್ನೂ ಕೆಲವರಿಗೆ ದಂಡ ವಿಧಿಸಿದರು.
ಇಂದು- ನಾಳೆ ಸಂಪೂರ್ಣ ಲಾಕ್‌ಡೌನ್ :
ಶನಿವಾರ ಮತ್ತು ರವಿವಾರ ಜಿಲ್ಲೆಯಲ್ಲಿ ಪೂರ್ಣ ಪ್ರಮಾಣದಲ್ಲಿ ಲಾಕ್‌ಡೌನ್ ಜಾರಿಯಲ್ಲಿ ಇರುತ್ತದೆ. ಈ ಬಗ್ಗೆ ಜಿಲ್ಲಾಧಿಕಾರಿಗಳ ಆದೇಶದಂತೆ ಹೆಚ್ಚುವರಿ ಮಾರ್ಗಸೂಚಿಗಳನ್ನು ಜಾರಿಗೊಳಿಸಲಾಗಿದೆ.
ಈ ಎರಡು ದಿನಗಳಲ್ಲಿ ದಿನಸಿ ಅಂಗಡಿ ತೆರೆಯಲು ಅವಕಾಶ ಇರುವುದಿಲ್ಲ. ಹಾಪ್‌ಕಾಮ್ಸ್, ಹಾಲಿನ ಅಂಗಡಿ, ತರಕಾರಿ, ಹಣ್ಣುಹಂಪಲು ತಳ್ಳುಗಾಡಿಗಳಿಗೆ ಮಾತ್ರ ಅವಕಾಶವಿದೆ. ಮೀನು, ಮಾಂಸ ಸೇರಿದಂತೆ ಆಹಾರ ವಸ್ತುಗಳ ಮಾರಾಟ ಇರುವುದಿಲ್ಲ. ಆದರೆ, ಹೊಟೇಲ್ ಪಾರ್ಸೆಲ್ ಇರಲಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.
ಉಡುಪಿ ಯಥಾಸ್ಥಿತಿ :
ಉಡುಪಿ ಜಿಲ್ಲೆಯಲ್ಲಿ ಎಂದಿನಂತೆ ನಿರ್ಬಂಧ ಜಾರಿಯಲ್ಲಿರುತ್ತದೆ. ಬೆಳಗ್ಗೆ 6 ಗಂಟೆಯಿಂದ 12 ಗಂಟೆಯವರೆಗೆ ದಿನಸಿ ಸಹಿತ ಅಗತ್ಯ ವಸ್ತುಗಳ ಮಳಿಗೆಗಳು ತೆರೆದಿರುತ್ತವೆ. ತುರ್ತು ಅಗತ್ಯವಿರುವ ವಾಹನಗಳ ಸಂಚಾರಕ್ಕೆ ಮಾತ್ರ ಅವಕಾಶ ಇರುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.
ಏನೇನು ಇರುತ್ತದೆ :
ನಂದಿನಿ ಹಾಲಿನ ಬೂತ್, ದಿನ ಪತ್ರಿಕೆಗಳು ಮತ್ತು ಜಿಲ್ಲೆಯಲ್ಲಿನ ಹಾಪ್‌ಕಾಮ್ಸ್ ಗಳು ಬೆಳಗ್ಗಿನ ಹೊತ್ತು 6ರಿಂದ 9ರ ವರೆಗೆ ಕಾರ್ಯಾಚರಿಸಲು ಅನುಮತಿ ಇದೆ.
ಆನ್‌ಲೈನ್ ಸೇವಾ ಪೂರೈಕೆದಾರರಿಗೆ ಸೇವೆ ಒದಗಿಸಲು ಹೊಟೇಲ್‌ಗಳು ಮತ್ತು ರೆಸ್ಟೊರೆಂಟ್‌ಗಳ ಅಡಿಗೆ ಮನೆಗಳನ್ನು ನಿರ್ವಹಿಸಲು ಅನುಮತಿ ಇದೆ.
ಆನ್‌ಲೈನ್ ಆಹಾರ ಸೇವಾ ಪೂರೈಕೆದಾರರಿಗೆ ರಾತ್ರಿ 11 ಗಂಟೆಯವರೆಗೆ ಮಾತ್ರ ಸಂಚರಿಸಲು ಅವಕಾಶ.
ಏನೇನು ಇರುವುದಿಲ್ಲ :
ದಿನಸಿ ಮತ್ತಿತರ ಯಾವುದೇ ಅಂಗಡಿ ತೆರೆದಿಡಲು ಅವಕಾಶ ಇಲ್ಲ.
ಮೀನು, ಮಾಂಸದ ಅಂಗಡಿ ಹಾಗೂ ಇತರ ಆಹಾರದ ಅಂಗಡಿಗೆ ಅನುಮತಿ ಇಲ್ಲ.
ಅನಗತ್ಯ ವಾಹನ ಸಂಚಾರ ಸಂಪೂರ್ಣ ಬಂದ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.