ಆಕ್ಸಿಜನ್ ವಿಷಯದಲ್ಲಿ ಗೊಂದಲ ಬೇಡ
ಯಾರಿಗೆ ಎಷ್ಟು ಸಮಯ, ಎಷ್ಟು ಕಿಲೋ ಆಕ್ಸಿಜನ್ ಕೊಡಬೇಕು: ವೈದ್ಯರಿಂದ ಮಾಹಿತಿ
Team Udayavani, May 8, 2021, 6:55 PM IST
ಹೊನ್ನಾವರ: ಆಕ್ಸಿಜನ್ ಕೊರತೆಯಿಂದ ದೊಡ್ಡ ಪ್ರಮಾಣದಲ್ಲಿ ಸಾವು ಸಂಭವಿಸಿದ ಹಿನ್ನೆಲೆಯಲ್ಲಿ ಸೋಂಕಿತರು ಈಗ ಆಕ್ಸಿಜನ್ ಫೋಬಿಯಾದಿಂದ ಗಾಬರಿಯಾದಂತೆ ಕಾಣುತ್ತಿದ್ದು, ಅವರಿಗಾಗಿ, ಅವರ ಕುಟುಂಬಕ್ಕಾಗಿ ತಾಲೂಕಾಸ್ಪತ್ರೆ ವೈದ್ಯರು ಮಾಹಿತಿ ನೀಡಿದ್ದಾರೆ.
ಆಕ್ಸಿಜನ್ ಕೊರತೆಯಿಂದ ಹಲವರ ಸಾವು ಸಂಭವಿಸಿದ ಹಿನ್ನೆಲೆಯಲ್ಲಿ ಕೊರೊನಾ ಸೋಂಕಿತರು ಅಗತ್ಯಕ್ಕಿಂತ ಹೆಚ್ಚು ಆಕ್ಸಿಜನ್ ಬಳಸಲು ಬಯಸುತ್ತಾರೆ. ಅಭದ್ರತೆ ಮತ್ತು ಭೀತಿ ಅವರನ್ನು ಕಾಡುತ್ತಿದೆ. ಯಾರಿಗೆ ಎಷ್ಟು ಸಮಯ, ಎಷ್ಟು ಕಿಲೋ ಆಕ್ಸಿಜನ್ ಕೊಡಬೇಕು ಎಂಬುದನ್ನು ವೈದ್ಯರು ನಿರ್ಧರಿಸುತ್ತಾರೆ. ರೋಗಿಯ ಪುಪ್ಪುಸದ ಮೇಲೆ ಕೋವಿಡ್ ವೈರಾಣುವಿನ ಪರಿಣಾಮ ಎಷ್ಟಾಗಿದೆ, ಎಷ್ಟು ಘಂಟೆ ಇವರಿಗೆ ಆಕ್ಸಿಜನ್ ಕೊಡಬೇಕು, ಆಕ್ಸಿಜನ್ ಅಗತ್ಯವಿದೆಯೋ, ಇಲ್ಲವೋ ಎಂಬುದನ್ನು ವೈದ್ಯರು ತೀರ್ಮಾನಿಸುತ್ತಾರೆಯೇ ವಿನಃ ಸುಮ್ಮನೆ ಆಕ್ಸಿಜನ್ ಸೇವಿಸುವುದರಿಂದ ಊಟ, ತಿಂಡಿ, ಬಾತ್‌ರೂಮಿಗೆ ಹೋಗುವಾಗಲೂ ಆಕ್ಸಿಜನ್ ಮುಖಕವಚ ಬಿಡದೇ ಇರುವುದು ಸರಿಯಲ್ಲ. ಮತ್ತೆ ಇರುವ ಆಕ್ಸಿಜನ್ ಆದ್ಯತೆಯ ಮೇಲೆ ತುರ್ತು ಅಗತ್ಯವಿದ್ದವರಿಗೆ ಕೊಟ್ಟು ಪ್ರಾಣ ಉಳಿಸಲು ಪ್ರಯತ್ನಿಸುವುದು ವೈದ್ಯರ ಕರ್ತವ್ಯ.
ಈಗ ಸೋಂಕು ತಗುಲಿದ ಕೂಡಲೇ ನಿಮ್ಮಲ್ಲಿ ಆಕ್ಸಿಜನ್ ಇದೆಯಾ, ವೆಂಟಿಲೇಟರ್ ಇದೆಯಾ ಎಂದು ಗಾಬರಿಯಿಂದ ಕೇಳುತ್ತಲೇ ಸೋಂಕಿತರು ಬರುತ್ತಾರೆ. ಎಲ್ಲವೂ ಇದೆ, ನಿಮ್ಮನ್ನು ಪರೀಕ್ಷಿಸಿ, ಎಕ್ಸ್‌ರೇ ಅಥವಾ ಎಂಆರ್‌ಐ ರಿಪೋರ್ಟ್ ನೋಡಿ ನಿಮಗೆ ಆಕ್ಸಿಜನ್ ಕೊಡಬೇಕು, ರೆಮ್‌ಡಿಸಿವಿಯರ್ ಅಥವಾ ಇನ್ನಾವ ಇಂಜಕ್ಷನ್ ಕೊಡಬೇಕೋ ಎಂಬುದನ್ನು ನಿರ್ಧರಿಸುತ್ತೇವೆ. ಕೈಮೀರುವ ಪರಿಸ್ಥಿತಿಯಲ್ಲಿ ವೆಂಟಿಲೇಟರ್ ಕೊಡಬೇಕಾಗುತ್ತದೆ. ಆ ಪರಿಸ್ಥಿತಿ ಬರುವವರೆಗೆ ಯಾವುದೋ ಗುಳಿಗೆ ನುಂಗುತ್ತ ಮನೆಯಲ್ಲಿ ಇರಬೇಡಿ. ಆಸ್ಪತ್ರೆಗೆ ಬರುವ ಮುಂಚೆ ಆಕ್ಸಿಜನ್ ಕೊಡಿಸಲು ಅವರಿವರ ಪ್ರಭಾವ ಬೀರಬೇಡಿ. ಅಗತ್ಯವಿದ್ದವರಿಗೆ ಖಂಡಿತ ಕೊಡುತ್ತೇವೆ. ಕೋವಿಡ್ ಲಕ್ಷಣ ಕಂಡಕೂಡಲೇ ಬಂದರೆ ಔಷಧ ಪಡೆದು ಮನೆಯಲ್ಲಿಯೇ ಗುಣಮುಖರಾಗಬಹುದು, ಹೆಚ್ಚಿನ ಚಿಕಿತ್ಸೆ ಅಗತ್ಯವುಳ್ಳವರಿಗೆ ಕೋವಿಡ್ ಸೆಂಟರ್ ಅಥವಾ ಆಸ್ಪತ್ರೆಯಲ್ಲಿ ಅಥವಾ ಜಿಲ್ಲಾಸ್ಪತ್ರೆಯಲ್ಲಿ ವ್ಯವಸ್ಥೆ ಮಾಡುತ್ತೇವೆ. ಎಲ್ಲರೂ ಆಸ್ಪತ್ರೆಗೆ ಬಂದು ಆಕ್ಸಿಜನ್ ಕೇಳಿದರೆ, ಕೊಟ್ಟರೂ ಪ್ರಯೋಜನವಿಲ್ಲ ಎಂದು ಡಾ| ಪ್ರಕಾಶ ನಾಯ್ಕ ಮತ್ತು ಡಾ| ರಾಜೇಶ ಕಿಣಿ ಹೇಳಿದ್ದಾರೆ.
ಪದೇಪದೇ ಎಚ್ಚರಿಕೆ ನೀಡಿದರೂ ಜನ ಆಕ್ಸಿಜನ್ ಫೋಬಿಯಾದಿಂದ ಬಳಲತೊಡಗಿದ್ದು ಅವರಿಗಾಗಿ, ಅವರ ಕುಟುಂಬದವರಿಗಾಗಿ ಈ ತಿಳಿವಳಿಕೆ ಮಾತುಗಳನ್ನು ಹೇಳಿದ್ದು, ಓದಿ ಇತರರಿಗೆ ತಿಳಿಸಬೇಕು ಎಂದು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Muddebihal: ಟ್ರ್ಯಾಕ್ಟರ್-ಟ್ರೇಲರ್ ಗೆ ಬೈಕ್ ಡಿಕ್ಕಿ ಹೊಡೆದು ಯುವಕ ಸ್ಥಳದಲ್ಲೇ ಮೃತ್ಯು
By Election: ಶಿಗ್ಗಾಂವಿ ಸವಿ ಬೊಮ್ಮಾಯಿ ಪುತ್ರನಿಗೋ, ಯಾಸಿರ್ ಪಠಾಣಗೋ?
King Cobra: “ಕಾಳಿಂಗ’ ಸರ್ಪಕ್ಕೆ ಕನ್ನಡದ್ದೇ ವೈಜ್ಞಾನಿಕ ಹೆಸರು!
Mysuru:’ಕರ್ನಾಟದಲ್ಲಿ “ಗ್ಯಾರಂಟಿ’ ಹೆಸರಲ್ಲಿ ಲೂಟಿ, ಮಹಾರಾಷ್ಟ್ರದಲ್ಲಿ ನೀವು ಘೋಷಿಸಬೇಡಿ’
By Election: ಚನ್ನಪಟ್ಟಣದಲ್ಲಿ ಎಚ್.ಡಿ.ದೇವೇಗೌಡ Vs ಡಿ.ಕೆ.ಶಿವಕುಮಾರ್ ಮೇಕೆದಾಟು ಜಟಾಪಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.