ಕಸುಬುದಾರಿಕೆ ಎಂಬ ಜಾಣ್ಮೆಯೊಳಗಿನ ತತ್ತ್ವ
Team Udayavani, May 8, 2021, 1:28 PM IST
ಅಮೆರಿಕದಲ್ಲಿ ಹೆಚ್ಚಿನ ಕಸುಬುದಾರರಿಗೆ ಒಂದಲ್ಲ ಒಂದು ರೀತಿಯ ಬಿಲ್ಲಿಂಗ್ ರೇಟ್ ಇರುತ್ತದೆ. ಮನೆಗೆ ಬಂದು ಸೋರುತ್ತಿರುವ ಲೀಕ್ ಅನ್ನು ರಿಪೇರಿ ಮಾಡುವ ಪ್ಲಂಬರ್‌ಗಳಿಗೆ ಮನೆಗೆ ಬಂದು ಬಾಗಿಲು ತಟ್ಟಿ, ಕೆಲಸವೇನು ಎಂದು ನೋಡಲು ಇಷ್ಟು, ಅನಂತರ ಕೆಲಸವನ್ನು ಮುಗಿಸಿಕೊಡಲು ಇಷ್ಟು ಹಣವನ್ನು ತೆರಬೇಕಾಗುತ್ತದೆ.
ಕಾರಿನ ಆಯಿಲ್ ಮತ್ತು ಫಿಲ್ಟರ್ ಅನ್ನು ಬದಲಾಯಿಸುವ ಮೆಕ್ಯಾನಿಕ್ ಗಳ ಬಿಲ್ ಅನ್ನು ನೋಡಿದರೂ ಅದರಲ್ಲಿ ಪಾಟ್ಸ್ ಮತ್ತು ಲೇಬರ್‌ಗಳಿಗೆ ಬೇರೆಯೇ ಆದ ಚಾರ್ಜ್ ಇರುತ್ತದೆ. ಲಾಯರ್ (ಅಟಾರ್ನಿ)ಗಳದ್ದು ಇದೇ ರೀತಿಯ ಲೆಕ್ಕ. ರಿಯಲ್ ಎಸ್ಟೇಟ್ ಇರಲಿ, ಇಮಿಗ್ರೇಷನ್ ಇರಲಿ ಅಥವಾ ಬೇರೆ ಯಾವುದೇ ಕೆಲಸವಿರಲಿ. ಕೆಲವೊಮ್ಮೆ ಗಂಟೆಯ ಲೆಕ್ಕದಲ್ಲಿ ಬಿಲ್ ಮಾಡುತ್ತಾರೆ, ಇನ್ನು ಕೆಲವೊಮ್ಮೆ ಒಟ್ಟಿಗೆ ಇಂತಿಷ್ಟು ಎಂದು ತೆಗೆದುಕೊಳ್ಳುತ್ತಾರೆ. ಹೀಗೆ ಎಲ್ಲ ಬಗೆಯ ಪ್ರೊಫೆ ಶ ನ ಲ್ಸ್ ಗಳನ್ನು ಅವಲೋಕಿಸಿದರೆ ಕೆಲವರದ್ದು ದಿನಗೂಲಿಯ ಲೆಕ್ಕ, ಇನ್ನು ಕೆಲವರದ್ದು ಗಂಟೆಗಳ ಆಧಾರದ ಮೇಲೆ ಇಂತಿಷ್ಟು ಎಂಬ ಲೆಕ್ಕ, ಇನ್ನು ಕೆಲವರದ್ದು ನೀವು ಎಷ್ಟು ಹೊತ್ತು ಅಥವಾ ದಿನವಾದರೂ ಕೆಲಸ ಮಾಡಿ, ಈ ಕೆಲಸಕ್ಕೆ ಇಂತಿಷ್ಟು ಕೂಲಿ ಎಂಬ ಲೆಕ್ಕ.
ಹೀಗೆ ಅನೇಕ ರೀತಿಯ ಕಸುಬುದಾರರು ಮತ್ತು ಅವರು ಬಿಲ್ ಮಾಡುವ ವಿಧಾನವನ್ನು ನಾವು ನೋಡಬಹುದು.ಈ ಕೆಲಸಗಳ ಕಾರ್ಯ ವೈಖರಿಯಲ್ಲಿ ಕೆಲವರದ್ದು ಅವರವರದ್ದೇ ಆದ ಆಫೀಸ್ ಇರುತ್ತದೆ. ಇನ್ನು ಕೆಲವರು ಇತರರ ಆಫೀಸ್‌ಗೆ ಹೋಗಿ ದುಡಿಯುತ್ತಾರೆ. ಇನ್ನು ಕೆಲವರು ಮನೆಮನೆಗೆ ಹೋಗಿ ಅವರವರ ಸರ್ವಿಸ್ ಗ ಳನ್ನು ತಲುಪಿಸುತ್ತಾರೆ. ಹೀಗೆ ಕಸುಬುದಾರರ ಕೆಲಸದಲ್ಲಿ ಹೇಗೆ ನಾನಾ ವಿಧಗಳಿವೆಯೋ ಹಾಗೆಯೇ ಅವರ ಕಾರ್ಯದ ವಿಸ್ತಾರಕ್ಕೆ ತಕ್ಕಂತೆ ಅವರ ಆಫೀಸ್ ಸಹ ಬದಲಾಗುತ್ತದೆ.
ಈ ಒಂದು ವರ್ಷದಿಂದ ಅಮೆರಿಕ ದಲ್ಲಿ ತಂತ್ರ ಜ್ಞಾನವನ್ನು ಆಧರಿಸಿದ ಎಷ್ಟೋ ಕೆಲಸಗಾರರು, ಕೊರೊನಾ ವೈರ ಸ್ ನ ದೆಸೆಯಿಂದ ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ ಎನ್ನುವುದನ್ನು ಬಿಟ್ಟರೆ, ಹೆಚ್ಚಿನ ಟೆಕ್ನಾಲಜಿ ಕೆಲಸಗಾರರೂ ಆಫೀಸ್‌ನ ವಾತಾವರಣದಲ್ಲಿ ಕೆಲಸ ಮಾಡುವುದು ಸಾಮಾನ್ಯ. ಕಳೆದ ಒಂದು ವರ್ಷದಲ್ಲಿ ಸೋಷಿಯಲ್ ಮೀಡಿಯಾ ಹೆಚ್ಚು ಹೆಚ್ಚು ಮೆಸೇಜ್ ಗ ಳಿಂದ ಅದರ ಬಳಕೆಯ ಪರಿ ಉಲ್ಬಣಗೊಂಡಿದೆ ಎಂದು ಹೇಳಬಹುದು. ಒಂದು ವರ್ಷದ ಹಿಂದೆ ನಾವೆಲ್ಲ ಮನೆಯಲ್ಲಿಯೇ ಲಾಕ್‌ಡೌನ್ ಆಗಿದ್ದುಕೊಂಡು ವಿಶ್ವದ ಇತರ ಭಾಗಗಳಲ್ಲಿ ಏನೇನಾಗುತ್ತಿದೆ ಎಂದು ತಿಳಿದುಕೊಳ್ಳಲು ನೆರವಿಗೆ ಬಂದಿದ್ದು ಇದೇ ಸೋಷಿಯಲ್ ಮೀಡಿಯಾದ ಸಾಧನಗಳೇ. ಅದರ ಮುಂದುವರಿದ ಭಾಗವಾಗಿ ಮಾಹಿತಿಯ ಜತೆ ಜ ತೆಗೆ ಮನರಂಜನೆಯನ್ನೂ ನಮ್ಮ ಮನೆಯ ಒಳಗೆ ತಂದಿದ್ದೂ ಇದೇ ಸೋಷಿಯಲ್ ಮೀಡಿಯಾ ಮುಖಾಂತರವೇ.
ನ್ಯೂಸ್ ಪೋರ್ಟಲ್‌ಗಳಿಗಿಂತಲೂ ಹೆಚ್ಚಾಗಿ ನಾವು ಅನೇಕ ರೀತಿಯಲ್ಲಿ ಸೋಷಿಯಲ್ ಮೀಡಿಯಾವನ್ನು ನಂಬಿಕೊಂಡಿದ್ದೇವೆ. ಅದು ನಮಗೆಲ್ಲ ಸಿಕ್ಕ ದೊಡ್ಡ ವರವೆಂದೇ ಭಾವಿಸಬಹುದು. ಅದನ್ನು ನಮ್ಮ ಕಮ್ಯೂನಿಕೇಶನ್‌ನಿಂದ ಹಿಡಿದು ನಮ್ಮ ಮನರಂಜನೆ, ಫ್ಯಾಮಿಲಿಗಳ ನಡುವೆ ತಮ್ಮ ತಮ್ಮ ಅಗು- ಹೋಗುಗಳನ್ನು ಹಂಚಿಕೊಳ್ಳುವ ಒಂದು ದೊಡ್ಡ ವ್ಯವಸ್ಥೆಯೆಂದೇ ಹೇಳಬಹುದು.ಆದರೆ, ಯಾವುದೇ ಸಾಧನವನ್ನಾಗಲಿ, ವ್ಯವಸ್ಥೆಯನ್ನಾಗಲಿ ಅತಿಯಾಗಿ ಬಳಸಿದ ಉದಾಹರಣೆಗಳು ಎಲ್ಲ ಕಾಲದಲ್ಲಿಯೂ ದೊರೆಯುತ್ತವೆ. ಇಂದಿಗೂ ಸಹ ಅದೇನು ಹೊರತಲ್ಲ. ಒಂದು ವರ್ಷದಿಂದ ಮನೆಯಲ್ಲಿಯೇ ಕುಳಿತು ಕೆಲಸ ಮಾಡುತ್ತಿರುವ ಅನೇಕ ಕಸಬುದಾರರನ್ನು ಕುರಿತು ಅದೆಷ್ಟೋ ಜೋಕುಗಳೂ ಹೊರಗೆ ಬರುತ್ತವೆ. ನೀವು ಬೆಳಗ್ಗಿನಿಂದ ಸಂಜೆವರೆಗೆ ಮನೆಯಲ್ಲಿಯೇ ಕುಳಿತಿರಲ್ಲ, ನಿಮ್ಮ ಆನ್‌ಲೈನ್ ಮೀಟಿಂಗ್‌ಗಳ ನಡುವೆ ಒಂದಿಷ್ಟು ತರಕಾರಿ ಹೆಚ್ಚಿ ಕೊಡಿ. ಹೀಗೆ, ಮನೆಯಲ್ಲಿಯೇ ಕುಳಿತು ಕೆಲಸ ಮಾಡುವ ನಮ್ಮಂತಹ ಕಸಬುದಾರರಿಗೆ ಯಾವುದು ಆಫೀಸಿನ ಕೆಲಸ, ಯಾವುದು ವೈಯಕ್ತಿಕ ಕೆಲಸ ಎಂಬುದರ ವ್ಯತ್ಯಾಸ ತಿಳಿಯದ ಮಟ್ಟಿಗೆ ನಮ್ಮ ಪರಸ್ಪರ ಸಂವಹನ ಅಥವಾ ಸಂಪರ್ಕಗಳು ಒಂದರಲ್ಲಿ ಒಂದು ಅಳವಡಿಕೆಗೊಂಡಿವೆ.
ನನಗೆ ಗೊತ್ತಿರುವ ಮನೆಯಿಂದಲೇ ಕೆಲಸ ಮಾಡುವ ಅನೇಕ ಟೆಕ್ಕಿಗಳು ದಿನದುದ್ದಕ್ಕೂ ಸಾಮಾಜಿಕ ತಾಣಗಳಲ್ಲಿ ಮುಳುಗೇಳುತ್ತಿರುತ್ತಾರೆ. ಅವರ ಫೇಸ್ ಬುಕ್ ಪೇಜು ಗಳು ಅಪ್ಡೆàಟ್ ಆಗು ವು ದ ರಿಂದ ಹಿಡಿದು, ಅವರಿಂದ ನಿರಂತರವಾಗಿ ಸಂದೇಶಗಳು ಬರುತ್ತಲೇ ಇರುತ್ತವೆ. ಈ ಕಾಯಿಲೆ ಉತ್ತರ ಅಮೆರಿಕದ ಕಸುಬುದಾರರಿಗೆ ಮಾತ್ರ ಸೀಮಿತವಾಗಿರದೇ ವಿಶ್ವದೆಲ್ಲೆಡೆಯ ಕೆಲಸಗಾರರಿಗೂ ಹರಡಿದೆ ಎಂದರೆ ತಪ್ಪಾಗಲಾರದು.ನಾವೆಷ್ಟು ಸೋಷಿಯಲ್ ಮೀಡಿಯಾ ಕಂಟೆಂಟ್ ಅನ್ನು ಹುಟ್ಟಿಸುತ್ತೇವೆ/ತಯಾರಿಸುತ್ತೇವೆ ಮತ್ತು ನಾವೆಷ್ಟು ಆ ರೀತಿಯ ಕಂಟೆಂಟುಗಳನ್ನು ದಿನದಲ್ಲಿ ಯಾವ ಸಮಯದಲ್ಲಿ ಬಳಸುತ್ತೇವೆ ಎಂಬುದನ್ನು ಅವಲೋಕಿಸಿಕೊಳ್ಳಬೇಕಾಗುತ್ತದೆ. ತಮ್ಮ ಕೆಲಸ ಕಾರ್ಯಗಳ ನಡುವೆ ಆ ಕೆಲಸಕ್ಕೆ ಸಂಬಂಧಿಸಿರದ ರೀತಿಯಲ್ಲಿ ಸಮಯವನ್ನು ವ್ಯಯಿಸುವ ಆರೋಪ ಇಂದು ನಿನ್ನೆಯದಲ್ಲ. ಈ ಕಂಪ್ಯೂಟರ್ ಸೋಷಿಯಲ್ ಮೀಡಿಯಾಗಳು ಇಲ್ಲದ ಕಾಲದಲ್ಲಿಯೂ ಈ ರೀತಿಯ ಅಪವಾದಗಳಿದ್ದವು. ಆದರೆ, ಈ ಕಂಪ್ಯೂಟರ್ ಯುಗದಲ್ಲಿ ಎಲ್ಲವನ್ನೂ ಬಗೆದು ನೋಡಬಹುದು. ಹಾಗೆಯೇ ವ್ಯವಸ್ಥಿತವಾಗಿ ನಿರೂಪಿಸಲೂಬಹುದು.
ಉದಾಹರಣೆಗೆ, ಬೆಳಗ್ಗೆ ಒಂಬತ್ತರಿಂದ ಮಧ್ಯಾಹ್ನ ಹನ್ನೆರಡರವರೆಗಿನ ಮೂರು ಗಂಟೆಗಳ ಕಾಲ ಒಂದು ಆಫೀಸ್‌ನಲ್ಲಿ ಕೆಲಸ ಮಾಡುವ ಯುವಕ/ಯುವತಿ, ತಮ್ಮ ಕೆಲಸದ ನಡುವೆ ಸುಮಾರು ಐವತ್ತು ಮೆಸೇಜು ಗ ಳನ್ನು ಕಳಿಸಿರುತ್ತಾರೆ ಎಂದು ನಂಬುತ್ತೀರಾ? ಹಾಗಿದ್ದ ಮೇಲೆ ಆ ಐವತ್ತು ಮೆಸೇಜು ಗ ಳ ನ್ನು ಸೃಷ್ಟಿಸುವ, ಅದನ್ನು ಅರಗಿಸಿಕೊಳ್ಳುವ, ಅದನ್ನು ಸಮರ್ಥಿಸಿಕೊಳ್ಳುವ ಸಮಯವನ್ನು ಈ ಕಸುಬುದಾರರ ಗಂಟೆ ಕೂಲಿಯ ಸಂಬಳದಲ್ಲಿ ಕಡಿಮೆ ಮಾಡಬೇಕು ಎಂದರೆ ಅದನ್ನು ನೀವು ಒಪ್ಪುತ್ತೀರೇನು? ಹಾಗೆಯೇ, ನಿಮ್ಮ ಕಾರಿನ ಬ್ರೇಕ್ ಅನ್ನು ಸರಿ ಮಾಡುತ್ತಿರುವ ಮೆಕ್ಯಾನಿಕ್ ಅಥವಾ ನಿಮ್ಮ ರಿಯಲ್ ಎಸ್ಟೇಟ್ ಕಾಂಟ್ರಾಕ್ಟ್ ಅನ್ನು ಪರಿಶೀಲಿಸುತ್ತಿರುವ ಲಾಯರ್ ಅಥವಾ ನಿಮ್ಮ ಆರೋಗ್ಯವನ್ನು ಕಾಪಾಡಲು ಸಹಾಯ ಮಾಡುವ ಈ ಎಲ್ಲ ಕಸುಬುದಾರರೂ ಅವರ ಬಿಲ್ಲಿನ ಜತೆಗೆ, ಕೆಲಸದ ಸಮಯದಲ್ಲಿ ಸೋಷಿಯಲ್ ಮೀಡಿಯಾವನ್ನು ಬಳಸಿದ್ದಕ್ಕೆ ಚಾರ್ಜ್ ಅನ್ನು ಹೇರಿದರೆ ಅದನ್ನು ಒಪ್ಪಿಕೊಳ್ಳಬೇಕೇ? ನಾವು ಆಫೀಸಿನ ಕೆಲಸದಲ್ಲಿ ತೊಡಗಿರುತ್ತೇವೆ ಎಂದುಕೊಳ್ಳಿ, ನಮ್ಮ ರೀತಿಯಲ್ಲಿ ಅನೇಕರು ಕೆಲಸದಲ್ಲಿ ತೊಡಗಿಕೊಂಡಿರುತ್ತಾರೆ. ಈ ಸಮಯದಲ್ಲಿ ನಾವು ಸೋಷಿಯಲ್ ಮೀಡಿಯಾದಲ್ಲಿ ಬಳಸುವ ಒಂದೊಂದು ನಿಮಿಷವೂ ಅದನ್ನು ಎಷ್ಟು ಜನ ನೋಡುತ್ತಾರೆ ಅದನ್ನು ಹೇಗೆ ಬಳಸುತ್ತಾರೆ ಎಂಬುದರ ಮೇಲೆ ಅದರ ವ್ಯಾಪ್ತಿ ಹೆಚ್ಚುತ್ತಲೇ ಹೋಗುತ್ತದೆ.
ಈ ಕಸುಬುದಾರಿಕೆಯನ್ನು ಒಂದು ರೀತಿಯಲ್ಲಿ ಜಾಣರ ಕೆಲಸವೆಂದೇ ಹೇಳಬಹುದು. ಅದಕ್ಕೆ ತಕ್ಕ ಶಿಕ್ಷಣ ಮತ್ತು ತರಬೇತಿಯಲ್ಲಿ ನಮ್ಮ ಜೀವನವನ್ನೇ ಸವೆಸಿರುತ್ತೇವಲ್ಲ, ಅದೇನು ಸುಲಭವೇ? ಆದರೆ, ನೀವು ನಿಮ್ಮ ಕೆಲಸದಲ್ಲಿ ತೊಡಗಿದ್ದಾಗ ಒಮ್ಮೊಮ್ಮೆ ಹೀಗೆ ಮಾಡಿದರೆ ಹೇಗೆ? ಎನ್ನುವ ತರಾವರಿ ಆಲೋಚನೆಗಳು ಬರುತ್ತವಲ್ಲ ಅವಕ್ಕೆಲ್ಲ ಕಡಿವಾಣ ಹಾಕಲೇಬೇಕಾಗುತ್ತದೆ. ಮುಂದಿನ ಸಾರಿ ನೀವು ಆಫೀಸಿನ ಕೆಲಸದಲ್ಲಿ ತೊಡಗಿದ್ದಾಗ, ನಿಮ್ಮ ಮನದಲ್ಲಿ ಈ ಕೆಳಗಿನ ಆಲೋಚನೆಗಳು ಬರಬಹುದು.ಭಾರತದಲ್ಲಿ ಭ್ರಷ್ಟಾಚಾರವನ್ನು ನಿರ್ಮೂಲನ ಮಾಡುವುದು ಹೇಗೆ?, ಭಾರತದಲ್ಲಿ ಕಾಂಗ್ರೆಸ್ ಆಡಳಿತದಿಂದ ಆದ ಅನುಕೂಲ/ಅನನುಕೂಲಗಳೇನು?, ಈ ಸಲ ಕಪ್ ನಮ್ದೆ, ಎನ್ನುವುದು ಈ ಸಲ ನಿಜವಾಗುತ್ತದೆಯೇ?, ಅಮೆರಿಕದಲ್ಲಿ ಟೆಕ್ ಕೆಲಸಗಾರರಿಗೆ ಇನ್ನು ಮುಂದೆ ಸುಲಭವಾಗಿ ವೀಸಾ ಸಿಗುತ್ತದೆಯೇ?, ಮುಂದಿನ ಪ್ರಸಿಡೆಂಟ್ /ಪೈಮ್ ಮಿನಿಸ್ಟರ್ ಯಾರು ಆಗಬಹುದು?, ಈ ಕೆಳಗಿನ ಪಜಲ್ ಸಾಲ್ವ ಮಾಡಿ, ಈ ಪದಗಳಿಗೆ ಣ ಅಕ್ಷರದಿಂದ ಕೊನೆಯಾಗುವ ಪದವನ್ನು ಉತ್ತರವನ್ನಾಗಿ ಕೊಡಿ…. ಇತ್ಯಾದಿಈ ರೀತಿಯ ಯಾವುದೇ ಆಲೋಚನೆಗಳು ಬಂದರೂ, ಈ ಪ್ರಶ್ನೆಗಳನ್ನು ನಿಮಗೆ ನೀವೇ ಕೇಳಿಕೊಳ್ಳಿ.ನನ್ನ ಕಸ್ಟಮರ್ಸ್ ಯಾರು?, ನನ್ನ ಕೆಲಸವನ್ನು ಆಧರಿಸಿ ಎಷ್ಟು ಕೈ/ಬಾಯಿಗಳು ನೆಲೆನಿಂತಿವೆ, ಕೆಲಸ ಹೋದರೆ ಏನು ಮಾಡಲಿ?, ನನ್ನ ಕೆಲಸವನ್ನು ನನಗಿಂತ ಚೆನ್ನಾಗಿ, ಅಚ್ಚುಕಟ್ಟಾಗಿ ಮಾಡಲು ಎಷ್ಟು ಜನರು ಕಾದುಕೊಂದ್ದಾರೆ?, ನಾನು ಗಂಟೆಗೆ ಇಷ್ಟು ಎಂದು ನನ್ನ ಟೈಮ್‌ಶೀ ಟ್ ನಲ್ಲಿ ಬಿಲ್ ಮಾಡುತ್ತೇನಲ್ಲ, ಅದರಲ್ಲಿ ಸೋಶಿಯಲ್ ಮೀಡಿಯಾದ ಬಳಕೆಯ ನಿಮಿಷ/ಗಂಟೆಗಳನ್ನು ಕತ್ತರಿಸಿ ನನಗೆ ಸಂಬಳ ಕೊಟ್ಟರೆ ಹೇಗಿರುತ್ತದೆ?, ಒಂದು ವೇಳೆ ನನ್ನ ಬಾಸ್ ನನ್ನ ಪಕ್ಕದಲ್ಲಿಯೇ ಕುಳಿತಿದ್ದರೆ, ನಾನು ಇದೇ ಪ್ರಮಾಣದಲ್ಲಿ ವಾಟ್ಸ್‌ಆ್ಯಪ್ ಮೆಸೇಜುಗಳನ್ನು ದಿನ ಉದ್ದಕ್ಕೂ ಕಳಿಸುತ್ತಿರುತ್ತೇನೆಯೇ? ಇನ್ನು ಕೆಲವರಿಗೆ, ಪ್ರತಿದಿನಕ್ಕೊಮ್ಮೆ ಇಂತಿಷ್ಟು ಮೆಸೇಜುಗಳನ್ನು (ಒಂದು ಗುಂಪಿನಿಂದ ಮತ್ತೂಂದಕ್ಕೆ) ಪಾರ್ವರ್ಡ್ ಮಾಡದಿದ್ದರೆ ತಿಂದ ಅನ್ನ ಜೀರ್ಣವಾಗದು. ಪ್ರತಿಯೊಂದು ಗುಂಪಿನಲ್ಲಿಯೂ ಇಂತವರು ಒಂದಿಷ್ಟು ಜನರಿದ್ದೇ ಇರುತ್ತಾರೆ.
ಇನ್ನು ಕೆಲವು ಗುಂಪುಗಳಲ್ಲಿ ಮುಂಜಾನೆ ಒಂಭತ್ತರ ಹೊತ್ತಿಗೆ ಒಂದಿಷ್ಟು ಕ್ವಿಜ್/ಪಜಲ್‌ಗಳು ಹುಟ್ಟಿ ಬೆಳೆಯುವುದನ್ನು ನೋಡಬಹುದು. ಇದೇನು ನಮ್ಮೆಲ್ಲರ ದಕ್ಷತೆಯ ಪರಮಾವಧಿಯೋ ಅಥವಾ ನಮಗೆ ಅಂಟಿದ ಒಂದು ರೀತಿಯ ಮಾನಸಿಕ ರೋಗವೋ ಎಂದು ಅನುಮಾನ ಹುಟ್ಟುತ್ತದೆ. ನಾವು ಈ ರೀತಿ ಸಮಯವನ್ನು ಪೋಲು ಮಾಡುವುದರಿಂದ ಅದೇ ಸಮಯವನ್ನು ಮತ್ಯಾವುದೋ ಕಾರ್ಯದಲ್ಲಿ ಬಳಸುತ್ತಿಲ್ಲ ಎಂದಷ್ಟೇ ನಿರೂಪಣೆ ಮಾಡಲು ಸಾಧ್ಯ.
ನಮಗೆಲ್ಲರಿಗೂ ಅಷ್ಟೊಂದು ಕನ್ನಡ ಮೋಹವಿದ್ದರೆ, ಕನ್ನಡ ಸಾಹಿತ್ಯ ಲೋಕದಲ್ಲಿ ಆಗಬೇಕಾದ ಅನೇಕ ಕಾರ್ಯಗಳು, ಅನುವಾದಗಳು, ಸಂಗ್ರಹಗಳು ಕೆಲಸಗಾರರಿಲ್ಲದೇ ಹಾಗೇ ನನೆಗುದಿಗೆ ಬಿದ್ದಿವೆ. ಈ ರೀತಿಯ ವಾಲೆಂಟಿಯರ್ ಕೆಲಸದಲ್ಲಿ ತೊಡಗಲು ಯಾರಾದರೂ ರೆಡಿ ಇಟ್ಟಿದ್ದಾರೆಯೇ ಎಂದು ಕೇಳಿ ನೋಡಿ, ಎಷ್ಟು ಕೈಗಳು ಮೇಲೇಳಬಹುದು! ಟೆಕ್ ಕೆಲಸಗಾರರಕಷ್ಟ ಒಂದಲ್ಲ ಎರಡಲ್ಲ…ನಾನೇನೋ ನನ್ನ ಬಿಡುವಿನ ಒಂದು ರವಿವಾರ ಮುಂಜಾನೆ ಈ ಲೇಖನವನ್ನು ಬರೆಯುತ್ತಿದ್ದೇನೆ. ಆಫೀಸಿನ ಕೆಲಸಗಳ ನಡುವೆ ಈ ರೀತಿ ಬರೆಯುವುದಕ್ಕೆ ಸಮಯ ಸಿಗುವುದಿರಲಿ, ಹೀಗೆ ಆಲೋಚಿಸಲೂ ಸಾಧ್ಯವಾಗದಂತೆ ಅನೇಕ ತೊಂದರೆಗಳಿರುತ್ತವೆ. Hopefully ಈ ಲೇಖನವನ್ನು ನಿಮ್ಮ ಆಫೀಸಿನ ಕೆಲಸದ ನಡುವೆ ಓದದೇ ಇದ್ದರೆ ಸಾಕು! ಈ ಲೇಖನ ಕೂಡ ಒಂದು ರೀತಿಯಲ್ಲಿ time waster ಎಂದೇ ಬಿಂಬಿತವಾಗುತ್ತದೆ.
ಹಲವಾರು ಟೆಕ್ಕಿಗಳ ಎದೆಯನ್ನು ಛಿದ್ರಗೊಳಿಸಿ ನೋಡುವ ಕೌತುಕ ಮತ್ತು ಆಶಯ ಈ ಲೇಖನಕ್ಕಿದ್ದರೂ ಇದು ಹೇಗೆ ಹುಟ್ಟಿದೆಯೋ ಅಷ್ಟೇ ಬೇಗ ಮೂಲೆಗುಂಪಾಗುತ್ತದೆ.ನಮ್ಮ ನಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿ ಅದರಲ್ಲಿ ಒಳ್ಳೆಯ ಹೆಸರನ್ನು ಗಳಿಸುವುದು ಜಾಣತನವಾಗುತ್ತದೆ. ಪ್ರಪಂಚದ ಎಲ್ಲ ರೀತಿಯ ಕಸುಬುದಾರರಲ್ಲಿ ಟೆಕ್ ಕೆಲಸಗಾರರ ಕಷ್ಟ ಒಂದಲ್ಲ ಎರಡಲ್ಲ… ದಿನೇದಿನೆ ಬದಲಾಗುವ ಟೆಕ್ನಾಲಜಿಗಳು, ಪ್ರತೀ ವರ್ಷ ಕಾಲೇಜುಗಳಿಂದ ಹೊರಬರುವ ಮಿಲಿಯನ್ ಗಟ್ಟಲೆ ಕಂಪ್ಯೂಟರ್ ತಜ್ಞರು, ಸದಾ ಬದಲಾಗುವ ರಿಕ್ವೆ „ರ್ಮೆಂಟುಗಳು, ದಿನಕ್ಕೆ ಹನ್ನೆರಡು ಗಂಟೆ ದುಡಿಸಿ ಕೇವಲ ಎಂಟೇ ಗಂಟೆಗಳ ಸಂಬಳ ಕೊಡುವ ರಕ್ತಪಿಪಾಸು ಕಂಪೆನಿಗಳು.. ಹೀಗೆ ಒಂದಲ್ಲ ಎರಡಲ್ಲ ಅನೇಕ ತೊಂದರೆಗಳು.
ಟೆಕ್ ಕೆಲಸಗಾರರು ಕ್ವಾರ್ಟರ್‌ನಿಂದ ಕ್ವಾರ್ಟರ್‌ಗೆ ತಮ್ಮನ್ನು ತಾವು ಸದಾ ಪೋಷಿಸಿಕೊಂಡು ತಮ್ಮತನವನ್ನು ಪೂ›ವ್ ಮಾಡುತ್ತಲೇ ಇರಬೇಕು. ನಮ್ಮ ದಕ್ಷತೆಯಲ್ಲಿ ಸ್ವಲ್ಪವೇ ವ್ಯತ್ಯಯವಾದರೂ ಅದನ್ನು ಕಂಡುಹಿಡಿಯಲು ಅನೇಕರು ಕಾದು ನಿಂತಿರುವ ಟೆಕ್ನಾಲಜಿ ಕಾರ್ಯಕ್ಷೇತ್ರವೆಂಬ ರಣಭೂಮಿಯಲ್ಲಿ ನಮ್ಮ ಟೆಕ್ಕಿಗಳು ಅದು ಹೇಗೆ ದಿನವುದ್ದಕ್ಕೂ ಸೋಷಿಯಲ್ ಮೀಡಿಯಾದಲ್ಲಿ ತಮ್ಮನ್ನು ತಾವು ತಲ್ಲೀನರಾಗಿಸಿಕೊಂಡು ಜತೆಗೆ ತಮ್ಮ ಕೆಲಸವನ್ನೂ ತೂಗಿಸಿಕೊಂಡು ತಮ್ಮ ಕುಟುಂಬಗಳನ್ನು ಸಾಕುತ್ತಾರೆ ಎಂದು ಯೋಚಿಸಿದಾಗ ಖಂಡಿತವಾಗಿಯೂ ಆಶ್ಚರ್ಯವಾಗುತ್ತದೆ! ಈ ರೀತಿಯ ಕಸುಬುದಾರಿಕೆ ಒಂದು ರೀತಿಯಲ್ಲಿ ಜಾಣ್ಮೆಯಲ್ಲದೇ ಇನ್ನೇನು? ನಾವು ಟೆಕ್ನಾಲಜಿ ಕೆಲಸಗಾರರು (ಟೆಕ್ಕಿಗಳು) ಹತ್ತು ತಲೆಯ ರಾವಣನನ್ನೂ ಮೀರಿಸಬಲ್ಲರು. ನಮ್ಮ ನಮ್ಮ ತಲೆಗಳಲ್ಲಿ ಒಂದೇ ಸಮಯಕ್ಕೆ, ಎಂಥ ಅವಧಾನಿಗಳನ್ನೂ ಮೀರಿ, ಹಲವಾರು ವಿಷಯಗಳನ್ನು ಸಂಸ್ಕರಿಸಿಕೊಳ್ಳಬÇÉೆವು. ಎಲ್ಲವನ್ನೂ ಸಮತೋಲನ ಮಾಡಿಕೊಂಡು, ಕಷ್ಟಪಟ್ಟು ದುಡಿದು, ದಿನವಿಡೀ ಏರ್‌ಕಂಡೀಷನ್ ವ್ಯವಸ್ಥೆಯಲ್ಲಿ ಕುಳಿತೂ ಬೆವರುವ ಟೆಕ್ಕಿಗಳನ್ನು ಆ ದೇವರೇ ಕಾಪಾಡಬೇಕು. ಈ ವಿಶ್ವ ಎಲ್ಲ ಟೆಕ್ಕಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ದುಃಖೀಸುವ ಹತ್ತನೇ ಒಂದು ಭಾಗದಷ್ಟಾದರೂ ನಿಜವಾದ ಕ್ರಿಯಾಶೀಲತೆಯಲ್ಲಿ ತೊಡಗಿದ್ದೇ ಆದರೆ ಈ ವಿಶ್ವ ಹೇಗಿರಬಹುದು ಎಂದು ಬೆರಗು ಮೂಡಿಸುವುದೇ ಈ ಹೊತ್ತಿನ ತಣ್ತೀ!
ಸತೀಶ್ ಹೊಸನಗರ, ನ್ಯೂಜರ್ಸಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Smart meters: ನೀರು ಸಂರಕ್ಷಿಸುವ ವಿಚಾರದಲ್ಲಿ ಕ್ರಾಂತಿ ಮಾಡಿದ ಸ್ಮಾರ್ಟ್ ವಾಟರ್ ಮೀಟರ್
Karnataka; ಕೇಂದ್ರ ಸ್ವಾಮ್ಯದ ಸಂಸ್ಥೆಗಳಲ್ಲಿ ಕನ್ನಡಿಗರೇಕೆ ವಿರಳ? ಆಗಬೇಕಿರುವುದೇನು?
ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ
Kannada; ಅನಿವಾಸಿ ಕನ್ನಡಿಗರ ಮಕ್ಕಳಲ್ಲೂ ಕನ್ನಡ ಚಿಗುರಲಿ
Kanchi swamiji; ದೇವಸ್ಥಾನಗಳ ಭೂಮಿ ದೇವಸ್ಥಾನಗಳಿಗೇ ಇರಲಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.