ನಿಯಮ ಉಲ್ಲಂಘನೆಯಾದರೆ ಪಿಡಿಒಗಳ ತಲೆದಂಡ
Team Udayavani, May 8, 2021, 4:54 PM IST
ಸಾಗರ: ಕೋವಿಡ್ ಸಂದರ್ಭದ ಕಾರ್ಯಪಡೆಯ ಅಧಿಕಾರಿ, ವೈದ್ಯರ, ಸಿಬ್ಬಂದಿ ಆರೋಗ್ಯ ಬಹಳ ಮುಖ್ಯ. ನಿಯಮಜಾರಿ ಜತೆಗೆ ವೈಯಕ್ತಿಕ ಆರೋಗ್ಯದ ಕಾಳಜಿಯನ್ನು ಸಹಕರ್ತವ್ಯನಿರತರು ತೆಗೆದುಕೊಳ್ಳಬೇಕು ಎಂದು ಶಾಸಕ ಎಚ್.ಹಾಲಪ್ಪ ಹರತಾಳು ಹೇಳಿದರು.
ಇಲ್ಲಿನ ತಾರಾಪುರ ಆವರಣದಲ್ಲಿನ ಎಲ್‌ಬಿ ಕಾಲೇಜಿನದೇವರಾಜ್ ಅರಸು ಸಭಾಂಗಣದಲ್ಲಿ ತಾಲೂಕು ಆಡಳಿತದ ವತಿಯಿಂದ ಕೋವಿಡ್ ಜಾಗೃತಿ ನಿಯಮ ಅನುಸರಣೆ ಕುರಿತು ಆಯೋಜಿಸಲಾಗಿದ್ದ ನಗರಸಭೆ ಸದಸ್ಯರು ಮತ್ತು ಗ್ರಾಪಂ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೋವಿಡ್ ಕಾರಣದಿಂದಾಗಿ ಸಹೋದ್ಯೋಗಿಗಳ ಸಾವು ಸಹ ಸಂಭವಿಸಿದೆ. ಜನಪ್ರತಿನಿಧಿ ಗಳು ಈ ಸಂದರ್ಭದಲ್ಲಿ ಹೆಚ್ಚಿನ ಸಹಕಾರ ನೀಡಬೇಕು. ಸೋಂಕಿತರ ಚಿಕಿತ್ಸೆ ಸಂಬಂಧ ಒತ್ತಡಹಾಕುವ, ಪ್ರಭಾವ ಬೀರುವ ಕೆಲಸ ಮಾಡಬಾರದು. ಲಸಿಕೆಯ 2ನೆಯ ಡೋಸ್ ಮಾತ್ರ ನೀಡಲಾಗುವುದು. ನಗರವ್ಯಾಪ್ತಿಕಾರ್ಯಪಡೆ ವೇಗ ಪಡೆದುಕೊಳ್ಳಬೇಕು. ವಾರ್ಡ್‌ಗಳಲ್ಲಿ ಔಷಧಸಿಂಪಡನೆಗೆ ಮುಂದಾಗಬೇಕು. ಗ್ರಾಮಾಂತರದಲ್ಲಿ ಕೊರೊನಾ ನಿಯಮ ಉಲ್ಲಂಘನೆಯಾದರೆ ಪಿಡಿಒಗಳ ತಲೆದಂಡ ಅನಿವಾರ್ಯವಾಗುತ್ತದೆ ಎಂದರು.
ಸಹಾಯಕ ಆಯುಕ್ತ ಡಾ| ಎಲ್.ನಾಗರಾಜ್ ಮಾತನಾಡಿ, ಕೋವಿಡ್ ನಿಯಂತ್ರಣಕ್ಕೆ ಸಾರ್ವಜನಿಕರು ಪೂರಕ ಸಹಕಾರ ನೀಡದಿರುವುದರಿಂದ ಆಡಳಿತದ ಶ್ರಮ ವ್ಯರ್ಥವಾಗುತ್ತಿದೆ. ಮದುವೆ ಮನೆಗೆ ಕೇವಲ 50 ಜನರಿಗೆ ಒಪ್ಪಿಗೆ ಪಡೆದುಹೋದವರು ಒಂದು ಸಲಕ್ಕೆ 50ರಂತೆ ದಿನವಿಡೀ ಜನರನ್ನು ಸೇರಿಸಿ ಒಟ್ಟು ಸಂಖ್ಯೆ ಸಾವಿರ ದಾಟಿಸುತ್ತಾರೆ. ಮದುವೆಗೆಮಾತ್ರ ಒಪ್ಪಿಗೆ ಪಡೆದಿದ್ದರೂ ಬೀಗರ ಊಟದ ಹೆಸರಿನಲ್ಲಿ ಜನಸೇರುತ್ತಿದ್ದಾರೆ. ಸೋಂಕಿತರ ಸಾರ್ವಜನಿಕ ಸಂಚಾರ, ಬೀಗರಊಟ ಇತ್ಯಾದಿ ವಿಷಯದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.
ವೈದ್ಯಾಧಿಕಾರಿ ಡಾ| ಪ್ರಕಾಶ್ ಬೋಸ್ಲೆ ಮಾತನಾಡಿದರು ನಗರ ಸಭಾಧ್ಯಕ್ಷೆ ಮಧುರಾ ಶಿವಾನಂದ, ಉಪಾಧ್ಯಕ್ಷ ವಿ. ಮಹೇಶ್, ಡಿವೈಎಸ್‌ಪಿ ವಿನಾಯಕ ಶೆಟಗೇರ್, ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಆರ್. ಬಿಂಬ, ಪರಿಸರ ಅಭಿಯಂತರ ಕೆ. ಮದನ, ಟಿಎಚ್‌ಒ ಡಾ| ಕೆ.ಎಸ್.ಮೋಹನ್ ಮಾತನಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sagara: ಟ್ರಾಫಿಕ್ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು
Shimoga: ಅರಣ್ಯ ಇಲಾಖೆ ಜತೆ ಸೇರಿ ಕಾಡಾನೆಗಳನ್ನು ಓಡಿಸಿದ ಜನ
Sagara: ತರಗತಿ ಕೊಠಡಿಯಲ್ಲಿ ಅವ್ಯವಸ್ಥೆ… ಕಾಲೇಜು ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ
Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಾಘಾತ
Shimoga: ಮಲೆನಾಡಿನಲ್ಲಿ ಮುಂದುವರಿದ ಕಾಡಾನೆ ಕಾಟ; ಇಲಾಖೆ ವಿರುದ್ದ ರೈತರ ಆಕ್ರೋಶ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.